POLICE BHAVAN KALABURAGI

POLICE BHAVAN KALABURAGI

06 January 2016

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪುನೀತ ತಂದೆ ನಾಗಶಟ್ಟಿ ಪಾಟೀಲ ಸಾ:10-2/145 ಸಾ:ಮಹಿಳಾ ಮಂಡಲ ಹತ್ತಿರ ಸಂಗಮೇಶ್ವರ ಕಾಲೋನಿ ಕಲಬುರಗಿ ರವರು ದಿನಾಂಕ:22/12/2015 ರಂದು ಮುಂಜಾನೆ 7.00 ಗಂಟೆಗೆ ತನ್ನ ರಾಯಲ ಎನ್ ಫೀಲ್ಡ ಮೋಟಾರ ಸೈಕಲ್ ನಂ ಕೆಎ-32 ಇಎಫ್-1036 ನೇದ್ದನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಕೆಲಸದ ನಿಮಿತ್ಯ ಲಿಂಗಸೂರಕ್ಕೆ ಹೋಗಿ ಸಾಯಂಕಾಲ 8.00 ಪಿ.ಎಂಕ್ಕೆ ನಮ್ಮ ತಾಯಿಯವರು ನನಗೆ ಪೋನಿನ ಮೂಲಕ ತಿಳಿಸಿದ್ದೆನೆಂದರೆ ನೀನು ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲ ಕಾಣುತ್ತಾ ಇಲ್ಲಾ 7.00 ಪಿ.ಎಂ ಸುಮಾರಿಗೆ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ ಅಂತಾ ತಿಳಿಸಿದರು ನಾನು ಎಲ್ಲಾ ಕಡೆ ಹುಡುಕಿದರು ನನ್ನ ಮೋಟಾರ ಸೈಕಲ ಪತ್ತೆ ಯಾಗಿರುವದಿಲ್ಲಾ ಕಾರಣ ನನ್ನ ROYAL ENFIELD MOTOR CYCLE NO.KA32EF1036, CHASSIS NO.ME3U3S5C0EA380486, ENGINE.NO.U3S5C0EA380486 ಅ.ಕಿ.60,000/-ರೂ ನೇದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಸುಧಾಕರ ತಂದೆ ನಿಂಬಾಜಿ ಮುಗಳೆ ಸಾ:ಶುಕ್ರವಾಡಿ ತಾ;ಆಳಂದ ರವರು ನಮ್ಮೂರ ಸೀಮಾಂತರದಲ್ಲಿ ಹೊಲ ಸರ್ವೆ ನಂ. 1080 ಇದ್ದು 04 ಎಕರೆ 07 ಗುಂಟೆ ಜಮೀನು ಇದ್ದು ಅದು ನನ್ನ ಪಾಲಿಗೆ ಬಂದಿರುತ್ತದೆ. ನಮ್ಮ ಹೊಲಕ್ಕೆ ಹೊಂದಿ ನಮ್ಮ ಎರಡನೇ ಅಣ್ಣ-ತಮ್ಮಕಿಯಾದ ಗಜಾನಂದ  ತಂದೆ ಶ್ರೀಮಂತ ಮುಗಳೆ ಇವರ ಹೊಲವಿದ್ದು  ನಮ್ಮಿಬ್ಬರ ಹೊಲದ ಮಧ್ಯದಲ್ಲಿ ಬಂದಾರಿಯಲ್ಲಿ ಜಾಲಿ ಮರ ಇದ್ದು ನಮ್ಮ ಹೊಲದಲ್ಲಿನ ಕೇಲವು ಮರಗಳು ಮಾರಾಟ ಮಾಡಿದರಿಂದ ಸದರಿ ಜಾಲಿ ಮರ ನಿನ್ನೆ ಕಡಿಸಿದ್ದು ಇದೆ. ಆದ್ದರಿಂದ ಗಜಾನಂದನು ತನಗೆ ನಮ್ಮ ಹೊಲದಲ್ಲಿ ಹೊಲ ಬರುತ್ತದೆ ಬಂದಾರಿಯ ಜಾಲಿ ಮರ ನಮ್ಮದಿದೆ ಅಂತಾ ನನ್ನೊಂದಿಗೆ ಜಗಳ ತಗೆದು ಆಗಾಗ ತಕರಾರು ಮಾಡಿ ನನ್ನ ಮೇಲೆ ವೈಮನಸ್ಸು ಸಾಧಿಸುತ್ತಾ ಬಂದಿರುತ್ತಾನೆ. ದಿನಾಂಕ: 05/01/2016 ರಂದು ಬೇಳಿಗ್ಗೆ 09:00 ಗಂಟೆಗೆ ನನ್ನ ಹೆಂಡತಿ ರಾಜಶ್ರೀ ನನ್ನ ಮಗಳಾದ ಅಶ್ವಿನಿ ಇವರು ಸದರಿ ಹೊಲಕ್ಕೆ ಹೋದರು ತಮ್ಮ ಹೊಲದಲ್ಲಿದ ಗಜಾನಂದ ಇತನು ರಂಡೀರೆ ಬಂದಾರಿಯಲ್ಲಿನ ಜಾಲಿ ಗಿಡ ನಮ್ಮದಿದೆ ನೀವು ಹೇಗೆ ಕಡಿಸಿದ್ದಿರಿ ಅಂತಾ ಬೈದು ಅವರಿಗೆ ಹೊಡೆಯುತ್ತಿದ್ದ ಮಾಹಿತಿ ತಿಳಿದು ನಾನು ನಮ್ಮ ಹೊಲಕ್ಕೆ ಹೋದಾಗ ನನಗೆ ನೋಡಿ ಅಲ್ಲಿದ್ದ ಗಜಾನಂದನು ಓಡಿ ಹೋದನು ಅವನ ಅಣ್ಣ-ತಮ್ಮಂದಿರಾದ ಜಯರಾಜ ಮತ್ತು ಉಲ್ಲಾಸ ಇವರುಗಳು ಇದ್ದು ನನಗೆ ಅವರು ಬೋಸಡಿ ಮಗನೇ ಹೊಲ ಅಳೆಯಬೇಕಾಗಿದೆ ನಿನ್ನ ಹೊಲದಲ್ಲಿ ನಮ್ಮ ಹೊಲ ಬರುತ್ತದೆ ನೀನು ಹೇಗೆ ಮರ ಕಡಿಸಿದಿ ನಿನಗೆ ಇವತ್ತು ಒಂದು ಗತಿ ಕಾಣಿಸಿ ಬೀಡಬೇಕು ಅಂತಾ ನಮ್ಮ ತಂದೆ ಶ್ರೀಮಂತ ನಮ್ಮ ಅಣ್ಣ ಸುಭಾಸ ಇವರು ನಮ್ಮಗೆ ಹೇಳಿ ಕಳುಹಿಸಿದ್ದಾರೆ ಎಂದು ಬೈದು ಉಲ್ಲಾಸನು ನನಗೆ ಒತ್ತಿ ಹಿಡಿದಾಗ ಜಯರಾಜನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದನು ಭಾರಿ ರಕ್ತಗಾಯಗೊಳಿಸಿದಕ್ಕೆ ನಾನು ನೆಲಕ್ಕೆ ಕುಸಿದು ಬಿದ್ದಾಗ ಉಲ್ಲಾಸನು ಕಟ್ಟಿಗೆಯಿಂದ ನನ್ನ ಬಲ ಭುಜಕ್ಕೆ ಜೋರಾಗಿ ಹೊಡೆದಿದಕ್ಕೆ ನನ್ನ ಕೈ ಮೇಲೆಳುತ್ತಿಲ್ಲಾ ಅದನ್ನು ನೋಡಿ ಅಲ್ಲಿಯೇ ಇದ್ದ ನನ್ನ ಹೆಂಡತಿ ರಾಜಶ್ರೀ ನನ್ನ ಮಗಳು ಅಶ್ವೀನಿ ನನ್ನ ತಮ್ಮ ಸಂಜು ಹಾಗೂ ನಮ್ಮೂರ ಹವಣಪ್ಪಾ ರಂಜೇರಿ ಇವರು ಬಿಡಿಸುವಾಗ ನನ್ನ ತಮ್ಮನಿಗೆ ಉಲ್ಲಾಸನು ಕಟ್ಟಿಗೆಯಿಂದ ಬೇನ್ನಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ನಂತರ ಮಾಹಿತಿ ತಿಳಿದು ಊರಿಂದ ಜನರು ಬರುವದನ್ನು ನೋಡಿ ಸದರಿಯವರು ಅಲ್ಲಿಂದ ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ನಿಂಗಣಗೌಡ ಪಾಟೀಲ ಸಾ|| ಮಾಗಣಗೇರಾ ರವರು  ಈಗ ಸುಮಾರು ವರ್ಷಗಳಿಂದ ನಮ್ಮೊಂದಿಗೆ ದೇವಪ್ಪ ಹಾಗು ಇತರರ ಮದ್ಯ ತಂಟೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಆದರೂ ಊರಲ್ಲಿ ಯಾಕೆ ಜಗಳ ಅಂತಾ ನಾವು ಸುಮ್ಮನೆ ಇದ್ದೆವು. ನಿನ್ನೆ ದಿನಾಂಕ 03-01-2016 ರಂದು ರಾತ್ರಿ ಚೆನ್ನವೃಷಬೇಂದ್ರರ ರಥೋತ್ಸವದ ಸಮಯದಲ್ಲಿ ನಮ್ಮೊಂದಿಗೆ ದೇವಪ್ಪ ಹಾಗು ಇತರರು ನಮಗೆ ಈ ರಂಡಿ ಮಕ್ಕಳು ಎಲ್ಲಿದ್ದರೂ ಮುಂದೆ ಬರುತ್ತಾರೆ, ಈ ಬೋಸಡಿ ಮಕ್ಕಳಿಗೆ ನೋಡಿಯೇ ಬಿಡಬೇಕು ಅಂತಾ ಅನ್ನುತ್ತಿದ್ದಾಗ ಜಾತ್ರೆಯಲ್ಲಿಯೇ ಜಗಳವಾಗುತ್ತದೆ. ಅಂತಾ ನಾವೇಲ್ಲರೂ ಅವರು ಬೈದು ಜಗಳ ತೆಗೆದರು ನಾವು ಸುಮ್ಮನ್ನಿದ್ದೆವು.         ದಿನಾಂಕ 04-01-2015 ರಂದು ಬೇಳಿಗ್ಗೆ ನಾನು ಹಣಮಂತ್ರಾಯ ತಂದೆ ಅವಣ್ಣಗೌಡ ಬಿರಾದರ ಹೀಗೆ ಇಬ್ಬರು ಕೂಡಿಕೊಂಡು 8-30 ಗಂಟೆಗೆ ನಡೆದುಕೊಂಡು ನಮ್ಮೂರಿನ ಅಗಸಿಯ ಹತ್ತಿರ ದಾವಲಸಾಬನ ಮನೆಯ ಮುಂದಿನ ರಸ್ತೆಯ ಮೇಲೆ ಇದ್ದಾಗ ನಮಗೆ ನಿನ್ನೆ ಆದ ಬಾಯಿ ಮಾತಿನ ಜಗಳದ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ 1) ದೇವಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ 2) ಪೆದ್ದಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ, 3) ಶರಣಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ 4) ಗೊಲ್ಲಾಳಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ 5) ಶಿವಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ 6) ಸಾಹೇಬಗೌಡ ತಂದೆ ಸಿದ್ರಾಮಪ್ಪ ತೆಳಗಿನಮನಿ 7) ಹಣಮಂತ ತಂದೆ ಸಾಹೇಬಗೌಡ ತೆಳಗಿನಮನಿ 8) ಮಲ್ಕಪ್ಪ ತಂದೆ ಬಸವಂತ್ರಾಯ ತೆಳಗಿನಮನಿ 9)ಸಿದ್ರಾಮಪ್ಪ ತಂದೆ ಬಸವಂತ್ರಾಯ ತೆಳಗಿನಮನಿ 10) ಸಿದ್ದಪ್ಪ ತಂದೆ ಬಸವಂತ್ರಾಯ ತೆಳಗಿನಮನಿ 11) ಶೇಖಪ್ಪ ತಂದೆ ಬಸವಂತ್ರಾಯ ತೆಳಗಿನಮನಿ 12) ಮಹಾಂತಪ್ಪ ತಂದೆ ಮಲ್ಕಣ್ಣ ತೆಳಗಿನಮನಿ 13) ಮಹಾಂತಪ್ಪ ತಂದೆ ಶ್ರೀಶೈಲಗೌಡ ಪೊಲೀಸ ಪಾಟೀಲ 14) ಗುರುಲಿಂಗಪ್ಪ ತಂದೆ ಶ್ರೀಶೈಲ ಪೊಲೀಸ ಪಾಟೀಲ 15) ಶಂಕರಗೌಡ ತಂದೆ ಗೊಲ್ಲಾಳಪ್ಪಗೌಡ ಚನ್ನಾಗೋಳ 16) ಅಶೋಕ ತಂದೆ ಜಟ್ಟೆಪ್ಪ ಮೇಲಿನಮನಿ 17) ನಾಗಪ್ಪ ತಂದೆ ಜಟ್ಟೆಪ್ಪ ಮೇಲಿನಮನಿ 18) ಶಾಂತಪ್ಪ ತಂದೆ ಜಟ್ಟೆಪ್ಪ ಮೇಲಿನಮನಿ 19) ದೇವಪ್ಪ ತಂದೆ ಜಟ್ಟೆಪ್ಪ ಮೇಲಿನಮನಿ 20) ರುದ್ರುಗೌಡ ತಂದೆ ಬಸವಂತ್ರಾಯ ಎಸ್.ಟಿ.ಡಿ 21)ಶಂಕ್ರೆಪ್ಪ ತಂದೆ ರುದ್ರಪ್ಪ ಮೇಲಿನಮನಿ 22) ಸಿದ್ದಪ್ಪ ತಂದೆ ರುದ್ರಪ್ಪ ಮೇಲಿನಮನಿ 23)ನಾನಾಗೌಡ ತಂದೆ ರುದ್ರಪ್ಪ ಮೇಲಿನಮನಿ 24)ಬಾಪುಗೌಡ ಮೇಲಿನಮನಿ  25)ಗೊಲ್ಲಾಳಪ್ಪ ತಂದೆ ಬಾಪುಗೌಡ ಮೇಲಿನಮನಿ 26) ನಿಂಗಪ್ಪ ತಂದೆ ಚಿಂತಪ್ಪ ಮೇಲಿನಮನಿ 27)ನಾನಪ್ಪ ತಂದೆ ರುದ್ರಪ್ಪ ಮಾಲಿ 28)ಶಾಂತಪ್ಪ ತಂದೆ ರುದ್ರಪ್ಪ ಮಾಲಿ 29) ಬಸವಂತಪ್ಪ ತಂದೆ ರುದ್ರಪ್ಪ ಮಾಲಿ 30) ಸಂಗಣ್ಣ ತಂದೆ ರುದ್ರಪ್ಪ ಮಾಲಿ 31) ದೌಲಬಿ ಗಂಡ ದೌಲಸಾಬ ಮುಲ್ಲಾ 32) ಸದ್ದಾಂ ತಂದೆ ದೌಲಸಾಬ ಮುಲ್ಲಾ 33)ಮಹಿಬೂಬ ತಂದೆ ದೌಲಸಾಬ ಮುಲ್ಲಾ 34)ರುದ್ರುಗೌಡ ಪೊಲೀಸ ಪಾಟೀಲ 35) ದೇವಪ್ಪ ತಂದೆ ಗೊಲ್ಲಾಳಪ್ಪ ಸಂದಿಮನಿ 36)ರೇವಣಸಿದ್ದಪ್ಪ ಕೋಳಿ 37) ಇಮಾಮಸಾಬ ತಂದೆ ದೌಲಸಾಬ ಮುಲ್ಲಾ 38) ರಾಯಪ್ಪ ನಾಯ್ಕೋಡಿ 39)ಸಿದ್ದಪ್ಪ ನಾಯ್ಕೋಡಿ  40)ಹಣಮಂತ ಕೋರವಾರ 41) ಸಾಯಬಣ್ಣ ತಂದೆ ಹಣಮಂತ ಕೋರವಾರ 42) ಪರಶುರಾಮ ತಂದೆ ಹಣಮಂತ ಕೋರವಾರ 43) ಅಶೋಕ ಕೋರವಾರ 44)ಶಾಂತಪ್ಪ ಕೋರವಾರ  45) ಸಂತೋಷ ಕೋರವಾರ 46) ಗೊಲ್ಲಾಳಪ್ಪ ಮೇಲಿನಮನಿ 47) ಹೆಗ್ಗೆರೆಪ್ಪ ತಂದೆ ಗೊಲ್ಲಾಳಪ್ಪ ಮೇಲಿನಮನಿ 48)ಮಲ್ಲಿನಾಥ ತಂದೆ ಸಿದ್ದಲಿಂಗಪ್ಪ ನಾಟೀಕಾರ 49) ರೇವಣಸಿದ್ದಪ್ಪ ತಂದೆ ಮಲ್ಲಪ್ಪ ಕೋಳಿ  50) ನಿಂಗಣ್ಣ ಡಂಬಳ  51) ಮಲ್ಲಪ್ಪ ಡಂಬಳ 52) ಮಲ್ಕಪ್ಪ ಗೊಳಸಂಗಿ  53) ಮಲ್ಲಪ್ಪ ಕೋಳಿ  54) ಸೂರಪ್ಪ ಮೇಲಿನಮನಿ 55) ಗುರಪ್ಪ ಕೋಳಿ  56) ಮಾಳಪ್ಪ ತಂದೆ ದೇವಪ್ಪ ಪೂಜಾರಿ (ಜಡಿ)  57) ರೇವಣಸಿದ್ದಪ್ಪ ತಂದೆ ಮಹಾದೇವಪ್ಪ ಮೇಲಿನಮನಿ 58) ಬಸವರಾಜ ಮೇಲಿನಮನಿ 59) ಮಹಾದೇವಪ್ಪ ಮೇಲಿನಮನಿ 60) ದೇವಪ್ಪ ತಂದೆ ಅಮೃಪ್ಪ ಗೊಳಸಂಗಿ 61) ಸುಭಾಸ ಕಣಗುಡ್ನಾಳ 62) ರುದ್ರುಗೌಡ ತಂದೆ ಭೀಮರಾಯ ಹದಗಲ್ 63) ದೌಲಪ್ಪ ತಂದೆ ಸಿದ್ರಾಮಪ್ಪ ತೆಳಗಿನಮನಿ 64) ಸಿದ್ದಪ್ಪ ತಂದೆ ದೌಲತರಾಯ ತೆಳಗಿನಮನಿ  65) ಸುಭಾಸ ಕುಂಬಾರ 66) ಶ್ರೀಶೈಲ ತಂದೆ ಕಾಶಿರಾಯ 67) ಬಸಯ್ಯ ತಂದೆ ಸಿದ್ರಾಮಯ್ಯ ಮೇಲಿನಮಠ  68) ಈಸಯ್ಯ ತಂದೆ ಸಿದ್ರಾಮಯ್ಯ ಮೇಲಿನಮಠ 69) ಮುದಕಪ್ಪ ತಂದೆ ಬಸಪ್ಪ ಪೂಜಾರಿ ಜೇರಟಗಿ 70) ಶ್ರೀಶೈಲ ತಂದೆ ಭೀಮರಾಯ ನಾಗಾವಿ 71)ಶಾಂತಪ್ಪ ತಂದೆ ಭೀಮರಾಯ ನಾಗಾವಿ  72) ರಾಜಶೇಖರ ತಂದೆ ಭೀಮರಾಯ ನಾಗಾವಿ 73)ಕೆಂಚಪ್ಪ ತಂದೆ ಮಾನಪ್ಪ ಪೂಜಾರಿ 74) ಸಂತೋಷ ಯಾಳವಾರ ಹಡಗಿನಾಳ 75) ಶಾಂತಪ್ಪ ತಂದೆ ಸಿದ್ದಪ್ಪ ಪೂಜಾರಿ ಹದಗಲ್  76) ಸಿದ್ದಪ್ಪ ತಂದೆ ನಿಂಗಪ್ಪ ಗೋಳಸಂಗಿ 77)ಬಸಪ್ಪ ತಂದೆ ಶಾಂತಪ್ಪ ಸೂರಗೊಂಡ 78) ಇಸ್ಮಾಯಿಲ ತಂದೆ ರಾಜಾಸಾಬ ನದಾಫ   79)ಲಕ್ಕಪ್ಪ ತಂದೆ ಬಲವಂತಪ್ಪ ಬಡಿಗೇರ  80) ಭಾಗಪ್ಪ ತಂದೆ ಲಕ್ಕಪ್ಪ ಬಡಿಗೇರ 81) ಶಂಕ್ರೆಪ್ಪ ತಂದೆ ಸಿದ್ದಪ್ಪ ಹದಗಲ್ 82) ದೇವಪ್ಪ ತಂದೆ ಬೃಹಮ್ಮಪ್ಪ ಜಡಗೆ ಹಿಗೇಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ರಾಡು, ಬಡಿಗೆ, ಕಲ್ಲುಗಳು ಹಿಡಿದುಕೊಂಡು ಬಂದವರೆ ಅವರೆಲ್ಲರೂ ಈ ನಿಂಗ್ಯಾನದು ಊರಲ್ಲಿ ಬಹಳಗ್ಯಾದ ಈ ರಂಡಿ ಮಗನಿಗೆ ಹೊಡೆದು ಖಲಾಸ ಮಾಡೊಣಾ ಅಂತಾ ಅಂದವರೆ ಅವರಲ್ಲಿ ಪೆದ್ದಪ್ಪ ಕೇಳಗಿಮನಿ ಇತನು ತನ್ನ ಕೈಯಲ್ಲಿದ್ದ ರಾಡಿನಿಂದ ತೆಲೆಯ ಮೇಲೆ ಹೋಡೆದು ಭಾರಿ ರಕ್ತಗಾಯ ಪಡಿಸಿದನು. ಗೊಲ್ಲಾಳಪ್ಪ ತೆಳಗಿನಮನಿ ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ತೆಲೆಯ ಹಿಂಬಾಗದಲ್ಲಿ ಹೋಡೆದು ಭಾರಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಜೇವರಗಿ ಠಾಣೆ : ನನ್ನ ಮಗಳಾದ ಅಯ್ಯಮ್ಮ ವಯಾ : 17 ವರ್ಷ ಇವಳು ತನಗಿದ್ದ ಹೊಟ್ಟೆ ನೋವು ತ್ರಾಸ ತಾಳಲಾರದೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 04.01.2016 ರಂದು ಸಾಯಂಕಾಲ 07.30 ಗಂಟೆಯಿಂದ ದಿನಾಂಕ 05.01.2016ರ ಮಧ್ಯಾಹ್ನ 01:30 ಗಂಟೆಯ ಮಧ್ಯದ ಅವಧಿಯಲ್ಲಿ ಸಿದ್ದಣ್ಣಗೌಡ ಹಳಿಮನಿ ಇವರ ಹೊಲದಲ್ಲಿನ ಬಾವಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿರುತ್ತಾಳೆ  ಅಂತಾ   ಶ್ರೀಮತಿ ಸಿದ್ದಮ್ಮ ಗಂಡ ಮಲ್ಲಣ್ಣ ಕುನ್ನೂರ ಸಾ : ಮೌನೇಶ ನಗರ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.