POLICE BHAVAN KALABURAGI

POLICE BHAVAN KALABURAGI

09 June 2014

Gulbarga District Reported Crimes

ಅಪರಿಚಿತ ವ್ಯಕ್ತಿ ಮನೆಯ ಮಾಳಿಗೆಯಿಂದ ಬಿದ್ದು ಗಾಯಗೊಂಡ ಪ್ರಕರಣ :

ಅಶೋಕ ನಗರ ಠಾಣೆ : ದಿನಾಂಕ 08/06/2014 ರಂದು ರಾತ್ರಿ 9-30  ಪಿ.ಎಂ.ದ ಸುಮಾರಿಗೆ ಗೋದುತಾಯಿ ನಗರದ ಮದರ ತೆರೆಸಾ ಶಾಲೆಯ ಪಕ್ಕದಲ್ಲಿರುವ ಬಾಹುಬಲಿ ಜೈನ್ ರವರ ಮನೆಯ ಮೇಲಿಂದ ಅಂದಾಜು 25 ರಿಂದ 28 ವಯಸ್ಸಿನ ಅಪರಿಚಿತ ವ್ಯಕ್ತಿ ಜಾರಿ ಬಿದ್ದು ಕಾಲಿಗೆ ಮತ್ತು ತಲೆಗೆ ರಕ್ತಗಾಯಗೊಂಡು ಪ್ರಜ್ಞಾಹೀನ ಸ್ಥೀತಿಯಲ್ಲಿದ್ದು ಸದ್ಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ವ್ಯಕ್ತಿಯ ಶರ್ಟ ಕಾಲರ ಮೇಲೆ Super Tailar Shorapur  ಅಂತಾ ಲೇಬಲ ಇರುತ್ತದೆ. ಆದ್ದರಿಂದ ಸದರಿ ಭಾವಚಿತ್ರವುಳ್ಳ ವ್ಯಕ್ತಿಯ ಹೆಸರು ವಿಳಾಸ ಅಥವಾ ಆತನ ಸಂಬಂಧಿಕರ ಮಾಹಿತಿ ಸಿಕ್ಕಿಲ್ಲಿ ಅಶೋಕ ನಗರ ಪೊಲೀಸ್ ಠಾಣೆ ಗುಲಬರ್ಗಾಕ್ಕೆ ಮತ್ತು ಈ ಕೇಳಗೆ ನಮೂದಿಸಿದ ಮೋಬೈಲ ನಂಬರಗಳಿಗೆ ಸಂಪರ್ಕಿಸಲು ಕೊರಲಾಗಿದೆ.
ಕೊಲೆ ಪ್ರಕರಣ :
ಮಧೋಳ ಠಾಣೆ : ಶ್ರೀಮತಿ ಕಾಶಮ್ಮ ಗಂಡ ಹಣಮಪ್ಪ ಚಿನ್ನಂಟಿ ಸಾ: ಕಡಚರ್ಲಾ ಗ್ರಾಮ ಇವರಿಗೆ ಇಬ್ಬರೂ ಮಕ್ಕಳಿದ್ದು ನನ್ನ ಮಗನಾದ ಹುಸೇನಪ್ಪ ಈತನು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದು ಮಗಳಾದ ಹುಸೇನಮ್ಮ ಇವಳು ಅಂಗವಿಕಲಳಾಗಿರುತ್ತಾಳೆ. ನನ್ನ ಗಂಡನಾದ ಹಣಮಪ್ಪ ತಂದೆ ಬೋನಪ್ಪ ಚಿನ್ನಂಟಿ ಇವರು ಒಕ್ಕಲುತನ ಕೆಲಸ ಮಾಡುತ್ತಿದ್ದನು ನಮ್ಮ ಅಣ್ಣತಮ್ಮಕಿ ಯವರಾದ ಭೀಮಶಪ್ಪ ತಂದೆ ಆಶಪ್ಪ ಚಿನ್ನಂಟಿ ಇವರು ನಾಲ್ಕು ಜನ ಅಣ್ಣತಮ್ಮಂದಿರು ಇದ್ದು ಪ್ರತಿಯೊಬ್ಬರ ಪಾಲಿಗೆ ಆಸ್ತಿಯು ಕಡಿಮೆ ಬಂದಿರುತ್ತದೆ ಆದರೆ ನನ್ನ ಗಂಡನು ತಂದೆಗೆ ಒಬ್ಬನೆ ಮಗನಾಗಿದ್ದರಿಂದ ಈತನಿಗೆ ಹೆಚ್ಚಿಗೆ ಆಸ್ತಿ ಬಂದಿರುತ್ತದೆ. ಮತ್ತು ನಮ್ಮ ಹೊಲದಲ್ಲಿ ಬೋರವೆಲ್ ಹಾಕಿಸಿ ನೀರಾವರಿ ಮಾಡಿ ಬೆಳೆ ಬೆಳೆದಿದ್ದರಿಂದ ಇದನ್ನು ನೋಡಿ ಮೂರು ಜನ ಅಣ್ಣ ತಮ್ಮಂದಿರಾದ 1) ಹಸೇನಪ್ಪ ತಂದೆ ಆಶಪ್ಪ ಚಿನ್ನಂಟಿ 2) ಚಂದ್ರಪ್ಪ ತಂದೆ ಆಶಪ್ಪ ಚಿನ್ನಂಟಿ 3) ಭೀಮಶಪ್ಪ ತಂದೆ ಆಶಪ್ಪ ಚಿನ್ನಂಟಿ ಸಾ|| ಎಲ್ಲರು  ಕಡಚರ್ಲಾ ಇವರು ಹೊಟ್ಟೆಕಿಚ್ಚು ಪಡುತ್ತಾ ಏನಾದರು ಕೇಡು ಮಾಡಬೇಕು ಎಂದು ಯೊಚನೆ ಮಾಡುತ್ತಾ ಸುಮಾರು 6 ತಿಂಗಳಿನಿಂದ ತಕರಾರು ಮಾಡುತ್ತಾ ದ್ವೇಷ ಸಾದಿಸುತ್ತಾ ಬಂದಿದ್ದರು. ಅವರು ನಮ್ಮ ಸಂಗಡ ಮಾತನಾಡ ತ್ತಿರಲಿಲ್ಲಾ. ದಿನಾಂಕ: 08.06.14 ರಂದು ರಾತ್ರಿ 8 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ಹಣಮಪ್ಪ ತಂದೆ ಬೋನಪ್ಪ ಚಿನ್ನಂಟಿ ಹಾಗೂ ನನ್ನ ಮೊಮ್ಮಗಳಾದ ಪೂನಮ್ ಇವರು ಮನೆಯಲ್ಲಿದ್ದೇವು ಆಗ ಭೀಮಶಪ್ಪನ ಮಕ್ಕಳು ನಮ್ಮ ಮನೆಯಲ್ಲಿ ಟಿ ವಿ ನೊಡುತ್ತಾ ಕುಳಿತ್ತಿದ್ದರು ಆಗ ಹಸೇನಪ್ಪ ತಂದೆ ಆಶಪ್ಪ ಚಿನ್ನಂಟಿ, ಚಂದ್ರಪ್ಪ ತಂದೆ ಆಶಪ್ಪ ಚಿನ್ನಂಟಿ, ಭೀಮಶಪ್ಪ ತಂದೆ ಆಶಪ್ಪ ಚಿನ್ನಂಟಿ ಸಾ|| ಎಲ್ಲರೂ ಕಡಚರ್ಲಾ ಈ ಮೂರು ಜನರು ನಮ್ಮ ಮನೆಯ ಮುಂದೆ ಬಂದು ಮನೆಯಲ್ಲಿದ್ದ ನನ್ನ ಗಂಡನಿಗೆ ಏ ಬೋಸಡಿ ಮಗನೆ ಹೊರಗೆ ಬಾರಲೆ ನಮ್ಮ ಮಕ್ಕಳಿಗೆ ನೀಮಗೆ ಬೇಕಾದಂತೆ ನೀಮ್ಮ ಮನೆಯಲ್ಲಿ ಕೂಡಿಸಿಕೊಂಡಿದ್ದಿ ಅಂತಾ ಬೈಯ್ಯ ಹತ್ತಿದ್ದರು ಆಗ ನನ್ನ ಗಂಡನು ಮತ್ತು ನಾವು ಮನೆಯಿಂದ ಹೊರಗೆ ಬಂದಾಗ ನನ್ನ ಗಂಡನಿಗೆ ಮೂರು ಜನರು ಕೂಡಿ ಏ ಮಗನೆ ಇವತ್ತು ನಿನಗೆ ಮುಗಿಸಿಯೆ ಬಿಡುತ್ತೇವೆ ಅಂತಾ ಅನ್ನುತ್ತಾ ಕೈಗಳಿಂದ ಹೊಡೆಯುತ್ತಾ, ಕಾಲಿನಿಂದ ಒದೆಯುತ್ತಾ ನನ್ನ ಗಂಡನಿಗೆ ಮೂರು ಜನರು ಕೂಡಿ ಎಳೆದುಕೊಂಡು ತಮ್ಮ ಮನೆಯ ಮುಂದೆ ಒಯ್ದರು ಹಾಗೂ ಏ ಮಗನೆ ನಿನಗೆ ಸೊಕ್ಕು ಜಾಸ್ತಿ ಆಗ್ಯದ ನೀನು ನಮಗೆ ಮಣಿಯಲು ಆಗಿದಿ ಇವತ್ತು ನಿನಗೆ ಮುಗಿಸಿಯೆ ಬಿಡುತ್ತೇವೆ ಅನ್ನುತ್ತಾ ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ಹಸೇನಪ್ಪ ಇವನು ಕಾಲುಗಳಿಂದ ಹೊಟ್ಟೆಗೆ ಒದ್ದು ಒಳಪೆಟ್ಟು ಮಾಡಿದನು, ಭೀಮಶಪ್ಪ ಇವನು ಕಾಲಿನಿಂದ ಚೇರಿಗೆ ಒದ್ದನು, ಹಾಗೂ ಚಂದ್ರಪ್ಪ ಇವನು ಕುತ್ತಿಗೆ ಹಿಡಿದು ಹೆಡಕು ಹಿಡಿದು ಕೈಗಳಿಂದ ಹೊಡೆದು ಮೂರು ಜನರು ಕೂಡಿ ನೆಲದ ಮೇಲೆ ಕೆಡವಿದರು ಆಗ ನನ್ನ ಗಂಡನಿಗೆ ತಲೆಗೆ ಇತರೆ ಕಡೆ ಪೆಟ್ಟಾಗಿ ಸ್ಥಳದಲ್ಲಿಯೆ ಬೆವೂಸ ಆಗಿ ಬಿದ್ದನು. ಆಗ ಅಲ್ಲಿಯೆ ಬಾಜು ಇದ್ದ ನಾನು ಮತ್ತು ನನ್ನ ಮೊಮ್ಮಗಳಾದ ಪೂನಮ್ ಮತ್ತು ನಮ್ಮ ಓಣಿಯವರು ಕೂಡಿ ಒಂದು ಟಂ ಟಂ ಗಾಡಿಯನ್ನು ತಂದು ಅದರಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಮುಧೋಳ ಸರ್ಕಾರಿ ಆಸ್ಪತ್ರೆಯ ಕಡೆಗೆ ಹೊರಟಿದ್ದೇವು ರಾತ್ರಿ 9 ಗಂಟೆ ಸುಮಾರಿಗೆ ಮುಧೋಳ ಗ್ರಾಮ ಸಮೀಪ ಬಂದಾಗ ನನ್ನ ಗಂಡನಾದ ಹಣಮಪ್ಪ ಇವರು ಮೃತಪಟ್ಟಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗುವನ್ನು ಬಿಟ್ಟು ಹೋದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಶಿಲ್ಪಾ ಗಂಡ ರಾಜಶೇಖರಯ್ಯಾ ಹಲಕರಣಿಮಠ ಉ: ಅಧೀಕ್ಷಕರು ಅಮುಲ್ಯ ಶಿಶು ಗೃಹ ಗುಲಬರ್ಗಾ ಇವರು  ದಿನಾಂಕ: 26.06.2013 ರಂದು 5.00 ಪಿ.ಎಮ್ ಕ್ಕೆ ಪಂಚಶೀಲ್ ನಗರದ ಹನುಮಾನ ದೇವಸ್ಥಾನದ ಹತ್ತಿರ 2 ವರ್ಷದ ಅನಾಥ ಹೆಣ್ಣು ಮಗು ಪತ್ತೆಯಾಗಿದ್ದು ಆ ಮಗುವಿನ ಪಾಲಕರ ಪತ್ತೆ ಕುರಿತು ಪತ್ರಿಕಾ  ಪ್ರಕಟಣೆ ಸಾಮಾಜಿಕ ತನಿಖಾ ವರದಿ ಮಾಡಿಸಲಾಗಿದ್ದು . ಪಾಲಕರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ,. ಕಾರಣ ಸದರಿ ಮಗುವಿನ ಪಾಲನೇ  ಪೋಷಣೆ  ಕುರಿತು ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಮಟಕಾ ಜೂಜಾಟ ನಿರತ ವ್ಯಕ್ತಿಗಳ ಬಂಧನ  :
ನಿಂಬರ್ಗಾ ಠಾಣೆ : ದಿನಾಂಕ 09/06/2014 ರಂದು ಭೂಸನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಸಂತೋಷ ಎಸ್ ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೋಂದಿಗೆ ಬಾತ್ಮಿ ಬಂದ ಸ್ಥಳವಾದ ಭೂಸನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಎದುರುಗಡೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡು ತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಚಂದ್ರಕಾಂತ ತಂದೆ ಶಿವಶರಣಪ್ಪ ಕಣ್ಣಿ ಸಾ :  ದೇವಂತಗಿ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 560/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ 09-06-2014 ರಂದು 1100 ಗಂಟೆಗೆ ಹಂದರಕಿ ಗ್ರಾಮದ ಗೇಟ್ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಸುಭಾಶ್ಚಂದ್ರ ಎ.ಎಸ್.ಐ. ಹಾಗು ಸಿಬ್ಬಂದಿ ತಮ್ತು ಪಂಚರೊಂದಿಗೆ ಹಂದರಕಿ ಗ್ರಾಮದ ನಾಚವಾರ ಗೇಟ್ ಹತ್ತಿರ  ತಲುಪಿ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ನಡೆದುಕೊಂಡು ಹೋಗಿ ನೊಡಲಾಗಿ ಒಬ್ಬ ವ್ಯಕ್ತಿ ಗೇಟ್ ಹತ್ತಿರ ನಿಂತು ಸಾರ್ವಜನಿಕರಿಗೆ ಇದು ಬಾಂಬೈ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದುಕೊಳ್ಳುತ್ತಾ ಜನರಿಗೆ ಮೋಸ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಚಾರಿಸಲಾಗಿ ತನ್ನ ಹೆಸರು, ಚಂದ್ರಶೇಖರ ತಂದೆ ರೇವಣಸಿದ್ದಯ್ಯ ಗಣಾಚಾರಿ ಸಾ:ಸುಲೇಗಾಂವಗಲ್ಲಿ, ಚಿತ್ತಾಪೂರ. ಅಂತ ತಿಳಿಸಿದ್ದು ಆತನ ಹತ್ತಿರ ಒಟ್ಟು ನಗದು ಹಣ 4040=00 ರೂಪಾಯಿ, ಒಂದು ಬಾಲಪೆನ್, ಎರಡು ಮಟಕಾ ನಂಬರ್ ಬರೆದ ಚೀಟಿಗಳು, ಎರಡು ಮೊಬೈಲಗಳು ಅಂ.ಕಿ 2000/- ರೂಪಾಯಿನೇದ್ದು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅ ಸ್ವಾಭಾವಿಕ ಸಾವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಅಶೋಕ ತಂ ರಾಮಚಂದ್ರ ಸಂಗೀತಕರ್  ಸಾ|| ಅಂಕ್ಕಲಗಿ ತಾ||ಜಿ|| ಗುಲಬರ್ಗಾ ಇವರು ದಿನಾಂಕ: 8/06/14 ರಂದು ಸಾಯಂಕಾಲ 5.00 ಪಿ,ಎಮ್,ಕ್ಕೆ ತಮ್ಮ ಹಳೆ ಅಂಕ್ಕಲಗಿ ಗ್ರಾಮಕ್ಕೆ 5.30 ಪಿ,ಎಮ್,ಕ್ಕೆ ಮರಳಿ ಹೊಸ ಅಂಕ್ಕಲಗಿ ಬರುತ್ತಿರುವಾಗ ನಮ್ಮೂರಿನ ಲಕ್ಷ್ಮಣರಾವ ಕುಲಕರ್ಣಿ ಇವರ ಹೋಲದ ಹತ್ತಿರದಿಂದ ಬರುತ್ತಿರುವಾಗ ರೋಡಿನ ಬಲಗಡೆ ಇದ್ದ ತೆಗ್ಗಿನಲ್ಲಿ ಜಾಲಿ ಗೀಡದ ಕೆಳಗೆ ಯಾವುದೋ  ಒಬ್ಬ  ಗಂಡು ಮನುಷ್ಯ ಮಲಗಿದ ಹಾಗೆ ಕಂಡು ಬಂತು ನಂತರ ನಾನು ಸಮೀಪ ಹೋಗಿ ನೋಡಲಾಗಿ ಆತ ಎಡಮಗ್ಗಲಾಗಿ ಬಿದ್ದಿದ್ದು ಆತನ ಮೈ ಮೇಲ ಒಂದು ಬೀಳಿ ಬಣ್ಣದ ಶಾಂಡೊ ಬನೀನ ಮತ್ತು ಹಳೆಯ ನೀಲಿ ಬಣ್ಣದ ಅಲ್ಲಲ್ಲಿ ಹರೀದಿದ್ದ ಜಿನ್ಸ ಪ್ಯಾಂಟ ಕಂಡು ಬಂತ್ತು ನಾನು ಸಮೀಪ ಹೋಗಿ ನೋಡಲಾಗಿ ಆತ ಮೃತಪಟ್ಟಿದ್ದು ಕಂಡು ಬಂದಿದ್ದು ಅಂದಾಜು 25 ರಿಂದ 28 ವರ್ಷ ವಯಸ್ಸಿನವನಾಗಿದ್ದು ಈಗ ಸೂಮಾರ 3-4 ದಿವಸಗಳಿಂದ ಹಳೆಯ ಮತ್ತು ಹೋಸ ಅಂಕ್ಕಲಗಿ ಗ್ರಾಮದಲ್ಲಿ ಅಲ್ಲಲ್ಲಿ ಹುಚ್ಚನಂತೆ ಓಡಾಡುತಿದ್ದು ನನಗೆ ನೆನಪಿಗೆ ಬಂತ್ತು ಆತನ ಕುಂಡಿಯ ಮೇಲೆ ಜೀನ್ಸ್ ಪ್ಯಾಂಟ ಹರಿದು ಹೋಗಿದ್ದು ಆತ ಇಂದು ಬೆಳಗ್ಗೆ 11.00 ಗಂಟೆಯಿಂದ 5.00 ಪಿ,ಎಮ,ದ ಮದ್ಯದ ಅವಧಿಯಲ್ಲಿ ನಮ್ಮೂರಿನ ಲಕ್ಷ್ಮಣರಾವ ಕುಲಕರ್ಣಿ ಇವರ ಹೋಲದ ಹತ್ತಿರ ರೋಡಿನ ಬದುವಿನಲ್ಲಿ ಇದ್ದ ಜಾಲಿ ಗಿಡದ ಕೆಳಗೆ ಬಿದ್ದು ಆತನಿಗೆ ನೀರಡಿಕೆ ವಗೈರೆ ಆಗಿ ಬೀಸಿಲಿನ ದಾಹ ತಾಳಲಾರದೆ ಅಲ್ಲೆ ಬಿದ್ದು ಮೃತ ಪಟ್ಟಿರುತ್ತಾನೆ ಆತನ ಮೈ ಮೇಲೆ ಯಾವುದೆ ಗಾಯ ವಗೈರೆ ಇರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಮಂಜುಳಾ ಗಂಡ ನೀಲಕಂಠಪ್ಪಗೌಡ  ಪೊಲೀಸ್ ಪಾಟೀಲ ಸಾ: ದುಗನೂರ ಇವರು   ದಿನಾಂಕ 07-06-14 ರಂದು  ಬೆಳ್ಳಿಗ್ಗೆ 10 ಗಂಟೆ ಸುಮಾರಿಗೆ ನಮ್ಮ ಮಾವನಾದ ಸಿದ್ದಣ್ಣಗೌಡ  ಹಾಗು ಅತ್ತೆಯಾದ ಜಗದೇವಿ ಇಬ್ಬರೂ ತಾಂಡೂರಿಗೆ ಹೋಗಿ ಬರುತ್ತೇವೆ  ಅಂತಾ ಹೇಳಿ ಹೋದರು. ಅವರು ಹೋದ ಬಳಿಕ ಮನೆಯಲ್ಲಿ  ನನು ಮತ್ತು ನನ್ನ ಗಂಡ ನಿಲಕಂಠಪ್ಪಗೌಡ ಇಬ್ಬರೆ ಮನೆಯಲ್ಲಿ ಇದ್ದೇವು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ ಗಂಡನು  ನನಗೆ ಹಾಲು ಕಾಸಿ ಕೊಡು ಅಂತ ಅಂದಿದನು  ಆಗ ನಾನು ಸಾಯಾಂಕಾಲ ಕಾಯಿಸಿ ಕೊಡುತ್ತೆನೆ  ಅಂತ ಅಂದೆನು  ಆಗ ಅವರು ಏ ರಂಡಿ  ನಾ ಹೇಳಿದ್ದು ಕೇಳಬೇಕು ಇಲ್ಲದೆ ಹೋದರೆ ನಿನಗೆ ಖಲಾಸ  ಮಾಡ್ತಿನಿ ಅಂತ  ಅಂದರು  ಆಗ ನಾನು ಅದೇ ಹೆದರಿಕೆಯಿಂದ  ಹಾಲು ಕಾಸಿ ಕೊಡಬೇಕು ಅಂತ ಸ್ಟೋವಗೆ ಸೀಮೆ ಎಣ್ಣೆ ಹಾಕಬೇಕೆಂದು  ಮಾಡದಲ್ಲಿದ್ದ ಸೀಮೆಣ್ಣೆ ತಗೆದುಕೊಳ್ಳುವಾಗ  ಆ ಡಬ್ಬಿ ಮುಚ್ಚಳಿಕೆ ಸರಿಯಾಗಿ ಕೂಡದ ಕಾರಣ  ಆಡಬ್ಬಿಯಲ್ಲಿ ಸೀಮೆ ಎಣ್ಣೆ ನನ್ನ ಮೈಮೇಲೆ ಬಿತ್ತು ಅದರಿಂದ ನಾನು ಉಟ್ಟುಕೊಂಡ  ಬಟ್ಟೆಗಳು  ಎಣ್ಣೆಯಲ್ಲಿ ತೊಯ್ದಿದೆವು. ಇದನ್ನು ನೋಡಿ ನನ್ನ ಗಂಡನಾದ ನೀಲಕಂಠಪ್ಪಗೌಡ ತಂದೆ ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಇತನು ಏರಂಡಿ ನೀನಗೆ ಹಾಲು ಕಾಯಿಸಲು ಹೇಳಿದರೆ  ನೀನು ಸೀಮೆ ಎಣ್ಣೆ ಮೈಮೇಲೆ ಚಲ್ಲಿ ಕೊಂಡಿದೀ ನಿನಗೆ ಯಾವ ಕೆಲಸ ಬರುವುದಿಲ್ಲಾ ಅಂತ ಅಂದವನೆ  ನನಗೆ ಖಲಾಸ ಮಾಡಲು ಇದೆ ಸಮಯ ಅಂತ  ಬೈದು ಅಲ್ಲಿಯೆ ಇದ್ದ ಕಡ್ಡಿ ಪೆಟ್ಟಿಗೆ ತಗೆದುಕೊಂಡು ಕಡ್ಡಿ ಕೊರೆದು ಆ ಕಡ್ಡಿಯನ್ನು ನನ್ನ ಮೈಮೇಲೆ  ಒಗೆದನು. ಅದರಿಂದ ನಾನು ಉಟ್ಟುಕೊಂಡ ಬಟ್ಟೆಗಳಿಗೆ ಉರಿ ಹತ್ತಿ ನನ್ನ ಮೈ ಸುಡಹತ್ತಿದ್ದು  ಆಗ ನಾನು ಚಿರಾಡಿದಾಗ ಅಕ್ಕಪಕ್ಕದ ಮನೆಯವರು ಓಡಿ ಬಂದು ನೀರು ಹಾಕಿ ಉರಿಯನ್ನು ಆರಿಸಿದರು.ಈ ಘಟನೆಯಿಂದ ನನ್ನ ಮುಖಕ್ಕೆ, ಕುತ್ತಿಗೆಗೆ, ಎರಡು ಕೈಗಳಿಗೆ,ಎದೆಗೆ, ಹೊಟ್ಟೆಗೆ, ಬೆನ್ನಿಗೆ ಮತ್ತು ಎರಡು ಕಾಲುಗಳಿಗೆ ಅಲ್ಲಲ್ಲಿ ಸುಟ್ಟು  ತೊಗಲು ಸುಟ್ಟಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ: 8-06-2014 ರಂದು ಶ್ರೀ ಬಸವರಾಜ ತಂ. ಗುರಪ್ಪ ಕುಂಬಾರ ಸಾ: ಕಿಣ್ಣಿ ಸಡಕ್ ರವರು ಗ್ರಾಮದ ಸಲೀಮನ ಹಿಟ್ಟಿನ ಗಿರಣಿ ಎದುರುಗಡೆಯ ರೋಡಿನ ಮೇಲೆ ಹೊಗುತ್ತಿದ್ದಾಗ ಅವರ ತಂದೆ ಗುರಣ್ಣಾ ಮತ್ತು ಮಲತಾಯಿ ಮಕ್ಕಳಾದ ಮಲ್ಲಿನಾಥ ಮತ್ತು ಸತೀಷಕುಮಾರ ಇವರು ಆಟೋ ನಂ. ಕೆಎ:32, ಎ:2064 ನೇದ್ದರಲ್ಲಿ ಬಂದು ತನಗೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಹೊಲ ಬಿಡು ಅಂತ ತಕರಾರು ಮಾಡಿ, ಜಗಳ ತೆಗೆದು ಎಲ್ಲರೂ ಕೈಗಳಿಂದ ಹೊಡೆಯ ತೊಡಗಿದರು. ನಂತರ ಮಲ್ಲಿನಾಥ ಈತನು ಅಲ್ಲೇ ಬಿದ್ದಿರುವ ಬಡಿಗೆಯಿಂದ ಹೊಡೆದು ರಕ್ತಗಾಯ ಮತ್ತು  ಗುಪ್ತಗಾಯ ಪಡಿಸಿದನು. ಆಗ ಹಿಟ್ಟಿನ ಗಿರಣಿಯ ಸಲೀಂ, ನಾಗಪ್ಪಾ ತಂದೆ ಹಾಲಪ್ಪಾ ಹಲಗಿ ಇವರು ಬಂದು ಜಗಳ ಬಿಡಿಸಿದ್ದು  ನನ್ನ ತಂದೆ ಮತ್ತು ಮಲ್ಲಿನಾಥ ಮತ್ತು ಸತೀಷಕುಮಾರರು ನನಗೆ ಹೊಲದ ಬಗ್ಗೆ ಕೇಳಿದರೆ, ಜೀವ ಹೊಡೆಯುವದಾಗಿ ಜೀವದ ಬೇದರಿಕೆ ಹಾಕಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಗ್ರಾಮೀಣ ಠಾಣೆ ಗುಲಬರ್ಗಾ: ದಿನಾಂಕ:-07/06/2014 ರಂದು ಸಂಜೆ 07:00 ಗಂಟೆಸುಮಾರಿಗೆ ನಾಗಯ್ಯಾ ಸಾ: ಭೀಮಳ್ಳಿಯವರೊಂದಿಗೆ  ಹೋಲದ ಬಂದಾರಿಯ ವಿಷಯದ ಸಂಬಂದ ಅದೇ ಗ್ರಾಮದ 1)ಶರಣಪ್ಪ ತಂದೆ ಹಣಮಂತ ಪೂಜಾರಿ 2) ಶಿವರಾಜ ತಂದೆ ಹಣಮಂತ ಪೂಜಾರಿ 3) ಅಣ್ಣಪ್ಪ ಪೂಜಾರಿ 4) ಸುರೇಶ ತಂದೆ ಪಾಂಡು ಪೂಜಾರಿ 5) ಪಾಂಡು ಪೂಜಾರಿ 6) ತಿಪ್ಪಮ್ಮಾ ಪೂಜಾರಿ 7) ಸಂತೋಷ ಪೂಜಾರಿ ಸಾ:ಎಲ್ಲರೂ ಬೀಮಳ್ಳಿ ತಾ:ಜಿ:ಗುಲಬರ್ಗಾ ಇವರು ಬೀಮಳ್ಳಿ ಗ್ರಾಮದ ಮಲ್ಲಪ್ಪ ಸಮಗಾರ ಇವರ ಮನೆಯ ಹತ್ತಿರ ಜಗಳ ತೆಗೆದು ಬಡಿಗೆ ಕಲ್ಲು ಮತ್ತು ಚಾಕುವಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಶ್ರೀಮತಿ ಶಾಮಬಾಯಿ ಗಂಡ ನಾಗಯ್ಯಾ ಗುತ್ತೆದಾರರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಕೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.