POLICE BHAVAN KALABURAGI

POLICE BHAVAN KALABURAGI

19 July 2014

Gulbarga District Reported Crimes

ಹುಡುಗ ಕಾಣೆಯಾದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ಭೀಮರಾಯ ಮೈಲಾಪೂರ ಸಾ:ಇಂಜನಫೈಲ್ ಶಹಾಬಾದ ಇವರ ಮಗ  ಆಂಜನೇಯ  ವ|| 12 ವರ್ಷ ಈತನು ದಿನಾಂಕ 30.06.2014 ರಂದು 7.00 ಪಿ.ಎಮ್. ಗಂಟೆಸುಮಾರಿಗೆ ಮನೆಯಿಂದ ಹೊರಗಡೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ. ಸಂಬಂಧಿಕರಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ  ಸದರಿಯವನು ಬಿಳಿ, ಕೆಂಪು,  ಕರಿ ಬಣ್ಣ ಮಿಶ್ರಿತ ಉಳ್ಳ ನಾಶಿ ಬಣ್ಣದ ಚೌಕಡಿ ಶರ್ಟು  ನಾಶಿ ಬಣ್ಣದ ಹಾಫ್ ಪ್ಯಾಂಟು , ನಾಶಿ ಬಣ್ಣದ ರ್ಶಯಾಂಡೊ ಬನಿಯಾನ,  ಧರಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಸಾವಿತ್ರಿಬಾಯಿ ಗಂಡ ಸುಭಾಶ ಇವರು  ದಿನಾಂಕ 18-07-2014 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ಸುಪರ ಮಾರ್ಕೆಟದಿಂದ ಲಾಲಗೇರಿ ಕ್ರಾಸ ಮುಖಾಂತರ ಮನೆಗೆ ಹೋಗುವ ಕುರಿತು ನಡೆದುಕೊಂಡು ಹೋಗುತ್ತಿರುವಾಗ ಟೆಕ ಬುರಾನ ದರ್ಗಾ ಕ್ರಾಸ್ ಹತ್ತಿರ ರೋಡ ಮೇಲೆ ಜಯಾನಂದ ಇತನು ತನ್ನ ಕಾರ ನಂ ಕೆಎ-32 ಎ-7810 ನೇದ್ದು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ನನಗೆ ಡಿಕ್ಕಿ ಪಡಿಸಿ ನನ್ನ ಎಡಗಾಲಿನ ಪಾದದ ಮೇಲೆ ಮತ್ತು ಬೆರಳುಗಳ ಮೇಲೆ ಕಾರ ಚಲಾಯಿಸಿಕೊಂಡು ಹೋಗಿ ಹೆಬ್ಬರಳು ತೋರು ಬೆರಳು ನಡುಬೆರಳು ಉಂಗುರ ಬೆರಳುಗಳಿಗೆ ಭಾರಿ ಪೆಟ್ಟುಗೊಳಿಸಿರುತ್ತಾನೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಲಿಂಗಪ್ಪ ತಂದೆ ಹಣಮಂತರಾವ ಸಂಗೋಳಗಿ ಸಾ : ಜಂಬಗಾ (ಆರ್) ರವರು ದಿನಾಂಕ 18-07-2014 ರಂದು ಬೆಳಿಗ್ಗೆ 11-30 ಗಂಟೆಗೆ ಯಲ್ಲಮ್ಮ ದೇವಸ್ಥಾನಕ್ಕೆ ದರ್ಶನ ಮಾಡಬೇಕೆಂದು ಗೋವಾ ಹೋಟಲದಿಂದ ಜಗತ ಸರ್ಕಲ ರೋಡ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಯಲ್ಲಮ್ಮ ದೇವಸ್ಥಾನದ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ಎಸ್-8333 ನೇದ್ದರ ಸವಾರನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ತಲೆಯ ಹಿಂದುಗಡೆ ರಕ್ತಗಾಯ, ಮೂಗಿಗೆ ತರಚಿದಗಾಯ, ಎಡಗಾಲ ಮೊಳಕಾಲಿಗೆ, ಮೊಳಕಾಲ ಕೆಳಗೆ, ಎಡಗಾಲು ಹೆಬ್ಬರಳಿಗೆ, ಬಲಗಾಲ ಮೊಳಕಾಲಿಗೆ, ಬಲಬೆನ್ನಿಗೆ ತರಚಿದಗಾಯಗಳು ಮಾಡಿ ಮೋ/ಸೈಕಲ ಅಲ್ಲೆ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವಿ ಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯೂನುಸ ಖಾನ ತಂದೆ ಅಫಜಲ ಖಾನ ಸಾ : ಅಫಜಲಪೂರ ರವರು ದಿನಾಂಕ 19-05-2014 ರಂದು 11:30 ಎ ಎಮ್ ಕ್ಕೆ ನಾನು ಮತ್ತು ದಾನಯ್ಯ ತಂದೆ ಸಿದ್ದಯ್ಯ ಹಿರೇಮಠ ಸಾ|| ಅಫಜಲಪೂರ ಇಬ್ಬರು ನನ್ನ ಮೋ/ಸೈ ಮೇಲೆ ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದಲ್ಲಿ ಕೆಲಸ ಇದ್ದರಿಂದ ನನ್ನ ಮೋ/ಸೈ ಮೇಲೆ ತಹಸಿಲ ಕಾರ್ಯಾಲಯಕ್ಕೆ ಹೋಗಿ, ಕಾರ್ಯಾಲಯದ ಮುಂದೆ ಇರುವ ಆವರಣದಲ್ಲಿ ಮೋ/ಸೈ ನಿಲ್ಲಿಸಿ ತಹಸಿಲ ಕಾರ್ಯಾಲಯದ ಒಳಗೆ ಹೋಗಿರುತ್ತೆವೆ, ಕೆಲಸ ಮುಗಿಸಿಕೊಂಡು ಮರಳಿ 12:00 ಪಿ ಎಮ್ ಕ್ಕೆ ಬಂದು ನನ್ನ ಮೋ/ಸೈ ನೊಡಲಾಗಿ, ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ನನ್ನ ಮೋ/ಸೈ ಸಿಕ್ಕಿರುವುದಿಲ್ಲ, ಸದರಿ ಮೋ/ಸೈ ಅಂದಾಜು 35,000/- ರೂ ಕಿಮ್ಮತ್ತಿನದು ಇದ್ದು ಇರುತ್ತದೆ, ಅದರ ನಂಬರ ಕೆಎ-32 ಇಎಫ್-7720 ಅಂತಾ ಇದ್ದು, ಚೆಸ್ಸಿ ನಂಬರ:- MBLHA10AMEHB73704 ಇಂಜೆನ ನಂಬರ:- HA10EJEHB62756 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದೋಂಡಿಬಾ ತಂದೆ ಬಾಪೂರಾಯ ಪಾಟೀಲ ಸಾ : ಮಾತೋಳಿ ಮತ್ತು ನಮ್ಮೂರ ಹಣಮಂತ ತಂದೆ ಸಿದ್ದಪ್ಪ ಕಲ್ಲೂರ ಇಬ್ಬರು ಮಾತಾಡುತ್ತಾ ನಮ್ಮೂರ ಮರಗಮ್ಮನ ಗುಡಿಯ ಮುಂದೆ ಕುಂತಿದ್ದಾಗ ನನ್ನ ಹೆಂಡತಿ ಅಳುತ್ತಾ ಬಂದು ಹೊಲದಲ್ಲಿ ನನಗೆ ಸುರೇಶ ಪಾಟೀಲ ಮತ್ತು ರಮೇಶ ಪಾಟೀಲ ರವರು ನಮ್ಮ ಹೊಲದಲ್ಲಿಯಾಕ ಕಲ್ಲು ಇಡತಿ ಅಂತಾ ಅಂದು ನೋಕಿ ಕೊಟ್ಟಿದ್ದರಿಂದ ನಾನು ಕಲ್ಲಿನ ಮೇಲೆ ಬಿದ್ದು ತಲೆಗೆ ರಕ್ತಗಾಯವಾಗಿರುತ್ತದೆ ಅಂತಾ ಹೇಳಿದಳು, ಅಷ್ಟರಲ್ಲಿ ಸದರಿ ಸುರೇಶ ಮತ್ತು ರಮೇಶ ರವರು ನಮ್ಮ ಹತ್ತಿರ ಬಂದು ಸುರೇಶ ಇವನು ನನಗೆ ತಡೆದು ನಿಲ್ಲಿಸಿ ಏ ಸೂಳಿ ಮಗನಾ ನಿಮ್ಮ ಹೊಲದಲ್ಲಿ ನಮಗ ಇನ್ನು ಪಾಲ ಬರತಾದ ಅಂತಾ ಅಂದರು ಕೇಳುತ್ತಿಲ್ಲ, ಇವತ್ತ ನಿಮಗ ಜೀವ ಸಹಿತ ಬಿಡುವುದಿಲ್ಲ ಅಂತಾ ಅಂದು ನನಗೆ ಎಳೆದು ನೆಲದ ಮೆಲೆ ಕೆಡವಿದನು, ಆಗ ರಮೇಶ ಮತ್ತು ಸುರೇಶ ಇಬ್ಬರು ಕೂಡಿ ಕೈಯಿಂದ ಮತ್ತು ಕಾಲಿನಿಂದ ನನ್ನ ಎಡಗಾಲ ತೊಡೆಯ ಮೇಲೆ ಬೆನ್ನಿನ ಮೇಲೆ ಹೊಡೆದು ಗಾಯಗೊಳಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.