POLICE BHAVAN KALABURAGI

POLICE BHAVAN KALABURAGI

04 August 2012

REPORTED CRIME

ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಮಹಾದೇವಪ್ಪ  ತಂದೆ ಎಗಪ್ಪ ಹರವಾಳ  ಮ್ಯಾನೇಜರ  ಕರ್ನಾಟಕ ಉಗ್ರಾಣ ನಿಗಮ,  ಘಟಕ ನಂ 2  ಗುಲಬರ್ಗಾರವರು ದಿನಾಂಕ:03/08/2012  ರಂದು  ಸೈಯದ ಚಿಂಚೋಳಿ ರಸ್ತೆಗೆ ಇರುವ  ಸಚ್ಚಿನ  ವೇರ್ ಹೌಸ ಗೋದಾಮ  ನಮ್ಮ ನಿಗಮದ  ಸಿಪಾಯಿಯಾದ  ಅಂಬರೀಷ ಇತನು  ಸಾಯಂಕಾಲ 5-00 ಗಂಟೆಗೆ ಕೀಲಿ ಹಾಕಿಕೊಂಡು  ಹೋಗಿದ್ದು, ಸದರಿ ಗೋದಾಮಿನ ಕಾವಲುಗಾರ  ತಿಪ್ಪಣ್ಣ ಕಟ್ಟಿಮನಿ  ರಾತ್ರಿ  1-00 ಗಂಟೆಯ ವರೆಗೆ ಎಲ್ಲಾ ಕೀಲಿಗಳನ್ನು ಚೆಕ್ಕ ಮಾಡಿ  ಮಲಗಿಕೊಂಡಿದ್ದು, ನಂತರ 3-00 ಗಂಟೆಗೆ  ಎದ್ದು ನೋಡಲಾಗಿ  ಗೋದಾಮಿನ  ಶೇಟ್ಟರಿನ ಕೀಲಿ ಮುರಿದಿದ್ದರಿಂದ ನನಗೆ ಫೋನ ಮುಖಾಂತರ ತಿಳಿಸಿದಾಗ ನಾನು  ಹೋಗಿ  ನೋಡಲಾಗಿ  ಸದರ ಗೋದಾಮಿನ ಶೇಟ್ಟರಿನ ಕೀಲಿ ಮುರಿದಿದ್ದು  18 ಕ್ಯೀಂಟಲ್ ತೋಗರಿ  ಅಂದರ ಅಂದಾಜ ಕಿಮ್ಮತ್ತು 68,400/-   ಬೆಲೆ ಬಾಳುವದನ್ನು ರಾತ್ರಿ ವೇಳೆಯಲ್ಲಿ  ಯಾರೊ ಕಳ್ಳರು  ಕಳವು ಮಾಡಿಕೊಂಡು  ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:253/2012 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮಂಗಳ ಸೂತ್ರ ದೋಚಿಕೊಂಡು ಹೋದ ಪ್ರಕರಣ:
ಬ್ರಹ್ಮಪೂರ ಠಾಣೆ:ಶ್ರೀ.ರೇವಣಸಿದ್ದಪ್ಪ ತಂದೆ ಗುಂಡಪ್ಪಾ ಮೂಲಗೆ, ಸಾ|| ಮನೆ ಕೆ.ಹೆಚ್.ಬಿ ಕಾಲೋನಿ ಅಂಬೇಡ್ಕರ ಹಾಸ್ಟೇಲ ಹಿಂದುಗಡೆ ರಾಜಾಪೂರ ರೋಡ ಗುಲಬರ್ಗಾ ರವರು ನಾನು ದಿನಾಂಕ:03-08-2012 ರಂದು ನಮ್ಮ ಮನೆಯ ಹತ್ತಿರ ಇರುವ ಡಾ|| ವಿಜಯಕುಮಾರ ಇವರ ಮನೆಗೆ ಲಕ್ಷ್ಮಿ ಪೂಜೆಗೆಂದು ನನ್ನ ಹೆಂಡತಿ ದೇವಿಕಾ ಮೂಲಗೆ ಹಾಗೂ ನಮ್ಮ ಎದುರುಗುಡೆ ಮನೆಯ ನಿವಾಸಿ ಜ್ಯೋತಿ ಗಂಡ ಶಿವಾನಂದ ಕೊರಳ್ಳಿ ಇಬ್ಬರು ಕೂಡಿಕೊಂಡು ಸದರಿಯವರ  ಮನೆಯ ಪೂಜೆ ಮುಗಿಸಿಕೊಂಡು ರಾತ್ರಿ 8-45 ಗಂಟೆಯ ಸುಮಾರಿಗೆ ಅಂಬೇಡ್ಕರ ಹಾಸ್ಟೇಲ ಹಿಂದುಗಡೆಯಿಂದ ರೋಡಿನಲ್ಲಿ ನಡೆದುಕೊಂಡು ಮನೆಗೆ ಬರುವಾಗ ಯಾರೋ ಒಬ್ಬ ಅಪರಿಚಿತ ಮೋಟರ ಸೈಕಲ ಸವಾರ ಅಂದಾಜು 20 ರಿಂದ  25 ಅವನು ತನ್ನ ಮೋಟರ ಸೈಕಲ  ಮೇಲೆ ಅತಿ ವೇಗದಿಂದ ಬಂದವನೆ ನನ್ನ ಪತ್ನಿಯ ಕೊರಳಲ್ಲಿದ್ದ ಬಂಗಾರದ 3 ತೊಲೆಯ ಮಂಗಳಸೂತ್ರ ಅ||ಕಿ|| 75,000/- ಬೆಲೆ ಬಾಳುವದನ್ನು ಕೊರಳಿಗೆ ಕೈ ಹಾಕಿ ಜಬರದಸ್ತಿಯಿಂದ ಕಸಿದುಕೊಂಡು ತನ್ನ ಮೋಟರ ಸೈಕಲ್ ಮೇಲೆ ಓಡಿ ಹೋಗಿರುತ್ತಾನೆ ಅಂತಾ ನನ್ನ ಹೆಂಡತಿ ಮನೆಗೆ ಬಂದು ನನಗೆ ವಿಷಯ ತಿಳಿಸಿರುತ್ತಾಳೆ. ಅಂತಾ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ:93/2012 ಕಲಂ 392 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಶರಣಯ್ಯ ಕಲಾಲ ತಾ: ಶೇಟಗೇರಾ ತಾ:ಶಹಾಪುರ ರವರು  ನನ್ನ ಅಕ್ಕೆಳಾದ ರುದ್ರಮ್ಮ ವ: 28 ವರ್ಷ ವಳು ಜೇವರ್ಗಿ ಪಟ್ಟಣ ಪಂಚಾಯತಿಯಲ್ಲಿ ಕಂದಾಯ ನಿರೀಕ್ಷಕರು ಅಂತ ಕೆಲಸ ಮಾಡಿಕೊಂಡಿರುತ್ತಾಳೆ. ಸುಮಾರು 7-8 ತಿಂಗಳಿಂದ ನಮ್ಮ ಅಕ್ಕ ರುದ್ರಮ್ಮ ಇವಳು, ನನಗೆ ಬಾಣತಿಹಾಳ ಗ್ರಾಮದ ಯಲ್ಲಪ್ಪ ತಂದೆ ಮಲ್ಲಪ್ಪ ಮೇಟಿ ಇತನು ರೋಡಿನಲ್ಲಿ ಹೊಗಿ ಬರುವಾಗ ಚುಡಾಯಿಸುವದು ಮಾಡುತ್ತಿರುತ್ತಾನೆ ಮತ್ತು ನಾನು ಅವನಿಗೆ ತಿಳಿಸಿ ಹೇಳಿದ್ದೆನೆ ಅಂತಾ ಸಹ ಇದ್ದ ವಿಷಯ ತಿಳಿಸಿದ್ದಳು. ಅದಕ್ಕೆ ನಮ್ಮ ಮನೆಯವರು ನೀನು ಅವನ ಸಂಗಡ ಏನು ಮಾತನಾಡುವದು ಬೇಡ ಅಂತ ಹೇಳಿದೇವು. ಸುಮಾರು ಒಂದೂವರೆ ತಿಂಗಳದ ಹಿಂದೆ ಯಲ್ಲಪ್ಪ ತಂದೆ ಮಲ್ಲಪ್ಪ ಮೇಟಿ ಇತನು ನಿಮ್ಮ ಮಗಳು ರುದ್ರಮ್ಮ ಳಿಗೆ ನಾನು ಪ್ರೀತಿಸುತ್ತಿದ್ದೇನೆ ಅದಕ್ಕೆ ಅವಳು ನಿರಾಕರಿಸಿರುತ್ತಾಳೆ ಒದು ವೇಳೆ ಅವಳು ನನಗೆ ಪ್ರೀತಿ ಮಾಡಲಿಲ್ಲ ಅಂದರೆ ಅವಳಿಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತ ಹೇದರಿಕೆ ಹಾಕಿದ್ದನು. ಅದಕ್ಕೆ ನಾನು ಮತ್ತು ನಮ್ಮ ತಂದೆ-ತಾಯಿಯವರು ಈ ರೀತಿ ಮಾಡುವದು ಸರಿ ಅಲ್ಲ ಅಂತ ಬುದ್ದಿ ಮಾತು ಹೇಳಿದೇವು. ನಂತರ ಯಲ್ಲಪ್ಪ ಮತ್ತು ಅವರ ಮನೆಯವರಿಗೆ,  ಗ್ರಾಮದ ಮುಖಂಡರುಗಳಿಂದ ತಿಳಿಸಿ ಹೇಳಿಸಿದ್ದೇವು ಅದರೂ ಕೂಡಾ ಅವನು ಅದೇ ರೀತಿ ಮಾಡುತ್ತಿರುತ್ತಾನೆ ಅಂತ ಹೇಳುತ್ತಿದಳು.ದಿನಾಂಕ:03-08-2012 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಶರಣಯ್ಯ ತಾಯಿ ಸಿದ್ದಮ್ಮ ಎಲ್ಲರೂ ಮನೆಯಲ್ಲಿದ್ದಾಗ ದೇವಿಂದ್ರ ತಂದೆ ಮಲ್ಲಯ್ಯ ಗುತ್ತೇದಾರ ಇವರು ಫೊನ ಮಾಡಿ ನಿಮ್ಮ ಅಕ್ಕ ರುದ್ರಮ್ಮ ಇವಳಿಗೆ ಯಾರೋ ಒಬ್ಬ ಮನುಷ್ಯನು ಅವಳಿಗೆ ಮಚ್ಚಿನಿಂದ ಹೊಡೆದು ಭಾರಿ ಗಾಯಗೊಳಿಸಿರುತ್ತಾನೆ ಅವಳಿಗೆ ಉಪಚಾರ ಕುರಿತು ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಗೆ ತಗೆದುಕೊಂಡು ಹೋಗುತ್ತಿದ್ದೇವೆ ಅಂತ ಹೇಳಿದ ಪ್ರಯುಕ್ತ ನಮ್ಮ ಮನೆಯವರೆಲ್ಲರೂ ಕೂಡಿಕೊಂಡು ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಗೆ ಬಂದು  ನೋಡಲು ಅವಳ ಬಲ ಕಪಾಳದ ಮೇಲೆ, ಬಲಗೈ ಮುಂಗೈ ಕೆಳಗೆ, ಎಡ ಭುಜದ, ಎಡ ಹಸ್ತ, ಬಲ ಮತ್ತು ಎಡ ತಲೆಯ ಹಿಂಭಾಗದಲ್ಲಿ ಭಾರಿ  ಹರಿತವಾದ ಗಾಯಗಳಾಗಿದ್ದು ಅವಳಿಗೆ ನಮಗೆ ಹೇಳಿದ್ದೆನೆಂದರೆ, ಸಾಯಾಂಕಾಲ 4-30 ಗಂಟೆಯ ಸುಮಾರಿಗೆ ಜೇವರ್ಗಿ ಪಟ್ಟಣದ ಅಂಬೇಡ್ಕರ ಸರ್ಕಲ ಹತ್ತಿರ ರೋಡಿನಲ್ಲಿ ಬಸ ಸ್ಟ್ಯಾಂಡ ಕಡೆಗೆ ಬರುತ್ತಿದ್ದಾಗ ಯಲ್ಲಪ್ಪ ತಂದೆ ಮಲ್ಲಪ್ಪ ಮೇಟಿ ಸಾ: ಬಾಣತಿ ಹಾಳ ಇತನು ನನಗೆ ಕೊಲೆ ಮಾಡು ಉದ್ದೇಶದಿದಂದ ಅವಾಚ್ಯವಾಗಿ  ಬೈದು ಮಚ್ಚಿನಿಂದ ಹೊಡೆದಿರುತ್ತಾನೆ ಅಂತಾ ತಿಳಿಸಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 112/2012 ಕಲಂ 341, 504, 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಮುದೋಳ ಪೊಲೀಸ್ ಠಾಣೆ: ಆನಂದಕುಮಾರ ತಂದೆ ಮುತ್ಯಾಪ್ಪಾ ಗೋಸಾಯಿ ಸಾ|| ಬಂದೆಂಪಲ್ಲಿ ಗ್ರಾಮ ತಾ|| ಸೇಡಂ ರವರು ಮೃತನಾದ ಶರಣಪ್ಪಾ ತಂದೆ ಬಸಪ್ಪಾ ಇತನು ಸುಮಾರು 3 ತಿಂಗಳ ಹಿಂದೆ ತನ್ನ 5 ಎಕರೆಗಳಲ್ಲಿ 2 ಎಕರೆ ಜಮೀನನ್ನು ಮಾರಾಟ ಮಾಡುವ ಕಾಲಕ್ಕೆ ಸದರಿ ಹೊಲವನ್ನು ಶರಣಪ್ಪನ ಚಿಕ್ಕಪ್ಪನ ಮಗನಾದ ಬೋಜಪ್ಪಾ ತಂದೆ ಮಾಣಿಕಪ್ಪಾ ಇತನು ಖರೀದಿ ಮಾಡಲು ಹೋದಾಗ ಶರಣಪ್ಪನು ಇತನಿಗೆ ಹೊಲವನ್ನು ಮಾರಾಟ ಮಾಡಲಾರದೆ ಇನ್ನೊಬ್ಬ ಚಿಕ್ಕಪ್ಪನ ಮಗನಾದ ಆನಂದ ಕುಮಾರ ತಂದೆ ಮುತ್ಯಪ್ಪಾ ಇತನಿಗೆ ಮಾರಾಟ ಮಾಡಿದ್ದು ಇದರಿಂದ ಬೋಜಪ್ಪನು,  ಶರಣಪ್ಪನ ಮೇಲೆ ವೈಶಮ್ಯ ಹೊಂದಿದ್ದರಿಂದ ದಿನಾಂಕ:03-08-2012 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಶರಣಪ್ಪನ ಸಂಗಡ ಬೋಜಪ್ಪಾ ತಂದೆ ಮಾಣಿಕಪ್ಪಾ ಗೋಸಾಯಿ,ಶಿವರಾಜ @ ಶಿವಪ್ಪಾ ತಂದೆ ಮಾಣಿಕಪ್ಪಾ ಗೋಸಾಯಿ, ಲಕ್ಷ್ಮೀ ಗಂಡ ಬೋಜಪ್ಪಾ ಗೋಸಾಯಿ, ಆನಂದ ತಂದೆ ಮುತ್ಯಾಪ್ಪಾ ಉಪ್ಪಾರ ಸಾ|| ಬಂದೆಂಪಲ್ಲಿ ಗ್ರಾಮ ಇವರು ಜಗಳ ತೆಗೆದು ಹೊಡೆಬಡೆ ಮಾಡಿ ಶರಣಪ್ಪನಿಗೆ ತನ್ನ ಮನೆಯಲ್ಲಿದ್ದ ಕಟ್ಟಿಗೆಯ ಜೆಂತಿಗೆ  ಹಗ್ಗದಿಂದ ಉರಲು ಹಾಕಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.90/2012 ಕಲಂ 302, ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.