POLICE BHAVAN KALABURAGI

POLICE BHAVAN KALABURAGI

12 July 2015

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರಿ ಮಲ್ಲಪ್ಪ ತಂದೆ ಶರಣಪ್ಪ ಚಿಕ್ಕಮಣೂರ ಸಾ||ಮಣೂರ ರವರ  ಅಣ್ಣ ಸತ್ಯಪ್ಪ @ ಶಿವರಾಯ ಮೃತ ಪಟ್ಟಿರುತ್ತಾನೆ. ನಮ್ಮ ಎರಡನೆ ಅಕ್ಕ ಪಾರ್ವತಿ ಇವಳಿಗೆ ಅಕ್ಕಲಕೋಟ ತಾಲೂಕಿನ ಮೋಸಲಗಿ ಗ್ರಾಮದ ಹಣಮಂತ ಕೋಳಿ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಆಕೆಗೆ ಗಂಡ ಮತ್ತು ಮಕ್ಕಳು ಮೃತ ಪಟ್ಟಿದ್ದರಿಂದ ಸುಮಾರು 30 ವರ್ಷಗಳ ಹಿಂದೆ ನಮ್ಮ ಅಕ್ಕ ಪಾರ್ವತಿ ನಮ್ಮೂರಿಗೆ ಬಂದು ನಮ್ಮ ಮನೆಯಲ್ಲಿ ಉಳಿದುಕೊಂಡಿರುತ್ತಾಳೆ. ನಮ್ಮ ಹಿರಿಯರ ಆಸ್ತಿ 12 ಎಕರೆ ಬಾಬಾನಗರ ಹತ್ತಿರ ಇರುತ್ತದೆ. ನನ್ನ ಅಣ್ಣ ಸತ್ಯಪ್ಪ @ ಶಿವರಾಯ  ಮತ್ತು ನನ್ನ ತಮ್ಮ ಶರಣಪ್ಪ @ ಬಸವರಾಜ ಇವರು ಸರ್ಕಾರಿ ಕೆಲಸದಲ್ಲಿ ಇದ್ದುದರಿಂದ ತಮ್ಮ ಪಾಲಿಗೆ ಬಂದಿರುವ ಜಮೀನಿನಲ್ಲಿ ಇಬ್ಬರು ಒಂದೊಂದು ಎಕರೆ ನಮ್ಮ ಅಕ್ಕ ಬದುಕಿರುವ ವರೆಗೆ ಅವಳ ಉಪ ಜೀವನಕ್ಕಾಗಿ ಕೊಟ್ಟಿರುತ್ತಾರೆ. ಅವಳ ಹೆಸರಿನಲ್ಲಿ ಜಮೀನಿಗೆ ಸಂಭಂದಿಸಿದಂತೆ ಯಾವುದೆ ದಾಖಲಾತಿಗಳು ಅವಳ ಹೆಸರಿನಲ್ಲಿ ಇರುವುದಿಲ್ಲ. ನಮ್ಮೇಲ್ಲರ ಜಮೀನು ನೋಡಿಕೊಳ್ಳಲು ನಮ್ಮ ಅಕ್ಕ ಹೊಲದಲ್ಲಿರುವ ಮೆಟಗಿಯಲ್ಲಿ ವಾಸವಾಗಿರುತ್ತಾಳೆ. ನಾನು ನನ್ನ ಹೆಂಡತಿ ಮಕ್ಕಳು ಮಣೂರ ಗ್ರಾಮದಲ್ಲಿರುವ ನಮ್ಮ ಮನೆಯಲ್ಲಿ ವಾಸವಾಗಿರುತ್ತೇವೆ. ಸತ್ಯಪ್ಪ @ ಶಿವರಾಯ ಮತ್ತು ಅವನ ಹೆಂಡತಿ ಇಬ್ಬರು ಮೃತ ಪಟ್ಟಿದ್ದರಿಂದ ಅವರ ಮಗ ಮಹೇಶನಿಗೆ ಸಾವಳಗಿ ಸರ್ಕಾರಿ ಶಾಲೆಯ ಪ್ಯೂನ ಅಂತಾ ನೌಕರಿ ಇದ್ದುದರಿಂದ ಅವನು ಸಾವಳಗಿ ಗ್ರಾಮದಲ್ಲಿ ವಾಸವಾಗಿರುತ್ತಾನೆ. ನನ್ನ ಪಾಲಿಗೆ ಬಂದಿರುವ ಜಮೀನಿನಲ್ಲಿ ಕಬ್ಬು ಬೆಳೆದಿದ್ದು ದಿನಾಲು ಹೊಲಕ್ಕೆ ಹೋಗಿ ಹೊಲದಲ್ಲಿನ ಕೆಲಸ ಮುಗಿಸಿಕೊಂಡು ಸಾಯಂಕಾಲ ಮನೆಗೆ ಬರುತ್ತೇನೆ. ದಿನಾಂಕ 10-07-2015 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋಗಿ ಕಬ್ಬಿನ ಬೇಳೆಗೆ ನೀರು ಉಣಿಸಿ ಸಾಯಂಕಾಲ 7:00 ಗಂಟೆ ಸುಮಾರಿಗೆ ಹೊಲದಲ್ಲಿ ವಾಸವಾಗಿರುವ ನಮ್ಮ ಅಕ್ಕ ಪಾರ್ವತಿಗೆ ಮಾತಾಡಿಸಿ ಮನೆಗೆ ಬಂದಿರುತ್ತೇನೆ. ಇಂದು ದಿನಾಂಕ 11-07-2015 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋದಾಗ ನಮ್ಮ ಅಕ್ಕ ಪಾರ್ವತಿ ಇವಳು ನಮ್ಮ ಹೊಲಕ್ಕೆ ಹೊಂದಿಕೊಂಡಿರುವ ಮತ್ತು ಹೊಲದಲ್ಲಿನ ಮೇಟಗಿಯ ಮುಂದೆ ಪಾರ್ವತಿ ಗಂಡ ಮಾಹಾದೇವ ಚಿಕ್ಕಮಣೂರ ರವರ ಹೊಲದಲ್ಲಿ ಕೊಲೆಯಾಗಿ ಬಿದ್ದಿದ್ದಳು. ನನ್ನ ಅಕ್ಕ ಪಾರ್ವತಿಯ ಏಡ ಗಣ್ಣಿನ ಕೆಳಭಾಗದಲ್ಲಿ ಮತ್ತು ಏಡಗಣ್ಣಿನ ಗುಡ್ಡೆಯ ಪಕ್ಕದಲ್ಲಿ ಮೂಗಿನ ಹತ್ತಿರ ಯಾವುದೋ ಚೂಪಾದ ಆಯುಧದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ನನ್ನ ಅಕ್ಕ ಪಾರ್ವತಿಗೆ ಆಗದವರು ಯಾರೋ ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ದಿನಾಂಕ 10-07-2015 ರ ಸಾಯಂಕಾಲ 7:00 ಗಂಟೆಯಿಂದ ದಿನಾಂಕ 11-07-2015 ರಂದು ಮದ್ಯಾಹ್ನ 2:00 ಮದ್ಯದ ಅವದಿಯಲ್ಲಿ ಕೊಲೆ ಮಾಡಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಚನ್ನಮಲ್ಲಪ್ಪ ಸಿನ್ನೂರ ಸಾ: ಅಫಜಲಪೂರ ಇವರು ಅಫಜಲಪೂರ ಪಟ್ಟಣದಲ್ಲಿರುವ  ಕಣ್ಣಿ ಯವರ ವರ್ಕ ಶಾಪ್ ನಲ್ಲಿ ಲೇತ್ ಮಸೀನ್ ಆಪರೇಟರ ಅಂತ ಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತೇನೆ ನನಗೆ ಮೂರು ಜನ ಗಂಡು ಮಕ್ಕಳಿದ್ದುಇದರಲ್ಲಿ  ಸಂಗಮೇಶನು ಅಫಜಲಪೂರ ಪಟ್ಟಣದಲ್ಲಿ ಬಸ್ ನಿಲ್ದಾಣದ ಸಮೀಪ ಮೋಬೈಲ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾನೆ. ನನ್ನ ಮಗ ಸಂಗಮೇಶನಿಗೆ ಪ್ರವೀಣ ತಂದೆ ಕುಪ್ಪಣ್ಣ ಭೂತಿ, ನಾಗೇಶ @ ನಾಗಯ್ಯ ತಂದೆ ವಿವೇಕಾನಂದ ಗವಿಮಠ, ಸಂಗಮೇಶ ತಂದೆ ಶಿವಶರಣಪ್ಪ ಅಳ್ಳಗಿ ಅಂತ ಗೆಳೆಯರು ಇರುತ್ತಾರೆ. ದಿನಾಂಕ 10-07-2015 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿಬಾಯಿ ಹಾಗೂ ಮಕ್ಕಳಾದ ಕಿರಣ ಮತ್ತು ಸಂತೋಷ ರವರೆಲ್ಲರು ಮನೆಯಲ್ಲಿದ್ದಾಗ ಸಂಗಮೇಶನು ಹೊರಗೆ ಹೋಗಿ ಬರುತ್ತೇನೆ ಅಂತ ಹೇಳಿ ಅವನ ಮೋಟಾರ ಸೈಕಲ ನಂ ಕೆಎ- ಕೆಎ-32 ಇಜಿ-0596 ನೇದ್ದನ್ನು ತಗೆದುಕೊಂಡು ಮನೆಯಿಂದ ಹೋಗಿರುತ್ತಾನೆ. ಸಂಗಮೇಶನು ಬಹಳ ಹೊತ್ತಾದರೂ ಮರಳಿ ಮನೆಗೆ ಬರಲಿಲ್ಲಾ. ಆಗ ನಾನು  ಸಂಗಮೇಶನನ್ನು ಹುಡುಕುತ್ತಾ ಹೋದಾಗ ನನ್ನ ಮಗನ ಮತ್ತೋಬ್ಬ ಗೆಳೆಯನಾದ ಶಿವಕುಮಾರ ತಂದೆ  ಮಲ್ಲಿಕಾರ್ಜುನ ಅಚಲೇರಿ ಎಂಬಾತನು ಸಿಕ್ಕಿದ್ದು ನಾನು ಅವನಿಗೆ ನನ್ನ ಮಗ ಸಂಗಮೇಶನ ಬಗ್ಗೆ  ವಿಚಾರಿಸಿದಾಗ ಈಗ ಸ್ವಲ್ಪ ಸಮಯದ ಹಿಂದೆ ಪ್ರವೀಣ ಭೂತಿ, ನಾಗೇಶ @ ನಾಗಯ್ಯ ಗವಿಮಠ, ಸಂಗಮೇಶ ಅಳ್ಳಗಿ ಇವರು ಬಂದು ಸಂಗಮೇಶನೊಂದಿಗೆ  ಹಣದ ವಿಚಾರದಲ್ಲಿ ಬಾಯಿ ಮಾತಿನ ಜಗಳ ಮಾಡಿ  ತಕರಾರು ಮಾಡಿಕೊಂಡು ನಿನಗೆ ಕೊಡಬೇಕಾದ 25,000/- ರೂ ಹಣ ಈಗಲೇ ಕೊಟ್ಟು ಬಿಡುತ್ತೇವೆ ನಮ್ಮೊಂದಿಗೆ ನಡೆ ಅಂತ ಕರೆದುಕೊಂಡು ಹೋಗಿರುತ್ತಾರೆ ಅಂತ ತಿಳಿಸಿದನು. ಗೆಳೆಯರೊಂದಿಗೆ ಹೋಗಿದ್ದಾನೆ ನಂತರ ಮನೆಗೆ ಬರಬಹುದೆಂದು ತಿಳಿದುಕೊಂಡು ಮನೆಗೆ ಹೋಗಿ ಮಲಗಿಕೊಂಡೆನು .       ಬೆಳಿಗ್ಗೆ ಅಂದಾಜ 10 ಗಂಟೆಯಾದರೂ ನನ್ನ ಮಗ ಸಂಗಮೇಶನು ಮನೆಗೆ ಬರಲಿಲ್ಲ. ಅಂಗಡಿ ತೆರೆಯುವ ಸಮಯವಾದರು ಏಕೆ ಮನೆಗೆ ಬರಲಿಲ್ಲಾ ಅಂತ ಹುಡುಕಾಡುತ್ತಾ ಬಜಾರನಲ್ಲಿ ಬಂದಾಗ ಬಸವರಾಜ ಕೊರಳ್ಳಿ ರವರ ಹೊಲದಲ್ಲಿ ಒಬ್ಬ ಹುಡುಗನ ಕೊಲೆಯಾದ ಶವ ಬಿದ್ದಿದೆ ಅಂತ ಜನರು ಮಾತಾಡುವದನ್ನು  ಕೇಳಿ ನಾನು ಮತ್ತು ನನ್ನ ಅಣ್ಣನ ಮಗನಾದ ಈರಣ್ಣ ಸಿನ್ನೂರ ಇಬ್ಬರು ಬಸವರಾಜ ಕೊರಳ್ಳಿರವರ ಹೊಲಕ್ಕೆ ಹೋದಾಗ ಸದರಿಯವರ ಹೊಲದ ಹತ್ತಿರದ ಬಾಂದಾರಿಯಲ್ಲಿ ನನ್ನ ಮಗನ ಮೋಟಾರ ಸೈಕಲ ನಂ ಕೆಎ- ಕೆಎ-32 ಇಜಿ-0596 ನೇದ್ದು ಬಿದ್ದಿದ್ದು ಮೋಟಾರ ಸೈಕಲ್ ಬಿದ್ದ ಸ್ಥಳದಿಂದ ಸ್ವಲ್ಪ ಮುಂದಕ್ಕೆ ಹೋಗಿ ನೋಡಿದಾಗ ನನ್ನ ಮಗ ಸಂಗಮೇಶನು ಕೊಲೆಯಾಗಿ ಬಿದ್ದಿದನು. ನನ್ನ ಮಗನ ಬಾಯಿ ಕೆಳಭಾಗದಲ್ಲಿ ಗದ್ದಕ್ಕೆ , ಹೊಟ್ಟೆಗೆ , ಎದೆಗೆ, ಬೇನ್ನಿಗೆ ತಲವಾರ ಮತ್ತು ಮಚ್ಚನಿಂದ ಹೊಡೆದು ಭಾರಿ ರಕ್ತಗಾಯಗಳು ಪಡಿಸಿ ಕೊಲೆ  ಮಾಡಿರುತ್ತಾರೆ.  ನಂತರ  ಶಿವಕುಮಾರ ಅಚಲೇರಿ ಎಂಬಾತನಿಂದ ಗೊತ್ತಾಗಿದ್ದೇನೆಂದರೆ ಈಗ ಸುಮಾರು ಎರಡು ತಿಂಗಳ ಹಿಂದೆ ಪ್ರವೀಣ ಬೂತಿ ಮತ್ತು ಸಂಗಮೇಶ ಅಳ್ಳಗಿ ರವರು ನಿಮ್ಮ ಮಗ ಸಂಗಮೇಶನಿಂದ 25,000/- ರೂಪಾಯಿ ತಗೆದುಕೊಂಡಿದ್ದು ಆ ಹಣ ಕೊಡುವಂತೆ ಕೇಳಿದ್ದರಿಂದ ಅವರು ಈಗ ನಮ್ಮ ಹತ್ತಿರ ಹಣ ಇಲ್ಲ ನಮಗೆ ಅನೂಕುಲ ಆದಾಗ ಕೊಡುತ್ತೇವೆ ಅಂತ ಹೇಳಿದರು ನಿನ್ನೆ ದಿವಸ ರಾತ್ರಿ 10 ಗಂಟೆ ಸುಮಾರಿಗೆ ಪ್ರವೀಣ ಬೂತಿ, ಸಂಗಮೇಶ ಅಳ್ಳಗಿ ಮತ್ತು ನಾಗೇಶ @ ನಾಗಯ್ಯ ಗವಿಮಠ ರವರು ಬಂದು ಹಣ ಕೊಡುತ್ತೇವೆ ನಡೆ ಅಂತ ಸಂಗಮೇಶನಿಗೆ ತಮ್ಮೊಂದಿಗೆ ಕರೆದುಕೊಂಡು ಹೋಗಿರುತ್ತಾರೆ ಅಂತ ತಿಳಿಸಿದ್ದು ನನ್ನ ಮಗ ಸಂಗಮೇಶನು ತಾನು ಕೊಟ್ಟಿದ್ದ ಹಣ ಮರಳಿ ಕೊಡು ಅಂತ ಕೇಳಿದಕ್ಕೆ ಪ್ರವೀಣ ಬೂತಿ, ಸಂಗಮೇಶ ಅಳ್ಳಗಿ ಮತ್ತು ನಾಗೇಶ @ ನಾಗಯ್ಯ ಗವಿಮಠ ರವರೆಲ್ಲರು ನನ್ನ ಮಗನನ್ನು ಹಣ ಕೊಡುತ್ತೇವೆ ಅಂತ ಹೇಳಿ ಮೋಟಾರ ಸೈಕಲ ಮೇಲೆ ಕರೆದುಕೊಂಡು ಹೋಗಿ ದಿನಾಂಕ 10/07/2015 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 11/07/2015 ರ ಬೆಳಗಿನ 10-00 ಗಂಟೆಯ ಮದ್ಯದ ಅವಧಿಯಲ್ಲಿ  ಬಸವರಾಜ ಕೊರಳ್ಳಿ ರವರ ಹೊಲದಲ್ಲಿ ತಲವಾರ ಮತ್ತು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದವರ ಬಂಧನ :
ಜೇವರ್ಗಿ ಠಾಣೆ : ದಿನಾಂಕ 11.07.2015 ರಂದು ಮದ್ಯಾನ ಜೇವರಗಿ ತಾಲೂಕಿನ ಕೊಳಕೂರ ಗ್ರಾಮದ ಹತ್ತಿರ ಬೀಮಾ ನದಿಯ ದಂಡೆಯಲ್ಲಿ ಟ್ರ್ಯಾಕ್ಟರಗಳ ಮುಖಾಂತರ ಮರಳು (ಉಸುಕು) ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀ ಎಸ್.ಎಸ್ ಹೂಲ್ಲೂರ ಸಿಪಿಐ ಜೇವರಗಿ ವೃತ್ತ ಮತ್ತು ಶ್ರೀ ಪಂಡಿತ ವಿ ಸಗರ ಪಿಎಸ್ಐ ಜೇವರಗಿ ಠಾಣೆಯ ರವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಮಾಡುವ ಕಾಲಕ್ಕೆ ಹಾಜರಿದ್ದು ಸಹಕರಿಸಲು ಕೋರಿಕೊಂಡು ಸದರಿಯವರು ಹಾಗು ಪಂಚರೊರು ಮತ್ತು ಸಿಬ್ಬಂದಿಯೊಂದಿಗೆ  ಕೊಳಕೂರ ಗ್ರಾಮದ ಹತ್ತಿರ ಬೀಮಾ ನದಿಯ ದಡದಲ್ಲಿ ಹೋಗಿ ಜೀಪನ್ನು ಗೀಡಗಂಟಿಗಳ ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಭೀಮಾ ನದಿಯ ಕಡೆಗೆ ನಡೆದುಕೊಂಡು ಹೋಗಿ ಅಲ್ಲಿ ಗೀಡಗಳ ಮರೆಯಾಗಿ ನಿಂತು ನೋಡಲು, ಭೀಮಾ ನದಿ ದಂಡೆಯಿಂದ ಟ್ರ್ಯಾಕ್ಟರಗಳಲ್ಲಿ 7 ಜನರು ನದಿಯಲ್ಲಿಂದ ಉಸುಕು (ಮರಳು) ನ್ನು ಕಳ್ಳತನದಿಂದ ತುಂಬುತ್ತಿದ್ದರು ಅದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 4.00 ಗಂಟೆಗೆ ಅವರ ಮೇಲೆ ನಾವು ಏಕ ಕಾಲಕ್ಕೆ ಅವರ ಮೇಲೆ ದಾಳಿ ಮಾಡಿ ಇಬ್ಬರಿಗೆ ಹಿಡಿದುಕೊಂಡೆವು ಅವರಲ್ಲಿಯ 5 ಜನರು ಓಡಿ ಹೋದರು. ಬೆನ್ನು ಹತ್ತಿ ಹಿಡಿಯಲು ಪ್ರಯತ್ನ ಮಾಡಿದರು ಅವರು ಸಿಕ್ಕಿರುವದಿಲ್ಲಾ. ಸಿಕ್ಕವರಿಗೆ ಹೆಸರು ಕೇಳಲು 1] ಅಂಬಾರಾಯ ತಂದೆ ಹೊನ್ನಣ್ಣಾ ಹೊನಕೇರಿ ನಾನು ಟ್ರ್ಯಾಕ್ಟರ್ ನಂ ಕೆ.ಎ. 32-ಟಿಎ-5897 ನೇದ್ದರ ಚಾಲಕ ಅಂತಾ ತಿಳಿಸಿದನು, ಮತ್ತೊಬ್ಬನು 2] ಮರೆಪ್ಪ ತಂದೆ ಭೀಮಾಶಂಕರ ಜಡಿ ಸಾಃ ಕೊಳಕೂರ ನಾನು ನನ್ನ ಟ್ರ್ಯಾಕ್ಟರಗಳಲ್ಲಿ ಭೀಮಾ ನದಿಯಿಂದ ಉಸುಕು ತುಂಬಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದೆನೆ ಅಂತಾ ಹೇಳಿದನು  ಓಡಿ ಹೋದವರ ಹೆಸರು ವಿಳಾಸ ಅವರಿಗೆ ಕೇಳಲು ಅಂಬಾರಾಯ ಹೊನ್ನಕೇರಿ ಇವನು ಹೆಳಿದ್ದನೆಂದರೆ ಓಡಿ ಹೊದವರಲ್ಲಿ 3] ಬಾಬುರಾಯ ಕೂಡಿ ಸಾಃ ಕೊಳಕೂರ ಇತನು ತನ್ನ ಎಲ್ & ಟಿ ಟ್ರ್ಯಾಕ್ಟರ್  4] ಅಬ್ಬಾಸಲಿ ಮಾವನೂರ ಸಾಃ ಕೊಳಕೂರ, ಇತನು ತನ್ನ ಮಹಿಂದ್ರಾ ಕಂಪನಿ ಟ್ರ್ಯಾಕ್ಟರ್ 5] ಶಿವಶರಣಪ್ಪ ಯಡ್ರಾಮಿ ಸಾಃ ಕೊಳಕೂರ ಇತನು ತನ್ನ ಎಲ್ & ಟಿ. ಟ್ರ್ಯಾಕ್ಟರ್  ತಮ್ಮ ತಮ್ಮ ಟ್ರ್ಯಾಕ್ಟರಗಳು ತೆಗೆದುಕೊಂಡು ಓಡಿಹೊಗಿರುತ್ತಾರೆ ಅಂತಾ ತಿಳಿಸಿದನು.  ಮತ್ತು ಮರೆಪ್ಪ ಜಡಿ ಇತನು ಓಡಿ ಹೊದವರಲ್ಲಿ ನನ್ನ ಟ್ರ್ಯಾಕ್ಟರಗಳ ಡ್ರೈವರಗಳಾದ 6] ನಾಗಪ್ಪ ಶಿವಣಗಿ ಸಾಃ ಗೌನಳ್ಳಿ, ಟ್ರ್ಯಾಕ್ಟರ್ ನಂ ಕೆ.ಎ.32-ಟಿ.ಎ-1355 ನೇದ್ದರ ಚಾಲಕ 7] ಬಾಗಪ್ಪ ತಂದೆ ಹಣಮಂತ ನೂಲಿನವರ್ ಟ್ರ್ಯಾಕ್ಟರ್ ನಂಬರ ಕೆ.ಎ. 32- 6763 ನೇದ್ದರ ಚಾಲಕ ಅಂತಾ ತಿಳಿಸಿದನು, ನಂತರ ಸ್ಥಳದಲ್ಲಿದ್ದ ಟ್ರ್ಯಾಕ್ಟರಗಳನ್ನು ಪರಶೀಲಿಸಲು 1] ಟ್ರ್ಯಾಕ್ಟರ್ ನಂಬರ ಕೆ.ಎ.-32-ಟಿಎ-5897 ಅದರ ಇಂಜೀನ ನಂಬರ ಪಿ ವೈ 30290346328 ನೇದ್ದು ಇದ್ದು ಅದರ ಅ.ಕಿ 1,00,000/ 2] ಟ್ರ್ಯಾಕ್ಟರ್ ನಂಬರ ಕೆ..-32-ಟಿ-6763 ಟ್ರಾಯಲಿ ನಂ ಕೆ.ಎ.32-ಟಿ-3964 ನೇದ್ದು ಖಾಲಿ ಇರುತ್ತದೆ ಟ್ರ್ಯಾಕ್ಟರ್ ಅ.ಕಿ 1,00,000/- 3] ಟ್ರ್ಯಾಕ್ಟರ್ ನಂಬರ ಕೆ.ಎ.-32-ಟಿಎ-1355 ನೇದ್ದರಲ್ಲಿ ಒಂದು ಬ್ರಾಸ್ ಉಸುಕು ಇದ್ದು ಉಸುಕಿನ ಅ.ಕಿ. 1000/- ಆಗುತ್ತಿದ್ದು ಟ್ರ್ಯಾಕ್ಟರ್ ಅ.ಕಿ 1,00,000/- ನೇದ್ದು ಇದ್ದವು ವಶದಲ್ಲಿದ್ದವರಿಗೆ ಇಲ್ಲಿನ ಉಸುಕು ತುಂಬಲು ನಿಮ್ಮ ಹತ್ತಿರ ಏನಾದರು ಪರವಾನಿಗೆ ಪತ್ರ ವಗೈರೆ ಇದೆ ಅಂತ ಕೇಳಲು ಅವರು ನಮ್ಮ ಹತ್ತಿರ ಯಾವುದೇ ಪರವಾನಿಗೆ ಪತ್ರ ಇರುವದಿಲ್ಲಾ ಕಳುವಿನಿಂದ ಈ ಟ್ರ್ಯಾಕ್ಟರಗಳಲ್ಲಿ ಉಸುಕು ( ಮರಳು ) ತುಂಬುತಿರುವ ಬಗ್ಗೆ ಒಪ್ಪಿಕೊಂಡರು ಸದರಿಯವರು ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪತ್ರ ವಗೈರೆ ಪಡೆದುಕೊಳ್ಳದೇ ಮೇಲೆ ನಮೂದಿಸಿದ ಟ್ರ್ಯಾಕ್ಟರ್ ಗಳಲ್ಲಿ  ಮರುಳು (ಉಸುಕು) ಕಳ್ಳತನದಿಂದ ಸಾಗಿಸಿ ಸಂಬಂಧ ಪಟ್ಟ ಇಲಾಖೆಗೆ ಮತ್ತು ಸರಕಾರಕ್ಕೆ ಮೋಸ ಮಾಡುತಿರುವದು ಕಂಡು ಬಂದಿದ್ದರಿಂದ ಮೇಲೆ ನಮೂದಿಸಿದ ಟ್ರ್ಯಾಕ್ಟರಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ ಅಂತಾ ಕಲ್ಲಪ್ಪಗೌಡ ತಂದೆ ಗೊಲ್ಲಾಳಪ್ಪಗೌಡ ಮಾಲಿಪಾಟೀಲ ಕೋಳಕೂರ ಗ್ರಾಮ ಲೆಖಪಾಲಕ  ಸಾ : ಕುಕನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಲಾಗಿದೆ,