POLICE BHAVAN KALABURAGI

POLICE BHAVAN KALABURAGI

17 February 2012

GULBARGA DIST REPORTED CRIME

ಕಾರಿನಲ್ಲಿಟ್ಟಿದ್ದ 33 ತೋಲಿ 7 ಗ್ರಾಂ ಬಂಗಾರದ ಆಭರಣ ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ:
ಶ್ರೀ ಡಾಃ ವಿಜಯಕುಮಾರ ತಂದೆ ಶಂಕರರಾವ ಕಟ್ಟಿಕೇರಿ ಉಃ ಸರ್ಜನ್ ಸಾಃ ಪ್ಲಾಟ ನಂ. 132 ಜಿ.ಡಿ.ಎ ಕಾಲೋನಿ ವಿರೇಂದ್ರ ಪಾಟೀಲ ನಗರ ಸೇಡಂ ರೋಡ ಗುಲಬರ್ಗಾರವರು ನಾನು ದಿನಾಂಕಃ 17/02/2012 ರಂದು ಮದ್ಯಾಹ್ನ ನನ್ನ ಕಾರ ನಂ. ಕೆ.ಎ 32 ಎನ್ 217 ತೆಗೆದುಕೊಂಡು ಎಂ.ಆರ್ ಮೆಡಿಕಲ್ ಕಾಲೇಜಿಗೆ ಹೋಗಿ ಕೆಲಸ ಮುಗಿಸಿಕೊಂಡು ನಮ್ಮ ಸಂಬಂಧಿಕರ ಲಗ್ನಕ್ಕೆ ಹೋಗುವ ಸಂಬಂಧ ಕರ್ನಾಟಕ ಬ್ಯಾಂಕ್ ಲಾಕರ್ ನಲ್ಲಿ ಇಟ್ಟ ಬಂಗಾರದ ಆಭರಣಗಳು ಅಂದಾಜು ತೂಕ 33 ತೊಲೆ 7 ಗ್ರಾಂ ಅಃಕಿಃ 8,50,000/- ರೂ. ಬೆಲೆ ಬಾಳುವುದನ್ನು ತೆಗೆದುಕೊಂಡು ಕಾರಿನ ಡ್ಯಾಶ್ ಬೋರ್ಡನಲ್ಲಿ ಇಟ್ಟು ಕಾರ ತೆಗೆದುಕೊಂಡು ಮನೆಗೆ ಕಡೆಗೆ ಬರುತ್ತಿದ್ದೆ. ಮದ್ಯದಲ್ಲಿ ಸಿಂಡಿಕೇಟ್ ಬ್ಯಾಂಕ್ ಎದುರುಗಡೆ ಕಾರ್ ನಿಲ್ಲಿಸಿ ಕಾರಿಗೆ ಸೆಂಟರ್ ಲಾಕ್ ಮಾಡಿ ಬ್ಯಾಂಕಿನಲ್ಲಿ ಹೋದೆನು. ಸ್ವಲ್ಪ ಹೊತ್ತಿನಲ್ಲಿ ನನಗೆ ಪರಿಚಯವಿದ್ದ ಉದಯ ರೇಶ್ಮಿ ಇವರು ನಿಮ್ಮ ಕಾರ್ ಗ್ಲಾಸ್ ಯಾರೋ ಒಬ್ಬ ಒಡೆದಿದ್ದು ಕಾರಿನಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿತ್ತಿದ್ದಾರೆಂದು ಕಿರುಚಿದನು. ನಾನು ಹೊರಗೆ ಬರುವಷ್ಟರಲ್ಲಿ ಹಿರೋ ಹೊಂಡಾ ಬೈಕ್ ಮೇಲೆ ಇಬ್ಬರೂ ಫರಾರಿಯಾದರು. ಬ್ಯಾಗನಲ್ಲಿ ಇಟ್ಟಿದ್ದ ಯಾರೋ ಕಳ್ಳರು ನನ್ನ ಕಾರಿನ ಗ್ಲಾಸ ಒಡೆದು ಕಾರಿನಲ್ಲಿದ್ದ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 16/2012 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅತ್ಯಾಚಾರ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ದಿನಾಂಕ:24.01.2012 ರಂದು ಮದ್ಯಾಹ್ನ 2 ಗಂಟೆಗೆ ನಮ್ಮ ತಂದೆ ತಾಯಿಯವರು ನನಗೆ ಎಷ್ಟು ಹೇಳಿದರು ನೀನು ಸರಿಯಾಗಿ ಓದುತ್ತಿಲ್ಲಾ ಮತ್ತು ಮನೆ ಕೆಲಸ ಮಾಡುತ್ತಿಲ್ಲಾ ಅಂತಾ ನನಗೆ ಹೋಡೆದು ಕೆಲಸಕ್ಕೆ ಹೋದರು ನಾನು ಸಿಟ್ಟಿಗೆ ಎದ್ದು ನನ್ನ ಗೆಳತಿಯಾದ ಭಾಗ್ಯ ಇವಳ ಹತ್ತಿರ ಹೋಗಬೇಕೆಂದು ಶರಣಬಸವೇಶ್ವರ ಗುಡಿ ಹತ್ತಿರ ರೋಡಿನ ಮೇಲೆ ನಿಂತಿಕೊಂಡಾಗ ಆಟೋ ಚಾಲಕ ನನ್ನಗೆ ನೋಡಿ ಎಲ್ಲಿಗೆ ಹೋಗಬೇಕು ಅಂತಾ ಕೇಳಿದಾಗ ನಾನು ತಿಮ್ಮಾಪೂರಿ ಚೌಕಗೆ ಹೋಗಬೇಕೆಂದು ತಿಳಿಸಿ ಆಟೋದಲ್ಲಿ ಕುಳಿತೇನು. ಆಟೋದವನು ಫಿಲ್ಟರ ಬೇಡ ಆಶ್ರಯ ಕಾಲೋನಿಯಲ್ಲಿ ಅವರ ಅಕ್ಕ ಮತ್ತು ಆಕೆಯ ಮಗಳು ಆರತಿ ಇವರು ಇಬ್ಬರೆ ಮನೆಯಲ್ಲಿರುತ್ತಾರೆ ನೀನು ಅವರ ಜೋತೆಯಲ್ಲಿ ಇರುವೆ ನಡೆ ಅಂತಾ ಹೇಳಿ ಕರೆದುಕೊಂಡು ಹೋಗಿ ಮನೆಯಲ್ಲಿ ಬಿಟ್ಟನ್ನು. ಆ ಮನೆಯಲ್ಲಿ ಆತನ (ಆಟೋದವನ) ಹೆಸರು ಸೂರ್ಯಕಾಂತ ಸ್ವಾಮಿ ಅಂತಾ ತಿಳಿಯಿತು. ದಿನಾಂಕ:31.01.2012 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಅವರ ಮನೆಗೆ ಬರುವ ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡುವ ಸಂಜು ಇವನು ಬಂದನು. ಅವನು ಮತ್ತು ಸಿದ್ದಮ್ಮಾ ಅವಳ ಮಗಳು ಆರತಿ ಎನೋ ಮಾತಾನಾಡಿ ಹಣ ತೆಗೆದುಕೊಂಡರು ಮತ್ತು ನನಗೆ ಸಂಜು ಜೋತೆ ಮಲಗು ಅಂತಾ ಹೇಳಿದರು ನಾನು ಬೇಡ ಅಂತಾ ಹೋರ ನಡೆದಾಗ ನನಗೆ ಜಬರದಸ್ತಿಯಿಂದ ಹಿಡಿದುಕೊಂಡು ಸಂಭೋಗ ಮಾಡಿದನು ದಿನಾಂಕ :15.02.2012 ರಂದು ಸಾಯಂಕಾಲ 7.00 ಗಂಟೆ ಸುಮಾರಿಗೆ ನಮ್ಮ ತಾಯಿ ನಿರ್ಮಲಾ ಕಾಕ ಸಂತೋಷ ಹಾಗೂ ಅಣ್ಣಂದಿರುದ ಶರಣು ನಾಗು ಸಿದ್ದು. ಇವರೆಲ್ಲರು ಬಂದು ಮನೆಯಲ್ಲಿದ್ದ ನನಗೆ ಕರೆದುಕೊಂಡು ಮನೆಗೆ ಬಂದಿರುತ್ತಾರೆ. ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 14/12 ಕಲಂ 366 (ಎ),372373,376,344 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀ ಸಂತೋಷ ತಂದೆ ಲಕ್ಷ್ಮಣ ಇವರು ಕಾಮರಡ್ಡಿ ಖಾಸಗಿ ಆಸ್ಪತ್ರೆಯಿಂದ ಶಾಂತಾಬಾಯಿ ಗಂಡ ಲಕ್ಷ್ಮಣ ಇವರ ಎಮ್.ಎಲ್.ಸಿ.ಪತ್ರ ವಸೂಲ ಮಾಡಿಕೊಂಡು 4=15 ಗಂಟೆಗೆ ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳು ಶಾಂತಾಬಾಯಿ ಇವರಿಗೆ ವಿಚಾರಿಸಲಾಗಿ ನಾನು ದಿನಾಂಕ 15-2-12 ರಂದು ಸಾಯಂಕಾಲ 4=30 ಗಂಟೆಗೆ ಎಸ್.ವಿ.ಪಿ.ಸರ್ಕಲ್ ದಿಂದ ಜಗತ ಸರ್ಕಲ್ ಮೇನ ರೋಡಿನಲ್ಲಿ ಬರುವ ಲಾಹೋಟಿ ಕ್ರಾಸ್ ಹತ್ತಿರ ರೋಡ ದಾಟುತ್ತಿದ್ದಾಗ ಒಬ್ಬ ಮೋಟಾರ ಸೈಕಲ್ ನಂ:ಕೆಎ 32ಆರ್ 5688 ನೆದ್ದ ಚಾಲಕ ಎಸ್.ವಿ.ಸರ್ಕಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ತನ್ನ ಮೋಟಾರ ಸೈಕಲ್ ಸಮೇತ ಹೊರಟು ಹೋಗಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2012 ಕಲಂ: 279,338 ಐ.ಪಿ.ಸಿ ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಹಲ್ಲೆ ಪ್ರಕರಣ:
ಮಳಖೇಡ ಠಾಣೆ: ಶ್ರೀ ವಿಶ್ವನಾಥ ತಂದೆ ದೇವಿಂದ್ರಪ್ಪ ಪುಜಾರಿ ಸಾ|| ಹಂಗನಳ್ಳಿ ತಾ|| ಸೇಡಂ ರವರು ನಾನು ದಿನಾಂಕ 16.02.2012 ರಂದು ಬೆಳಗ್ಗೆ 7:00 ಗಂಟೆಗೆ ನಾನು ಮತ್ತು ತಮ್ಮಂದಿರಾದ ನರಸಪ್ಪ ಕಾಮಣ್ಣ ಮೂರು ಜನರು ಕುಡಿಕೊಂಡು ಹೋಲಕ್ಕೆ ಹೋಗುತ್ತಿರುವಾಗ ದಾವಲಪೀರ ದರ್ಗಾ ಹತ್ತಿರ ಬಂದಾಗ ನಮ್ಮ ಊರಿನ ಈಶಪ್ಪ, ಬಸ್ಸಪ್ಪ, ಮಲ್ಲಪ್ಪ, ಶರಣಪ್ಪ ಇವರು ಕುಡಿಕೊಂಡು ಹೋಲದ ಬಗ್ಗೆ ಕೇಳಿ ಜಗಳ ತೆಗೆಯುತ್ತಿರೆನು ಅಂತ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಕಟ್ಟಿಗೆಯಿಂದ ಹೋಡೆ ಬಡೆ ಮಾಡಿ ರಕ್ತ ಗಾಯ ಮಾಡಿರುತ್ತಾರೆ ಅಂತಾ ದದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:13/2012 ಕಲಂ 341.323.504.324.506 ಸಂಗಡ 34 ಐ ಪಿ ಸಿ ನೇದ್ದರ ಪ್ರಕಾರ ಗುನ್ನೆ ದಾಖಲಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಳಖೇಡ ಠಾಣೆ: ದಿನಾಂಕ 15.02.2012 ರಂದು ಮಾಣಿಕರಾವ ತಂದೆ ರೇವಪ್ಪ ಪಾಟೀಲ ಇವರ ಹೋಲದಲ್ಲಿ ನನ್ನ ಗಂಡ ಚಂದ್ರಕಾಂತ ಇತನು ಟ್ರ್ಯಾಕ್ಟರ್ ನಂ ಕೆ.ಎ 28 ಟಿ 4728 ನೇದ್ದರಿಂದ ನೇಗಿಲು ಹೋಡೆದು ಸಾಯಂಕಾಲ ಯಡಗಾ ಗ್ರಾಮಕ್ಕೆ ಬರುವಾಗ ಸರ್ಕಾರಿ ಆಸ್ಪತ್ರೆ ಸಮೀಪ ನೀರಿನ ಟ್ಯಾಂಕ ಹತ್ತಿರ ಟ್ರ್ಯಾಕ್ಟರ ಪಲ್ಟಿ ಹೋಡೆಸಿ ತಾನು ಟ್ರ್ಯಾಕ್ಟರ್ ಕೇಳಗೆ ಸಿಕ್ಕಿ ಹಾಕಿಕೊಂಡು ನನ್ನ ಗಂಡ ಭಾರಿ ಗಾಯ ಹೊಂದಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಭಾರತಿ ಗಂಡ ಚಂದ್ರಕಾಂತ ಬನ್ನೂರು ಸಾ|| ವಚ್ಚಾ ತಾ|| ಚಿತ್ತಾಪುರ ರವರು ಹೇಳಿಕೆ ನೀಡಿದ ಮೇರೆಗೆ ಠಾಣೆ ಗುನ್ನೆ ನಂ 14/2012 ಕಲಂ 279 304 (ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀಮತಿ ಕಾಂಚನಾ ಗಂಡ ಸಂಗಮೇಶ್ವರ ಮಂದಕನಳ್ಳಿ ಸಾ|| ಬ್ಯಾಂಕ ಕಾಲನಿ ಈಶ್ವರ ಮಂದಿರ ಹತ್ತಿರ ಗುಲಬರ್ಗಾರವರು ನಾನು ದಿನಾಂಕ 16-02-2012 ರಂದು ಬೆಳಿಗ್ಗೆ ಸ್ಟೀಲ ಟೀಫನ ಡಬ್ಬಿಯಲ್ಲಿ 57 ಗ್ರಾಮ ಬಂಗಾರದ ಬಾಜು ಬಂದಿ (ವಂಕಿ), 15 ಗ್ರಾಂ ಬಂಗಾರದ ಚೈನ ಮತ್ತು ಚೈನನಲ್ಲಿ 15 ಗ್ರಾಮ ಹರಳಿನ ಪೇಡೆಂಟ (ಬಿಳಿ ಹರಳು), 10 ಗ್ರಾಂ ಬಂಗಾರದ ಕಿವಿ ಓಲೆ (ಬಿಳಿ ಹರಳಿನ), 30 ಗ್ರಾಮ ಬಂಗಾರದ ಪಾಟಲಿ ಹಾಕಿಕೊಂಡು ರಾಗ್ಜಿನ ಜೀಪ ಬ್ಯಾಗಿನ ಬಟ್ಟೆಯಲ್ಲಿ ಮುಚ್ಚಿಟ್ಟಿಕೊಂಡು,ಭಾಲ್ಕಿಯಿಂದ ಗುಲಬರ್ಗಾಕ್ಕೆ ಕೆ.ಎಸ್.ಅರ್.ಟಿ.ಸಿ. ಬಸ್ಸಿನಲ್ಲಿ ಕುಳಿತುಕೊಂಡು ಬಂದು ಬ್ಯಾಂಕ ಕಾಲನಿಯಲ್ಲಿರುವ ನ್ನ ಮನೆಗೆ ಬಂದು ಸಾಮಾನುಗಳು ತೆಗೆಯುತ್ತಿರುವಾಗ ಬಂಗಾರದ ಆಭರಣಗಳಿರುವ ಸ್ಟೀಲ ಟೀಫನ ಡಬ್ಬಿ ಕಾಣಲಿಲ್ಲಾ. ಯಾರೋ ಕಳ್ಳರು ಭಾಲ್ಕಿಯಿಂದ ಗುಲಬರ್ಗಾಕ್ಕೆ ಬರುವಾಗ ಮಾರ್ಗ ಮಧ್ಯದಲ್ಲಿ ನನಗೆ ನಿದ್ದೆ ಹತ್ತಿದ ಸಮಯದಲ್ಲಿ ಯಾರೋ ಕಳ್ಳರು ಬಂಗಾರದ ಆಭರಣಗಳಿರುವ ಸ್ಟೀಲ ಟೀಫನ ಡಬ್ಬಿ ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 52/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಫರಹತಾಬಾದ ಪೊಲೀಸ್ ಠಾಣೆ:ದಿನಾಂಕ 16/2/2012 ರಂದು ಮದ್ಯಾಹ್ನ 3-00 ಗಂಟೆಗೆ ಸುಮಾರಿಗೆ ನಾನು ಇಟಗಾ(ಕೆ) ಗ್ರಾಮದಲ್ಲಿ ಗುಪ್ತ ವಿಷಯದ ಬಗ್ಗೆ ಸಂಗ್ರಹಿಸುತ್ತಿದ್ದಾಗ ಇಟಗಾ(ಕೆ) ಗ್ರಾಮದಲ್ಲಿ ಒಬ್ಬ ಹುಡುಗನು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಎರಿದ ದ್ವನಿಯಲ್ಲಿ ಸಾರ್ವಜನಿಕರಿಗೆ ಅಂಜಿಸುತ್ತಿದ್ದನು ನೋಡಿ ಸದರಿ ಮನುಷ್ಯನಿಗೆ ಹಿಡಿದು ಅವನು ಹೆಸರು ವಿಚಾರಿಸಲಾಗಿ ತನ್ನ ಹೆಸರು ಮಲ್ಲಿಕಾರ್ಜುನ @ ಮಲ್ಲು ತಂದೆ ಸೋಮಶೇಖರ ಪೊ. ಪಾಟೀಲ ಸಾ; ಇಟಗಾ(ಕೆ) ಇದ್ದು ಮುಂಜಾಗ್ರತಾ ಕ್ರಮವಾಗಿ ಠಾಣೆ ಗುನ್ನೆನಂ: 24/2012 ಕಲಂ 110 (ಇ&ಜಿ) ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.