POLICE BHAVAN KALABURAGI

POLICE BHAVAN KALABURAGI

14 February 2014

Gulbarga District Reported Crimes

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ:13-02-2014 ರಂದು 8.30 ಪಿಎಮ್ ಸುಮಾರಿಗೆ ಶಹಾಬಾದದಿಂದ ಗುಲ್ಬರ್ಗಾ ಕಡೆಗೆ ಹೊರಟಿದ್ದ ಒಂದು ಟಾವರೆಸ್ ಲಾರಿ ನಂ: ಕೆ.ಎ-32/ಎ-7085 ನೇದ್ದರ ಚಾಲಕನ ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಸಿಕೊಂಡು ಗುಲ್ಬರ್ಗಾದ ಕಡೆಯಿಂದ ಟಿಪ್ಪರ ನಂ: ಎಮ್.ಎಚ್.42/ಟಿ-143 ನೇದ್ದಕ್ಕೆ ಡಿಕ್ಕಿ ಹೊಡೆದು ಅದರ ಹಿಂದೆ ಬರುತ್ತಿದ್ದು ಕೃಷರ ಜೀಪ ನಂ: ಕೆ.ಎ-32/ಬಿ-6095 ನೇದ್ದಕ್ಕೂ ಕೂಡಾ ಡಿಕ್ಕಿಹೊಡೆದ್ದರಿಂದ ಸದರಿ ಕೃಷರ ಜೀಪ ಚಾಲಕನಾದ ಶಾಮರಾವ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು ಟಾವರೆಸ್ ಲಾರಿ ನಂ: ಕೆ.ಎ-32/ಎ-7085 ನೇದ್ದರ  ಚಾಲಕನು ಕೂಡಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು ಕೃಷರ ಜೀಪನಲ್ಲಿದ್ದ ಸಾಬಮ್ಮಾ ಇವಳು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲ್ಬರ್ಗಾ ತೆಗೆದುಕೊಂಡು ಹೋಗುವಾಗ ಧಾರಿ ಮದ್ಯದಲ್ಲಿ ಮೃತ ಪಟ್ಟಿರುತ್ತಾರೆ ಸದರಿ ಕೃಷರ ಜೀಪನಲ್ಲಿ ಜೀಪಿನಲ್ಲಿದ್ದ ಇನ್ನುಳಿದ 16 ಜನರಿಗೆ ಭಾರಿ ಮತ್ತು ಸಾದಾಗಾಯಗಳಾಗಿರುತ್ತವೆ. ಅಂತಾ ಶ್ರೀ ಶರಣಪ್ಪಾಗೌಡ ತಂದೆ ಶಾಮರಾವ ಮಾಲಿಪಾಟೀಲ  ಸಾ: ಶಂಕರವಾಡಿ.   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.