POLICE BHAVAN KALABURAGI

POLICE BHAVAN KALABURAGI

01 October 2014

Gulbarga District Reported Crimes

ಕೊಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 29/09/2014 ರಂದು 11:00 ಎ.ಎಮ್ ಕ್ಕೆ ನಮ್ಮ ಅಣ್ಣ ಸುರೇಶ ಈತನು ಕೊಡದೂರ ಗ್ರಾಮದ ಮರೆಪ್ಪನ ಸಂಗಡ ಇದಿದ್ದೇನೆ ಅಂತಾ ತಿಳಿಸಿದ್ದು ಸಾಯಂಕಾಲ ಆದರೂ ಮನೆಗೆ ಬರದೆ ಇದುದ್ದರಿಂದ ಅವನಿಗೆ ಫೋನ್ ಮಾಡಿದಾಗ ಪೋನ್ ರಿಂಗ್ ಆಗಿ ಸ್ವಿಚ್ಛ ಆಫ್ ಆಗಿದ್ದು ಅವರ ಸಂಗಡ ಇರಬಹುದು ಅಂತಾ ತಿಳಿದು ಸುಮ್ಮನಿದ್ದು, ದಿನಾಂಕ: 30/09/2014 ರಂದು 12:30 ಪಿ.ಎಮ್ ಸುಮಾರಿಗೆ ವಿಶ್ವವಿದ್ಯಾಲಯ ಪೊಲೀಸನವರು ನನ್ನ ಅಣ್ಣನ ಮೊಬೈಲ್ ಪೋನ್ ದಿಂದ ಪೋನ್ ಮಾಡಿ ಈ ಮೊಬೈಲಗೆ  ವ್ಯಕ್ತಿ ನಿಮಗೆ ಏನಾಗಬೇಕು ಅಂತಾ ಹೇಳಿದಾಗ ಈ ಮೊಬೈಲ್ ನಮ್ಮ ಅಣ್ಣನದು ಇದೆ ಅಂತಾ ತಿಳಿಸಿದ್ದು ಅವರು ಗುಲಬರ್ಗಾ ಸೇಡಂ ರಾಜ್ಯ ಹೆದ್ದಾರಿಯ ಶ್ರೀನಿವಾಸ ಸರಡಗಿ ಕ್ರಾಸ ಹತ್ತಿರ ಇರುವ ಏರಪೋರ್ಟ ಹತ್ತಿರ ರಸ್ತೆಯ ಪಕ್ಕದ ತಗ್ಗಿನಲ್ಲಿ ಯಾರೋ ಆಯುಧ ಬಳಸಿ ಕುತ್ತಿಗೆಗೆ ಹೊಡೆದು, ಮತ್ತು ಕಲ್ಲಿನಿಂದ ತಲೆಗೆ ಜಜ್ಜಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಕೂಡಲೆ ಬರಬೇಕು ಅಂತಾ ತಿಳಿಸಿದ ಪ್ರಯುಕ್ತ ನಾವು ಬಂದು ನೋಡಲಾಗಿ ಮೇಲಿಂತೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು ಇರುತ್ತದೆ.  ಈಗ 4-5 ತಿಂಗಳ ಹಿಂದೆ ನಮ್ಮ ಗ್ರಾಮದ ಸಾಯಬಣ್ಣ ಕೋಟ್ನೂರ ಇವಳ ಮಗಳಾದ ರೇಶ್ಮಾ ಹಾಗೂ ಗ್ರಾಮದ ರಾಜಪ್ಪ ತಂದೆ ಚಂದ್ರಪ್ಪ ಇವರ ಮಗನಾದ ಗುಂಡಪ್ಪ ಈತನು ರೇಷ್ಮಾ ಇವಳನ್ನು ಓಡಿಸಿಕೊಂಡು ಹೋಗಿದ್ದು ಇದಕ್ಕೆ ನಮ್ಮ ಅಣ್ಣನ ಮೇಲೆ ಸಂಶಯ ಪಟ್ಟು ಈ ಮೇಲಿನವರು ಕಾಳಗಿ ಗ್ರಾಮದ ಸಿದ್ದು ಮತ್ತು ಬಸ್ಸು ಇತರರು ಬಂದು ನಮ್ಮ ಅಣ್ಣನೊಂದಿಗೆ ಜಗಳ ತೆಗೆದು ಅವರು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಕಾಳಗಿ ಪೊಲೀಸ ಠಾಣೆಯಲ್ಲಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತೇವೆ ಅಂತಾ ನಮ್ಮ ಮೇಲೆ ಕೇಸು ದಾಖಲಿಸಿದ್ದು ದಿನಾಂಕ: 28/09/2014 ರಂದು ಬೆಳಿಗ್ಗೆ 0800 ಗಂಟೆಗೆ ಮರೆಪ್ಪ ಕೊಡದೂರ ಈತನ ಸಂಗಡ ಹೋಗಿದ್ದು ಮತ್ತು 1) ಸಾಯಿಬಣ್ಣ ತಂದೆ ಮರೆಪ್ಪ ಕೊಟ್ನೂರ್, 2) ಜಯಪ್ಪ ತಂದೆ ಸಾಬಣ್ಣ, 3) ಮಡೆಪ್ಪ ತಂದೆ ಸಾಬಣ್ಣ, 4) ನಾಗಪ್ಪ ತಂದೆ ಪೀರಪ್ಪ, 5) ಲಕ್ಷ್ಮಿಕಾಂತ ತಂದೆ ಬಸಣ್ಣ, 6) ಮನವರ ತಂದೆ ಬಸಣ್ಣ, 7) ಜಗಪ್ಪ ತಂದೆ ಬಸಣ್ಣ, 8) ಸಂತೋಷ ತಂದೆ ದ್ಯಾವಣ್ಣ ಸಾ|| ಎಲ್ಲರೂ ಮಂಗಲಗಿ ಗ್ರಾಮ ತಾ|| ಚಿತ್ತಾಪುರ, ಇವರುಗಳ ಮೇಲೆ ಸಂಶಯ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಕಲ್ಲಪ್ಪಾ ತಂದೆ ಶರಣಪ್ಪಾ ಪಟೇದ ಸಾ:ನಿಂಬಾಳ ಇವರ ಸೊದರತ್ತೆ ಮಗನಾದ ನಾಗಪ್ಪ ತಂದೆ ಬಸಣ್ಣಾ ಪಟೇದ ಸಾ;ನಿಂಬಾಳ ಇತನಿಗೆ ಆತನ ಸಂಸಾರದ ಅಡಚಣೆಗಾಗಿ ರೂ.200/- ಕೈಗಡ ತಗೆದುಕೊಂಡಿದ್ದು ಇತ್ತು. ಆತ ಕೆಲಸಕ್ಕೆ ಹೋಗಿ ಬಂದ ಪಗಾರದಲ್ಲಿ ಬಂದ ಹಣ ಕೊಡುವದಾಗಿ ಹೇಳಿದ್ದು ದಿನಾಂಕ:30/09/2014 ರಂದು 07:30 ಪಿ.ಎಂ.ಸುಮಾರಿಗೆ ದುಂಡಪ್ಪಾ ಕೊಳ್ಳೆದ ಮತ್ತು ಖಾಜಪ್ಪಾ ತಂದೆ ತುಕಾರಾಮ ಕೊಳ್ಳೆದ ಇವರ ಮನೆಯ ಹತ್ತಿರ ರಸ್ತೆಯ ಲೈಟಿನ ಬೇಳಕಿನಲ್ಲಿ ಹಾದು ಹೋಗುತ್ತಿದ್ದಾಗ ನಾಗಪ್ಪನ ಪಗಾರ ಆದ ಬಗ್ಗೆ ನನ್ನಗೇನು ಕೇಳುತಿ ನಿನ್ನ ಹೆಂಡರ ಹಡ ಅಂತಾ ಅನ್ನುತ್ತಿದ್ದಾಗ ಅವನ ತಾಯಿ ಕಾಶಿಬಾಯಿ ಗಂಡ ಶಂಕ್ರೇಪ್ಪಾ ಹೊಳಿಕೆರಿ ಇವಳು ಬಂದು ನನ್ನ ಮಕ್ಕಳ ತೆಕ್ಕೆಗೆ ಬಿದ್ದರೆ ನಿನಗೆ ಬೇವಿನ ಪಳ್ಯಾದಲ್ಲಿ ಖಲಾಸ ಮಾಡಿ ಕಳುಹಿಸುತ್ತೆವೆ. ಅಂದಾಗ ಖಾಜಪ್ಪನ ಕೈಯಲ್ಲಿದ್ದ ರಾಡಿನಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ, ಲಕ್ಷ್ಮಣನ ಕೈಯಲ್ಲಿದ ಬಡಿಗೆಯಿಂದ ಅವನ ಬಲಗೈಗೆ ಹೊಡೆದು ರಕ್ತಗಾಯ ಪಡಿಸಿದ , ಬಾಬುನ ಕೈಯಲ್ಲಿದ ಕಲ್ಲಿನಿಂದ ಅವನ ಎಡಗೈಗೆ ಹೊಡೆದು ರಕ್ತಗಾಯ ಪಡಿಸಿದ ಹಾಗೂ ಆಗ ಕಾಶಿಬಾಯಿ ಇವಳು ಅಲ್ಲೆ ಬಿದ್ದ ಕಲ್ಲಿನಿಂದ ಆತನ ಬಲ ಪಕ್ಕೆಯ ಮೇಲೆ ಹೊಡೆದು ಒಳಪೆಟ್ಟು ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀಮತಿ ರಾಜಶ್ರೀ ಗಂಡ ಶಿವಪ್ಪ ನಾಟಿಕಾರ ಸಾ : ಆಂದೋಲ ಗ್ರಾಮ ತಾ : ಜೇವರ್ಗಿ  ರವರು ದಿನಾಂಕ: 27.09.2014 ರಂದು ಮುಂಜಾನೆ ೦6.00 ಗಂಟೆಯ ಸುಮಾರಿಗೆ ತನ್ನ ಮನೆಯ ಮುಂದೆ ಕಸ ಹೋಡೆಯುತ್ತಿದ್ದಾಗ ಕರ್ಣಪ್ಪ ತಂದೆ ಮಲ್ಲಪ್ಪ ನಾಟಿಕಾರ ಫಿರ್ಯಾದಿದಾರಳಿಗೆ ನೀನು ಮತ್ತು ನಿನ್ನ ಮಕ್ಕಳು ನಮ್ಮ ಮನೆಯ ಮೇಲೆ ಟಾಯರ್‌ ಬಿಸಾಕಿದ್ದಿರಿ ನಿಮಗೆ ಭಹಳ ಸೊಕ್ಕುಬಂದಿದೆ ನಿಮಗೆ ಮೋದಲೆ 2-3 ಸಲ ಹೊಡೆದಿದ್ದಿನಿ ನೀವು ಎನು ಮಾಡಿಲ್ಲ ಇವತ್ತು ನಿನಗೆ ಕೊಲೆ ಮಾಡಿ ಬಿಡುತ್ತೆನೆ ಅಂತ ಫಿರ್ಯಾದಿದಾರಳ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಲುಪ್ರಯತ್ನಿಸಿದ್ದು ಅಲ್ಲದೆ ತನ್ನ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗುಪ್ತ ಗಾಯ ಪಡಿಸಿ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ವಮಲಾಬಾಯಿ ಗಂಡ ಶಿವಪ್ಪ ಅವರಳ್ಳಿ ಸಾಃ ಭಾಗ್ಯನಗರ ಸೇಡಂ ರಸ್ತೆ ಗುಲಬರ್ಗಾ,  ಇವರು ಮಧ್ಯಾನ 3.30 ಪಿಎಮ್ ಕ್ಕೆ ತನ್ನ ಮನೆಯ ಬಾಗಿಲ ಚಿಲಕ ಹಾಕಿ ಬೀಗ ಹಾಕದೆ ಓಣಿಯ  ಕಲಶೇಟ್ಟಿ  ಮನೆಗೆ ಹೋಗಿ ಅವರೊಂದಿಗೆ ಮಾತಾಡುತ್ತಾ ಅವರ ಮನೆಯ ಕಟ್ಟೆಯ ಮೇಲೆ ಕುಳಿತಿದ್ದು ನಂತರ ಮರಳಿ ಸಾಯಂಕಾಲ 4.30  ಗಂಟೆಗೆ ನಮ್ಮಮನೆಗೆ ಬಂದು ಬಾಗಿಲು ತೆಗೆದು ಅಡುಗೆ  ಮನೆಯಲ್ಲಿ ಹೋಗಿನೋಡಲು ಅಲ್ಮಾರಾ ಬಾಗಿಲ ತೆರೆದಿತ್ತು ನಾನು ಗಾಬರಿಯಾಗಿ ಅಲ್ಮಾರಾ ಚೆಕ್ ಮಾಡಲು ಲಾಕರನಲ್ಲಿ ಇಟ್ಟದ್ದ ಬಂಗಾರದ ಆಭರಣಗಳು ಅಂದಾಜ ಕಿಮ್ಮತ್ತು  2,80,000/- ರೂ ಕಿಮ್ಮತ್ತಿ ಆಭರಣಗಳನ್ನು ಯಾರೋ ಕಳ್ಳರು ಕಳು ಮಾಡಿಕೊಂಡು ಹೋಗಿದ್ದಾರೆ ನಮ್ಮ ಮನೆಯಲ್ಲಿ ಒಂದು ತಿಂಗಳಿಂದ ಆಂದ್ರ ಪ್ರದೇಶದ  ಶ್ರೀಮತಿ ಕಲ್ಯಾಣಿ ಮತ್ತು ಅವಳ ಗಂಡ ಶ್ರೀನಿವಾಸ  ಎಂಬುವವರು ಬಾಡಿಗೆಯಿಂದ ಇದಿದ್ದಾರೆ ನಾನು ಮಧ್ಯಾನ 3.30 ಗಂಟೆಗೆ  ಮನೆ ಬಿಟ್ಟು ಹೊರಗೆ ಹೋಗುವಾಗ ಬಾಡಿಗೆದಾರಳಾದ  ಶ್ರೀಮತಿ  ಕಲ್ಯಾಣಿ ತನ್ನ  ಮನೆಯಲ್ಲಿ ಇದ್ದಳು ಬಾಗಿಲು ಮುಚ್ಚಿದ್ದಿತ್ತು ನಾನು  ಮನೆಗೆ ಹಿಂತಿರುಗಿ ಸಾಯಂಕಾಲ  4.30  ಗಂಟೆಗೆ ಬಂದಾಗ  ಸದರಿ ಕಲ್ಯಾಣಿ  ಮನೆ  ಹೊರಗಡೆ ಬಟ್ಟೆ ಒಗೆಯುತ್ತಿದ್ದಳು  ನಾನು ಅವಳಿಗೆ  ವಿಚಾರಿಸಲು  ನನ್ನ ಮನೆಯಲ್ಲಿ ನಾನು ಮಲಗಿಕೊಂಡಿದ್ದೆ  ನನಗೆ ಏನು ಗೋತ್ತಿಲ್ಲ ಎಂದಳು, ನನಗೆ ನಮ್ಮ ಬಾಡಿಗೆದಾರಳದ ಶ್ರೀಮತಿ ಕಲ್ಯಾಣಿ  ಮೇಲೆ ಸಂಶೆಯವಿದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ದಿನಾಂಕ 22-7-2014 ರಂದು ಗಾಯಾಳು ಶ್ರೀಮತಿ ದೇವಮ್ಮ ಇವಳು ಮಾತಾಡುವ ಸ್ಥೀತಿಯಲ್ಲಿ ಇರದಿದರಿಂದ ಅವಳ ಮಗನಾದ ಮಿಲನಕುಮಾರ ಇವನ ಹೇಳಿಕೆ ಪಡೆದುಕೊಂಡಿದ್ದು ದಿನಾಂಕ 21-7-2014 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಾನು ನಮ್ಮ ಗ್ರಾಮದ ದರ್ಗಾದ ಕಟ್ಟೆಯ ಮೇಲೆ ಕುಳಿತುಕೊಂಡಿದ್ದೆನು. ನನ್ನ ತಾಯಿ ದೇವಮ್ಮ ಇವಳು ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಹೊಲಕ್ಕೆ ತೊಟನಳ್ಳಿ ಗ್ರಾಮದ ಕಡೆಗೆ ಇರುವ ಹೊಲಕ್ಕೆ ಹೊರಟಳು. ತೊಟನಳ್ಳಿಗೆ ಹೋಗುವ ರೋಡಿನ ಹತ್ತಿರ ಬಿ.ಆರ.ಪಾಟೀಲ ಇವರ ಮನೆಯಿಂದ ಸ್ವಲ್ಪ ದೂರದಲ್ಲಿ ನಮ್ಮ ತಾಯಿ ಹೊರಟಿದ್ದಳು ಅದೇ ಸಮಯಕ್ಕೆ ತೊಟನಳ್ಳಿ ಗ್ರಾಮದ ಕಡೆಯಿಂದ ಒಂದು ಮೋಟಾರ ಸೈಕಲ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದನು. ಆಗ ನಮ್ಮ ತಾಯಿ ದೇವಮ್ಮ ಗಂಡ ಸಾಯಿಬಣ್ಣ ಸಂಗಾವಿ ಇವಳು ರೋಡಿನಲ್ಲಿ ಪಕ್ಕದಲ್ಲಿ ಹೊಲಕ್ಕೆ ಹೋಗುವಾಗ ಮೋಟಾರ ಸೈಕಲ ಚಾಲಕನು ಅತಿವೇಗದಿಂದ ಬಂದವನೇ ನಮ್ಮ ತಾಯಿಗೆ ಡಿಕ್ಕಿ ಪಡಿಸಿದನು. ಆಗ ನಮ್ಮ ತಾಯಿ ರೋಡಿನ ಮೇಲೆ ಬಿದ್ದು ಚೀರಾಡುತ್ತಿದ್ದಳು ಅದನ್ನು ನೋಡಿ ನಾನು ಓಡಿ ಹೋಗಿ ನೋಡಲಾಗಿ ನನ್ನ ತಾಯಿಗೆ ತಲೆಗೆ ಭಾರಿಗಾಯ ಹಾಗು ಎಡಕಾಲಿಗೆ ಪೆಟ್ಟಾಗಿ ಚೀರಾಡುತ್ತಿದ್ದಳು. ನಂತರ ಡಿಕ್ಕಿಪಡಿಸಿದವನನ್ನು ನೋಡಲಾಗಿ ನಮ್ಮ ಗ್ರಾಮದ ರವೀಂದ್ರ ತಂದೆ ಚನ್ನಮಲ್ಲಪ್ಪ ಜೋಗಾರ ಈತನು ತನ್ನ ಮೋಟಾರ ಸೈಕಲ ಸಮೇತ ಬಿದ್ದಿದ್ದನು. ಆತನಿಗೆ ಯಾವುದೇ ಗಾಯ ವಗೈರೆ ಆಗಿರಲಿಲ್ಲ. ಆಗ ಮೋಟಾರ ಸೈಕಲ ನಂಬರ ನೋಡಲಾಗಿ KA 32-ED-3571 ಹೀರೊ ಸ್ಪ್ಲೆಂಡರ ಇತ್ತು. ನಂತರ ನಮ್ಮ ತಂದೆ ಸಾಯಿಬಣ್ಣ ಹಾಗು ಅಣ್ಣನ ಹೆಂಡತಿಯಾದ ಶರಣಮ್ಮ ಎಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನಮ್ಮ ತಾಯಿಗೆ ಹಾಕಿಕೊಂಡು ಮಳಖೇಡ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಪಿ.ಜಿ.ಶಾಹಾ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದೇವು. ನಂತರ ಅವರು ಚಿರಾಯು ಆಸ್ಪತ್ರೆಗೆ ಕಳಿಸಿದ್ದರಿಂದ ಇಲ್ಲಿ ತಂದು ಸೇರಿಕೆ ಮಾಡಿದ್ದು ಈ ಬಗ್ಗೆ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು      ಇಂದು ದಿನಾಂಕ 30-9-2014 ರಂದು 10 ಎ.ಎಂ.ಕ್ಕೆ ಸದರಿ ಪ್ರಕರಣದ ಫಿರ್ಯಾದಿ ಮಿಲನಕುಮಾರ ಈತನು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದ್ದು ಸಾರಾಂಶವೇನೆಂದರೆ ತನ್ನ ತಾಯಿ ದೇವಮ್ಮ ಇವಳಿಗೆ ಉಪಚಾರ ಪಡೆದುಕೊಂಡು ಸಂಗಾವಿ(ಎಂ) ಗ್ರಾಮಕ್ಕೆ ತಂದಿದ್ದು ದಿನಾಂಕ 14-8-2014 ರಂದು ತನ್ನ ತಾಯಿ ದೇವಮ್ಮ ಮೃತಪಟ್ಟಿದ್ದು ತಾವುಗಳು ತಿಳಿಯದೇ ಶವಸಂಸ್ಕಾರ ಮಾಡಿದ್ದು ನನ್ನ ತಾಯಿಯು ಮೋಟಾರ ಸೈಕಲ ಅಪಘಾತವಾದ ನೋವಿನ ಬಾಧೆಯಿಂದಲೇ ಸತ್ತಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.