POLICE BHAVAN KALABURAGI

POLICE BHAVAN KALABURAGI

18 December 2011

Gulbarga Dist Reported Crimes

ಹಲ್ಲೆ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀಮತಿ.ಗೀತಾ ಗಂಡ ದಿರಾಜು ಟಾಕ್ ಸಾ ಮೇತಾರ ಗಲ್ಲಿ ಗಾಜೀಪುರ ಗುಲಬರ್ಗಾ ರವರು ನಾನು ಮುಂಜಾನೆ ಮನೆಯಲ್ಲಿದ್ದಾಗ ವಿಕಾಸ ಟಾಕ ಇತನು ನಮ್ಮ ಮನೆಗೆ ಬಂದು ಅವಾಚ್ಯವಾಗಿ ಬೈದು ವಿನಾಕಾರಣ ನನ್ನೊಂದಿಗೆ ಜಗಳಕ್ಕೆ ಬಿದ್ದು ನನ್ನ ಹೊಡೆ ಬಡೆ ಅವಮಾನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಯತ್ನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :
ಶ್ರೀಮತಿ ಸಪ್ನಾ ಗಂಡ ಶಿವರಾಜ ಪಾಟೀಲ ಮತ್ತು ಪುಷ್ಪಾ ಗಂಡ ಚಂದ್ರಶೇಖರ ಪಾಟೀಲ ಸರ್ವಜ್ಞ ಕಾಲೇಜ ರವರು ನಾನು ಮತ್ತು ನಮ್ಮ ಅತ್ತೆ ಹಾಗು ನೇಗಣಿ ಎಲ್ಲರೂ ದೈನಂದಿನ ರೀತಿಯಲ್ಲಿ ಕಾಲೇಜ ಕಟ್ಟಡದಲ್ಲಿ ಪಾಠ ಮಾಡುತ್ತಿರುವಾಗ ಶ್ರೀ ಚನ್ನಾರೆಡ್ಡಿ ಮುನಿಯಪ್ಪ ಪಾಟೀಲ, ಗೀತಾ ಚೆನ್ನಾರೆಡ್ಡಿ ಪಾಟೀಲ, ಲಿಂಗಾರೆಡ್ಡಿ ಪಾಟೀಲ, ಕರುಣೇಶ ಬಿ. ಹಿರೇಮಠ, ಹಾಗು ಇತರರು ಸೇರಿಕೊಂಡು ನಮ್ಮ ಚೆಂಬರದಲ್ಲಿ ಬಂದು ಬಡಿಗೆ ಹಾಗು ಚಾಕು ತೊರಿಸಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ಈ ಮೇಲ್ಕಂಡ ಜನರು ಶ್ರೀಮತಿ ಶಾಂತಾದೇವಿ ತೇಜರಾಜ ಪಾಟೀಲ ಹಾಗು ಸಪ್ನಾ ಶಿವರಾಜ ಪಾಟೀಲ, ಪುಷ್ಪಾ ಚಂದ್ರಶೇಖರ ಪಾಟೀಲ, ಈ ಮೂವರ ಮೇಲೆ ರಕ್ತ ಬರುವ ಹಾಗೇ ಹೊಡೆದು ನಿಮ್ಮ ಜೀವ ತೆಗೆಯುತ್ತೆನೆಂದು ಜೀವದ ಬೆದರಿಕೆ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ಗೀತಾ ಚನ್ನಾರೆಡ್ಡಿ ಪಾಟೀಲ ಮತ್ತು ಚೆನ್ನಾರೆಡ್ಡಿ ಇವರಿಬ್ಬರೂ ಸಪ್ನಾ ಶಿವರಾಜ ಪಾಟೀಲ ಇವಳಿಗೆ 6 ತಿಂಗಳಿಂದ 5 ಲಕ್ಷ ರೂ ಹಾಗು ಬಂಗಾರ ತವರು ಮನೆಯಿಂದ ತೆಗೆದುಕೊಂಡು ಬಾ ಎಂದು ತೊಂದರೆ ಕೊಡುತ್ತಿದ್ದಾರೆ. ಹಣ ತರದೇ ಇದ್ದಾಗ ನನಗೆ ಹೊಡೆದು ಕಾಲೇಜನಿಂದ ಹೊರಗಡೆ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂತಾ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 138/2011 ಕಲಂ. 324,307,354,506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:
ದೇವಲಗಾಣಗಾಪುರ ಠಾಣೆ:
ದಿನಾಂಕ 18-12-2011 ರಂದು ಮದ್ಯಾಹ್ನ ಠಾಣೆಯಲ್ಲಿದ್ದಾಗ ಗೊಬ್ಬೂರ[ಬಿ], ಬೈರಾಮಡಗಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜನರು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ಮಂಜುನಾಥ ಎಸ್. ಕುಸುಗಲ್ ಪಿಎಸ್ಐ ಮತ್ತು ಠಾಣೆಯ
ಸಿಬ್ಬಂದಿಯವರೊಂದಿಗೆ ಜೂಜಾಟ ನಡೆದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಮುಕ್ತೇಶ ತಂದೆ ನಾಗಣ್ಣ ಬಿರಾದಾರ ಅರವಿಂದ ತಂದೆ ರಾಮು ವಡ್ಡರ, ನಾಗೇಂದ್ರ ತಂದೆ ಗುರುಪ್ಪ ಪಡಸಾವಳಗಿ, ಶಿವಾನಂದ ತಂದೆ ಸಿದ್ದಣ್ಣ ಪಡಶೆಟ್ಟಿ, ರಾಜು ತಂದೆ ಶ್ರೀಮಂತ ಪಡಶೆಟ್ಟಿ ಸಾ ಎಲ್ಲರು ಗೊಬ್ಬುರ (ಬಿ) ಗ್ರಾಮ ಅಂತಾ ತಿಳಿಸಿದರು ಜೂಜಾಟದ ಸ್ಥಳದಿಂದ ಇಸ್ಪೇಟ ಎಲೆಗಳು ಮತ್ತು ನಗದು ಹಣ 15763-00 ರೂ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂಬರ:128/2011 ಕಲಂ.87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ತಾಮ್ರದ ವೈರ್ ಕಳ್ಳತನ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ಎಲ್. ಶ್ರೀನಿವಾಸರಾವ ಮಾನ್ಯೆಂಜರ್ ಪಿ& ಎ ಜೇಪಿ ಸಿಮೆಂಟ ಶಹಾಬಾದ ರವರು ಶಹಾಬಾದದಲ್ಲಿರುವ ಜೆಪಿ.ಸಿಮೇಂಟ ಕಂಪನಿಯ ಕಾಲೋನಿಯಲ್ಲಿ ದಿನಾಂಕ: 11/12/2011 & 15/12/2011 ರ ರಾತ್ರಿ ವೇಳೆಯಲ್ಲಿ ಕರೆಂಟಿಗೆ ಜೋಡಿಸಿದ ತಾಮ್ರದ ವೈರ್ ಅ.ಕಿ. 22,092=00 ಬೆಲೆ ಬಾಳುವದನ್ನು ಯಾರೋ ಕಳ್ಳರು ಕತ್ತರಿಸಿಕೊಂಡು ಹೋಗಿರುತ್ತಾರೆ ಸದರಿ ತಾಮ್ರದ ವೈರ್ ರಾಜೇಶ & ಪ್ರೇಮಕುಮಾರ ರವರು ಕಳ್ಳತನ ಮಾಡಿರಬಹುದು ಎಂದು ಅಂತಾ ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 197/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಸುಳ್ಳು ಸಾಕ್ಷಿ ನೀಡಿದ ಬಗ್ಗೆ :
ಸ್ಟೇಷನ ಬಜಾರ ಪೊಲೀಸ ಠಾಣೆ:
ಗುನ್ನೆ ನಂ 58/07 ಸಿಸಿ ನಂ 84/08 ನೇದ್ದರಲ್ಲಿ ಈ ಆಪಾದಿತನು ಮಾನ್ಯ 2 ನೇ ಹೆಚ್ಚುವರಿ ನ್ಯಾಯಾದೀಶರು ಗುಲಬರ್ಗಾರವರ ಕೊರ್ಟಿನಲ್ಲಿ ದಿನಾಂಕ 17/12/2011 ರಂದು ಮದ್ಯಾಹ್ನ 3-30 ಗಂಟೆಗೆ ನ್ಯಾಯಾಲಯದಲ್ಲಿ ನಾನೆ ಮಹ್ಮದ ತಾಹೇರಲಿ ತಂದೆ ಹಕಿಮ ಮಹ್ಮದ ಸಾಬ ಅಂತಾ ಸುಳ್ಳು ನಟನೆ ಮಾಡಿ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ನೀಡಿದ್ದು ಅಲ್ಲದೆ ದಾವೆಯಲ್ಲಿ ಇನ್ನೊಬ್ಬನಂತೆ ನಟಿಸಿ ಸುಳ್ಳು ಸಾಕ್ಷಿಯನ್ನು ನೀಡಿದ್ದರಿಂದ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಲ್ಲಪ್ಪ ಸಿ.ಎಂ.ಒ 2 ನೇ ಅಪರ ಹೆಚ್ಚುವರಿ ಜೆ.ಎಂ.ಎಫ್.ಸಿ ಕೊರ್ಟ ಗುಲಬರ್ಗಾರವರು ಮಹಿಳಾ ಪೊಲೀಸ ಠಾಣೆಯ ಮ.ಎಚ್.ಸಿ 557 ಮ.ಪಿಸಿ 179 ರವರೊಂದಿಗೆ ಬಷೀರ ಪಟೇಲ ಇವರನ್ನು ಸ್ಟೆಷನ ಬಜಾರ ಪೊಲೀಸ ಠಾಣೆಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಟ್ಟಿದ್ದರ ಮೇರೆಗೆ ಠಾಣೆ ಗುನ್ನೆ ನಂ 214/11 ಕಲಂ 193, 419 205 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ
: ಶ್ರೀಮತಿ ಶರಣಮ್ಮ ಗಂಡ ಶರಣಪ್ಪ ಅಂಬರಖೇಡ ಸಾ: ಬಳಬಟ್ಟಿ ತಾ: ಜೇವರ್ಗಿರವರು ನಾನು ಹಾಗೂ ಇತರರು ಕೂಡಿ ನಾಗೇಂದ್ರಪ್ಪ ಮಾಲಿಗೌಡ ಹೋಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ 3 ಗಂಟೆಗೆ ಊಟ ಮಾಡಲು ಕೆರೆಯ ಹತ್ತಿರ ಕುಳಿತಾಗ ಗುರಪ್ಪ ತಂದೆ ಬಸಪ್ಪ ಮುಕ್ಕಾಣ್ಣಿ ಜಾ: ಲಿಂಗಾಯತ್ ಇತನು ಕೆರೆಗೆ ನೀರು ಕುರಿ ಕುಡಿಯಲು ಬಂದು ಮುಖ ತೋಳೆದುಕೊಂಡು ನೀರಲ್ಲಿ ಉಗುಳುತ್ತಿದ್ದಾಗ ನಾನು ನೀರಲ್ಲಿ ಉಗಳ ಬೇಡಿರಿ ಅಂತಾ ಅಂದಿದಕ್ಕೆ ಜಾತಿ ಎತ್ತಿ ಬೈದು ಕಲ್ಲಿನಿಂದ ತಲೆಯ ಹಿಂಬಾಗದಲ್ಲಿ ಹೊಡೆದು ಕೈ ಮತ್ತು ಸೀರೆ ಜಗ್ಗಾಡಿ ಅವಮಾನ ಮಾಡಿ ಕಲ್ಲಿನಿಂದ ಹಣೆಗೆ ಹೋಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 93/2011 ಕಲಂ 324,354,307,504 ಐಪಿಸಿ ಮತ್ತು 3 (1), 3(1) ಎಸ್.ಸಿ/ಎಸ್.ಟಿ ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಯಡ್ರಾಮಿ ಠಾಣೆ:
ಶ್ರೀ ಬಸಪ್ಪ ತಂದೆ ಈರಪ್ಪ ಕಲಕೇರಿ ಉ: ಶಿಕ್ಷಕರು ಸಾ: ಯಡ್ರಾಮಿ ಹಾ:ವ: ಅಲ್ಲಾಪೂರ ತಾ: ಚಿಂಚೋಳಿ ರವರು ನಾನು ದಿನಾಂಕ 11-12-11 ರಂದು ಮೋಟಾರ ಸೈಕಲ್ ನಂ ಕೆಎ-32-ಯು-1124 ಅ.ಕಿ 30,000=00 ನೇದ್ದನ್ನು ಮನೆಯ ಮುಂದುಗಡೆ ಇಟ್ಟು ಮಲಗಿಕೊಂಡಿದ್ದಾಗ ಅದೆ ರಾತ್ರಿ 11 ರಿಂದ 12 ರ ಮಧ್ಯದ ಅವಧಿಯಲ್ಲಿ ಯಾರೂ ಕಳ್ಳರು ನನ್ನ ಮೋಟಾರ ಸೈಕಲ್ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 92/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.