POLICE BHAVAN KALABURAGI

POLICE BHAVAN KALABURAGI

30 August 2012

GULBARGA DISTRICT

ಗುಲಬರ್ಗಾ ಜಿಲ್ಲಾ ಪೊಲೀಸರ್ ಯಶಸ್ವಿ ಕಾರ್ಯಚರಣೆ ,
ಕುಖ್ಯಾತ ದರೊಡೆಕೊರರು ಹಾಗು ಸರಗಳ್ಳರ ಬಂಧನ, ಸುಮಾರು 17 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳು, ವಾಹನ ಹಾಗೂ ಮಾರಕ ಆಯುಧಗಳು  ವಗೈರೆ ವಶ.
        ಖಚಿತ ಮಾಹಿತಿ ಆಧಾರದ ಅನ್ವಯ ಈ ದಿವಸ ಬೆಳಿಗಿನ ಜಾವ ಸಣ್ಣೂರ ಕ್ರಾಸದಿಂದ ಶಹಾಬಾದಗೆ ಹೋಗುವ ರೋಡಿನ ಬಳಿ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು 7 ಜನ ರಸ್ತೆ ದರೋಡೆಕೊರರನ್ನು ಹಾಗೂ ಸರಗಳ್ಳರನ್ನು ಬಂದಿಸಿ, ಸದರಿಯವರಿಂದ ರಸ್ತೆ ದರೋಡೆ ಮತ್ತು ಸರಗಳ್ಳತನ ಕಾಲಕ್ಕೆ ದೊಚಲ್ಪಟ್ಟ ಬಂಗಾರದ ಆಭರಣಗಳು, ನಗದು ಹಣ, ಮಹಿಂದ್ರಾ ಜೈಲೊ ಟರ್ಬೋ ಕಾರ, ಮಾರಕ ಆಯುಧಗಳು ಸರಗಳ್ಳತನ ಮಾಡಲು ಬಳಸಿದ ಮೋಟಾರ ಸೈಕಲಗಳು ವಗೈರೆ ಸುಮಾರು 17  ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದು ತನಿಖೆ ಮುಂದುವರೆದಿರುತ್ತದೆ. ಕಳೆದ 2-3 ತಿಂಗಳಿಂದ  ಗುಲಬರ್ಗಾ ನಗರದಲ್ಲಿ ನಡೆಯುತ್ತಿದ್ದ  ಸರಗಳ್ಳತನ ಪ್ರಕರಣಗಳು ಮತ್ತು  ಕೆರೂರ ತಾಂಡಾದ ಹತ್ತಿರ ಗುಲಬರ್ಗಾ ಉದ್ಯಮಿ ಗಗನ ಗಿಲ್ಡಾ ಮತ್ತು ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ದರೋಡೆ ಮಾಡಿದ್ದ ಪ್ರಕರಣದ ಪತ್ತೆ ಕುರಿತು ಮಾನ್ಯ ಮಹಮ್ಮದ ವಜೀರ ಅಹ್ಮದ ಐಜಿಪಿ ಸಾಹೇಬರು ಈಶಾನ್ಯ ವಲಯ ಗುಲಬರ್ಗಾ,  ಮಾನ್ಯ ಪ್ರವೀಣ ಮಧುಕರ ಪವಾರ  ಎಸ್.ಪಿ ಗುಲಬರ್ಗಾ, ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾರವರು  ಶ್ರೀ.ಭೂಷನ ಬೊರಸೆ  ಎ.ಎಸ್.ಪಿ ಎ ಉಪ ವಿಭಾಗ ಗುಲಬರ್ಗಾ ರವರ ನೇತ್ರತ್ವದಲ್ಲಿ ಶ್ರೀ. ಶರಣಬಸವೇಶ್ವರ ಪಿಐ ಬ್ರಹ್ಮಪೂರ, ಶ್ರೀ. ಜೆ.ಹೆಚ್ ಇನಾಮದಾರ ಪಿಐ ಸ್ಟೇಷನ ಬಜಾರ, ಶ್ರೀ. ಟಿ.ಹೆಚ್ ಕರಿಕಲ್ ಪಿಐ ಅಶೋಕ ನಗರ ಪೊಲೀಸ ಠಾಣೆ  ಹಾಗು ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ಭೀಮಾ ನಾಯ್ಕ, ಗುರುನಾಥ, ಮತ್ತು ಇನ್ನೊಂದು ತಂಡದಲ್ಲಿ  ಶ್ರೀ. ಬಿ.ಪಿ ಚಂದ್ರಶೇಖರ ಸಿಪಿಐ ಎಂ.ಬಿ ನಗರ  ರವರ ನೇತ್ರತ್ವದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ  ಪಂಡಿತ ಸಗರ ಪಿ.ಎಸ್.ಐ  ವಿಶ್ವವಿದ್ಯಾಲಯ ಪೊಲೀಸ ಠಾಣೆ, ಸಂಜಿವಕುಮಾರ  ಪಿಎಸ್ಐ ಎಂ.ಬಿ ನಗರ ಪೊಲೀಸ ಠಾಣೆ,  ರಾಜಶೇಖರ ಹಳಿಗೊಧಿ ಪಿ.ಎಸ್.ಐ ಸೇಡಂ, ಬಸವರಾಜ ತೇಲಿ ಪಿ.ಎಸ್.ಐ ರಾಘವೆಂದ್ರ ನಗರ, ಆನಂದರಾವ ಪಿ.ಎಸ್.ಐ ಗ್ರಾಮೀಣ ಪೊಲೀಸ ಠಾಣೆ ಮತ್ತು ಸಿಬ್ಬಂಧಿಯವರಾದ ಶಿವಪುತ್ರ ಹೆಚ್.ಸಿ, ಪ್ರಭಾಕರ ಪಿಸಿ, ವೇದರತ್ನಂ ಪಿಸಿ,ಚಂದ್ರಕಾಂತ ಪಿಸಿ, ಅಶೋಕ ಪಿಸಿ, ಅಶೋಕ ಪಿಸಿ,ಅಣ್ಣಪ್ಪ ಪಿಸಿ ಅರ್ಜುನ ಎಪಿಸಿ   ಹೀಗೆ 2 ತಂಡಗಳನ್ನಾಗಿ ರಚನೆ ಮಾಡಿದ್ದು, ಸತತವಾಗಿ ಎರಡು ತಂಡದ ಅಧಿಕಾರಿ ಮತ್ತು ಸಿಬ್ಬಂಧಿಯವರು  ಕಳೆದ 15 ದಿವಸಗಳಿಂದ ಸರಗಳ್ಳತನ ಮತ್ತು ದರೊಡೆ ಪ್ರಕರಣವನ್ನು ಭೇಧಿಸಲು ಪ್ರಯತ್ನಿಸಿದ್ದು,  ಇಂದು ದಿನಾಂಕ:30-08-2012 ರಂದು ರಾತ್ರಿ 1-30 ಗಂಟೆ ಸುಮಾರಿಗೆ ಖಚಿತ ಭಾತ್ಮಿ ಮೇರೆಗೆ ಗುಲಬರ್ಗಾ ಹೊರವಲಯದ ಸಣ್ಣೂರ ಕ್ರಾಸ ಹತ್ತಿರ ಮಿಂಚಿನ ದಾಳಿ ನಡೆಯಿಸಿ ದರೊಡೆ ಮಾಡಲು ಮಾರಕ ಆಯುಧಗಳೊಂದಿಗೆ ಸಿದ್ದತೆಯಲ್ಲಿ ಹೊಂಚು ಹಾಕುತ್ತಿದ್ದ 7 ಜನ ಕುಖ್ಯಾತ ದರೊಡೆ, ಸುಲಿಗೆಕೊರರಾದ ಧನರಾಜ @ ಚಿನ್ಯಾ ತಂದೆ ಮೈಲಾರಿ ಶೇಳ್ಳಗಿ ಸಾ : ಓಂ ನಗರ ಗುಲಬರ್ಗಾ, ರಾಜಾ @ ಬಕ್ಕಾರಾಜಾ ತಂದೆ ಶರಣಪ್ಪ ತಾಡತೆಗನೂರ ಸಾ : ಕೆ.ಹೆಚ್.ಬಿ ಕಾಲೋನಿ ಗಣೇಶ ನಗರ ಹಳೆ ಜೇವರ್ಗಿ, ರಸ್ತೆ ಗುಲಬರ್ಗಾ,ಸೋಮು @ ಸೋಮಶೇಖರ ತಂದೆ ಅಜರ್ುನ ದೊಡ್ಡಮನಿ ಸಾ : ಕೊಟನೂರ (ಡಿ) ಗುಲಬರ್ಗಾ, ಅರವಿಂದ ತಂದೆ ಶಾಂತಪ್ಪ ಕೂಡಿ  ಸಾ : ಆಶ್ರಯ ಕಾಲೋನಿ ಆರ್.ಎನ್ ಶಾಲೆ ಹತ್ತಿರ ರಿಂಗ ರೋಡ ಗುಲಬರ್ಗಾ,ಬಸ್ಸು @ ಬಸವರಾಜ ತಂದೆ ನಾಗಯ್ಯ ಸೇಡಂ ಸಾ : ಕೆ.ಇ.ಬಿ ಕಾಲೋನಿ ಸೇಡಂ, ಹಣಮಂತ ತಂದೆ ರಾಮುಲು ಮೆಕಾನಿಕ್ ಸಾ : ದೊಡ್ಡ ಅಗಸಿ ಸೇಡಂ, ವಿಜಯ ತಂದೆ ರಾಮರಾವ ತರಗೆ  ಸಾ : ಕೆ.ಇ.ಬಿ ಕಾಲೋನಿ ಸೇಡಂ ರವರನ್ನು ದಾಳಿ ಮಾಡಿ ಹಿಡಿದು, ದರೊಡೆ ಮಾಡಲು ಉಪಯೋಗಿಸಿದ ಮಹಿಂದ್ರ ಝೈಲೊ ಕಾರ ನಂ. ಕೆಎ 32 ಎಮ್-8643, ನಾಲ್ಕು ತಲವಾರಗಳು,ಎರಡು ಚಾಕುಗಳು, ಕಪ್ಪು ಬಟ್ಟೆಯ ಮುಖವಾಡಗಳು , ಕಬ್ಬಿಣದ ರಾಡ, ಸೈಕಲ ಚೈನ,ಬಡಿಗೆ ಮತ್ತು ಹಗ್ಗ ಖಾರ ಪುಡಿ ಪಾಕೇಟಗಳು, ನಗದು ಹಣ ಮಹಾರಾಷ್ಟ್ರ & ಆಂದ್ರ ಪ್ರದೇಶ ರಾಜ್ಯದ ಪಾಸಿಂಗ ಇರುವ ಮೂರು ಜೊತೆ ನಂಬರ ಪ್ಲೇಟಿನ ರೇಡಿಯಂ ಸ್ಟಿಕರಗಳು ಹೀಗೆ ಬೆಲೆಬಾಳುವ ವಾಹನ ಮತ್ತು ವಸ್ತುಗಳನ್ನು ಜಪ್ತಿ ಮಾಡಿಕೊಂಡು ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಕಾರ್ಯಚರಣೆಯಲ್ಲಿ ಪ್ರೊಬೆಷನರ ಪಿ.ಎಸ್.ಐ ರವರಾದ  ಆನಂದ ಡೊಣಿ, ಶ್ರೀದೇವಿ ಬಿರಾದಾರ, ಮಂಜುಳಾ, ಮಲ್ಲಿಕಾರ್ಜುನ, ಸಾಗರ, ಉಮೇಶ ಬಾಬು, ಲಕ್ಕಪ್ಪ ಅಗ್ನಿ, ಗಣೇಶ, ಹುಸೇನ ಭಾಷಾ, ವಸಂತಕುಮಾರ, ನಾಗನಗೌಡ, ಮುಗ್ಗಳ್ಳಿ ಶಿವಕುಮಾರ ಮತ್ತು  ಪ್ರದೀಪ ವಗೈರರು ಭಾಗಿಯಾಗಿದ್ದರು.   ಸದರಿ ಆರೋಪಿತರು ತನಿಖೆ ಕಾಲಕ್ಕೆ ನೀಲೂರ ಗ್ರಾಮದ ಕೃಷ್ಣ ಇವರ ಕೊಲೆ ಮಾಡಲು ಸುಫಾರಿ ಪಡೆದ ಬಗ್ಗೆ ತಿಳಿಸಿರುತ್ತಾರೆ. ಹಾಗೂ ವಿಚಾರಣೆ ಕಾಲಕ್ಕೆ ಈ ಆರೋಪಿತರು ಸೇಡಂ ನಗರದ ಉದ್ಯಮಿ ಒಬ್ಬರನ್ನು ಅಪಹರಿಸಲು 10 ಲಕ್ಷ ರೂಪಾಯಿ ಸುಫಾರಿ ಬಗ್ಗೆ ವ್ಯವಹಾರ ಕುದರಿಸಿ ಈ ಬಗ್ಗೆ ಮುಂಗಡ ಹಣ ಪಡೆದು ಅಪಹರಿಸಲು ಪ್ರಯತ್ನಿಸಿದ ಬಗ್ಗೆ ತನಿಖೆ ಕಾಲಕ್ಕೆ ತಿಳಿದು ಬಂದಿರುತ್ತದೆ.  ಸೆರೆ ಸಿಕ್ಕ ದರೊಡೆಕೊರರನ್ನು ತಿವ್ರ ವಿಚಾರಣೆಗೆ ಒಳಪಡಿಸಿದಾಗ, ಗುಲಬರ್ಗಾ ನಗರದ ಉದ್ಯಮಿ ಗಗನ ಗಿಲ್ಡಾ ರವರ ಕುಟುಂಬದ ಸದಸ್ಯರು ಕಾರಿನಲ್ಲಿ ಹೈದ್ರಾಬಾದದಿಂದ ಪ್ರಯಾಣ ಮಾಡುತ್ತಿರುವ ವೇಳೆ ಕೆರೂರ ಬಳಿ ತಡೆದು ಮಾರಕ ಆಯುಧಗಳಿಂದ ಹೆದರಿಸಿ ಬಂಗಾರದ ಆಭರಣಗಳು ದೊಚಿದ್ದು ಅಲ್ಲದೆ ದರೊಡೆ ಕಾಲಕ್ಕೆ ದರೊಡೆಗೆ ಬಳಸಿದ ವಾಹನದ ಸಂಖ್ಯೆಯನ್ನು ಬದಲಾಯಿಸಿದ ಬಗ್ಗೆ ತಿಳಿಸಿರುತ್ತಾರೆ. ಅಲ್ಲದೆ ಸದರಿ ಆರೊಪಿತರು ತಮ್ಮ ಉಳಿದ ಸಹಚರರಾದ ಜೈಭೀಮ, ಉಮೇಶ, ಶ್ರೀಕಾಂತ @ ಗುಡ್ಯಾ ರವರೊಂದಿಗೆ ಸೇರಿ ಗುಲಬರ್ಗಾ ನಗರದ ಜಯ ನಗರ, ಸ್ವಸ್ತಿಕ ನಗರ, ರಾಜಾಪುರ ಹೌಸಿಂಗ್ ಬೊರ್ಡ ಕಾಲೋನಿ, ಗೊದುತಾಯಿ ಕಾಲೋನಿ , ಕೊರ್ಟ ರೋಡ್ , ಎಮ್.ಆರ್.ಎಮ್.ಸಿ ಕಾಲೇಜು, ವಸಂತ ನಗರ ವಗೈರೆ ಕಡೆಮೊಟಾರ ಸೈಕಲ ಬಳಸಿ ಸರಗಳ್ಳತನ ಮಾಡಿದ ಬಗ್ಗೆ ತನಿಖೆ ಕಾಲಕ್ಕೆ ತಿಳಿಸಿದ್ದು ಈ ಬಗ್ಗೆ ಗುಲಬರ್ಗಾ ನಗರದ ಬ್ರಹ್ಮಪುರ,  ಸ್ಟೆಷನ ಬಜಾರ, ಅಶೋಕ ನಗರ, ಎಮ್.ಬಿ ನಗರ ಪೊಲೀಸ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಆರೊಪಿತರ ತಾಬಾದಿಂದ 8.5 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಬರಣಗಳು , ಸರಗಳ್ಳತನ ಮಾಡಲು ಬಳಸಿದ 2 ಮೋಟಾರ ಸೈಕಲಗಳು, ದರೊಡೆ ಮಾಡಲು ಬಳಸಿದ ಮಹೇಂದ್ರ ಝೈಲೊ ವಾಹನ ಹೀಗೆ ಒಟ್ಟು 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಮತ್ತು ಮಾರಕ ಆಯುಧಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ತಂಡದವರು 8 ಸರಗಳ್ಳತನ , ಮೂರು ದರೋಡೆ, ಒಂದು ಅಪಹರಣದ ಯತ್ನ ಹಾಗೂ ಇನ್ನೊಂದು ಕೊಲೆ ಯತ್ನದ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ. ಗುಲಬರ್ಗಾ ನಗರದ ಇನ್ನೂ ಕೆಲವು ಸರಗಳ್ಳತನ ಮಾಡುವವರ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಸರಗಳ್ಳರ ಪತ್ತೆಗೆ ಜಾಲ ಬೀಸಲಾಗಿದೆ. ಈ ವೃತ್ತಿ ಪರ ಅಪರಾದಿಗಳ ತಂಡವನ್ನು ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿ ಜನರ ಕಾರ್ಯವನ್ನು ಮಾನ್ಯ ಎಸ್.ಪಿ ಸಾಹೇಬರು ಶ್ಲಾಘಿಸಿರುತ್ತಾರೆ. 

GULBARGA DISTRICT REPORTED CRIMES


ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ದಿನಾಂಕ: 29/8/2012 ರಂದು  ಸಾಯಂಕಾಲ 5:45 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡದಲ್ಲಿ ನಮ್ಮನ್ನು ಸಮವಸ್ತ್ರದಲ್ಲಿ ನೋಡಿ ಮುಖ ಮರೆಮಾಚಿಕೊಂಡು ಬೇಕರಿ ಪಕ್ಕದಲ್ಲಿ ಓಡಿ ಹೋಗುತ್ತಿರುವಾಗ ಅವನ ಮೇಲೆ ಸಂಶಯ ಬಂದು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಸರಿಯಾದ ಉತ್ತರ ನೀಡಿರುವದಿಲ್ಲ. ಇವನನ್ನು ಹೀಗೆ ಬಿಟ್ಟಲ್ಲಿ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸ್ವತ್ತಿನ ಗುನ್ನೆ ಮಾಡುವ ಸಾದ್ಯತೆ ಇರುವದರಿಂದ ಠಾಣೆ ಗುನ್ನೆ ನಂ: 276/2012 ಕಲಂ 109 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಅಬ್ದುಲ ಮಾಹಿಸ ತಂದೆ ಅಬ್ದುಲ ಲದೀಫ ಬೆಲೀಫ  ರವರು ನಾನು ಮತ್ತು ಮೃತ  ಅಬ್ದುಲ ರಹಿಸ್   ಇಬ್ಬರು ಅಣ್ಣ ತಮ್ಮಿಂದಿರು ಇದ್ದು, ಇಬ್ಬರು ಮದುವೆಯಾಗಿ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದು, ದಿನಾಂಕ  28-08-2012 ಮಧ್ಯಾಹ್ನ 3.45 ಗಂಟೆ ಸುಮಾರಿಗೆ ನನ್ನ ಮೃತ ಅಣ್ಣ  ಅಬ್ದುಲ ರಹಿಸ ಈತನ  ಹೆಂಡತಿ ಆದ ಆರಿಫಾ ಇವಳು ನನ್ನ ಮೊಬಾಯಿಲ್ ಗೆ ಫೋನ್ ತಿಳಿಸಿದ್ದೇನೆಂದರೆ, ನನ್ನ ಗಂಡ ಅಬ್ದುಲ ರಹಿಸ ಈತನು ನಾವು ಇದ್ದ ಬಾಡಿಗೆ ಮನೆಯಲ್ಲಿ ಖಬ್ಬಿಣದ ಪೈಪಿಗೆ ಬಾಗಿಲು  ಪರದಾದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲಾಗಿ ನನ್ನ ಅಣ್ಣನು ಮೃತಪಟ್ಟಿದ್ದು, ಅತ್ತಿಗೆ ಹಾಗೂ ಸದರಿ ಓಣಿಯ ಮೀರ ಅಲಿ ತಂದೆ ಸೈಯದ್  ಹುಸೇನ್  ಮತ್ತು ಮಮತಾಜ ಬೇಗಂ ಗಂಡ ಅಬ್ದುಲ ಹನೀಫ ಇವರೆಲ್ಲರೂ ಸೇರಿ ಕೆಳಗೆ ಇಳಿಸಿ ಅಂಗಾತಾಗಿ ಹಾಕಿರುತ್ತಾರೆ. ನನ್ನ ಮೃತ ಅಣ್ಣ ಅಬ್ದುಲ ರಹಿಸ್ ಆತನ ಬಲಕುತ್ತಿಗೆಯ ಮೇಲೆ ಸ್ವಲ್ಪ ಗಾಯ ಕಂಡು ಬಂದಿರುತ್ತದೆ. ಕಾರಣ ತನ್ನ ಅಣ್ಣನ ಸಾವಿನಲ್ಲಿ ಸಂಶಯ ಇದ್ದು ಮುಂದಿನ ಕ್ರಮ ಜರುಗಿಸಿರಿ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 12/12 ಕಲಂ 174 (ಸಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. .