POLICE BHAVAN KALABURAGI

POLICE BHAVAN KALABURAGI

28 August 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಪ್ರಕಾಶ ತಂದೆ ಸಂಗಪ್ಪ ಬೆಲ್ಲದ   ಸಾ|| ತಾಂಬಾ ತಾ|| ಇಂಡಿ ಜಿ|| ಬಿಜಾಪೂರ ಹಾ|| || ಚನ್ನಪ್ಪ ಬೆಲ್ಲದ ಇವರ ಹೊಲದ ಮೇಟಗಿಯಲ್ಲಿ ದೇಸಾಯಿ ಕಲ್ಲೂರ ರವರು ನಾನು ತಾಯಿಯಾದ ನೀಲಮ್ಮ ರವರು ದಿನಾಂಕ 27.08.12 ರಂದು ಅಫಜಲಪೂರಕ್ಕೆ ಬಂದು ಸಂತೆ ಮಾಡಿಕೊಂಡು ಮರಳಿ ಮೆಟಗಿಗೆ ಹೋಗಲು ಸಾಯಂಕಾಲ 4-30 ಗಂ     ಟೆಗೆ ಚನ್ನಪ್ಪ ಇವರ ಹೊಲದ ಹತ್ತಿರ ರೋಡಿನ ಮೇಲೆ  ನಡೆದುಕೊಂಡು ಹೋಗುತ್ತಿದ್ದಾಗ ದೇಸಾಯಿ ಕಲ್ಲೂರ ಕಡೆಯಿಂದ ಒಂದು ಕಮಾಂಡರ ಜೀಪ ನಂ ಕೆ ಎ-32 ಎಮ್ ಎ-1000 ನೇದ್ದರ ಚಾಲಕ ಅತೀವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ತಾಯಿ ನೀಲಮ್ಮಳಿಗೆ ಡಿಕ್ಕಿ ಪಡೆಸಿದ್ದು  ಅಫಘಾತದಲ್ಲಿ ನನ್ನ ತಾಯಿಗೆ ಎಡಗಾಲುಎಡಗೈಎಡಗಲ್ಲಕ್ಕೆ ಭಾರಿ ರಕ್ತಗಾಯವಾಗಿದ್ದು ಡಿಕ್ಕಿ ಪಡಿಸಿದ ಜೀಪಿನಲ್ಲಿಯೇ ಉಪಚಾರ ಕುರಿತು ನನ್ನ ತಾಯಿಗೆ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ತಂದು ಸೇರಿಕೆ ಮಾಡಿರುತ್ತೇನೆ. ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಎಂಬುಲೇನ್ಸನಲ್ಲಿ ಕರೆದುಕೊಂಡು ಹೋಗಿರುತ್ತೇನೆ. ಉಪಚಾರ ಫಲಕಾರಿಯಾಗದೆ ರಾತ್ರಿ  9-10 ಗಂಟೆಗೆ ಮೃತಪಟ್ಟಿರುತ್ತಾಳೆ.   ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 145/12 ಕಲಂ 279 304 (ಎ) ಐ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ .
ಅಪಹರಣ  ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ : ಜೀನತ ಬೇಗಂ ಗಂಡ ಸೈಯದ ಸಲೀಂ ವ:38 ವರ್ಷ ಸಾ: ಗುಲಷನ್-ಏ-ಅರಾಫತ ಕಾಲನಿ ಪ್ರಿನ್ಸ್ ಫಂಕ್ಷನ ಹಾಲ್ ಹಾಗರಗಾ ರೋಡ ಗುಲಬರ್ಗಾ ರವರು ನನ್ನ  ಗಂಡ ಖಾಸಗಿ ವಾಹನ ಚಲಾಯಿಸುತ್ತಿದ್ದು, ನನಗೆ  ಸೈದಾ ನೆಹಾ ಎಂಬ ಅಂದಾಜು 15 ವರ್ಷ ಮಗಳಿದ್ದು, . ನನ್ನ ಮಗಳಾದ ಸೈದಾ ನೆಹಾ ಇವಳು 8 ನೇ ತರಗತಿಯಲ್ಲಿ ಜಾಸ್ಮೀನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ .ನನ್ನ ತಾಯಿಯಾದ ಅಮೀರ ಬೀ ಇವರ ಮನೆಯು ನಮ್ಮ ಓಣಿಯಲ್ಲಿಯೇ ಇದ್ದು, ನನ್ನ ತಾಯಿಯ ಮನೆಗೆ ನನ್ನ ಮಗಳು ಹೋಗಿ ಬರುವುದು ಮಾಡುತ್ತಿದಳು. ದಿನಾಂಕ 25.08.2012 ರಂದು ಎಂದಿನಂತೆ ನನ್ನ ಗಂಡ ಕೆಲಸಕ್ಕೆ ಮನೆಯಿಂದ ಬೆಳಿಗ್ಗೆ ಹೋದನು. ಅಂದಾಜು 3-00 ಪಿ.ಎಮ್. ಸುಮಾರಿಗೆ ನನ್ನ ಮಗಳಾದ ಸೈದಾ ನೆಹಾ ಇವಳು ಶಾಲೆಯ ಉಡುಪು ಹೋಲಿದುಕೊಂಡು ಬರುತ್ತೇನೆ ಎಂದು ನನ್ನ ತಾಯಿಯ ಮನೆಗೆ ಹೋದಳು. ಸಾಯಂಕಾಲ 7-00 ಗಂಟೆಯಾದರು ನನ್ನ ಮಗಳು ಮರಳಿ ಮನೆಗೆ ಬರಲ್ಲಿಲ್ಲಾ. ನಾನು ನನ್ನ ತಾಯಿಯ ಮನೆಗೆ ಹೋಗಿ ವಿಚಾರಿಸಲು ಸೈದಾ ನೆಹಾ ಇವಳು ಬಂದಿರುವುದಿಲ್ಲಾ  ಈ ಬಗ್ಗೆ ನನ್ನ ಸಂಬಂಧಿಕರಿರುವ ಕೆ.ಬಿ.ಎನ್.ದರ್ಗಾ, ಖಾಜಾ ಕಾಲನಿ, ನೂರಾನಿ ಮೋಹಲ್ಲಾ, ಗುಲಬರ್ಗಾ ಬಡಾವಣೆಗಳಲ್ಲಿ ನಾನು ನನ್ನ ಗಂಡ ಮತ್ತು ಸಂಬಂಧಿಕರು ತಿರುಗಾಡಿ ಹುಡುಕಾಡಿದರು, ಸಿಕ್ಕಿರುವುದಿಲ್ಲಾ.   ನನ್ನ ಮಗಳ ಬಗ್ಗೆ ವಿಚಾರಿಸಲು ಸಿಕ್ಕಿರುವದಿಲ್ಲ.  ನನ್ನ ಮಗಳ ಚಹರೆ ಪಟ್ಟಿ ಈ ಕೆಳಗಿನಂತಿರುತ್ತದೆ. ಹೆಸರು- ಸೈದಾ ನೆಹಾ ವಯಸ್ಸು- 15 ವರ್ಷ  ಮೈಬಣ್ಣ- ಸದಾಗಪ್ಪು , ಎತ್ತರ-  45 ಜಾತಿ: ಮುಸ್ಲೀಂ ಧರಿಸಿದ ಬಟ್ಟೆ- ಬಿಳಿ ನೀಲಿ ಬಣ್ಣದ ಶೆಟ್ಟ ಸೆಲವಾರ ಹಾಕಿಕೊಂಡು ಮೇಲೆ ಬುರ್ಖಾ ಧರಿಸಿರುತ್ತಾಳೆ. ಗುರುತು- ಗದ್ದದ ಮೇಲೆ ಕಪ್ಪು ಚಿಕ್ಕ ಮಚ್ಚೆ ಇದೆ ವಿದ್ಯಾಭ್ಯಾಸ: 8 ನೇ ತರಗತಿ. ಕಾರಣ ಈ ಮೇಲಿನ ಚಹರೆ ಪಟ್ಟಿಯುಳ್ಳ ನನ್ನ ಮಗಳಾದ ಸೈದಾ ನೇಹಾ ಇವಳಿಗೆ ಯಾರೊ ಅಪರಿಚಿತರು ಅಪಹರಿಸಿಕೊಂಡು ಹೋಗಿರಬಹುದು ಅಂತಾ  ದೂರು ಸಲ್ಲಿಸಿದ ಸಾರಂಶದ   ಮೇಲಿಂದ ಠಾಣೆ ಗುನ್ನೆ ನಂ. 190/2012 ಕಲಂ 366(ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತಾರೆ. 

GULBARGA DISTRICT


ಯು.ಡಿ.ಅರ್. ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀಮತಿ ಸೈಯ್ಯದಾಭಾನು ಗಂಡ ಮಹ್ಮದ ರಿಯಾಜ ಶೇಕ ಸಾ|| ಎಂ.ಕೆ.ನಗರ ಮಾಲಗತ್ತಿ ಕ್ರಾಸ ಇಂಡಿಯನ ಇಸ್ಲಾಮಿಕ ಶಾಲೆ ಹತ್ತಿರ ಗುಲಬರ್ಗಾರವರು ನನ್ನ ಗಂಡನಾದ ಮಹಮದ ರಿಯಾಜ ಶೇಖ ಇತನು ದಿನಾಂಕ.23-8-2012 ರಂದು ಸಂಜೆ 5-30 ಪಿ.ಎಂ.ಕ್ಕೆ ಸುಮಾರಿಗೆ ನಾನು ಅವರ ತಾಯಿಗೆ ಮೆಹಂದಿ ಹಚ್ಚುತ್ತಿದ್ದನ್ನು ನೋಡಿ ತಾನೇ ಚಹಾ ಮಾಡಲು ಸ್ಟೋ ಹವಾ ಹಾಕಲು ಸೀಮೆ ಎಣ್ಣೆ ಬರದ ಕಾರಣ  ಮತ್ತೆ ಜೋರಾಗಿ ಹವಾ ಹಾಕಿದರೂ ಸೀಮೆ ಎಣ್ಣೆ ಬರದ ಕಾರಣ ಸ್ಟೋ ಪಿನ ಮಾಡಲು  ನವಜಲದಿಂದ ಸೀಮೆಎಣ್ಣೆ ಚಿಮ್ಮಿ ತಾನು ಧರಿಸಿದ ಷರ್ಟು ಮೇಲೆ ಬಿದ್ದಿದ್ದು ಇದನ್ನು ಗಮನಿಸದೇ ಬೆಂಕಿ ಕಡ್ಡಿ ಕೊರೆದು ಸ್ಟೋಗೆ ಹಚ್ಚಲು ಒಮ್ಮಿಂದ ಒಮ್ಮೇಲೆ  ಊರಿ ಹತ್ತಿ ಧರಿಸಿದ ಷರ್ಟಿಗೆ ಬೆಂಕಿ ಹತ್ತಿದ್ದು ನೋಡು ನೋಡುವಷ್ಟರಲ್ಲಿ ಎದೆ, ಹಣೆ, ಹೊಟ್ಟೆಗೆ ಹತ್ತಿರುತ್ತದೆ. ಉಪಚಾರ ಹೊಂದುತ್ತಾ ದಿನಾಂಕ: 27-08-2012 ರಂದು ಮಧ್ಯಾಹ್ನ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 27/2012 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.