ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ,
: ಆರು ಜನ ಅಪಹರಣಕಾರರ ಬಂದನ , ಐದು (5) ವರ್ಷದ ಮಗು ಪತ್ತೆ:
ದಿನಾಂಕ: 30-03-2012 ರಂದು ಸಾಯಂಕಾಲ 4-00 ಗಂಟೆಗೆ ಗುರುನಾಥ ತಂದೆ ಶರಣಪ್ಪಾ ಪೂಜಾರಿ ವ|| 32 ಜಾ| ಪೂಜಾರಿ ವಾ|| ಕೊಡಲಹಂಗರಗಾ ಹಾ||ವ|| ಗುಲಬರ್ಗಾ ಇವರ ಮಗ ಶರಣ ಪ್ರಕಾಶ @ ಓಂ ಪ್ರಕಾಶ ಇವನು ಸುಲೇಪೇಟದಲ್ಲಿರುವ ತನ್ನ ತಾತನಾದ ನಿಂಗಪ್ಪಾ ಹೀರೆಕುರಬರ ಇವರ ಮನೆ ಮುಂದೆ ಆಟ ಆಡುತ್ತಿದ್ದಾಗ ಯಾರೋ ಮಗುವನ್ನ ಅಪಹರಿಸಿ ನಿಂಗಪ್ಪಾ ಹೀರೆ ಕುರಬರ ಇವರ ಮೊಬಾಯಿಲ್ ಗೆ ಕರೆ ಮಾಡಿ ದಿನಾಂಕ:31-03-2012 ರಂದು ಬೆಳಿಗ್ಗೆ 8-00 ಗಂಟೆಗೆ ಪೋನ ಮಾಡಿ ಸ್ಥಳ ಹೇಳುತ್ತೆವೆ ಆ ಸ್ಥಳಕ್ಕೆ ನೀವು 10 ಲಕ್ಷ ತರಬೇಕು ನಿಮ್ಮ ಮೊಮ್ಮಗನಿಗೆ ನಾವು ಅಪಹರಣ ಮಾಡಿದ್ದೆವೆ, 10 ಲಕ್ಷ ರೂಪಾಯಿಗಳು ನಾವು ಹೇಳಿದ ಸ್ಥಳಕ್ಕೆ ತರಲಿಲ್ಲ ಅಂದರೆ, ಅಲ್ಲದೇ ಈ ವಿಷಯದ ಬಗ್ಗೆ ಪೊಲೀಸ್ ರಿಗೆ ತಿಳಿಸಿದರೆ, ನಿಮ್ಮ ಮೊಮ್ಮಗನಾದ ಶರಣ ಪ್ರಕಾಶ @ ಓಂ ಪ್ರಕಾಶ ನಿಗೆ ಕೊಲೆ ಮಾಡುತ್ತೆವೆ ಅಂತಾ ಪ್ರಾಣ ಬೇದರಿಕೆ ಹಾಕಿರುತ್ತಾರೆ ಎಂದು ನೀಡಿದ ಪಿರ್ಯಾದಿಯಂತೆ ಸ್ಟೇಶನ ಬಜಾರ ಪೊಲೀಸ್ ಠಾಣೆ ಗುನ್ನೆ ನಂ: 39/2012 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣ ಬೇದಿಸಲು ಮತ್ತು ಅಪಹರಣವಾದ ಮಗುವನ್ನು ಮತ್ತು ಆರೋಪಿತರನ್ನು ಪತ್ತೆ ಹಚ್ಚಲು ಶ್ರೀ ಪ್ರವೀಣ ಮಧುಕರ ಪವಾರ ರವರು ತಮ್ಮ ಮಾರ್ಗ ದರ್ಶನದಲ್ಲಿ ಹಾಗು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಸಹ ನೇತ್ರತ್ವದಲ್ಲಿ ನಾಲ್ಕು (4) ವಿಶೇಷ ತಂಡಗಳನ್ನು ರಚಿಸಿದ್ದು, ನಂ:ಶ್ರೀ ಬಿ.ಡಿ ದೊಡ್ಡಮನಿ ಡಿಎಸಪಿ ಚಿಂಚೊಳಿ, ಎಸ. ಅಸ್ಲಾಂ ಭಾಷಾ ಪಿಐ ಡಿಎಸಬಿ, ಗುಲಬರ್ಗಾ, ಕೆ.ಬಸವರಾಜ ಸಿಪಿಐ ಚಿಂಚೋಳಿ, ವರದರಾಜು ಸಿಪಿಐ ಸುಲೇಪೇಟ, ಬಿ.ಬಿ ಪಟೇಲ್ ಪಿಐ ಡಿಸಿಐಬಿ, ಹಾಗು ಸಿಬ್ಬಂದಿ ರಾಜಶೇಖರ ಹಳೆಗೋದಿಪಿ ಪಿಎಸಐ ಸೇಡಂ, ಕಟ್ಟಿಮನಿ ಪಿಎಸಐ ಸುಲೇಪೇಟ, ಹಾಗು ಸಿಬ್ಬಂದಿಯವರಾದ ಶಪೀಯೋದ್ದಿನ, ಪ್ರಕ್ರೋದ್ದಿನ, ಬಾಬು ದೇಶಾಯಿ, ವಿಠಲ್, ಗಣಪತಿ, ವಿಠಲ್ ರೆಡ್ಡಿ, ರಾಜು, ನಟರಾಜ, ಸಿಕಂದರ್, ಸಂತೋಷ, ಮಹಾದೇವ, ಪ್ರಶಾಂತ, ಮಲ್ಲಪ್ಪಾ, ಅಶೋಕ, ಪುಂಡಲಿಕ್, ಅಪ್ಪಸಾಬ ಎಪಿಸಿ ಬಿರಾದಾರ ಎಪಿಸಿ, ಚನ್ನವಿರೇಶ ಎಪಿಸಿ ರವರ ತಂಡಗಳನ್ನು ನೇಮಕ ಮಾಡಿದ್ದು ಇರುತ್ತದೆ.
ಅಪಹರಣ ಮಾಡಿದ ಆರೋಪಿತರು ಅತೀ ಜಾಣ್ಮೇಯಿಂದ ಮಗುವಿನ ಅಜ್ಜನಾದ ನಿಂಗಪ್ಪಾ ಹೀರೆ ಕುರಬರ ಮತ್ತು ನಿಂಗಪ್ಪಾ ಹೀರೆಕುರಬರ ಹೀರೆ ಮಗನಾದ ರಾಜು ಇತನಿಗೆ ಕಾಯಿನ್ ಬಾಕ್ಸ ಮುಖಾಂತರ ಪೋನ ಮಾಡಿ 10 ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ನಿರಂತರವಾಗಿ ಮೂರು (3) ದಿವಸಗಳಿಂದ ಬೇಡಿಕೆ ಇಟ್ಟು ಹೇದರಿಸುತ್ತಾ ಬಂದಿದ್ದು, ನಿಂಗಪ್ಪಾ ಹೀರೆ ಕುರಬರ ಹೀರೆ ಮಗ ರಾಜು ಇತನು ದಿನಾಂಕ:04-04-2012 ರಂದು ಮನ್ನಾಏಖೇಳಿ ರಾಷ್ಟ್ರಿಯ ಹೆದ್ದಾರಿ 9 ರ ಮೇಲೆ ಬರುವ ಅಂಬಾಭವಾನಿ ಗುಡಿ ಹತ್ತಿರ 10 ಲಕ್ಷ ರೂಪಾಯಿಗಳನ್ನು ಆರೋಪಿತರಿಗೆ ನೀಡಿದ್ದು, ಆರೋಪಿತರು ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ.
ದಿನಾಂಕ:05-4-2012 ರಂದು ಅಪಹರಣವಾಗಿದ್ದ ಮಗು ಶರಣಪ್ರಕಾಶ @ ಓಂ ಪ್ರಕಾಶ ಇವನನ್ನು ರಾತ್ರಿ ಸಮಯದಲ್ಲಿ ತನಿಖಾ ತಂಡದವರು (ಮತ್ತು ಆಂದ್ರ ಪ್ರದೇಶ ಧರೂರ ಪೊಲೀಸ್ ರ ಸಹಾಯದಿಂದ ) ಕಾರ್ಯ ಚರಣೆ ನಡೆಸಿ ಹೈದ್ರಾಬಾದ ಮತ್ತು ತಾಂಡೂರ ರಾಷ್ಟ್ರಿಯ ಹೆದ್ದಾರಿಯಲ್ಲಿ ಬರುವ ಆನಂತಗೀರಿ ಬೇಟ್ಟದಲ್ಲಿ ಅಪಹರಣವಾಗಿದ್ದ ಮಗು ಶರಣ ಪ್ರಕಾಶ @ ಓಂ ಪ್ರಕಾಶ ನನ್ನು ಪತ್ತೆ ಹಚ್ಚಿ ಅವರ ತಂದೆ ತಾಯಿಗೆ ಮಗುವನ್ನು ಒಪ್ಪಿಸಲಾಯಿತು.
ಮೇಲ್ಕಂಡ ನಾಲ್ಕು ವಿಶೇಷ ತನಿಖಾ ತಂಡದವರು ಶ್ರೀ ಪ್ರವೀಣ ಮಧುಕರ ಪವಾರ ರವರ ಮಾರ್ಗದರ್ಶನದಲ್ಲಿ ಖಚಿತ ಭಾತ್ಮಿಯಂತೆ ಈ ಪ್ರಕರಣದಲ್ಲಿ ಈ ಕೆಳಕಂಡ ಆರೋಪಿತರನ್ನು ದಿನಾಂಕ: 08-04-2012 ರಂದು ವಿವಿಧ ಕಡೆ ಕಾರ್ಯಚರಣೆ ಮಾಡಿ ಬಂದಿಸಿಲಾಯಿತು. ಆರೋಪಿತರಾದ 1) ದೀಪಕ ತಂದೆ ವಾಮನರಾವ ಗಿರಿ ವ|| 27 ವರ್ಷ, ಜಾ|| ಗೋಸಾಯಿ, ಉ|| ವೆಂಲ್ಡಿಂಗ್ ಕೆಲಸ ವಾ|| ಗಡೀಕೇಶ್ವರ ಹಾ||ವ|| ಸುಲೇಪೇಟ 2) ಸಂತೋಷ ತಂದೆ ಬಸವರಾಜ ಬೋಸಲೇ ಮರಾಠ ವ|| 25 ವರ್ಷ, ಉ|| ವೆಲ್ಡಿಂಗ್ ಕೆಲಸ, 3) ನಂದಕುಮಾರ ತಂದೆ ಚಂದ್ರಶೇಖರ ಬಡಿಗೇರ ವ|| 19 ವರ್ಷ, ವಿದ್ಯಾರ್ಥಿ ಜಾ|| ಪಂಚಾಳ,4) ರಾಜಶೇಖರ ತಂದೆ ತಿಪ್ಪಣಾ ಹಲಚೇರಿ ವ|| 27 ಜಾ|| ಲಿಂಗಾಯತ 5) ಅಶೋಕ ತಂದೆ ಕಾಶೀನಾಥ ಚೊಂಚಿ ವ|| 27, ಜಾ||ಲಿಂಗಾಯತ ಉ|| ಟೆಂಟ ಹೌಸ್ ಕೆಲಸ ಎಲ್ಲರೂ ಸಾ|| ಗಡೀಕೇಶ್ವರ 6) ಮೋನಿಕಾ ಗಂಡ ವಿಠಲ್ ರಾವು ಬಂಡಗಾರ ವ|| 28 ವರ್ಷ, ಸಾ|| ಸಂಕರಪಲ್ಲಿ ರಂಗಾರೆಡ್ಡಿ ಜಿಲ್ಲೆ ಆಂದ್ರ ಪ್ರದೇಶ. ಇನ್ನೋಬ್ಬ ಆರೋಪಿ 7) ಗಣೇಶ ತಲೆ ಮರೆಸಿಕೊಂಡಿದ್ದು ಆತನ ಬಂದನಕ್ಕೆ ವ್ಯಾಪಕವಾದ ಜಾಲ ಬಿಸಲಾಗಿದೆ.
ಮೇಲ್ಕಂಡ ಆರೋಪಿತರಿಂದ 8,26,000/- ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರು ಮೇಲ್ಕಂಡ ನಾಲ್ಕು ವಿಸೇಷ ತನಿಖಾ ತಂಡಗಳಿಗೆ ಸೂಕ್ತ ಬಹುಮಾನ ನೀಡುವಾಗಿ ಘೋಶಿಸಿರುತ್ತಾರೆ.
No comments:
Post a Comment