POLICE BHAVAN KALABURAGI

POLICE BHAVAN KALABURAGI

21 February 2014

Gulbarga Dist Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ: ದಿನಾಂಕ 19-02-2014 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಶ್ರೀ ಬಸವರಾಜಶಾಂತಾಬಾಯಿಸುಗಲಾಬಾಯಿ ಇವರು ಘಾಟಗೇ ಲೇಔಟದಿಂದ ಸಿದ್ದಾರ್ಥ ನಗರಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಸಿದ್ದಾರ್ಥ ನಗರ ರೋಡ ಮೇಲೆ ಹಾಗು ಅಶೋಕನು ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಎ-6059 ನೇದ್ದನ್ನು ಕಣ್ಣಿ ಮಾರ್ಕೆಟ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶ್ರೀ ಬಸವರಾಜಗೆ ಮತ್ತು ಶಾಂತಾಬಾಯಿಸುಗಲಾಬಾಯಿ ರವರಿಗೆ ಅಪಘಾತಪಡಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಗ್ರಾಮೀಣ ಠಾಣೆ ಗುಲಬರ್ಗಾ : ದಿನಾಂಕ. 20-2-2014ರಂದು  ಶರಣಸಿರಸಗಿ ತಾಂಡಾ ಹತ್ತಿರ ನೀರಿನ ಟ್ಯಾಂಕ ಸಮೀಪ ಶ್ರೀ ಶಿವಶರಣಪ್ಪಾ ತಂದೆ  ಶ್ರೀಮಂತ ಉಪಳಾಂವ ಸಾ;ಶರಣಸಿರಸಗಿ ರವರು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಅಫಜಲಪೂರ ಕಡೆಯಿಂದ ಬರುತ್ತಿದ್ದ ಹೀರೋ ಹೊಂಡಾ ಮೋಟಾರ ಸೈಕಲ ನಂ.ಕೆ.ಎ.32 ಇ.ಬಿ7603 ನೆದ್ದರ ಚಾಲಕನು  ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಶಿವಶರಣಪ್ಪನಿಗೆ  ಅಪಘಾತಪಡಿಸಿ ಮೋಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು ಅಪಘಾತದಲ್ಲಿ ಶಿವಶರಣಪ್ಪರವರಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ  ಮೃತ ಪಟ್ಟ ಬಗ್ಗೆ ಶ್ರೀ. ಶ್ರೀಮಂತ ತಂದೆ ಶಿವಶರಣಪ್ಪಾ ಉಪಳಾಂವ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮೋಟಾರ ಸೈಕಲ ನಂ.ಕೆಎ.32 ಇ.ಬಿ 7603 ನೆದ್ದರ ಚಾಲಕನ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಸ್ಟೇಷನ ಬಜಾರ ಠಾಣೆ : ದಿನಾಂಕ. 04.01.2014 ರಂದು ಸಾಯಾಂಕಾಲ 5.00 ಗಂಟೆ ಸುಮಾರಿಗೆ ಶ್ರೀ ರಾಘವೇಂದ್ರ ರೆಡ್ಡಿ ತಂದೆ ಪುಂಡಲಿಕ ರೆಡ್ಡಿ ಸಾ: ಪಿಡಬ್ಲೂಡಿ ಕ್ವಾಟ್ರಸ್ಸ ಹಳೇ ಜೇವರ್ಗಿ ರಸ್ತೆ ಗುಲಬರ್ಗಾ ರವರು ತಿಮ್ಮಾಪೂರಿ ಸರ್ಕಲದಲ್ಲಿರುವಾಗ ಹಿಂದಿನಿಂದ ಯಾರೋ ಕಳ್ಳರು ಅವರ ಶರ್ಟಿನ ಜೇಬಿನಿಂದ ಅವರ ಐಫೋನ್-5 [IMEI NO. 013550002847712]  ಅ.ಕಿ. ರೂ 45,904/-  ನೇದ್ದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಅಪಜಲಪೂರ ಠಾಣೆ: ದಿನಾಂಕ-20/02/2014 ರಂದು ರಾತ್ರಿ 8:30 ಗಂಟೆಗೆ ಬಾಬು ತಂದೆ. ದುಂಡಪ್ಪ ಮೂಲಿಮನಿ ರವರು ಅವರ ತಂದೆಯವವೊಂದಿಗೆ ಮನೆಯ ಹತ್ತಿರ ಮಾತಾಡುತ್ತಾ ಕುಳಿತುಕೊಂಡಿರುವಾಗ ಕಲ್ಯಾಣಿ ತಂದೆ ಪರಸಪ್ಪ ಕುಡಕಿ ಈತನು ಕುಡಿದ ಅಮಲಿನಲ್ಲಿ ತನ್ನ ಕೈಯಲ್ಲಿದ್ದ ಬಡಿಗೆ ತಿರುಗಿಸುತ್ತಾ ಅವಾಚ್ಯವಾಗಿ ಬೈಯುತ್ತಿರುವಾಗ ಕಲ್ಯಾಣಿಗೆ  ಯಾಕ ಸುಮ್ಮ್ ಸುಮ್ಮನೆ ಬೈಯುತ್ತಿ ಮನೆಗೆ ಹೋಗು ಅಂತಾ ಅಂದಿದ್ದಕ್ಕೆ ವಿನಾಕಾರಣ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿ ತನ್ನ ಹಲ್ಲಿನಿಂದ ಕಚ್ಚಿದ ಕಲ್ಯಾಣಿ ತಂದೆ ಪರಸಪ್ಪ ಕುಡಕಿ ಇವನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ: 20-02-14 ರಂದು ಶ್ರೀ.ಅಪ್ಪಾರಾಯ ತಂದೆ ಗುರಪ್ಪಾ ಮೇತ್ರೆ ಸಾ: ಮಾದನ ಹಿಪ್ಪರಗಾ ಇವರು ಠಾಣೆಗೆ ಹಾಜರಾಗಿ ಬೆಳಿಗ್ಗೆ 10;00 ಗಂಟೆ ಸುಮಾರಿಗೆ ತಾನು ಹಾಗು ತನ್ನ ಮಕ್ಕಳಾದ ಯಲ್ಲಪ್ಪ ತಂದೆ ಅಪ್ಪಾರಾಯ ಮೇತ್ರೆ, ಬೀರಪ್ಪ ತಂದೆ ಅಪ್ಪಾರಾಯ ಮೇತ್ರೆ, ಲಕ್ಷ್ಮಿಬಾಯಿ ಗಂಡ ಅಪ್ಪಾರಾಯ ಮೇತ್ರೆ, ಹಾಗು ತಮ್ಮನಾದ ಶಾಂತಮಲ್ಲ ತಂದೆ ಗುರಪ್ಪ ಮೇತ್ರೆ, ಮತ್ತು ತಮ್ಮನ ಹೆಂಡತಿ  ಸುಗಲಾಬಾಯಿ ಗಂಡ ಶಾಂತಮಲ್ಲ ಮೇತ್ರೆ ಎಲ್ಲರೂ ತಮ್ಮ ಹೊಲದ ಮನೆಯ ಮುಂದೆ ಮಾತನಾಡುತ್ತಾ ಕುಳಿತುಕೊಂಡಾಗ 1] ಶಿವಲಿಂಗಪ್ಪ ತಂದೆ ಗುರಪ್ಪ ಮೇತ್ರೆ 2] ಸಿದ್ದಲಿಂಗ ತಂದೆ ಶಿವಲಿಂಗಪ್ಪ ಮೇತ್ರೆ  3] ರಾಮಣ್ಣ ತಂದೆ ಅಪ್ಪಾರಾಯ ಮೇತ್ರೆ 4] ಆನಂದ ತಂದೆ ಲಾಡಪ್ಪ ಸಾವಳೇಶ್ವರ 5] ಮಹಾದೇವಿ ಗಂಡ ಶೀವಲಿಂಗಪ್ಪ ಮೇತ್ರೆ 6] ಪೀರವ್ವ ಗಂಡ ಶಿವಲಿಂಗಪ್ಪ ಮೇತ್ರೆ 7] ಶಿವಮ್ಮ ಗಂಡ ಅಪ್ಪಾರಾಯ ಮೇತ್ರೆ 8] ಸಿಕಂದರ ತಂದೆ ಇಸ್ಮಾಯಿಲ್ ಹಾರಕೂಡ ಎಲ್ಲರೂ ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ  ಈ ಮಕ್ಕಳಿಗೆ ಜೀವ ಸಹಿತ ಬಿಡಬ್ಯಾಡರಿ ಖಲಾಸ ಮಾಡಿರಿ ಅಂತಾ ಚೀರಾಡುತ್ತಾ ಬಡಿಗೆ, ಕೊಡಲಿಗಳಿಂದ ಹೊಡೆದು ಭಾರಿ ಗಾಗಪಡಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.  
ಸುಲಿಗೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 20/02/2014 ರಂದು ಶ್ರೀ.ಮಹಾಂತೇಶ ತಂದೆ ಶಿವಪುತ್ರಪ್ಪ ಮಹಾಂತಪೂರ ಸಾ|| ಶರಣ ನಗರ ಗುಲಬರ್ಗಾ ರವರು ಚನ್ನವೀರ ನಗರದಲ್ಲಿರುವ ತನ್ನ ಗೆಳೆಯನ ಮನೆಗೆ ಓದಲು ನಡೆದುಕೊಂಡು ಕರೆ ಗಾರ್ಡನ ಪಕ್ಕದ ಎಸ್.ಬಿ ಟೆಂಪಲ ರೋಡಿನಿಂದ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 2-45 ಗಂಟೆ ಸುಮಾರಿಗೆ ಟೆಕಬುರಾನ ದರ್ಗಾದ ಕ್ರಾಸ ಹತ್ತಿರ ಎದರುನಿಂದ ಇಬ್ಬರೂ ಅಪರಿಚಿತರು ಬಂದವರೆ ತಡೆದು ನಿಲ್ಲಿಸಿ ಏ ಮಗನೆ ನಿನ್ನ ಹತ್ತಿರ ಏನುನು ಇದೆ ತಗೆದುಕೊಡು ಇಲ್ಲದಿದ್ದರೆ ನಿನ್ನನ್ನೂ ತಲಾವರದಿಂದ ಹೋಡೆದು ಖಲಾಸ ಮಾಡುತ್ತೇವೆ ಅಂತಾ ಅವರ ಹತ್ತಿರ ಇದ್ದ ತಲವಾರ ತಗೆದು ನನ್ನ ಎದೆಗೆ ಹಚ್ಚಿ ತನ್ನ ಹತ್ತಿರ ಇದ್ದ ಒಂದು ಬಿಳಿಯ ಬಣ್ಣದ ಕಾರಬನ್  ಕಂಪನಿಯ ಮೋಬಾಯಿಲ ಅ.ಕಿ. ರೂ 2000/- ಜೇಬಿಗೆ ಕೈ ಹಾಕಿ ಪರ್ಸ ನಲ್ಲಿಯ 50/- ರೂ ಕಸಿದುಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೆಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.