POLICE BHAVAN KALABURAGI

POLICE BHAVAN KALABURAGI

19 March 2016

Kalaburagi District Reported Crimes

 ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 16-03-2016 ರಂದು ರಾತ್ರಿ 10;00 ಗಂಟೆಯಿಂದ ದಿನಾಂಕ 17-03-2016 ರಂದು ಬೆಳಿಗ್ಗೆ 07;00 ಗಂಟೆ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಗಣಕಯಂತ್ರ ಕೋಣೆಯ ಕೊಂಡಿಯನ್ನು ಕಟ್ ಮಾಡಿ ಕೋಣೆಯಲ್ಲಿದ್ದ 16 ಟೂಬಲರ್ ಬ್ಯಾಟ್ರಿಗಳು ಅ;ಕಿ; 16,000/- ರೂ ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬ್ಯಾಟ್ರಿಗಳನ್ನು ಪತ್ತೆಮಾಡಿ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ಕೈಗೋಳ್ಳಬೇಕು ಅಂತಾ ಶ್ರೀ ಶಿವಶರಣ ಎಸ್. ಮಾಲಿ ಬಿರಾದಾರ ಉ: ಮುಖ್ಯ ಗುರುಗಳೂ ಸರಕಾರಿ ಪ್ರೌಢ ಶಾಲೆ ಯಲಗೋಡ ಸಾ: ಹರನಾಳ ತಾ:ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ರಾಧಾಬಾಯಿ ಗಂಡ ರಾಜು ಜವಳಿ ಸಾ:ವಡ್ಡರಗಲ್ಲಿ ಶಹಾಬಜಾರ ಕಲಬುರಗಿ ಇವರನ್ನು ಈಗ 15 ವರ್ಷಗಳ ಹಿಂದೆ ಜವಳಿ ಗ್ರಾಮದ ಹಣಮಂತರಾಯ ಇವರ ಮಗನಾದ ರಾಜು ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ ಮದುವೆಯಾ 2,3 ವರ್ಷ ನನ್ನ ಗಂಡ ನನಗೆ ಚೆನ್ನಾಗಿ ನೋಡಿಕೊಂಡಿರುತ್ತಾರೆ ಈಗ ನನಗೆ 3 ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿರುತ್ತಾನೆ. ನಾನು ಮತ್ತು ನನ್ನ ಗಂಡ ಹೊಟ್ಟೆಪಾಡಿಗಾಗಿ ಈಗ 13 ವರ್ಷಗಳಿಂದ ಕಲಬುರಗಿಯ ನನ್ನ ತವರು ಮನೆಯಾದ ಶಹಾಬಜಾರದಲ್ಲಿ ವಡ್ಡರಗಲ್ಲಿ ವಾಸವಾಗಿದ್ದೆನೆ ನನ್ನ ಗಂಡ ಕುಡಿಯುವ ಚಟದವನಿದ್ದು ತಾನು ದುಡಿದ ಹಣವೆನ್ನೆಲ್ಲಾ ಕುಡಿದು ಬಂದು ನನ್ನೊಂದಿಗೆ ವಿನಾಃಕಾರಣ ಜಗಳ ತೆಗೆದು ಹೊಡೆಯುವುದು ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುವುದು ಅಲ್ಲದೇ ನಾನು ದುಡಿದ ಬಂದು ಆಗಾಗ ನಿನಗೆ ಕೊಲೆ ಮಾಡುತ್ತೇನೆ ಅಂತಾ ಕಲ್ಲು ಹಾಕಲು ಪ್ರಯತ್ನಿಸುತ್ತಿದ್ದನು. ನನ್ನ ಗಂಡನಿಗೆ ನನ್ನ ತಾಯಿ ತಂದೆ ಬುದ್ದಿವಾದ ಹೇಳಿದರು ತನ್ನ ಚಟವನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ ., ದಿನಾಂಕ 18-03-2016 ರಂದು ಕೂಲಿಕೆಲಸಕ್ಕೆಂದು ನಮ್ಮ ಓಣಿಯ ಲಕ್ಷ್ಮಿ ಹೋಗಿ ಕೆಲಸ ಮುಗಿಸಿಕೊಂಡು ಸಾಯಾಂಕಾಲ 6-00 ಪಿ.ಎಂಕ್ಕೆ ನಾನು ಮತ್ತು ಲಕ್ಷ್ಮಿ ಕೂಡಿ ಶಿವಾಜಿ ಖಾನಾವಳಿ ಎದುರುಗಡೆ ಬರುತ್ತಿರುವಾಗ ನನ್ನ ಗಂಡ ರಾಜು ಅಲ್ಲಿಗೆ ಬಂದು ತನಗೆ ಹಣ ಕೋಡು ಅಂತಾ ಹೇಳಿದನು ನಾನು ಮನೆಯಲ್ಲಿ ಮಕ್ಕಳಿಗೆ ಊಟಕ್ಕೆ ಎನು ಇಲ್ಲಾ ರೇಷನ ತೆಗೆದುಕೊಂಡು ಹೋಗುತ್ತೇನೆ ಅಂತಾ ಹೇಳಿದ್ದಕ್ಕೆ ನೀನು ನನಗೆ ಹಣ ಕೋಡದೇ ಇದ್ದರೆ ರಂಡಿ ಇವತ್ತು ನಿನಗೆ ಖಲಾಸ ಮಾಡುತ್ತೇನೆ ಅಂತಾ ತನ್ನ ಹತ್ತಿರವಿದ್ದ ಚಾಕುವಿನಿಂದ ಬಲ ಎದೆಯ ಮೇಲ್ಬಾಗಕ್ಕೆ ಎಡ ಎದೆಯಕೆಳಗೆ ಎಡ ಸೊಂಟಿದ ಹತ್ತಿರ ಎಡಗೈ ರಟ್ಟಗೆ ಚುಚ್ಚಿದನು ನನ್ನ ದೇಹಕ್ಕೆ ಅಲ್ಲಲ್ಲಿ ಚುಚ್ಚಿದನು.ಲಕ್ಷ್ಮಿ ಮತ್ತು ಖಾನಾವಳಿಯ ಅನಿಲ; ಇತನು ನನಗೆ ಬಿಡಿಸಿಕೊಂಡರು ಕಾರಣ ನನ್ನ ಮದುವೆಯಾದಾಗಿನಿಂದ ನನ್ನೊಂದಿಗೆ ಜಗಳ ತೆಗೆದು ಮಾನಸಿಕ, ದೈಹಿಕ ಹಿಂಸೆಕೊಟ್ಟು  ಕೊಲೆ ಮಾಡುವ ಉದ್ದೇಶದಿಂದ ನನ್ನ ದೇಹದ ಮೇಲೆ ಎಲ್ಲಾ ಕಡೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಗಂಡ ರಾಜು ಇತನ  ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ  ಇಬ್ರಾಹೀಮ ತಂದೆ ಅಬುಬಕರ  ಪಟೇಲ ಸಾಃ ನೇಗಿನಾಳ ತಾಃ ಬ-ಬಾಗೆವಾಡಿ ರವರು  ದಿನಾಂಕ:  17.03.2016 ರಂದು  ಲಾರಿ  ನಂ  ಎಪಿ-24 ಟಿಬಿ-0456 ನೇದ್ದರ ಮೇಲೆ ನಾನು ಮತ್ತು ಕ್ಲೀನರ ರವಿ ತಂದೆ ತಿಪ್ಪರಾಯ ಗೂಗದೊಡ್ಡಿ  ಸಾಃ ನೇಗಿನಾಳ  ಇಬ್ಬರು  ಸೇರಿ  ಘತ್ತರಗಿಯಿಂದ  -ವಾಡಿ ಕಂಪನಿಗೆ  ಸಿಮೆಂಟ ತರಲು  ಶಹಾಬಾದ ಮಾರ್ಗವಾಗಿ  ವಾಡಿ ಕಡೆಗೆ ತೆರಳುತ್ತಿದ್ದಾಗ ,  ಮಾಲಗತ್ತಿ  ದಾಟಿ ಕಣಿಯ  ಬ್ರಿಡ್ಜ  ಹತ್ತಿರ  ರಸ್ತೆಗೆ  ರಾತ್ರಿ  11.45  ಪಿ.ಎಮ್  ಸುಮಾರಿಗೆ ಹೋಗುತ್ತಿರುವಾಗ ಯಾರೋ ಅಪರಿಚಿತ  4 ಜನರು  2 ಮೊ.ಸೈ ಗಳ  ಮೇಲೆ  ಬಂದು ನಾನು ಚಲಾಯಿಸಿಕೊಂಡು ಹೋಗುತ್ತಿದ್ದ  ಲಾರಿಗೆ ರಸ್ತೆಗೆ  ಅಡ್ಡಗಟ್ಟಿ  ನಿಲ್ಲಿಸಿ ನನ್ನನ್ನು ಲಾರಿಯಿಂದ  ಕೆಳಗೆ  ಇಳಿಸಿ  ಏ ಸೋಳೆ ಮಗನೆ  ನಿಮ್ಮ  ಹತ್ತಿರ  ದುಡ್ಡು  ಮತ್ತು  ಏನೇನಿದೆ ಕೊಡು ಅಂತಾ  ಬೈಯ್ಯುವಾಗ,  ಅವರಲ್ಲಿಯ ಇನ್ನೊಬ್ಬ  ತನ್ನ ಕೈಯಲ್ಲಿದ್ದ  ಚಾಕು ತೋರಿಸಿ  ನಿನ್ನ ಹತ್ತಿರ  ಇರುವ ಹಣ ಮತ್ತು ಮೊಬಾಯಿಲ್  , ಬಂಗಾರ  ಇದ್ದರೆ ಕೊಡು  ಇಲ್ಲಾಂದರೆ ಚಾಕುವಿನಿಂದ ತಿವಿದು ಸಾಯಿಸುತ್ತೇನೆ  ಅಂತಾ  ಚಾಕುವನ್ನು ನನ್ನ ಕುತ್ತಿಗೆಗೆ ಇಟ್ಟನು.  ಆಗ  ನಾನು ಹೆದರಿ  ನನ್ನ ಹತ್ತಿರ ಹಣ,  ಬಂಗಾರ ಇರುವದಿಲ್ಲಾ ಕೇವಲ ಮೊಬಾಯಿಲ  ಇರುತ್ತದೆ ಅಂತಾ  ಮೊಬಾಯಿಲ ತೋರಿಸಿದಾಗ  ಮೊಬಾಯಿಲ ಕಿತ್ತುಕೊಂಡರು.  ನಂತರ  ನನಗೆ  ಜೇಬುಗಳಲ್ಲಿ ಕೈ ಹಾಕಿ ನೋಡಿದರು.  ಏನು ಸಿಗದೆ ಇದ್ದರಿಂದ  ಬಿಟ್ಟು  ಅವರು ಈ ವಿಷಯ ಯಾರಿಗಾದರೂ  ಹೇಳಿದರೆ  ನಿನಗೆ  ಜೀವ  ಸಹಿತ  ಬಿಡುವದಿಲ್ಳಾ  ಅಂತಾ  ಪ್ರಾಣಬೆದರಿಕೆ ಹಾಕಿದರು.  ನನ್ನ ಜೊತೆಯಲ್ಲಿದ್ದ  ಕ್ಲೀನರಿಗೂ ಸಹ  ಲಾರಿಯಿಂದ  ಕೆಳಗಿಳಿಸಿ ಅವನಿಗೂ ಪ್ಯಾಂಟು ಮತ್ತು ಶರ್ಟಿನ ಜೇಬುಗಳು  ಚಕ  ಮಾಡಿದರು.  ಅವನ ಹತ್ತಿರ ಇದ್ದ  ಮೊಬಾಯಿಲ್  ಕಿತ್ತುಕೊಂಡರು.  ನಂತರ  ಅವರು ತಂದಿದ್ದ ಎರಡು ಮೊ.ಸೈ ಗಳ  ಮೇಲೆ  ರಾವೂರ  ಕಡೆಗೆ  ಹೋಗುವಾಗ,  ನಾನು  ಆ ಮೊ.ಸೈಗಳ  ಮೇಲಿನ  ಹಿಂದಿನ  ಲೈಟಿನ  ಹಾಗೂ  ನನ್ನ ಲಾರಿಯ  ಮುಂದಿನ ಲೈಟಗಳ ಬೆಳಕಿನಲ್ಲಿ ನಾನು ಎರಡೂ ಮೊ.ಸೈಗಳ ನಂಬರಗಳು ನೋಡಿರುತ್ತೇನೆ ಅವುಗಳು 1)ಕೆಎ- 32 ಇಬಿ- 8568 ,  ಮತ್ತು 2)  ಕೆಎ-32 ಇಹೆಚ್-8452 ಇರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.