POLICE BHAVAN KALABURAGI

POLICE BHAVAN KALABURAGI

11 July 2012

GULBARGA DIST REPORTED CRIME


ಅಪಘಾತ ಪ್ರಕರಣ:
ಕಮಲಾಫೂರ ಪೊಲೀಸ ಠಾಣೆ:

ಶ್ರೀ ರಾಜಕುಮಾರ ತಂದೆ ಅಂಬಾರಾವ ಪಾಟೀಲ ಸಾಃ ಮರಗುತ್ತಿ ತಾಃಜಿಃ ಗುಲಬರ್ಗಾ  ರವರು  ನಾನು ರಮೇಶ ತಂದೆ ಹಣಮಂತರಾಯ ಬಿರಾದಾರ 
ಇಬ್ಬರೂ ಕುಡಿಕೊಂಡು ದಿಃ 09/07/2012 ರಂದು ರಾತ್ರಿ 9-00 ಗಂಟೆಗೆ ಚಿಟಗುಪ್ಪಾಕ್ಕೆ ಹೋಗಿ ಮರಳಿ ಗುಲಬರ್ಗಾಕ್ಕೆ ಹುಮನಾಬಾದ ಗುಲಬರ್ಗಾ ಎನ್.ಹೆಚ್. 218 ನೇದ್ದರ ರೋಡಿನ ಮೇಲೆ ಬರುತ್ತಿದ್ದಾಗ ಮರುಗತ್ತಿ ಕ್ರಾಸ ಹತ್ತಿರ ಇರುವ ಕೆ.ಇ.ಬಿ ಆಫಿಸ್ ಮುಂದುಗಡೆ ರಮೇಶ ಇತನು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ. ಕೆಎ:22 ಡಬ್ಲೂ:4298 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಸ್ಕಿಡ್ ಆಗಿ ಬಿದ್ದರಿಂದ ನನಗೆ ಮತ್ತು ರಮೇಶ ಇತನಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂಧ ಠಾಣೆ ಗುನ್ನೆ ನಂ: 82/2012 ಕಲಂ 279,337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಜೂಜಾಟ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ 10-07-2012 ರಂದು ಸಾಯಂಕಾಲ 4-30 ಗಂಟೆಗೆ ಶ್ರೀ ಬಸವರಾಜ ತೇಲಿ ರವರು  ತಮ್ಮ ಸಿಬ್ಬಂದಿಯೊಂದಿಗೆ ಅಳಂದ ರೋಡ ಪಕ್ಕದಲ್ಲಿರುವ ಸಂತೋಷ ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಖುಲ್ಲಾ ಜಾಗದಲ್ಲಿ ದುಂಡಾಗಿ ಕುಳಿತು ಅಂದರ ಬಹಾರ ಇಸ್ಪೆಟ್ ಜೂಜಾಟವಾಡುತ್ತಿದ್ದವರ ಮೇಲೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಸಂಗಣ್ಣ ತಂದೆ ಶರಣಪ್ಪ ಮಾಲಿಪಾಟೀಲ್, ಅನಿಲಕುಮಾರ ತಂದೆ ಸಾಯಬಣ್ಣ ಪಾಟೀಲ್,ಶಿವಶರಣಪ್ಪ ತಂದೆ ಅಣವೀರಪ್ಪ ಮಸೂಲೆ,ಶ್ರೀಕಾಂತ ತಂದೆ ಚಿದಂಬರ ಬೆಳಮಗಿ, ರಾಜು ತಂದೆ ಗುರಲಿಂಗಪ್ಪ ಚಟ್ಟಿ,ನಾಗರಾಜ ತಂದೆ ಅಣ್ಣಾರಾವ ಪಾಟೀಲ್, ಶರಣಕುಮಾರ ತಂದೆ ಬಸವಣ್ಣಪ್ಪ ಗೋಳಾ ಸಾ|| ಎಲ್ಲರೂ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 10,500/-ರೂಪಾಯಿಗಳು ಮತ್ತು  ಇಸ್ಪೆಟ್ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ 48/2012 ಕಲಂ 87 ಕರ್ನಾಟಕ ಪೊಲೀಸ್ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷೀಣೆ ಕಿರುಕುಳ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸರಸ್ವತಿ ಗಂಡ ದೇವಿಂದ್ರ ಚಿಂಚೋಳಿ  ಸಾ|| ಜಯತೀರ್ಥ ಕಲ್ಯಾಣ  ಮಂಟಪ  ಉದನೂರ ರೋಡ ಗುಲಬರ್ಗಾ ರವರು ನಾನು ದಿ:10/07/2012 ರಂದು 9-00 ಗಂಟೆ ಸುಮಾರಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಗಂಡ ಮತ್ತು ನನ್ನ ಗಂಡನ ಮೊದಲನೆ ಹೆಂಡತಿಯ ತಾಯಿಯ ಮಾತನ್ನು ಕೇಳಿ ನನ್ನ ಗಂಡನು ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ಕೈಯಿಂದ ಮತ್ತು ಇಳಿಗೆಯಿಂದ ಹೊಡೆ ಬಡೆ ಮಾಡಿ ಅವ್ಯಾಚ್ಚವಾಗಿ ಬೈದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 226/2012 ಕಲಂ 498 (ಎ) 323 324 504 109 506 (2) ಸಂಗಡ 34  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಾರಸುದಾರಲ್ಲಿದ್ದ ಎಮ್ಮೆಗಳ ಬಗ್ಗೆ: 
ಮಹಾಗಾಂವ ಪೊಲೀಸ್ ಠಾಣೆ: ದಿನಾಂಕ: 06-07-2012 ರಂದು 1-00 ಗಂಟೆ ಸುಮಾರಿಗೆ ಮಹಾಗಾಂವ ಕ್ರಾಸದಲ್ಲಿರುವ ಚಿಂಚೋಳಿ ರೋಡಿನ ಮೇಲೆ ದನದ ಸಂತೆ ಇರುವದರಿಂದ ಪಿ.ಎಸ.ಐ ರವರು ತಮ್ಮ ಸಿಬ್ಬಂದಿಯವರಾದ ಶಂಕ್ರಯ್ಯ ಎಎಸ್ಐ, ಹಾಗೂ ಕಲ್ಯಾಣಿ ಪಿ.ಸಿ ರವರೊಂದಿಗೆ ಪೆಟ್ರೋಲಿಂಗ್ ಕುರಿತು ಹೋದಾಗ ದನದ ಬಜಾರದಲ್ಲಿ ರೋಡಿನ ಪಕ್ಕದಲ್ಲಿ 3 ಜನರು ಒಂದು ಟಾಟಾ .ಸಿ ನಂ: ಕೆ.-28-ಬಿ-3534 ನೇದ್ದರ ವಾಹನದಲ್ಲಿ 3 ಎಮ್ಮೆಗಳನ್ನು 3 ಜನರು ಎಲ್ಲಿಂದಲೋ ಮೋಸ, ಕಪಟ, ಅಥವಾ ಕಳ್ಳತನದಿಂದ ತಂದು ಅವುಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿರುವಾಗ ಗುರುತಿಸಿ ಅವರ ಮೇಲೆ ಸಂಶಯ ಬಂದು ಅವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಬಂದೇನವಾಜ ತಂದೆ ಬಡೇಸಾಬ  ಸೌದಾಗರ, ಸಾ||ಗಾಲೀಸಾಹೇಬ ದರ್ಗಾ ಇಂಡಿ ರೋಡ ಆಲಮೇಲ್ ತಾ||ಸಿಂದಗಿ ಜಿ||ಬಿಜಾಪೂರ,ಶಿವಶರಣಪ್ಪ ತಂದೆ ಶರಣಪ್ಪ ನಿರಜನ್ ಸಾ||ಯಲಗುಂಡಿ ತಾ||ಬಸವ ಕಲ್ಯಾಣ ಜಿ||ಬೀದರ ಹಾ||||ಬಬಲಾದ ಮುತ್ಯಾನ ಮಠದ ಹತ್ತಿರ ಗುಲಬರ್ಗಾ,ಸದ್ದಾಮ ತಂದೆ ಬಂದಗಿಸಾಬ ಸೌದಾಗರ ಸಾ||ಸಂಗಮ ಬಾರ್ ಹಿಂದುಗಡೆ ಬಿಜಾಪೂರ ರೋಡ ಸಿಂದಗಿ ತಾ||ಸಿಂದಗಿ ಜಿ||ಬಿಜಾಪೂರ ರವರು ಎಲ್ಲಿಂದಲೋ ಕಳ್ಳತನ ಮಾಡಿ ಮಾರಾಟ ಮಾಡಲು ಪ್ರಯತ್ನಿಸು ತ್ತಿರುವಾಗ ಅವರನ್ನು ಮತ್ತು ಎಮ್ಮೆಗಳನ್ನು ಜಪ್ತಿ ಮಾಡಿಕೊಂಡು ಠಾಣೆ ಗುನ್ನೆ 61/2012 ಕಲಂ 41 (ಡಿ) 102 ಸಿಅರ ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ.ಕರಬಸ್ಸಪ್ಪಾ ತಂದೆ ಹಣಮಂತ ವಡ್ಡರ ಸಾ||ದಂಗಾಪೂರ ತಾ||ಆಳಂದ ಜಿ||ಗುಲಬರ್ಗಾವರು ನನ್ನ ಹಿರಿಯ ಅಣ್ಣ ಶರಣಪ್ಪಾ ವಯ 45 ವರ್ಷ, ಉ;ಗೌಂಡಿ ಗುತ್ತೇದಾರ  ಕೆಲಸ, ಇತನು ದಿನಾಲು ಗುಲಬರ್ಗಾಕ್ಕೆ ಕೆಲಸದ ನಿಮಿತ್ಯ ಅವನ ಸ್ವಂತ ಮೋಟಾರ ಸೈಕಲ್ ಹೀರೊ ಹೊಂಡಾ ಗ್ಲ್ಯಾಮರ ನಂ.ಕೆ.ಎ.33 ಜೆ.7509 ನೇದ್ದರ ಮೇಲೆ ಹೋಗಿ ಬರುತ್ತಿದ್ದನು. ದಿನಾಂಕ.10-07-2012 ರಂದು ಮುಂಜಾನೆ ಕೆಲಸದ ನಿಮಿತ್ಯ ದಂಗಾಪೂರದಿಂದ ಗುಲಬರ್ಗಾಕ್ಕೆ  ತನ್ನ ಮೋಟಾರ ಸೈಕಲ್ ಮೇಲೆ ಬಂದು ಕೆಲಸ ಮುಗಿಸಿಕೊಂಡು ರಾತ್ರಿ ಅಂದಾಜು 9-00 ಗಂಟೆಯ ಸುಮಾರಿಗೆ ನನ್ನ ಅಣ್ಣ ಶರಣಪ್ಪಾ ಇತನು ಗುಲಬರ್ಗಾದಿಂದ ದಂಗಾಪೂರಕ್ಕೆ ಬರುವಾಗ ಗುಲಬರ್ಗಾ- ಆಳಂದ ರೋಡಿಗೆ ಇರುವ ವಿಶ್ವರಾಧ್ಯ ಗುಡಿಯ ಹತ್ತಿರ  ರೋಡಿನ ಮೇಲೆ  ಟ್ಯಾಂಕರ ಲಾರಿ ನಂ ಕೆ.ಎ.32 ಬಿ-605 ನೇದ್ದರ ಚಾಲಕ ತನ್ನ ಲಾರಿಯನ್ನು ಅಲಕ್ಷತನದಿಂದ ರೋಡಿನ ಮದ್ಯದಲ್ಲಿ ಸಾರ್ವಜನಿಕ ರಸ್ತೆಗೆ  ಅಡೆತಡೆಯಾಗುವಂತೆ ಮತ್ತು  ಇಂಡಿಕೇಟರ ಲೈಟ ಹಾಕದೆ  ಅಲಕ್ಷತನದಿಂದ ತನ್ನ ಲಾರಿಯನ್ನು ನಿಲ್ಲಿಸಿದ್ದರಿಂದ ನನ್ನ ಅಣ್ಣ ಶರಣಪ್ಪಾ ಇತನು ವೇಗವಾಗಿ ಬಂದು ಕೆಟ್ಟು ನಿಂತಿರುವ ಟ್ಯಾಂಕರ ಲಾರಿಗೆ ಡಿಕ್ಕಿ ಹೊಡೆದು ಹಣೆಗೆ  ಮತ್ತು ಹುಬ್ಬಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ  ಮೃತ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 227/2012 ಕಲಂ. 279,304 (ಎ) 283 ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.