POLICE BHAVAN KALABURAGI

POLICE BHAVAN KALABURAGI

02 October 2013

Gulbarga District Reported Crimes

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಉಮೇಶ ತಂದೆ ದೀಪ್ಲಾ ರಾಠೋಡ ಇವರು ದಿನಾಂಕ 30-09-2013 ರಂದು ರಾತ್ರಿ ತಮ್ಮ ತಾಂಡಾಕ್ಕೆ ಹೋಗಲು ಯಾವುದೇ ವಾಹನ ಸೌಕರ್ಯ ಇರದೇ ಇರುವದರಿಂದ ರಾಜನಾಳ ತಾಂಡಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಲು ಗುಲಬರ್ಗಾ ಹುಮನಾಬಾದ ರೋಡಿನ ಮುಖಾಂತರ ರಾಜನಾಳ ತಾಂಡಾಕ್ಕೆ ಬಿ.ಎಸ್.ಎನ್.ಎಲ್  ಕಛೇರಿ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ 20-30 ಗಂಟೆ ಸುಮಾರಿಗೆ ಎದುರುಗಡೆಯಿಂದ  ಹುಮನಾಬಾದ ಕಡೆಯಿಂದ ಒಂದು ಮೋಟಾರ ಸೈಕಲ ನಂ. ಎಂಹೆಚ್: 05, ಎಸಿ: 3215 ನೇದ್ದರ ಸವಾರನು ತನ್ನ ಮೊ.ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಮುಂದೆ ಹೋಗಿ ರೋಡಿನ ಬದಿಯಲ್ಲಿರುವ ತಗ್ಗಿನಲ್ಲಿ ಕೆಡುವಿ ಅಪಘಾತ ಪಡಿಸಿದ್ದರಿಂದ ಫಿರ್ಯಾದಿಗೆ ಮತ್ತು ಆರೋಪಿತನಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಬಸವರಾಜ ತಂದೆ ಸಿದ್ರಾಮಪ್ಪ ಖಾನಾಪೂರೆ  ಸಾಃ ಪಟವಾದ ಇವರು ತನ್ನ ತಂದೆಯೊಂದಿಗೆ, ತಮ್ಮ ಹೊಲಕ್ಕೆ ಹೋಗುತ್ತಿರುವಾಗ ಶಂಕರರಾವ ತಂದೆ ನಾಗಶೆಟ್ಟೆಪ್ಪಾ ಪೊಲೀಸ ಪಾಟೀಲ ಸಂಗಡ ಇನ್ನೊಬ್ಬ ಸಾಃ ಇಬ್ಬರು ಪಟವಾದ ತನ್ನ ಟ್ರ್ಯಾಕ್ಟರ್ ನ್ನು ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ಫಿರ್ಯಾದಿಯು ಆರೋಪಿತನಿಗೆ ಹೋಗಿ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಇಲ್ಲಿಂದ ಟ್ರ್ಯಾಕ್ಟರ ತೆಗೆ ಅಂತಾ ಹೇಳಿದಕ್ಕೆ ಫಿರ್ಯಾದಿಗೆ ಕೈಯಿಂದ ಮತ್ತು ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿದ್ದು  ಅಂತಾ ಫಿರ್ಯಾದಿ ಹೇಳಿಕೆ ಸಾರಾಂಶದ ಮೆಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಸ್ವಾಭಾವಿಕ ಸಾವು ಪ್ರಕರಣ :
ರೋಜಾ ಠಾಣೆ : ಶ್ರೀ  ಜಗನ್ನಾಥ ತಂದೆ ರುಕ್ಕಪ್ಪಾ ಶಂಕರಕೇರಿ ಸಾ: ರಾಮಜೀ ನಗರ ರೋಜಾ ಕೆ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಕೊಟ್ಟ ನನ್ನ ತಂದೆ ತೀರಿಕೊಂಡಿದ್ದು ತಾಯಿ ಶ್ರೀಮತಿ ಲಕ್ಷಿಮಬಾಯಿ ಗಂಡ ರುಕ್ಕಪ್ಪಾ ವಯ: 58, ಸಾ: ರಾಮಜೀ ನಗರ ರೋಜಾ [ಕೆ] ಗುಲಬರ್ಗಾ ಇವಳು ಒಬ್ಬಳೆ ಬೇರೆ ಮನೆ ಮಾಡಿಕೊಂಡು ಕೂಲಿನಾಲಿ ಕೆಲಸ ಮಾಡಿಕೊಂಡು ವಾಸವಿದ್ದು ದಿನಾಂಕ: 25-09-2013 ರಂದು ಸಾಯಂಕಾಲ 6:30 ಪಿಎಮ್ ಕ್ಕೆ ನನ್ನ ತಾಯಿ ತನ್ನ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವ ಕುರಿತು ಸ್ಟೌಕ್ಕೆ ಹವಾ ಹಾಕಿ ಬೆಂಕಿ ಕಡ್ಡಿಕೊರೆದು ಹಚ್ಚಲು ಸ್ಟೌದ  ನೌಜೋಲ ಕೆಳಗೆ ಇದ್ದ ಸೀಮೆ ಎಣ್ಣೆ ಒಮ್ಮೆಲೆ ಸಿಡಿದು ಅವಳ ಮೈಗೆ ಬೆಂಕಿ ಹತ್ತಿ ಹೊಟ್ಟೆಗೆ ಎರಡು ಕಾಲುಗಳಿಗೆ ಮತ್ತು ಬಲಗೈಗೆ ಬೆಂಕಿ ಹತ್ತಿ ಸುಟ್ಟಗಾಯವಾಗಿದ್ದು ಸದರಿಯವಳಿಗೆ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನನ್ನ ತಾಯಿ ಸುಟ್ಟಗಾಯಗಳಿಂದ ಉಪಚಾರ ಫಲಕಾರಿಯಾಗದೇ ದಿನಾಂಕ: 30-09-2013 ರಂದು ರಾತ್ರಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನ ಹಿಪ್ಪರಗಾ ಠಾಣೆ : ಶ್ರೀಮತಿ ಸೈನಾ ಗಂಡ ಜೂಜು ಕಾಳೆ ವಯ: ಸಾ: ಝಳಕಿ(ಕೆ) ಹಾ.ವಾಸ: ಖೇಡ ಉಮರ್ಗಾ ತಾ: ಆಳಂದ ಮಗನಾದ ಚಂದ್ರಕಾಂತನಿಗೆ 2-3 ದಿನಗಳ ಹಿಂದೆ ಆರಾಮ ಇಲ್ಲಿದ್ದರಿಂದ ದಿನಾಂಕ: 30/09/2013 ರಂದು ಉಪಚಾರಕ್ಕೆ ಮಾದನ ಹಿಪ್ಪರಗಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಫಲಿಸದೆ  ಸಾಯಂಕಾಲ 04 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ನನ್ನ ಮಗನ ಮರಣದಲ್ಲಿ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.