POLICE BHAVAN KALABURAGI

POLICE BHAVAN KALABURAGI

05 August 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ. 04/08/2016 ರಂದು ಮದ್ಯಾಹ್ನ ಫರಹತಾಬಾದ  ಪೊಲೀಸ್ ಠಾಣಾ ವ್ಯಾಪ್ತಿಯ  ಹೊನ್ನಕಿರಣಗಿ ಗ್ರಾಮದಲ್ಲಿ ಒಬ್ಬ ಮನುಷ್ಯ ಕಾಬಾ ಕಾಂಪ್ಲೆಕ್ಸ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ದೈವ ಲೀಲೆಯ ಮಟಕಾ  ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಮಾನ್ಯ ಎಸ್.ಎಸ್. ಹೂಲ್ಲೂರ ಡಿಎಸ್.ಪಿ ಸಾಹೇಬರು ಡಿ.ಸಿ.ಆರ್.ಬಿ ಘಟಕ ಕಲಬುರಗಿ ಇವರ ಮಾರ್ಗದರ್ಶ ನದಲ್ಲಿ ಶ್ರೀ ಕಪಿಲದೇವ ಪಿಐ ಡಿಸಿಬಿ ಘಟಕ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮೀ ಬಂದ ಸ್ಥಳವಾದ  ಹೊನ್ನಕಿರಣಗಿಗ್ರಾಮದ ಕಡೆಗೆ ಹೊರಟು  ಹೊನ್ನಕಿರಣಗಿ ಗ್ರಾಮ ತಲುಪಿದ ನಂತರ  ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಬಾತ್ಮೀ ಬಂದ ಸ್ಗಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಹೊನ್ನಕಿರಣಗಿ ಗ್ರಾಮದ ಕಾಬಾ ಕಾಂಪ್ಲಕ್ಸ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ  ಮನುಷ್ಯನು ಕುಳಿತು ಹೋಗಿ ಬರುವ ಜನರಿಗೆ 1 ರೂ.ಗೆ 80 ರೂ ಕೊಡುತ್ತೆನೆ ಅಂತಾ ಕೂಗುತ್ತಾ  ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಮನುಷ್ಯನನ್ನು ಹಿಡಿದಿದ್ದು ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಸದರಿ ವ್ಯಕ್ತಿಯನ್ನು ವಿಚಾರಿಸಿ ಚೆಕ್ಕ ಮಾಡಲಾಗಿ ಅವನು ತನ್ನ ಹೆಸರು ಸುಭಾಷ ತಂದೆ ಸಿದ್ದಪ್ಪ ಕೋಣಿನ ಸಾ:ಹೊನ್ನಕಿರಣಗಿ ಅಂತಾ ತಿಳಿಸಿದ್ದು, ಈತನಿಗೆ ನಾನು ಚೆಕ್ಕ ಮಾಡಿದಾಗ ಆತನ ಹತ್ತಿರ 1) ಮಟಕಾ ಅಂಕಿಯನ್ನು ಬರೆದುಕೊಂಡು ಸಂಗ್ರಹಿಸಿದ ನಗದು ಹಣ 4050/- ರೂ 2) ಒಂದು ಮಟಕಾ ಚೀಟಿ ಅ:ಕಿ:00=00 ರೂ, 3) ಒಂದು ಬಾಲ್‌ ಪೆನ್‌ ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಫರತಾಬಾದ ಠಾಣೆ : ದಿನಾಂಕ:04/08/2016 ರಂದು ಮದ್ಯಾಹ್ನ ಹೇರೂರ (ಬಿ) ಗ್ರಾಮದ ಲಕ್ಷ್ಮಿ ಗುಡಿಯ ಮುಂದಿನ ಸಾರ್ವಜನಿಕ ರಸ್ಥೆಯಲ್ಲಿ ಒಬ್ಬ ಮನುಷ್ಯನು ಕುಳಿತು ದೈವ ಲೀಲೆಯ ಮಟಕಾ ಜೂಜಾಟ ನಡೆಯಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಪರಸಪ್ಪ ಎಸ್‌ ವನಂಜಕರ್‌‌ ಪಿಎಸ್ಐ ಸಾಹೇಬರು ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೇರೂರ (ಬಿ) ಗ್ರಾಮದ ಮಸೀದಿ ಸಮೀಪ ಮರೆಯಲ್ಲಿ ಜೀಪ್ ನಿಲ್ಲಿಸಿ ನೋಡಲಾಗಿ ಲಕ್ಷ್ಮಿ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆಗೆ ಹೋಗಿ ಬರುವ ಜನರಿಗೆ 1 ರೂ ಗೆ 80 ರೂಪಾಯಿ ಗೆಲ್ಲಿರಿ ಭಾಗ್ಯಲಕ್ಷ್ಮಿ  ನಿಮ್ಮ ಮನೆಗೆ ಬರುತ್ತಿದ್ದಾಳೆ ಅಂತ ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಸದರಿ ವ್ಯಕ್ತಿಯನ್ನು ಹಿಡಿದು ಹೆಸರು ವಿಚಾರಿಸಲಾಗಿ ತನ್ನ ಹೆಸರು ವಿಶ್ವನಾಥ  ತಂದೆ ಹುಲೆಪ್ಪ ಕುಕ್ಕನೂರ ಸಾ: ಹೇರೂರ (ಬಿ) ಅಂತಾ ತಿಳಿಸಿದ್ದು, ಈತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1)ಒಂದು  ಅಂಕಿ ಸಂಖ್ಯೆ ಬರೆದ ಮಟಕಾ ನಂಬರ ಚೀಟಿ ಅ:ಕಿ:00=00 ರೂ, 2) ಒಂದು ಬಾಲ್‌ ಪೆನ್‌ ಅ:ಕಿ:00=00 ರೂ. 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 1100=00 ರೂಪಾಯಿಗಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಬಿನು ಪ್ರಸಾದ ತಂದೆ ಕಾಮತ ಪ್ರಸಾದ ಸಾ : ಮೈನಾಪೂರ ಜಿ :ಗಾಜಿಪೂ  ಉತ್ತರಪ್ರದೇಶ ಶಹಾಬಾದ ಕ್ರಾಸ್ ಪಿಟಿಸಿಎಲ್ ಕಂಪನಿ ಇವರು ಒಂದು ವರ್ಷದಿಂದ ಮೈನ್ಸ ವರ್ಕ ಅಂತಾ ಕೆಲಸ ಮಾಡುತ್ತಿದ್ದು  ಇದೇ ಕಂಪನಿ ಉದ್ಯೋಗಿಯಾದ ಪ್ರೇಮರಾಜ ತಂದೆ ಆನಂದರಾವ ದಗೋಂಡಿ ಸಾ : ರಾಂಪೂರಿ ತಾ : ನರಖೇಡ ಜಿ : ನಾಗಪೂರ ಮಹಾರಾಷ್ಟ್ರ ಇವನು  ಇಂದು ರವಿವಾರ ರಜೆ ಇರುದರಿಂದ ನಮ್ಮ ಸುಪ್ರವೈಜರ ನನಗೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಮೋಟಾರ ಸೈಕಲ ನಂ ಕೆಎ-32, ಓ- 124 ತೆಗೆದು 10 ಗಂಟೆಗೆ ಒಬ್ಬನೆ ಹೋಗಿದ್ದು ನಂತರ ನನಗೆ ಯಾರೋ ಒಬ್ಬರು ಫೋನ  ತಿಳಿಸಿದ್ದೆನೆಂದರೆ ನಿಮ್ಮ ಕಂಪನಿಯಲ್ಲಿ  ಕೆಲಸ ಮಾಡುತ್ತೀದ್ದ ಸೂಪರವೈಜರ  ಪ್ರೇಮರಾಜ  ಇತನು ಶಹಬಾದ ರೋಡ ಹತ್ತಿರ ತನ್ನ ಮೋಟಾರ ಸೈಕಲ ಮೇಲಿಂದ ಬಿದ್ದಿದ್ದು ನಂತರ ನಾನು  ಹೋಗಿ ನೋಡಲಾಗಿ ಅವನಿಗೆ  ತಲೆಗೆ ಭಾರಿ ರಕ್ತಗಾಯವಾಗಿದ್ದು ನಾನು  ಕೂಡಲೆ ಅವನಿಗೆ ಅಂಬುಲೈನ್ಸ್‌ 108 ದಲ್ಲಿ ಹಾಕಿ ವಾತ್ಸಲ್ಯ ಹಾಸ್ಪೀಟಲಗೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಶ್ರೀ ಪ್ರೇಮರಾಜ ತಂದೆ ಆನಂದರಾವ ದೊಂಗಡೆ ಇತನಿಗೆ ಹೆಚ್ಚಿನ ಚಿಕತ್ಸೆಗಾಗಿ ಆತನ ಮನೆಯವರು ನಾಗಪೂರಕ್ಕೆ ಕರೆದುಕೊಂಡು ಹೋಗಿ  ಸರ್ಕಾರಿ ಆಸ್ಪತ್ರೆ ನಾಗಪೂರದಲ್ಲಿ  ಸೇರಿಕೆ ಮಾಡಿರುತ್ತಾರೆ ಅಲ್ಲಿ ಸದರಿ ಗಾಯಾಳು ಚಿಕಿತ್ಸೆಯಲ್ಲಿ ಗುಣಮುಖನಾಗದೆ ದಿನಾಂಕ 23/07/2016  ರಂದು ಮದ್ಯಾನ್ಹ 04-00 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.