POLICE BHAVAN KALABURAGI

POLICE BHAVAN KALABURAGI

09 April 2012

Gulbarga Dist Reported Crime

ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ:
ವಿಧ್ಯಾಧರ ತಂದೆ ಮನೋಹರ ಗೌರೆ ಸಾ; ಬ್ಲಾಕ ನಂಬರ್: 4 , ಕಮಲಾಪೂರ ತಾ:ಜಿ:ಗುಲಬರ್ಗಾರವರು ನನ್ನ ಪರಿಚಯದವರಾದ ದಯಾನಂದ ತಂದೆ ಶರಣಪ್ಪ ಸಿಂಗೆ ಇತನ ಮದುವೆ ದಿನಾಂಕ: 08/04/2012 ರಂದು ಬಸವಕಲ್ಯಾಣದಲ್ಲಿ ಮದುವೆಗೆ ಹಾಜರಾಗಿ ಮರಳಿ ಬಂದು ರಾತ್ರಿ 9-00 ಗಂಟೆ ಸುಮಾರಿಗೆ ಬಸವಣ್ಣದೇವರ ಗುಡಿಯ ಹತ್ತಿರ ಮದುವೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದಾಗ ನಾನು ಕೂಡಾ ಅವರೊಂದಿಗೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಸುಖೀಲ್ ಕುಮಾರ ತಂದೆ ಸತೀಶ ಸಿಂಗೆ ಈತನ ಕಾಲು ತುಳಿದಿದ್ದು, ಆಗ ಸುಖೀಲ್ ಕುಮಾರ ಈತನು ನನ್ನೊಂದಿಗೆ ಬಾಯಿ ಮಾತಿನ ತಕರಾರು ಮಾಡುತ್ತಿದ್ದರಿಂದ ನಾನು ಮೆರವಣಿಗೆ ಬಿಟ್ಟು ನಮ್ಮ ಮನೆಯ ಕಡೆಗೆ ಹನುಮಾನ ದೇವರ ಗುಡಿಯ ಹತ್ತಿರ ಬರುತ್ತಿದ್ದಾಗ ಸುಖೀಲ್ ಕುಮಾರ ತಂದೆ ಸತೀಶ್ ಸಿಂಗೆ, ಸತೀಶ ತಂದೆ ಭರಣಪ್ಪ ಸಿಂಗೆ ಸಾ: ಇಬ್ಬರೂ ಕಮಲಾಪೂರ ಮತ್ತು ನಿರಂಜನ ತಂದೆ ಬಸಣ್ಣ ಚೆಂಗಟೆ,ಶಿವರಾಜ ತಂದೆ ಗುಂಡಪ್ಪ ದುಂಪಾಕರ ಸಾ: ಇಸ್ಲಾಂಪೂರ ತಾ; ಬಸವಕಲ್ಯಾಣ ಹಾ.ವ. ಕಮಲಾಪೂರ, ಶಿವಕುಮಾರ ತಂದೆ ಬಸವರಾಜ ನಿಂಗದಳ್ಳಿ ಸಾ; ಶಹಾಪೂರ ಹಾ,ವ,ಕಮಲಾಪೂರ ಇವರೆಲ್ಲರೂ ಕೂಡಿಕೊಂಡು ನಿನಗೆ ಮದುವೆಗೆ ಅಷ್ಟೆ ಕರೆದಿದ್ದು, ಮೆರವಣಿಗೆಯಲ್ಲಿ ಡ್ಯಾನ್ಸ ಮಾಡಿ ನಮ್ಮೊಂದಿಗೆ ಜಗಳ ಮಾಡಿ ಬೀಗರ ಮುಂದೆ ನಮ್ಮ ಮರ್ಯಾದೆ ಕಳೆದಿದ್ದಿ ಅಂತಾ ಎಲ್ಲರೂ ಹೊಡೆ ಬಡೆ ಮಾಡಿರುತ್ತಾರೆ. ಸುಖೀಲ್ ಕುಮಾರ ಈತನು ತನ್ನ ಕೈಯಲ್ಲಿದ್ದ ಕೊಯಿತಾದಿಂದ ನನ್ನ ತೆಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಕೊಯಿತಾದಿಂದ ಇನ್ನೊಂದು ಏಟ ಹೊಡೆಯಲು ಬಂದಾಗ ನಾನು ನನ್ನ ಎಡಗೈ ಮುಂದೆ ತಂದಾಗ ಎಡಗೈಯ ಹೆಬ್ಬೆರಳು ಮತ್ತು ಕಿರುಬೆರಳಿಗೆ ಮತ್ತು ಕುತ್ತಿಗೆಯ ಹಿಂಭಾಗದಲ್ಲಿ ರಕ್ತಗಾಯಗಳಾಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 38/2012 ಕಲಂ 143.147.148.341.323.324.307.504 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST


ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ,

: ಆರು ಜನ ಅಪಹರಣಕಾರರ ಬಂದನ , ಐದು (5) ವರ್ಷದ ಮಗು ಪತ್ತೆ:

ದಿನಾಂಕ: 30-03-2012 ರಂದು ಸಾಯಂಕಾಲ 4-00 ಗಂಟೆಗೆ ಗುರುನಾಥ ತಂದೆ ಶರಣಪ್ಪಾ ಪೂಜಾರಿ ವ|| 32 ಜಾ| ಪೂಜಾರಿ ವಾ|| ಕೊಡಲಹಂಗರಗಾ ಹಾ||ವ|| ಗುಲಬರ್ಗಾ ಇವರ ಮಗ ಶರಣ ಪ್ರಕಾಶ @ ಓಂ ಪ್ರಕಾಶ ಇವನು ಸುಲೇಪೇಟದಲ್ಲಿರುವ ತನ್ನ ತಾತನಾದ ನಿಂಗಪ್ಪಾ ಹೀರೆಕುರಬರ ಇವರ ಮನೆ ಮುಂದೆ ಆಟ ಆಡುತ್ತಿದ್ದಾಗ ಯಾರೋ ಮಗುವನ್ನ ಅಪಹರಿಸಿ ನಿಂಗಪ್ಪಾ ಹೀರೆ ಕುರಬರ ಇವರ ಮೊಬಾಯಿಲ್ ಗೆ ಕರೆ ಮಾಡಿ ದಿನಾಂಕ:31-03-2012 ರಂದು ಬೆಳಿಗ್ಗೆ 8-00 ಗಂಟೆಗೆ ಪೋನ ಮಾಡಿ ಸ್ಥಳ ಹೇಳುತ್ತೆವೆ ಆ ಸ್ಥಳಕ್ಕೆ ನೀವು 10 ಲಕ್ಷ ತರಬೇಕು ನಿಮ್ಮ ಮೊಮ್ಮಗನಿಗೆ ನಾವು ಅಪಹರಣ ಮಾಡಿದ್ದೆವೆ, 10 ಲಕ್ಷ ರೂಪಾಯಿಗಳು ನಾವು ಹೇಳಿದ ಸ್ಥಳಕ್ಕೆ ತರಲಿಲ್ಲ ಅಂದರೆ, ಅಲ್ಲದೇ ಈ ವಿಷಯದ ಬಗ್ಗೆ ಪೊಲೀಸ್ ರಿಗೆ ತಿಳಿಸಿದರೆ, ನಿಮ್ಮ ಮೊಮ್ಮಗನಾದ ಶರಣ ಪ್ರಕಾಶ @ ಓಂ ಪ್ರಕಾಶ ನಿಗೆ ಕೊಲೆ ಮಾಡುತ್ತೆವೆ ಅಂತಾ ಪ್ರಾಣ ಬೇದರಿಕೆ ಹಾಕಿರುತ್ತಾರೆ ಎಂದು ನೀಡಿದ ಪಿರ್ಯಾದಿಯಂತೆ ಸ್ಟೇಶನ ಬಜಾರ ಪೊಲೀಸ್ ಠಾಣೆ ಗುನ್ನೆ ನಂ: 39/2012 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣ ಬೇದಿಸಲು ಮತ್ತು ಅಪಹರಣವಾದ ಮಗುವನ್ನು ಮತ್ತು ಆರೋಪಿತರನ್ನು ಪತ್ತೆ ಹಚ್ಚಲು ಶ್ರೀ ಪ್ರವೀಣ ಮಧುಕರ ಪವಾರ ರವರು ತಮ್ಮ ಮಾರ್ಗ ದರ್ಶನದಲ್ಲಿ ಹಾಗು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಸಹ ನೇತ್ರತ್ವದಲ್ಲಿ ನಾಲ್ಕು (4) ವಿಶೇಷ ತಂಡಗಳನ್ನು ರಚಿಸಿದ್ದು, ನಂ:ಶ್ರೀ ಬಿ.ಡಿ ದೊಡ್ಡಮನಿ ಡಿಎಸಪಿ ಚಿಂಚೊಳಿ, ಎಸ. ಅಸ್ಲಾಂ ಭಾಷಾ ಪಿಐ ಡಿಎಸಬಿ, ಗುಲಬರ್ಗಾ, ಕೆ.ಬಸವರಾಜ ಸಿಪಿಐ ಚಿಂಚೋಳಿ, ವರದರಾಜು ಸಿಪಿಐ ಸುಲೇಪೇಟ, ಬಿ.ಬಿ ಪಟೇಲ್ ಪಿಐ ಡಿಸಿಐಬಿ, ಹಾಗು ಸಿಬ್ಬಂದಿ ರಾಜಶೇಖರ ಹಳೆಗೋದಿಪಿ ಪಿಎಸಐ ಸೇಡಂ, ಕಟ್ಟಿಮನಿ ಪಿಎಸಐ ಸುಲೇಪೇಟ, ಹಾಗು ಸಿಬ್ಬಂದಿಯವರಾದ ಶಪೀಯೋದ್ದಿನ, ಪ್ರಕ್ರೋದ್ದಿನ, ಬಾಬು ದೇಶಾಯಿ, ವಿಠಲ್, ಗಣಪತಿ, ವಿಠಲ್ ರೆಡ್ಡಿ, ರಾಜು, ನಟರಾಜ, ಸಿಕಂದರ್, ಸಂತೋಷ, ಮಹಾದೇವ, ಪ್ರಶಾಂತ, ಮಲ್ಲಪ್ಪಾ, ಅಶೋಕ, ಪುಂಡಲಿಕ್, ಅಪ್ಪಸಾಬ ಎಪಿಸಿ ಬಿರಾದಾರ ಎಪಿಸಿ, ಚನ್ನವಿರೇಶ ಎಪಿಸಿ ರವರ ತಂಡಗಳನ್ನು ನೇಮಕ ಮಾಡಿದ್ದು ಇರುತ್ತದೆ.

ಅಪಹರಣ ಮಾಡಿದ ಆರೋಪಿತರು ಅತೀ ಜಾಣ್ಮೇಯಿಂದ ಮಗುವಿನ ಅಜ್ಜನಾದ ನಿಂಗಪ್ಪಾ ಹೀರೆ ಕುರಬರ ಮತ್ತು ನಿಂಗಪ್ಪಾ ಹೀರೆಕುರಬರ ಹೀರೆ ಮಗನಾದ ರಾಜು ಇತನಿಗೆ ಕಾಯಿನ್ ಬಾಕ್ಸ ಮುಖಾಂತರ ಪೋನ ಮಾಡಿ 10 ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ನಿರಂತರವಾಗಿ ಮೂರು (3) ದಿವಸಗಳಿಂದ ಬೇಡಿಕೆ ಇಟ್ಟು ಹೇದರಿಸುತ್ತಾ ಬಂದಿದ್ದು, ನಿಂಗಪ್ಪಾ ಹೀರೆ ಕುರಬರ ಹೀರೆ ಮಗ ರಾಜು ಇತನು ದಿನಾಂಕ:04-04-2012 ರಂದು ಮನ್ನಾಏಖೇಳಿ ರಾಷ್ಟ್ರಿಯ ಹೆದ್ದಾರಿ 9 ರ ಮೇಲೆ ಬರುವ ಅಂಬಾಭವಾನಿ ಗುಡಿ ಹತ್ತಿರ 10 ಲಕ್ಷ ರೂಪಾಯಿಗಳನ್ನು ಆರೋಪಿತರಿಗೆ ನೀಡಿದ್ದು, ಆರೋಪಿತರು ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ.

ದಿನಾಂಕ:05-4-2012 ರಂದು ಅಪಹರಣವಾಗಿದ್ದ ಮಗು ಶರಣಪ್ರಕಾಶ @ ಓಂ ಪ್ರಕಾಶ ಇವನನ್ನು ರಾತ್ರಿ ಸಮಯದಲ್ಲಿ ತನಿಖಾ ತಂಡದವರು (ಮತ್ತು ಆಂದ್ರ ಪ್ರದೇಶ ಧರೂರ ಪೊಲೀಸ್ ರ ಸಹಾಯದಿಂದ ) ಕಾರ್ಯ ಚರಣೆ ನಡೆಸಿ ಹೈದ್ರಾಬಾದ ಮತ್ತು ತಾಂಡೂರ ರಾಷ್ಟ್ರಿಯ ಹೆದ್ದಾರಿಯಲ್ಲಿ ಬರುವ ಆನಂತಗೀರಿ ಬೇಟ್ಟದಲ್ಲಿ ಅಪಹರಣವಾಗಿದ್ದ ಮಗು ಶರಣ ಪ್ರಕಾಶ @ ಓಂ ಪ್ರಕಾಶ ನನ್ನು ಪತ್ತೆ ಹಚ್ಚಿ ಅವರ ತಂದೆ ತಾಯಿಗೆ ಮಗುವನ್ನು ಒಪ್ಪಿಸಲಾಯಿತು.

ಮೇಲ್ಕಂಡ ನಾಲ್ಕು ವಿಶೇಷ ತನಿಖಾ ತಂಡದವರು ಶ್ರೀ ಪ್ರವೀಣ ಮಧುಕರ ಪವಾರ ರವರ ಮಾರ್ಗದರ್ಶನದಲ್ಲಿ ಖಚಿತ ಭಾತ್ಮಿಯಂತೆ ಈ ಪ್ರಕರಣದಲ್ಲಿ ಈ ಕೆಳಕಂಡ ಆರೋಪಿತರನ್ನು ದಿನಾಂಕ: 08-04-2012 ರಂದು ವಿವಿಧ ಕಡೆ ಕಾರ್ಯಚರಣೆ ಮಾಡಿ ಬಂದಿಸಿಲಾಯಿತು. ಆರೋಪಿತರಾದ 1) ದೀಪಕ ತಂದೆ ವಾಮನರಾವ ಗಿರಿ ವ|| 27 ವರ್ಷ, ಜಾ|| ಗೋಸಾಯಿ, ಉ|| ವೆಂಲ್ಡಿಂಗ್ ಕೆಲಸ ವಾ|| ಗಡೀಕೇಶ್ವರ ಹಾ||ವ|| ಸುಲೇಪೇಟ 2) ಸಂತೋಷ ತಂದೆ ಬಸವರಾಜ ಬೋಸಲೇ ಮರಾಠ ವ|| 25 ವರ್ಷ, ಉ|| ವೆಲ್ಡಿಂಗ್ ಕೆಲಸ, 3) ನಂದಕುಮಾರ ತಂದೆ ಚಂದ್ರಶೇಖರ ಬಡಿಗೇರ ವ|| 19 ವರ್ಷ, ವಿದ್ಯಾರ್ಥಿ ಜಾ|| ಪಂಚಾಳ,4) ರಾಜಶೇಖರ ತಂದೆ ತಿಪ್ಪಣಾ ಹಲಚೇರಿ ವ|| 27 ಜಾ|| ಲಿಂಗಾಯತ 5) ಅಶೋಕ ತಂದೆ ಕಾಶೀನಾಥ ಚೊಂಚಿ ವ|| 27, ಜಾ||ಲಿಂಗಾಯತ ಉ|| ಟೆಂಟ ಹೌಸ್ ಕೆಲಸ ಎಲ್ಲರೂ ಸಾ|| ಗಡೀಕೇಶ್ವರ 6) ಮೋನಿಕಾ ಗಂಡ ವಿಠಲ್ ರಾವು ಬಂಡಗಾರ ವ|| 28 ವರ್ಷ, ಸಾ|| ಸಂಕರಪಲ್ಲಿ ರಂಗಾರೆಡ್ಡಿ ಜಿಲ್ಲೆ ಆಂದ್ರ ಪ್ರದೇಶ. ಇನ್ನೋಬ್ಬ ಆರೋಪಿ 7) ಗಣೇಶ ತಲೆ ಮರೆಸಿಕೊಂಡಿದ್ದು ಆತನ ಬಂದನಕ್ಕೆ ವ್ಯಾಪಕವಾದ ಜಾಲ ಬಿಸಲಾಗಿದೆ.

ಮೇಲ್ಕಂಡ ಆರೋಪಿತರಿಂದ 8,26,000/- ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರು ಮೇಲ್ಕಂಡ ನಾಲ್ಕು ವಿಸೇಷ ತನಿಖಾ ತಂಡಗಳಿಗೆ ಸೂಕ್ತ ಬಹುಮಾನ ನೀಡುವಾಗಿ ಘೋಶಿಸಿರುತ್ತಾರೆ.

GULARGA DIST


ಜೆಸಿಬಿ ಏಜೆಂಟ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ.


ದಿನಾಂಕ: 27-3-12 ರಂದು ಜೇವರಗಿ ತಾಲೂಕಿನ ಅವರಾದ ಗ್ರಾಮದ ಶ್ರೀ ಬಸಯ್ಯ ತಂದೆ ಸಿದ್ದಯ್ಯ ಗುತ್ತೇದಾರ ವಯ: 42 ವರ್ಷ ಉ: ಜೆಸಿಬಿ ಎಜೇಂಟ ಇತನ ಹತ್ಯೆಯಾದ ಬಗ್ಗೆ ಮೃತನ ಮಗನಾದ ಮಂಜುನಾಥ ಗುತ್ತೇದಾರ ಸಾ: ಅವರಾದ ಇವರು ನೀಡಿದ ಪಿರ್ಯಾದಿ ಮೇರೆಗೆ ಜೇವರಗಿ ಪೊಲೀಸ ಠಾಣೆಯಲ್ಲಿ ದಿನಾಂಕ: 4-4-12 ರಂದು ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿತರು ಮೃತನ ಶವವನ್ನು ಮುದಬಾಳ (ಕೆ) ಕೊಡಚಿ ರಸ್ತೆಯ ಪಕ್ಕದ ಸಾಬಣ್ಣ ಕವಲ್ದಾರ ರವರ ಹೊಲದಲ್ಲಿ ಜೆ.ಸಿ.ಬಿ. ಉಪಯೋಗಿಸಿ ಮಣ್ಣು ಮಾಡಿ ಹೋಗಿದ್ದರು. ಇದನ್ನು ಖಚಿತ ಪಡಿಸಿಕೊಂಡ ಜೇವರಗಿ ಪೊಲೀಸರು ತಹಸೀಲ್ದಾರ ಜೇವರಗಿ ರವರ ಸಮಕ್ಷಮದಲ್ಲಿ ಪಂಚನಾಮೆ ಮಾಡಿಸಿ ಶವ ಮಣ್ಣಿನಿಂದ ಹೊರಗೆ ತೆಗೆದು ಮುಂದಿನ ತನಿಖೆ ಕೈಕೊಂಡಿದ್ದರು.


ದಿನಾಂಕ: 8-4-12 ರಂದು ಈ ಪ್ರಕರಣದಲ್ಲಿ ಪ್ರಮುಖ ಆರೋಪಿತನಾದ ಬಾಪು ತಂದೆ ಸುಕದೇವ ಕಾಚರೆ ವಯ: 26 ವರ್ಷ ಸಾ: ಕೇಸ್ಕರವಾಡಿ ತಾ: ಪಂಡರಪೂರ ಜಿ: ಸೋಲಾಪೂರ ಇತನನ್ನು ಹಾಗೂ ಇನ್ನೋಬ್ಬ ಆರೋಪಿತನಾದ ಜೆ.ಸಿ.ಬಿ ಆಪರೇಟರ ಅನೀಲ ತಂದೆ ಜಲಿಂದರ ಬುಡವಳೆ ವಯ: 30 ವರ್ಷ ಸಾ: ನಿಂಬವಡೆ ತಾ: ಅಟಪಡಿ ಜಿ: ಸಾಂಗಲಿ ಮಹಾರಾಷ್ಟ್ರ ಇಬ್ಬರನ್ನು ಬೆಳಿಗ್ಗೆ 6 ಗಂಟೆ ಸುಮಾರಿಗೆ ಖಚಿತ ಭಾತ್ಮಿ ಆಧರಿಸಿ ಮಹಾರಾಷ್ಟ್ರದ ಸತಾರಾ ಪಟ್ಟಣದ ಬಸ್ಸ ನಿಲ್ದಾಣದ ಹತ್ತಿರ ದಸ್ತಗಿರಿ ಮಾಡಿಕೊಂಡು ಠಾಣೆಗೆ ತಂದು ಸೂಕ್ತ ವಿಚಾರಣೆ ಮಾಡಿದಾಗ ಇಬ್ಬರು ಆರೋಪಿತರು ಕೊಲೆಯಾದ ಬಸಯ್ಯನಿಗೆ ಕೋಡಬೇಕಾದ 1,04,000=00 ರೂಪಾಯಿ ಕಮೀಶನ್ ಹಣ ಮುಳುಗಿಸುವ ಉದ್ದೇಶದಿಂದ ದಿನಾಂಕ: 28-3-12 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆತನು ಮಲಗಿದಾಗ ಆತನ ತಲೆ ಮತ್ತು ಎದೆಗೆ ದೊಡ್ಡ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹೆಣವನ್ನು ಅದೇ ಜೆ.ಸಿ.ಬಿ ಯಲ್ಲಿ ಹಾಕಿಕೊಂಡು ಬಂದು ಕೊಡಚಿ ಗ್ರಾಮದ ಸಾಬಣ್ಣ ಕವಲ್ದಾರ ಇವರ ಹೊಲದಲ್ಲಿ ರಾತೋ ರಾತ್ರಿ ಜೆ.ಸಿ.ಬಿ ಯಿಂದ ತೆಗ್ಗು ತೋಡಿ ಹೆಣ ಹೂತು ಹೋದ ಬಗ್ಗೆ ಒಪ್ಪಿಕೊಂಡಿರುತ್ತಾರೆ.


ಆರೋಪಿತರಿಂದ ಗುನ್ನೆಗೆ ಉಪಯೋಗಿಸಿದ ಸುತ್ತಿಗೆ ಹಾಗೂ ಜೆ.ಸಿ.ಬಿ ಯನ್ನು ವಶಪಡಿಸಿಕೊಂಡಿದ್ದು, ಜೆ.ಸಿ.ಬಿ. ಯು ಆರೋಪಿತನಾದ ಬಾಪು ಇತನ ಸಂಬಂಧಿಕನಾದ ಸಚೀನ ತಂದೆ ಬಾಪು ಮೋಟೆ ಸಾ: ನಿಂಬವಡೆ ತಾ: ಅಟಪಡಿ ಇವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.


ಸದರಿ ಪ್ರಕರಣದ ತನಿಖೆಯನ್ನು ಶ್ರೀ ಪ್ರವೀಣ ಪವಾರ ಪೊಲೀಸ ಅಧೀಕ್ಷಕರು ಗುಲಬರ್ಗಾ, ಶ್ರೀ, ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು ಗುಲಬರ್ಗಾ, ಶ್ರೀ ಹೆಚ್, ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ವಿಶ್ವನಾಥ್ ರಾವ್ ಕುಲಕರ್ಣಿ ಸಿಪಿಐ ಜೇವರಗಿ ರವರು ಕೈಕೊಂಡು ಅವರು ಹಾಗೂ ಸಿಬ್ಬಂದಿ ಜನರಾದ 1. ಅಣ್ಣಪ್ಪ ಪಿಸಿ 1538, 2, ತುಕಾರಾಮ ಪಿಸಿ 689, 3. ಅಂಬಾರಾಯ ಪಿಸಿ 499, 4. ಮಲ್ಲಿಕಾರ್ಜುನ ಪಿಸಿ 824, 5. ಜಗದೇವಪ್ಪ ಪಿಸಿ 1725 ರವರು ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ.

GULBARGA DIST REPORTED CRIMES


ಅನೈಸರ್ಗಿಕ ಸಂಭೋಗ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 07/04/2012 ರಂದು ಶನಿವಾರ ಮುಂಜಾನೆ ಅಮರೇಶನು ಸ್ನಾನ ಮಾಡುವಾಗ ನರಳುತ್ತಿರುವದನ್ನು ಕೇಳಿ ನಾನು ಬಚ್ಚಲಲ್ಲಿ ಹೋಗಿ ನೋಡಲಾಗಿ ನೋವಿನ ಬಾದೆಯಿಂದ ನರಳುತ್ತಿದ್ದನು, ಕೈ ಸನ್ನೆ ಮಾಡಿ ವಿಷಯ ತಿಳಿಸಿದನು. ಆತನು ಕರೆದುಕೊಂಡು ಗ್ರಾಮದ ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗಿ ತಾನು ಮಲಗಿರುವ ಜಾಗವನ್ನು ತೋರಿಸಿ ಸದರಿ ಜಾಗದಲ್ಲಿ ಮಲಗಿದಾಗ ಒಬ್ಬ ವ್ಯಕ್ತಿ ತನಗೆ ಅನೈಸರ್ಗಿಕ ಸಂಭೋಗ ಮಾಡಿರುತ್ತಾನೆ ನಮ್ಮ  ಗ್ರಾಮದ ಗುಂಡಪ್ಪ ತಂದೆ ನಾರಾಯಣ ನಾಟಿಕಾರ ಇವನ ಕಡೆಗೆ ಕೈ ಮಾಡಿ ತೋರಿಸಿ ಈತನೆ ತನಗೆ ಅನೈಸರ್ಗಿಕ ಸಂಭೋಗ ಮಾಡಿರುತ್ತಾನೆಂದು ತೋರಿಸಿರುತ್ತಾನೆ ಅಂತ ತೋರಿಸಿದ್ದ ನೊಂದ ಯುವಕನ ತಾಯಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 27/2012 ಕಲಂ 377 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಪುರ್ಣಿಮಾ ಕುಲಕರ್ಣಿ ಗಂಡ ಸುನಿಲ್ ಅಗ್ನಿಹೋತ್ರಿ ಸಾ|| ಕವಿ ಪ್ಲಾಟ ಸ್ಟೇಷನ ರೋಡ ಬಿಜಾಪೂರ ಹಾ|||| 72 ಕೋಚಲೈನ ಎಕ್ಸಷ್ಟೇನ್ಸ ಪೇನಸ್ಲಿಯನಿಯಾ ಪಿ.ಎ 1934 ಯು.ಎಸ್.ಎ ರವರು ನಮ್ಮ ತಮ್ಮನ ಮದುವೆಯು ಗುಲಬರ್ಗಾ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇರುವದರಿಂದ ನಾನು ಮುದುವೆಗೆ ಬಂದಿರುತ್ತನೆ. ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಯು.ಎಸ್ ಡ್ರಾವಿಂಗ ಲೈಸನ್ಸ, ಬ್ಯಾಂಕ ಆಫ್ ಅಮೇರಿಕಾ ಕ್ರೇಡಿಟ / ಡೆಬಿಟ ಕಾರ್ಡ, ಐಸಿಐಸಿಐ ಡೆಬಿಟ ಕಾರ್ಡ, ಯು.ಎಸ್.ಇನ್ಸೂರೇನ್ಸ ಮೇಡಿಕಲ್/ಕಾರ ಕಾರ್ಡ,ವಾಲ ಮಾರ್ಟ ಕ್ರೇಡಿಟ ಕಾರ್ಡ,ಕೋಲಾಭ ಚಾರ್ಜ ಕಾರ್ಡ,ಸನ್ಯಾಸ ಕ್ಲಬ ಕಾರ್ಡ,ಬ್ಲಾಕ ಬೇರಿ ಮೋಬಾಯಿಲ್ ಅ||ಕಿ|| 10,000/-, ಯು.ಎಸ್. ಲೈಬ್ರರಿ ಕಾರ್ಡ ಮತ್ತು ಇನ್ನಿತರ ದಾಖಲಾತಿಗಳು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 46/12 ಕಲಂ: 379 380 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ನಾಗೇಂದ್ರ ಸಿಪಿಸಿ.436 ಶಹಾಬಾದ ನಗರ ಠಾಣೆರವರು ಠಾಣೆ ವ್ಯಾಪ್ತಿಯ ರೇಲ್ವೆ ಸ್ಟೇಷನ ಹತ್ತಿರ ಪೆಟ್ರೋಲಿಂಗ ಕರ್ತವ್ಯ ಕುರಿತು ಹೋದಾಗ ಪೋಸ್ಟ್‌ ಆಫೀಸ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಸರಾಯಿ ಕುಡಿದ ಅಮಲಿನಲ್ಲಿ ಚಿರಾಡುವದು, ಬೈಯುವದು, ಮಾಡುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಿದದನ್ನು ನೋಡಿ ವಿಚಾರಿಸಲಾಗಿ ಆತನ ಹೆಸರು ಶಾಮ ತಂದೆ ರಘುನಾಥ ನಾಯಕ ಸಾ:ಇಂದಿರಾ ನಗರ ಮಡ್ಡಿ ನಂ.2 ಅಂತಾ ಹೇಳಿದನು ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಸಾರ್ವಜನಿಕರಿಗೆ ತೊಂದರೆ ಯಾಗಬಹುದು ಅಂತಾ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 36/2012 ಕಲಂ: 110 (ಇ) & (ಜಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಮೇಲೆ ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ.ನೀಲಮ್ಮ ಗಂಡ ಸೋಮನಾಥ ವಗ್ಗಾಲೆ ಸಾ|| ಮೋಘಾ (ಕೆ)ರವರು ನನ್ನ ಮನೆಯ ಮುಂದೆ ಬಂದು ಪರಮೇಶ್ವರ ತಂದೆ ಚನ್ನಪ್ಪ ವಗ್ಗಾಲೆ, ಶರಣಪ್ಪ ತಂದೆ ಚನ್ನಪ್ಪ ವಗ್ಗಾಲೆ,ಜಗದೇವಿ ಗಂಡ ಚನ್ನಪ್ಪ ವಗ್ಗಾಲೆ, ಚನ್ನಪ್ಪ ತಂದೆ ದುಂಡಪ್ಪ ವಗ್ಗಾಲೆ ಇವರೆಲ್ಲರೂ ಕೂಡಿಕೊಂಡು ಮನೆಯ ಹತ್ತಿರ ಬಂದು ಹೊಲಕ್ಕೆ ಪೈಪಲೈನ ಮಾಡಬೇಡ ಅಂತಾ ಹೇಳಿದರೂ ಪೈಪ ಲೃನ್ ಮಾಡಿದ್ದಿರಿ ಅಂತಾ ಅವಾಚ್ಯಾವಾಗಿ ಹೊಡೆ ಬಡೆ ಮಾಡಿರುತ್ತಾರೆ. ಮತ್ತು ಸೀರೆ ಹಿಡಿದು ಎಳೆದಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:14/2012 ಕಲಂ 323,324, 354, 504, 506, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಜೀವನಕುಮಾರ ತಂದೆ ಶಿವಶರಣಪ್ಪಾ ನಿಂಗಮಾರಿ, ಸಾಃ ಮಳಖೇಡ, ಹಾ.ವ ಬಿ.ಸಿ.ಎಮ್ ಹಾಸ್ಟೆಲ ಬುದ್ದ ವಿಹಾರ ಗುಲಬರ್ಗಾರವರು ನಾನು ದಿನಾಂಕ 08-04-2012 ರಂದು ಮಧ್ಯಾಹ್ನ ಅಟೋರಿಕ್ಷಾ ನಂ. ಕೆ.ಎ 32 ಎ 5048 ನೇದ್ದರಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ಅಟೋರಿಕ್ಷಾ ಚಾಲಕನು ಹುಮನಾಬಾದ ರೋಡಿಗೆ ಇರುವ ಲಾಹೋಟಿ ಶೋ ರೂಮ ಹತ್ತಿರ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಕಟ್ ಹೊಡೆದು ಪಲ್ಟಿ ಮಾಡಿ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 21/2012 ಕಲಂ 279, 337, ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರಾಜಕುಮಾರ ತಂದೆ ಶಿವರಾಜ ಮಂಗದಳ್ಳಿ ಸಾ: ಭೀಮ್ಮಳ್ಳಿ ತಾ: ಗುಲಬರ್ಗಾರವರು ನಾನು ಮತ್ತು ಗುರುರಾಜ ದಿನಾಂಕ:08/04/2012 ರಂದು ಮದ್ಯಾಹ್ನ 12 ಗಂಟೆಗೆ ನನ್ನ ಮೋಟಾರ ಸೈ ಕಲ ನಂ ಕೆಎ 37 ಆರ್‌ 6861 ನೇದ್ದರ ಗುಲಬರ್ಗಾಕ್ಕೆ ಮದುವೆಯ ನಿಶ್ಚಯ ಕಾರ್ಯಾಕ್ರಮಕ್ಕೆ ಹೊರಟಾಗ ಆಳಂದ ಕಡೆಯಿಂದ ಬಸ್ಸ ನಂ ಕೆಎ 36 ಎಪ್‌ 826 ನೇದ್ದರ ಚಾಲಕ ಅತೀವೇಗ ದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಕಾಲು ಮುರಿದಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 106/12 ಕಲಂ279 337 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರವಿಕುಮಾರ ತಂದೆ ಚಂದ್ರಶ್ಯಾ ನಡುವಿನ ಮನಿ ಸಾ||ಗರೂರ (ಬಿ) ಹಾ:ವ: ಧನಗರಗಲ್ಲಿ ಬ್ರಹ್ಮಪೂರರವರು ನಾನು ದಿನಾಂಕ:-08/04/2012 ರಂದು ಮದ್ಯಾಹ್ನ 1 ಗಂಟೆಗೆ ಟಿವಿಎಸ್‌ ಎಕ್ಸಲ್ ಮೋಟಾರ ಸೈಕಲ ನಂ ಕೆಎ 32 ಎಕ್ಸ್‌ 3894 ನೇದ್ದರ ಮೇಲೆ ಕೆರೆ ಬೋಸಗಾ ಗ್ರಾಮಕ್ಕೆ ಮದುವೆಗೆ ಹೊರಟಾಗ ಬೋಸಗಾ ಕ್ರಾಸ ಹತ್ತಿರ ಆಳಂದ ಕಡೆಯಿಂದ ಬಸ್ಸ ನಂ ಕೆಎ 32 ಎಪ್‌ 1483 ನೇದ್ದರ ಬಸ್ಸ ಚಾಲಕ ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದು ನಿಲ್ಲಿಸಿದೆ ಹಾಗೆ ಹೋಗಿರುತ್ತಾನೆ ಡಿಕ್ಕಿ ಪಡಿಸಿದ್ದರಿಂದ ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 107/12 ಕಲಂ 279 337 ಐಪಿಸಿ ಸಂಗಡ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.