POLICE BHAVAN KALABURAGI

POLICE BHAVAN KALABURAGI

08 January 2016

Kalaburagi District Reported Crimes

ಸುಲಿಗೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ದತ್ತು ತಂದೆ ಚಂದ್ರಾಮ ಕಿರಣಗಿ ಸಾ : ಇಬ್ರಾಹಿಂಪೂರ ತಾ : ಸಿಂದಗಿ ಇವರು ಬಿಜಾಪೂರದ ಜಯಲಕ್ಷ್ಮಿ ಟ್ರಾನ್ಸಪೋರ್ಟದ ಲಾರಿ ನಂ. MH-12 FC-7991 ನೇದ್ದರ ಮೇಲೆ ಈಗ ಒಂದು ವರ್ಷದಿಂದ ಚಾಲಕ ಅಂತಾ ಕೆಲಸ ಮಾಡುತ್ತೇನೆ, ದಿನಾಂಕ: 06-01-2016 ರಂದು ACC  ಪ್ಯಾಕ್ಟರಿ ವಾಡಿಯಲ್ಲಿ ಸಿಮೆಂಟ ಲೋಡ ಮಾಡಿಕೊಂಡು ಅಲ್ಲಿಂದ ರಾತ್ರಿ 11-35 ಪಿ.ಎಮ್ ಕ್ಕೆ ಬಿಜಾಪೂರ ಕಡೆ ಹೋಗುತಿದ್ದಾಗ, ದಿನಾಂಕ: 07-01-2016 ರಂದು ನಾನು ಮಂದೇವಾಲ ದಾಟಿ 2 ಕಿ.ಎಮ್ ಹೋಗಿರಬಹುದು,ಅಂದಾಜು ಸಮಯ 2 ಗಂಟೆಗೆ ರಾಷ್ಟ್ರಿಯ ಹೆದ್ದಾರಿ 218 ರ ಮೇಲೆ ಕೆನಾಲ್ ಹತ್ತಿರ ರೋಡಿನ ಅಡ್ಡ ಇನೊವಾ ಕಾರ ನಂ. ಕೆಎ-36 ಅಂತಾ ನಿಲ್ಲಿಸಿದ್ದರಿಂದ ನಾನು ಲಾರಿಯನ್ನು ನಿಲ್ಲಿಸಿದಾಗ ನನಗೆ ಪಿಸ್ತೂಲಿನಿಂದ ಅಂಜಿಸಿ ಜಬರದಸ್ತಿಯಿಂದ ಅವನ ಹತ್ತಿರ ಇದ್ದ ನಗದು  ಹಣ 5000/- ಒಂದು ಸ್ಯಾಮಸಂಗ ಮೊಬೈಲ್ ಫೋನ ಹಾಗು 440 ಚೀಲ ಸಿಮೇಂಟ ಬ್ಯಾಗ ತುಂಬಿದ ಟವರಸ ಲಾರಿ ಹೀಗೆ ಒಟ್ಟು 28,55,400/- ರೂ ಕಿಮ್ಮತ್ಇನವುಗಳನ್ನು ಜಬರದಸ್ತಿ ಕಸಿದುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.