POLICE BHAVAN KALABURAGI

POLICE BHAVAN KALABURAGI

08 April 2014

Gulbarga District Reported Crimes

ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದಯಾನಂದ ತಂದೆ ಶಾಂತಯ್ಯಾ ಹಿರೆಮಠ ಸಾ : ಮಾರ್ಸನಳ್ಳಿ ರವರ  ಜೋತೆಗೆ ಚಾಲಕನಾಗಿ ಅಬ್ದಲಸತ್ತಾರ ಬ್ಯಾಡ್ಜ ನಂಬರ 21563 ಇಬ್ಬರಿಗೂ ಅಫಜಲಪೂರ ದಿಂದ ಬಡದಾಳ, ಬಟಗೇರಾ ಗ್ರಾಮ, ನಂತರ ಬಡದಾಳ ವಸ್ತಿ ಹೀಗೆ ರೂಟ ನಂ 25/26 ಪ್ರಕಾರ ದಿನಾಂಕ 07-04-2014 ರಂದು ಕರ್ತವ್ಯಕ್ಕೆ ನೇಮಿಸಿದ್ದು , ಅದರಂತೆ ನಾವುಗಳು ಡಿಪೋದಿಂದ ಬಸ್ ನಂಬರ ಕೆಎ-32 ಎಫ್-1228 ನೇದ್ದು ಮದ್ಯಾಹ್ನ 12:00 ಗಂಟೆಗೆ ಬಸ್ ತಗೆದುಕೊಂಡು ಬಂದು, ಒಂದು ಟ್ರೀಪ ಬಡದಾಳಕ್ಕೆ ಹೋಗಿ ಮರಳಿ ಅಫಜಲಪೂರಕ್ಕೆ ಬಂದು. ನಂತರ ಬಟಗೇರಾ ಗ್ರಾಮಕ್ಕೆ ಹೊಗಿ ಪ್ರಯಾಣಿಕರನ್ನು ಇಳಿಸಿ ನಂತರ ವಾಪಾಸ ಬಟಗೇರಾ ಗ್ರಾಮದಿಂದ ಅಫಜಲಪೂರಕ್ಕೆ ಹೊರಟಿರುತ್ತೆವೆ.  ನಮ್ಮ ಬಸ್ಸು ಆನೂರ ಗ್ರಾಮಕ್ಕೆ 4:30 ಗಂಟೆಗೆ ಬಂದಾಗ ಆನೂರ ಗ್ರಾಮದ ಬಸ್ ನಿಲ್ದಾಣದಲ್ಲಿ ಅನೇಕ ಪ್ರಯಾಣಿಕರು ನಮ್ಮ ಬಸ್ಸಿನಲ್ಲಿ ಏರಿರುತ್ತಾರೆ. ಸದರಿ ಪ್ರಯಾಣಿಕೆರಿಗೆ  ಟಿಕೇಟ ಕೊಡಲು ಹೊಗಿರುತ್ತೆನೆ, ನಾನು ಟಿಕೇಟ ಕೊಡಲು ಹೋದ ಪ್ರಯಾಣಿಕರಲ್ಲಿ ಒಬ್ಬ ಪ್ರಯಾಣೀಕನು ನನಗೆ 100/- ರೂ ನೋಟು ಕೊಟ್ಟು, ಅಫಜಲಪೂರಕ್ಕೆ ಒಂದು ಟಿಕೇಟ ಕೊಡಿ ಎಂದು ಹೇಳಿದನು, ಅದಕ್ಕೆ ನಾನು ಸದರಿ ವ್ಯಕ್ತಿಗೆ ನನ್ನ ಹತ್ತಿರ ಚಿಲ್ಲರೆ ಇಲ್ಲ, 10/- ರೂ ಟಿಕೇಟ ಇದೆ, 10/- ರೂ ಇದ್ದರೆ ಕೋಡು ಎಂದು ತಿಳಿಸಿದೆನು, ಆಗ ಸದರಿ ವ್ಯಕ್ತಿ ತನ್ನ ಹತ್ತಿರ ಸಹ ಚಿಲ್ಲರೆ ಇಲ್ಲ ಎಂದು ತಿಳಿಸಿದನು. ಆಗ ನಾನು ಸದರಿ ವ್ಯಕ್ತಿಯಿಂದ 100/- ರೂ ನೋಟು ಪಡೆದುಕೊಂಡು ಟಿಕೇಟ ಕೊಟ್ಟು, ಉಳಿದ ಹಣವನ್ನು ಅಫಜಲಪೂರ ಬಸ್ ನಿಲ್ದಾಣದಲ್ಲಿ ಕೊಡುತ್ತೆನೆ ಅಂತಾ ಹೇಳಿ, ಸದರಿ ನಾನು ಕೊಟ್ಟ ಟಿಕೇಟ ಹಿಂದೆಯೆ ಬಾಕಿ ಇದ್ದ 90/- ರೂ ಹಣವನ್ನು ಬರೆದುಕೊಟ್ಟೆನು, ನಂತರ ಅಫಜಲಪೂರ ಬಸ್ ನಿಲ್ದಾಣದಲ್ಲಿ ಸದರಿ ವ್ಯಕ್ತಿ ಉಳಿದ ಚಿಲ್ಲರೆ ಹಣ ಕೊಡೊ ಸೂಳೆ ಮಗನೆ ಅಂತಾ ಬೈದನು ಆಗ ನನಗು ಅವನಿಗು ಚಿಲ್ಲರೆ ಸಂಬಂಧ ಬಾಯಿ ತಕರಾರು ಆಗಿರುತ್ತದೆ. ಆಗ ಅಲ್ಲೆ ಇದ್ದ ನಮ್ಮ ಸಿಬ್ಬಂದಿಯಾದ ಬೀರಪ್ಪ ಪೂಜಾರಿ, ಶಂಕರ ಹೂಗಾರ ಇವರು ಬಂದು ಜಗಳ ಬಿಡಿಸಿದರು. ನಂತರ ನಾವು ಬಟಗೇರಾಕ್ಕೆ ಹೋಗಿ ಅಫಜಲಪೂರಕ್ಕೆ ಬರುತ್ತಿರುವಾಗ ಆನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ನಿಂತಾದ ಅಫಜಲಪೂರದಲ್ಲಿ ಚಿಲ್ಲರೆ ಸಂಬಂಧ ಜಗಳ ತೆಗೆದ ವ್ಯಕ್ತಿ ನಮ್ಮ ಹತ್ತಿರ ಬಂದು ಏನೋ ಸೂಳೆ ಮಗನಾ ಅಫಜಲಪೂರದಲ್ಲಿ ನನ್ನಜೋತೆ ಜಗಳಾ ತಗಿತಿಯಾ ಅಂತಾ ಅಂದು ನನ್ನ ಎದೆಯ ಮೇಲಿಂದ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಮತ್ತು ಅಲ್ಲೆ ಬಿದ್ದ ಬಡಿಗೆಯಿಂದ ನನ್ನ ಮೈಕೆಗೆಗ ಹೊಡೆದನು. ಇನ್ನೊಬ್ಬ ವ್ಯಕ್ತಿ ಬಂದು ನನ್ನ ಕುತ್ತಿಗೆ ಹಿಡಿದು ಕಾಲಿನಿಂದ ಬೆನ್ನಿನ ಮೇಲೆ ಒದ್ದನು. ಸದರಿ ಜಗ್ಗಾಡುವ ಸಮಯದಲ್ಲಿ ಅಂದಾಜು 3000/- ರೂ ಕೆಳಗೆ ಬಿದ್ದಿರುತ್ತವೆ. ಸದರಿಯವರು ನನಗೆ ಹೊಡೆಯುತ್ತಿರುವಾಗ  ನಮ್ಮ ಬಸ್ ಚಾಲಕ ಅಬ್ದುಲಸತ್ತಾರ ಮತ್ತು ಅಲ್ಲೇ  ನೇರೆದ ಕೆಲ ಜನರು ಜಗಳವನ್ನು ಬಿಡಿಸಿರುತ್ತಾರೆ, ಸದರಿ ನನ್ನ ಜೋತೆಗೆ ಜಗಳ ತಗೆದವರ ಹೆಸರು ಚಂದ್ರಕಾಂತ ತಂದೆ ಕಲ್ಯಾಣಿ ಸೀತನೂರ, ಮತ್ತು ಸಿದ್ದು ತಂದೆ ಕಲ್ಯಾಣಿ ಸೀತನೂರ ಸಾ|| ಇಬ್ಬರು ಆನೂರ ಎಂದು ವಿಚಾರಣೆಯಿಂದ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಬಸ್ಸಮ್ಮ ಗಂಡ ಅಣ್ಣಪ್ಪ ಚೂರಗಸ್ತಿ ಸಾ:  ಮಾದವಾನಂದ ನಗರ ಆಳಂದ ರಸ್ತೆ ಗುಲಬರ್ಗಾ ಇವರು ದಿನಾಂಕ  31-03-2014 ರಂದು ಸಾಯಂಕಾಲ 07.30 ಗಂಟೆ ಸುಮಾರಿಗೆ ಯುಗಾದಿ ಹಬ್ಬದ ನೀಮಿತ್ಯ ಶ್ರೀ ಶರಣಬಸವೇಶ್ವರ ದೆವಸ್ಥಾನಕ್ಕೆ ದರ್ಶನ ಕುರಿತು ಹೊಗಿದ್ದು, ಅಲ್ಲಿ ಯಾರೋ ಅಪರಿಚಿತ ಕಳ್ಳರು ನನ್ನ ಕೊರಳಲ್ಲಿದ್ದ 12 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ 30000 ರೂ ನೇದ್ದನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ದು ತಂದೆ ಬಸವಂತ್ರಾವ, ಸಾಃ ಸೇಡಂ  ರವರು ದಿನಾಂಕ 06-04-2014 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಇ 32 6802 ನೇದ್ದರ ಮೇಲೆ ಹಿಂದೆ ಸತೀಶ ಈತನನ್ನು ಕೂಡಿಸಿಕೊಂಡು ಸೇಡಂ ರಿಂಗ ರೋಡ ಕಡೆ ಹೋಗುತ್ತಿದ್ದಾಗ ಗುಬ್ಬಿ ಕಾಲೂನಿ ಕ್ರಾಸ್ ಹತ್ತಿರ ಕಾರ ನಂ. ಕೆ.ಎ 32 ಎಮ್. 9289 ನೇದ್ದರ ಚಾಲಕ ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ಫಿರ್ಯಾದಿಗೆ ಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 06-04-2014 ರಂದು ರಾತ್ರಿ 10;00 ಗಂಟೆಗೆ ಶ್ರೀಮತಿ ಶಾಂತಾ ಬಾಯಿ ಗಂಡ ಶ್ರೀಮಂತರಾಯ ಐರೋಡಗಿ ಸಾ : ಗೌರ (ಬಿ) ತಮ್ಮ ಮಮ್ಮೊಗಳು ದ್ರಾಕ್ಷಾಯಣಿ ಇಬ್ಬರು ಊಟ ಮಾಡಿಕೊಂಡು ಮನೆಯ ಮುಂದೆ ಮಾತಾಡುತ್ತಾ ಕುಳಿತಾಗ ನನ್ನ ಮಗ ಸಿದ್ರಾಮಪ್ಪ ಮತ್ತು ಅವನ ಹೆಂಡತಿ ಶ್ರೀದೇವಿಹಾಗು ಅವನ ಮಕ್ಕಳಾದ ವಿದ್ಯಾಸೀಮಾಶೃತಿ ಮತ್ತು ನನ್ನ ಮಗಳ ಮಗ ಸುರೇಶ ತಂದೆ ಮಲ್ಕಣ್ಣ ಕಾಚಾಪೂರ ಇವರೆಲ್ಲರು ನಮ್ಮ ಹತ್ತಿರ ಬಂದು ಅವರಲ್ಲಿ ನನ್ನ ಸೊಸೆ ಶ್ರೀದೇವಿ ಇವಳು ಅವಾಚ್ಯಶಬ್ದಗಳಿಂದ ಬೈದು ಜಗಳ ತೆಗೆದು ಎಲ್ಲರು ಸೇರಿಕೊಂಡು ಇಬ್ಬರಿಗು ಹೋಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಶೋಕ ನಗರ ಠಾಣೆ : ದಿನಾಂಕ 03-04-2014 ರಂದು ಸಾಯಂಕಾಲ 06.00ಗಂಟೆ ಸುಮಾರಿಗೆ ಗುಲಬರ್ಗಾ ನಗರದ ಆಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆಂದ್ರಬಸ್ಸ ನಿಲ್ದಾಣದ ಎದರುಗಡೆ ಕಮಲ ಹೋಟೆಲ ಹತ್ತಿರ ಮಹಿಬೂಬ ತಂದೆ ವಜೀರ ಸಾಹೇಬ ನಾದಾಫ, ಸಾ-ಗಾಂಧಿ ಚೌಕ ದೂದನಿ ತಾ-ಅಕ್ಕಲಕೋಟ, ಜಿಲ್ಲೆ-ಸೋಲಾಪೂರು. ಇತನು ರಸ್ತೆಯ  ಪಕ್ಕ ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಗುಲಬರ್ಗಾ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ ಈ ಘಟಕದ ಫ್ರಭಾರದಲ್ಲಿರುವ ಶ್ರೀ. ಯು.ಶರಣಪ್ಪ. ಪೊಲೀಸ್ ಇನ್ಸಪೆಕ್ಟರ ರವರ ಮಾರ್ಗದರ್ಶನದಲ್ಲಿ ಶ್ರೀ.ದತ್ತಾತ್ರೇಯ ಎ.ಎಸ್.ಐ ಹಾಗೂ ಅವರ ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಕಡೆಯಿಂದ ಮಟಕಾ ಚೀಟಿ, ಬಾಲ್ ಪೆನ್ನು, ಹಾಗೂ ನಗದು ಹಣ 3100/- ರೂಪಾಯಿ, ಜಪ್ತು ಮಾಡಿಕೊಂಡು  ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.