POLICE BHAVAN KALABURAGI

POLICE BHAVAN KALABURAGI

26 June 2011

GULBARGA DISTRICT REPORTED CRIME

ಮದುವೆ ದಿಬ್ಬಣ ಲಾರಿ ಅಪಘಾತ ಒಂದು ಸಾವು ಹಲವರಿಗೆ ಗಾಯ :

ಚಿತ್ತಾಪುರ ಠಾಣೆ:
ಶ್ರೀ ಮಲ್ಲಿಕಾರ್ಜುನ ತಂದೆ ಗುಂಜಲಪ್ಪ ಮಡಿವಾಳ ಸಾ|| ಬಂದಳ್ಳಿ ತಾ||ಜಿ|| ಯಾದಗಿರರವರು ನಾನು ಊರ ಜನರು ಸುಮಾರು 60 ಜನರು ಕೂಡಿಕೊಂಡು ಮರೆಪ್ಪ ನಾರಾಯಣ ರವರ ಮಗಳಾದ ಸರೋಜಮ್ಮ ಇವಳ ಮದುವೆಯು ಕುರಿತು ಲಾರಿ ನಂ; ಕೆಎ-32-3294 ನೇದ್ದರಲ್ಲಿ ಡೊಣಗಾಂವ ಗ್ರಾಮದಿಂದ ಬಂದಳಿ ಗ್ರಾಮಕ್ಕೆ ಹೋಗಿದ್ದು ಮದುವೆ ಮುಗಿಸಿಕೊಂಡು ಬಂದಳ್ಳಿ ಗ್ರಾಮಕ್ಕೆ ಬರುವಾಗ ರಾಜೋಳಾ ಕ್ರಾಸ ಹತ್ತಿರ ಲಾರಿ ಚಾಲಕನು ಲಾರಿಯನ್ನು ನಿಷ್ಕಾಳಜಿನತದಿಂದ ನಡೆಸಿ ರೋಡಿನ ಪಲ್ಟಿ ಮಾಡಿದ್ದು, ಪಲ್ಟಿ ಮಾಡಿದ್ದ ಪರಿಣಾಮವಾಗಿ ಕ್ಲೀನರ ಮರೆಪ್ಪ ಈತನು ಲಾರಿ ಕೆಳಗೆ ಬಿದ್ದು ಮೃತಪಟ್ಟಿದ್ದು. ಮತ್ತು ಮಲ್ಲಮ್ಮ ಇವಳಿಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIME

ಕಳವು ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮಲ್ಲಪ್ಪಾ ತಂದೆ ಶಂಕ್ರೆಪ್ಪಾ ವಟಗಲ್ ಸಾ|| ಪ್ರಭು ನಿಲಯ ಬಿದ್ದಾಪೂರ ಕಾಲನಿ ಗುಲಬರ್ಗಾ ರವರು ನನ್ನ ಮನೆಯ ಮುಂದೆ ನಿಲ್ಲಿಸಿದ ಹಿರೋ ಹೊಂಡಾ ಸ್ಪಲೆಂಡರ್ ಕೆಎ- 32 ಎಸ-2141 ನೇದ್ದು ಮನೆಯ ಮುಂದೆ ನಿಲ್ಲಿಸಿದ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.