POLICE BHAVAN KALABURAGI

POLICE BHAVAN KALABURAGI

21 January 2016

Kalburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-01-2016 ರಂದು ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದೆಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಸ್ವಲ್ಪ ದೂರು ಮರೆಯಲ್ಲಿ ನಿಂತು ನೋಡಲು ಲಕ್ಷ್ಮಿ ಗುಡಿ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ವಿಠ್ಠಲ ತಂದೆ ಜರನಪ್ಪ ನಾವಿ ಸಾ|| ಘತ್ತರಗಾ ಹಾ||| ಆಶ್ರಯ ಕಾಲೋನಿ ಅಫಜಲಪೂರ  ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 860/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 30-12-15 ರಂದು ರಾತ್ರಿ  ಮೃತ ಪ್ರಶಾಂತ ಇತನು ಮೋಟಾರ ಸೈಕಲ ನಂ ಕೆಎ-32-ಇಇ-5298 ನೇದ್ದನ್ನು ಎಸ ಪಿ ಸಾಹೇಬರ ಕಾರ್ಯಾಲಯ ಕಡೆಯಿಂದ ಸಿದ್ದಿಪಾಶಾ ದರ್ಗಾ ಕ್ರಾಸ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಎದುರಿನ ರೋಡ ಮೇಲೆ ಎಡ ಬಲ ಕಟ್ ಹೊಡೆದು ರೋಡ ಪಕ್ಕದಲ್ಲಿರುವ ಬೇವಿನ ಗಿಡಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಬಿದ್ದು ತೆಲೆಯ ಎದುರುಗಡೆ ರಕ್ತಗಾಯ ಬಾಯಿಗೆ ಪೆಟ್ಟು ಬಿದ್ದು ತುಟಿಗಳಿಗೆ ಗದ್ದಕ್ಕೆ ಮೂಗಿಗೆ ರಕ್ತಗಾಯ ಹಾಗೂ ಕುತ್ತಿಗೆಗೆ ಗುಪ್ತಪೆಟ್ಟು ಆಗಿ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಸೇರಿಕೆಯಗಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಮಾಡಿಕೊಂಡು ಹಣದ ಅಡಚಣೆ ಆದ ಕಾರಣ ದಿನಾಂಕ 18-01-2016 ರಂದು ಬಸವೇಶ್ವರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಹಾಗಾಂವ ಗ್ರಾಮದಲ್ಲಿರುವ ಮೃತನ ಸಂಬಂದಿ ಕಾಶಪ್ಪಾ ಇವರ ಮನೆಗೆ ಹೋದಾಗ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ರಾತ್ರಿ 10-00 ಗಂಟೆಗೆ ಮನೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀ ರವಿ ತಂದೆ ನಿಂಗಪ್ಪಾ ತಳಕೇರಿ ಸಾ:ತೊನ್ಸನಳ್ಳಿ(ಟಿ) ಇವರು ದಿನಾಂಕ:20/01/16  ರಂದು 11 ಎಎಂಕ್ಕೆ ಟೆಂಗಳಿ ಗ್ರಾಮಕ್ಕೆ ಖಾಸಗಿ ಕೆಲಸದ ನಿಮಿತ್ಯ ಹೋಗಿ ಬರಲೆಂದು ಟೆಂಗಳಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗಲೆಂದು ಟೆಂಗಳಿ ಬಸ್ಟ್ಯಾಂಡ ಹತ್ತಿರ 1-30 ಪಿಎಂದ ಸುಮಾರಿಗೆ ಬಂದು ನಿಲಲ್ಲು ನಮ್ಮ ಗ್ರಾಮದ ಪರಿಚಯದವನಾದ ಗುಡುಸಾಬ ತಂದೆ ಹುಸೇನಸಾಬ ಮುಲ್ಲಾ ಇವರೂ ಸಹ ಊರಿಗೆ ಹೋಗುವ ಸಲುವಾಗಿ ಬಸ್ ಕಾಯುತ್ತಾ ನಿಂತಿದ್ದು ಅಷ್ಟರಲ್ಲಿ ಕಾಳಗಿ ಕಡೆಯಿಂದ ಒಂದು ಮ್ಯಾಕ್ಸಿಕ್ಯಾಬ ಬಂತು. ನಾನು ಮತ್ತು ನಮ್ಮ ಗ್ರಾಮದ ಗುಡುಸಾಬ ಇಬ್ಬರೂ ಊರಿಗೆ ಹೋಗಲು ಹತ್ತಿದೇವು. ಮ್ಯಾಕ್ಸಿಕ್ಯಾಬ ಟೆಂಗಳಿ ಗ್ರಾಮದಿಂದ ಹೊರಟು 2ಕಿ.ಮೋ ದಾಟಿ ಸ್ವಲ್ಪ ದೂರದಲ್ಲಿ ಮ್ಯಾಕ್ಸಿಕ್ಯಾಬ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ತನ್ನ ವಾಹನವನ್ನು ಬಲ ಭಾಗಕ್ಕೆ ಕಟ್ ಮಾಡಲು ಹೋಗಿ ಧನಂಜಯ ಕುಲಕರ್ಣಿ ಇವರ ಹೋಲದ ಸೀಮಾಂತರದ ರೋಡಿನ ಮೇಲೆ ಪಲ್ಟಿ ಮಾಡಿಸಿದ ಪ್ರಯುಕ್ತ ಒಳಗಡೆ ಕುಳಿತ್ತಿದ್ದ ಪ್ರಯಾಣಿಕರಿಗೆ ಹಾಗೂ ನನಗೆ ಮ್ಯಾಕ್ಸಿಕ್ಯಾಬಿನ ರಾಡ ಹಾಗೂ ಸೀಟಗಳು ಹತ್ತಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಗಾಭರಿಗೊಂಡು ಮ್ಯಾಕ್ಸಿಕ್ಯಾಬನ ಗ್ಲಾಸ ಒಡೆದು ಒಬ್ಬೊಬ್ಬರಾಗಿ ಮ್ಯಾಕ್ಸಿಕ್ಯಾಬಿನಿಂದ ಹೊರಗಡೆ ಬಂದೇವು. ನನ್ನ ಜೊತೆ ಹೊರಟ ನಮ್ಮ ಗ್ರಾಮದ ಗುಡುಸಾಬ ಮುಲ್ಲಾ ಇವರಿಗೆ ನೋಡಲು ಮ್ಯಾಕ್ಸಿಕ್ಯಾಬಿನ ಡೋರಿನ ಒಳಗಡೆ ಸಿಕ್ಕಿ ಹಾಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮ್ಯಾಕ್ಸಿಕ್ಯಾಬಿನಲ್ಲಿದ ನನ್ನಂತೆ ಕೇಲವು ಜನರಿಗೆ ಗುಪ್ತಗಾಯ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು ಇರುತ್ತದೆ. ನಂತರ ನಾನು ಜಿವಿಆರ ಅಂಬುಲೇನ್ಸಕ್ಕೆ ಫೋನ ಮಾಡಿ ಸ್ಥಳಕ್ಕೆ ಕರೆಯಿಸಿ ಎಲ್ಲರಿಗೂ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಕಳುಹಿಸಿಕೊಟ್ಟೇನು. ರಸ್ತೆ ಅಪಘಾತ ಪಡಿಸಿದ ಮ್ಯಾಕ್ಸಿಕ್ಯಾಬ ನಂಬರ ನೋಡಲು ಕೆಎ-38 945 ಇರುತ್ತದೆ. ಸದರಿ ವಾಹನದ ಚಾಲಕನು ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ಭೀಮಶ್ಯಾ ಸಾ : ಕಟ್ಟೋಳ್ಳಿ ಇವರು ನ್ಯಾಯಾಲಯದ ಖಾಸಗಿ ದೂರು ಮಹಾಗಾಂವ ಪೊಲೀಸ್ ಠಾಣೆ ಗುನ್ನೆ ನಂ:94/2014 ನೇದ್ದರಲ್ಲಿ ಫಿರ್ಯಾದಿದಾರರ ಸರ್ವೆ ನಂ:94/1 ನೇದ್ದರಲ್ಲಿ 15 ಎಕರೆ 1 ಗುಂಟೆ ಜಮೀನಿನ ಮಾಲೀಕರಿದ್ದು ಈ ಪ್ರಕರಣದ ಆರೋಪಿ ನಂ:1 ರಿಂದ 4 ರವರು ಜಮೀನು ಪಾಲು ಮಾಡುವಾಗ ಫಿರ್ಯಾದಿಗೆ ಗೊತ್ತಿರದಂತೆ ಹಿಸ್ಸಾ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಿದ್ದು ಇದೇ ಪ್ರಕರಣದಲ್ಲಿ 5 ರಿಂದ 7 ಆರೋಪಿಗಳು ಕಂದಾಯ ಅಧಿಕಾರಿಗಳಿದ್ದು ಆರೋಪಿ 1 ರಿಂದ 4 ರ ಇವರ ಯಾವುದೋ ಶಕ್ತಿಗೆ ಬಲಿಯಾಗಿ ಜಮೀನಿನ ಸರ್ವೆ ನಂಬರನ ಹಿಸ್ಸಾಗಳು ಅದಲು ಬದಲು ಮಾಡಿರುತ್ತಾರೆ. ಫಿರ್ಯಾದಿದಾರರಿಗೆ ಸರಕಾರಿ ಅಧಿಕಾರಿಗಳು ಹಾಗು ತನಿಖಾಧಿಕಾರಿಗಳು ಮೋಸ, ವಂಚನೆ ಮಾಡುವ ಉದ್ದೇಶದಿಂದ ಸುಳ್ಳು ಮಾಹಿತಿ ಹಾಗು ಸುಳ್ಳು ದಸ್ತಾವೇಜು ಬರೆದು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದರಿಂದ ಇವರ ಮೇಲೆ ಖಾಸಗಿ ಫಿರ್ಯಾದಿ ಮಹಾಗಾಂವ ಪೊಲೀಸ್ ಠಾಣೆ ಗುನ್ನೆ ನಂ:98/2015 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ. ಗುನ್ನೆ ನಂ:99/2014 ಮತ್ತು 98/2015 ರಲ್ಲಿನ ತನಿಖಾಧಿಕಾರಿಗಳಾಗಿದ್ದ ಶ್ರೀ ವಿಜಯ ಪಿ. ಅಂಚಿ ಪೊಲೀಸ್ ಉಪಾಧೀಕ್ಷಕರು ಗ್ರಾಮೀಣ ಉಪವಿಭಾಗ ಕಲಬುರಗಿ ಇವರು ಈ ಎರಡು ಗುನ್ನೆಯಲ್ಲಿ ಆರೋಪಿಗಳು ಫೀದಿದಾರರ ಜಮೀನನ್ನು ಅಕ್ರಮವಾಗಿ ಪ್ರವೇಶ ಮಾಡಿಲ್ಲ. ಹಾಗು ಯಾವುದೇ ಕಂದಾಯ ಅಧಿಕಾರಿಗಳು ಹಾಗು ಇತರೆ ಅಧಿಕಾರಿಗಳು ಯಾವುದೇ ನಕಲಿ ಮತ್ತು ಸುಳ್ಳು ದಆಖಲೆಗಳು ಬರೆದಿಲ್ಲ, ಸೃಷ್ಟಿ ಮಾಡಿಲ್ಲ, ಅನುಸೂಚಿ ಜಾತಿ ಸದಸ್ಯರ ಮೇಲೆ ದೌರ್ಜನ್ಯವೆಸಗಿಲ್ಲವೆಂದು ಸುಳ್ಳು ವರದಿ ಸಲ್ಲಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಚೌಕ ಠಾಣೆ : ಶ್ರೀ ಅಂಬಾರಾಯ ತಂದೆ ಸಿದ್ದಪ್ಪ ಗೊಂಗಡೆ ಸಾ: ಪ್ಲಾಟ ನಂ. 27 ಮಾಹಾದೇವ ನಗರ ಶೇಖ ರೋಜಾ  ಕಲಬುರಗಿ ಇವರ ಅಣ್ಣನಾದ ಶ್ರೀ ಅಣ್ಣಪ್ಪ ತಂದೆ ಸಿದ್ದಪ್ಪ ಗೊಂಗಡೆ ವ: 63 ಉ: ನಿವೃತ್ತ ನೌಕರ ಇವರು ಮನೆಯಿಂದ ಕಟ್ಟಿಂಗ ಮಾಡಿಸಲು ಹೋಗಿ ಬರುತ್ತೇನೆ ಅಂತಾ ಮನೆಯಿಂದ ದಿನಾಂಕ 18/01/2016 ರಂದು ಮುಂಜಾನೆ 8 ಗಂಟೆಗೆ ಹೋದವರು ಇನ್ನೂ ಬಂದಿಲ್ಲಾ ಆದ ಕಾರಣ ದಯಾಳುಗಳಾದ ತಾವು ನನ್ನ ಅಣ್ಣನ್ನು ಹುಡುಕಿ ಕೊಡಬೇಕಾಗಿ ವಿನಂತಿ. ನನ್ನ ಅಣ್ಣ ಮಾನಸಿಕವಾಗಿ ಅಸ್ವಸ್ಥನಾಗಿರುತ್ತಾನೆ. ಮೈಮೇಲೆ ಬಿಳಿಯ ಚಕ್ಸ ಶರ್ಟ, ಕರಿಯ ಪ್ಯಾಂಟ, ಕರಿಯ ಕ್ಯಾನವಸ್ ಬೂಟ ಧರಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.