POLICE BHAVAN KALABURAGI

POLICE BHAVAN KALABURAGI

30 November 2011

GULBARGA DIST REPORTED CRIMES

ಶಹಾಬಾದ ನಗರ ಠಾಣೆ :ಪಿರ್ಯಾದಿ ಶ್ರೀ ರಾಮು ತಂದೆ ಹಣಮಂತ ಕುಶಾಳೆ ಸಾ: ಶಹಾಬಾದ ರವರು, ಬಡಜನರಿಗೆ ಹಂಚಬೇಕಾದ ಆಹಾರ ಧಾನ್ಯ ಅಕ್ಕಿ & ಗೋಧಿಯನ್ನು ಲಾರಿ ನಂ.ಕೆಎ-32 ಬಿ-2604 ನೇದ್ದರಲ್ಲಿ ನಿಸ್ಸಾರ ಅಹ್ಮದ ಅನ್ನುವ ವ್ಯಕ್ತಿ ಕಳ್ಳತನದಿಂದ ಲಾರಿ ಲೋಡಮಾಡಿ ಬೇರೆಡೆ ಸಾಗಿಸುತ್ತಿದ್ದಾನೆ. ಅಂತಾ ಸಲ್ಲಿಸಿದ ದೂರಿನ ಮೇಲೆ ಒಂದು ಲೋಡ ಗೋದಿ & ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ಲಾರಿ ನಂ: ಕೆಎ-32/ಬಿ-2604 ನೇದ್ದನ್ನು ವಶಕ್ಕೆ ತೆಗೆದುಕೊಂಡಿದ್ದು, ಈ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗುನ್ನೆ ಸಂಖ್ಯೆ 181/2011 ಕಲಂ:3 & 7 ಇ.ಜಿ. ಆಕ್ಟ್‌‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಹಾಬಾದ ನಗರ ಠಾಣೆ : ಶ್ರೀ ವಿಠ್ಠಲ ತಂದೆ ಗಂಗೂ ಜಾದವ ಸಾ: ಸಣ್ಣೂರ ರವರು,ದಿನಾಂಕ :29/11/2011 ರಂದು ರಾತ್ರಿ 10 ಗಂಟೆಗೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ದಶರಥ ತಂದೆ ಮಾನು ರಾಠೋಡ ಇತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ನಮ್ಮ ತಾಂಡಾದ ಯೇಸು ತಂದೆ ಮಾನು ರಾಠೋಡ ಸಂ:6 ಜನರು ಸಾ:ಎಲ್ಲರೂ ಮದ್ನಾಳತಾಂಡಾ ಕೂಡಿಕೊಂಡು ಟಾವೇರಾ ಚವರಲೇಟ ನಂ.ಕೆಎ-05/ಎಮ್‌ಸಿ.4406 ನೇದ್ದರಲ್ಲಿ ಕುಳಿತುಕೊಂಡು ಸಾಂಬಳಾಪುರ ತಾಂಡಾ ಯಾದಗೀರ ತಾಲ್ಲೂಕಾ ಅಲ್ಲಿಗೆ ಭಜನೆ ಮಾಡಲು ಹೋಗುವಾಗ ಶಂಕರವಾಡಿ ಬಸಸ್ಟಾಂಡ ಎದರುಗಡೆ ರೋಡಿನ ಮೇಲೆ ಹೋಗುತ್ತಿರುವಾಗ ಎದರುಗಡೆ ಮಾಲಗತ್ತಿ ಕಡೆಯಿಂದ ಒಂದು ಲೋಡ ಮಾಡಿದ ಲಾರಿ ನಂ.ಕೆಎ-32/ಎ-7120 ನೇದ್ದರ ಚಾಲಕ ಸದರಿ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ನಮ್ಮ ವಾಹನದಲ್ಲಿ ಕುಳಿತ ಗಾಯಾಳು ದಶರಥ ತಂದೆ ಮಾನು ರಾಠೋಡ ಸಂಗಡವಿದ್ದ 6 ಜನರಿಗೆ ಸಣ್ಣ ಪುಟ್ಟ ಗಾಯ ಮತ್ತು ಭಾರಿ ಗಾಯಗಳಾಗಿರುತ್ತವೆ. ಅಪಘಾತಪಡಿಸಿದ ನಂತರ ಸದರಿ ಲಾರಿ ಚಾಲಕ ಮತ್ತು ಕ್ಲೀನರ ಇವರು ಲಾರಿಯನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾರೆ. ಕಾರಣ ಸದರಿ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಶಹಾಬಾದ ನಗರ ಠಾಣೆಯಲ್ಲಿ ಗುನ್ನೆ ಸಂಖ್ಯೆ 182/2011 ಕಲಂ:279 337 338 ಐಪಿಸಿ ಸಂ:187ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಹ್ಮದ ಉಸ್ಮಾನ ತಂದೆ ಅಹ್ಮದ ಅಲಿ ಖುರೆಷಿ ಸಾ: ಮೋಮಿನಪುರ ಗುಲಬರ್ಗಾ ರವರು,ದಿನಾಂಕ 28-11-2011 ರಂದು ಎಮ್.ಡಿ.ಇಸಾಕ ತಂದೆ ಅಬ್ದುಲ್ ಕರೀಮ ಪಟೇಲ ಸರ್ಕಲ್ ಹತ್ತಿರದ ಸಿಂಡಿಕೇಟ ಬ್ಯಾಂಕ ಎದುರು ರೋಡಿನ ಮೇಲೆ ಹೋಗುತ್ತಿರುವಾಗ ಮೋಟಾರ ಸೈಕಲ್ ನಂ: ಕೆಎ 32 ಎಕ್ಸ 3795 ನೇದ್ದರ ಸವಾರ ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಎಮ್.ಡಿ.ಇಸಾಕ ತಂದೆ ಅಬ್ದುಲ್ ಕರೀಮ ಈತನಿಗೆ ಅಪಘಾತಪಡಿಸಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ್ ಸಮೇತ ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆ 153/11 ಕಲಂ: 279 .338 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಪೂರ ಠಾಣೆ : ಖಚಿತ ಬಾತ್ಮಿ ಮೇರೆಗೆ ಮಾನ್ಯ ಎ.ಎಸ್.ಪಿ ಎ ಉಪ-ವಿಭಾಗ ರವರ ನೇತ್ರತ್ವದಲ್ಲಿ ಶ್ರೀ ಶರಣಬಸವೇಶ್ವರ ಇನ್ಸ್ ಪೆಕ್ಟರ್ ಬ್ರಹ್ಮಪುರ ಠಾಣೆ ರವರು, ಸಿಬ್ಬಂದಿ ಜೊತೆ ಜಿ.ಜಿ.ಹೆಚ್ ಕ್ರಾಸ ಹತ್ತಿರ ಮಟಕಾ ಜೂಜಾಟ ನಡೆಸುತ್ತಿದ್ದ ರಾಜು ತಂದೆ ಸಾಮುವೆಲ್ ರಾಯಚೂರಕರ್ ಸಾ|| ಸುಂದರ ನಗರ ಗುಲಬರ್ಗಾ ನನ್ನು ದಾಳಿ ಮಾಡಿ ಬಂಧಿಸಿದ್ದು, ಸದರಿಯವನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 1) ನಗದು ಹಣ 3140/-, 2) ಒಂದು ಮಟಕಾ ಚೀಟಿ, 3) ಒಂದು ಬಾಲಪೆನ್ನ, 4) ಒಂದು ನೊಕಿಯಾ ಮೊಬೈಲ ಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತನ ವಿರುದ್ದ ಬ್ರಹ್ಮಪೂರ ಠಾಣೆಯಲ್ಲಿ ಗುನ್ನೆ ನಂ: 216/11 ಕಲಂ: 78(III) ಕೆ.ಪಿಆಕ್ಟ್ ಮತ್ತು 420 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಗ್ರಾಮೀಣ ಠಾಣೆ : ಶ್ರೀ ನಾಗೇಶ ತಂದೆ ಸುಬ್ರಮಣ್ಯಂ ಭಟ್ ಸಾ: ಬ್ಯಾಂಕ ಕಾಲನಿ ಗುಲಬರ್ಗಾ ರವರು, ದಿನಾಂಕ 28-11-11 ರಂದು ಸೋಮುವಾರ ರಾತ್ರಿ 18 ಟಾಯರಗಳು ರೂಮನಲ್ಲಿ ಇಟ್ಟು ಹೋಗಿರುತ್ತೇವೆ ಎಂದಿನಂತೆ ನಾವು ಆಪೀಸಿಗೆ ಬಂದಿದ್ದು ಬೆಳ್ಳಿಗ್ಗೆ 9:30 ಎಎಮಕ್ಕೆ 29-11-2011 ರಂದು ಬಂದಾಗ ನಮ್ಮ ಲಾರಿ ಚಾಲಕನಾದ ಚಂದ್ರಕಾಂತ ರೂಮ ಕೊಂಡಿ ಮುರಿದಿದನ್ನು ಕಂಡು ನಮಗೆ ಬಂದು ತಿಳಿಸಿದನು ನಾನು ಮತ್ತು ಹರೀಶ ಕೂಡಿ ಹೋಗಿ ನೋಡಲಾಗಿ ನಾವು ಇಟ್ಟಿದ್ದ 18 ಟಾಯರಗಳನ್ನು 10 ಟಾಯರಗಳನ್ನು ರಾತ್ರಿ ವೇಳೇಯಲ್ಲಿ ಯಾರೋ ಕಳ್ಳರು ಬಂದು ನಮ್ಮ ಸ್ಟೋರ ರೂಮಿನ ಕೀಲಿ ಮುರಿದು ಜೆ, ಕೆ ಕಂಪನಿಯ ಹತ್ತು ಟಾಯರಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಅದರ ಮೊತ್ತ 1,40,000/-ರೂ.ಗಳು ಆಗುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 357/2011 ಕಲಂ 457 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀಮತಿ ಲಕ್ಷ್ಮೀ ಅಂಬಿಕಾ ಗಂಡ ಚಂದ್ರಕಾಂತ ಮಾಲಿ ಪಾಟೀಲ ಮು:ಆಳಂದ ಚೆಕ್ಕಪೊಸ್ಟ ರಾಮತೀರ್ಥ ಹತ್ತಿರ ಗುಲಬರ್ಗಾ ರವರು, ದಿನಾಂಕ:27-11-2011 ರಂದು ನಾನು ಮತ್ತು ನನ್ನ ತಂದೆ ತಾಯಿ ಹಾಗು ನಮ್ಮ ತವರುಮನೆಯ ಶಿವಶರಣಪ್ಪಾ ತಂದೆ ಬವಂತರಾವ ಪಟೀಲ ಮತ್ತು ಅಶೋಕ ತಂದೆ ನೀಲಕಂಟಪ್ಪಾ ವಾಗಣಗೇರಿ ಇವೆಲ್ಲರೂ ಕೂಡಿ ನನ್ನ ಗಂಡನ ಮೆನೆಗ ಹೋಗಿದ್ದು ಮನೆಯಲ್ಲಿ ನನ್ನ ಗಂಡ ಚಂದ್ರಕಾಂತ ತಂದೆ ಸುಬಾಷ ಮಾಲಿಪಾಟೀಲ ಮಾವ ಸುಭಾಶ ಮಾಲಿಪಾಟೀಲ ಅತ್ತೆ ಶ್ರೀದೇವಿ ಮತ್ತು ಮೈದುನ ರವಿ ಇವರೆಲ್ಲರೂ ಇದ್ದು ಅವರಿಗೆ ನಮ್ಮೂರಿನ ಮುಖಂಡರಾದ ಶಿವಶರಣಪ್ಪ ಮತ್ತು ಅಶೋಕ ಕೂಡಿ ನನ್ನ ಗಂಡನಿಗೆ ನಿನ್ನ ಹೆಂಡತಿಗೆ ಮನೆಯಲ್ಲಿಟ್ಟು ಕೊಳ್ಳು ಹೀಗೆ ಎಷ್ಟು ವರ್ಷ ಅಂತಾ ಅವಳು ತವರುಮನೆಯಲ್ಲಿ ಇರಬೆಕು ಅಂತ ಅಂದಾಗ ಹಾಗು ನನ್ನ ಗಂಡ ಚಂದ್ರಕಾಂತ ಅತ್ತೆ ಮಾವ ಮೈದುನ ಕೂಡಿ ಬಂದು ನನಗೆ ಮತ್ತು ನನ್ನ ತಂದೆ ತಾಯಿಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಎಷ್ಟು ಸಾರಿ ಹೇಳಬೇಕು ನಿಮಗೆ ಅವಳನ್ನು ನಾವು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುದಿಲ್ಲಾ ಅಂತಾಹೇಳಿ ಕೈಯಿಂದ ಹೊಡೆ ಬಡೆಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ಸಂಖ್ಯೆ 358/2011 ಕಲಂ 498 (ಎ) 323 504 506 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀ ಶ್ರೀನಾಥ ತಂದೆ ಶಂಕ್ರೆಪ್ಪ ಮಿಂಚನ್ ಸಾ:ಸಾವಳಗಿ (ಬಿ) ಗ್ರಾಮ ಹಾ:ವ:ಬಿದ್ದಾಪೂರ ಕಾಲನಿ ಗುಲಬರ್ಗಾ ರವರು, ದಿನಾಂಕ 29-11-2011 ರಂದು ನಾನು ಮತ್ತು ನನ್ನ ಅಳಿಯ ಮಲ್ಲಪ್ಪ ಮೋಟಾರ ಸೈಕಲ ಹಿರೋ ಹೊಂಡಾ ಶೈನ್ ಕೆಎ 32 ಎಕ್ಸ 6875 ನೇದ್ದರ ಮೇಲೆ ಕುಳಿತು ಕೊಂಡು ಮನೆಯ ಹೊರಟಿದ್ದು, ರೇಲ್ವೆ ಗೇಟ ದಾಟಿ ಸ್ವಲ್ಪ ಮುಂದೆ ರೋಡಿನ ಮೇಲೆ ಮಧ್ಯದಲ್ಲಿ ಹೊರಟಾಗ ಎದುರು ನಿಂದ ಅಂದರೆ ಅಫಜಲಪೂರ ರೋಡ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರ ಕೂಡಾ ತನ್ನ ಮೋಟಾರ ಸೈಕಲನ್ನು ಅತಿವೇಗದಿಂದ ನಡೆಸುತ್ತಾ ರೋಡ ಮಧ್ಯದಲ್ಲಿ ಹೊರಟಿದ್ದು ಎರಡು ಮೋಟಾರ ಸೈಕಲ ಚಾಲಕರು ತಮ್ಮ ತಮ್ಮ ಸೈಡಿಗೆ ಹೋಗದೇ ರೋಡಿನ ಮಧ್ಯದಲ್ಲಿ ವೇಗವಾಗಿ ನಡೆಯಿಸುತ್ತಾ ಬಂದವರೇ ಒಮ್ಮಿಂದ ಒಮ್ಮೇಲೆ ಎರಡು ವಾಹನ ಚಾಲಕರು ಮುಖಾಮುಖಿ ಡಿಕ್ಕಿ ಹೊಡೆದರು. ಅಪಘಾತವಾಗಿ ನನಗೆ ಭಾರಿ ರಕ್ತಗಾಯವಾಗಿದ್ದು, ಕಾರಣ ಸದರಿ ಎರಡು ಮೋಟಾರ ಸೈಕಲ ಸವಾರರಾದ 1. ಮಲ್ಲಪ್ಪ @ ಮಲ್ಲಿಕಾರ್ಜುನ ತಂದೆ ಪ್ರಭು ದೊಡ್ಡಮನಿ ಸಾ: ಗೋಬ್ಬುರ(ಕೆ) ಮೋಟಾರ ಸೈಕಲ ನಂ ಕೆಎ 32 ಎಕ್ಸ್‌‌ 6875 ನೇದ್ದರ ಸವಾರ 2. ಲಕ್ಷ್ಮೀಪುತ್ರ ತಂದೆ ಶಿವಲಿಂಗಪ್ಪ ಸಾ: ಗೋಟುರು ಸಧ್ಯ ಕಾಂತಾ ಕಾಲನಿ ಗುಲಬರ್ಗಾ ಮೋಟಾರ ಸೈಕಲ ನಂ ಕೆಎ 32 ಎಚ 9763 ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ಸಂಖ್ಯೆ 359/2011 ಕಲಂ 279 337 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

29 November 2011

GULBARGA DIST REPORTED CRIME

ವೈದ್ಯರ ನಿರ್ಲಕ್ಷತನದಿಂದ ಮಹಿಳೆ ಸಾವು:

ಅಶೋಕ ನಗರ ಠಾಣೆ : ಶ್ರೀ. ಮಲ್ಲಪ್ಪಾ ತಂದೆ ಸಾಯಿಬಣ್ಣ ಕವಾಲ್ದರ ಸಾ: ಕೊಡಚಿ ತಾ: ಜೇವರ್ಗಿ ಜಿ: ಗುಲಬರ್ಗಾ ರವರು ನನ್ನ ಅಕ್ಕನವರಾದ ಶ್ರೀಮತಿ ಶರಣಮ್ಮಾ ಗಂಡ ಹುಲಗಪ್ಪಾ ಸಾ: ಕೊಡಚಿ ವಯಸ್ಸು 38 ವರ್ಷ ಇವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಇವರನ್ನು ತಪಾಸಣೆ ಸಲುವಾಗಿ ದಿನಾಂಕ 22/11/2011 ರಂದು ಬೆಳಿಗ್ಗೆ ಅಂದಾಜು 11 ಗಂಟೆಗೆ ಗುಲಬರ್ಗಾದ ಶೋಭಾ ಹೆರಿಗೆ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು, ಡಾ|| ಶೋಭಾ ಪಾಟೀಲ ಇವರು ಸರಿಯಾಗಿ ಆಫರೇಶನ್ (ಶಸ್ತ್ರ ಚಿಕಿತ್ಸೆ) ಮಾಡದೆ ನಿರ್ಲಕ್ಷತನ ಮಾಡಿದ್ದರಿಂದ ಆಫರೇಶನ್ ಮಾಡಿದ ಜಾಗದಲ್ಲಿಂದ ರಕ್ತ ಶ್ರಾವ ಆಗುತ್ತರಿದ್ದ ಡಾಕ್ಟರವರೆ ಖುದ್ದಾಗಿ ಸಿದ್ದಗಂಗಾ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೆರಿಕೆ ಮಾಡಿದ್ದು , ಅಲ್ಲಿಯೂ ಗುಣಮುಖವಾಗದೇ ಇರುವದರಿಂದ ದಿನಾಂಕ : 24/11/2011 ರಂದು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಸಿರುತ್ತೆವೆ ಶ್ರೀಮತಿ ಶರಣಮ್ಮ ಇವಳು ಸಾವು ಬದುಕಿನ ನಡುವೆ ಹೊರಾಡುತ್ತ ದಿನಾಂಕ: 28/11/2011 ರಂದು ಈ ಪ್ರಕರಣದಲ್ಲಿ ನೊಂದ ಶ್ರೀಮತಿ ಶರಣಮ್ಮ ಗಂಡ ಹುಲುಗಪ್ಪ ಗುರೆಕಾರ ಇವಳು ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 127/2011 ಕಲಂ 269, 337, 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ. ದ್ದು ಇರುತ್ತದೆ.

28 November 2011

GULBARGA DIST REPORTED CRIMES

ಜೂಜಾಟ ಪ್ರಕರಣ:

ಶಹಾಬಾದ ನಗರ ಠಾಣೆ : ಶಹಾಬಾದ ನಗರದ ಅಪ್ಪರ ಮಡ್ಡಿ ರೇಲ್ವೆ ಗೇಟ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಫೀಟ ಜೂಜಾಟ ಆಡುತ್ತಿದ್ಧಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಇನ್ಸಪೇಕ್ಟರ ಶಹಬಾದ ನಗರ ಠಾಣೆರವರು ಮತ್ತು ಠಾಣೆಯ ಸಿಬ್ಬಂದಿಯವರಾದ ಲಕ್ಷ್ಮಣ ಎ.ಎಸ.ಐ , ಗುಂಡಪ್ಪಾ ಸಿಪಿಸಿ, ಯೆಜಿಕಲ್ ಸಿಪಿಸಿ, ಅಮೀರಅಲಿ ಸಿಪಿಸಿ, ಶಿವರಾಜ ಸಿಪಿಸಿ, ನಾಗೇಂದ್ರಪ್ಪಾ ಸಿಪಿಸಿ ರವರು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಂದರ ಬಾಹರ ಜೂಜಾಟದಲ್ಲಿ ನಿರತರಾದ ರಮೇಶ ತಂದೆ ಬಸವರಾಜ ಹೂಗಾರ ಹಾಗೂ ಇನ್ನೂ ಮೂರು ಜನರು ಸಾ:ಎಲ್ಲರೂ ಶಹಾಬಾದ ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಒಟ್ಟು 610/-ರೂ ಮತ್ತು 52 ಇಸ್ಟೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:

ವಾಡಿ ಪೊಲೀಸ ಠಾಣೆ: ದಿನಾಂಕ 27-11-2011 ರಂದು 3 ಗಂಟೆಯ ಸುಮಾರು ಸಿಂಡಿಕೆಟ ಏರಿಯಾದ ನಾರಿಮನ ಶೇಠ ಇವರ ಸಂಬಂಧಪಟ್ಟ ಹಳೆಯ ಕಟ್ಟಡದ ಮುಂದಿನ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದ ಬಗ್ಗೆ ಬಂದ ಖಚಿತ ಬಾತ್ಮಿ ಮೇರೆಗೆ ಸಿಪಿಐ ಚಿತ್ತಾಪೂರ ವೃತ್ತ ರವರ ನೆತೃತ್ವದಲ್ಲಿ ಪಿಎಸ್ಐ (ಕಾಸು) ರವರು ಸಿಬ್ಬಂದಿಯೊಂದಿಗೆ ಜೂಜಾಟದಲ್ಲಿ ನಿರತರಾದ ಸಂತೋಷ ತಂದೆ ಧರೆಪ್ಪಾ ಬಿರಾದಾರ ಸಾ|| ಗುಲಬರ್ಗಾ ಹಾಗು ಶಿವಲಿಂಗಪ್ಪಾ, ರಾಜು, ಶಿವಶರಣಪ್ಪಾ, ರಮೇಶ, ನಾಗರಾಜ, ಸುನೀಲ, ಶಾನವಾಜ, ಸಿದ್ದಪ್ಪಾ, ಸಲೀಂ ,ಆಫ್ರೊಜ, ಮೋತಿರಾಮ, ರಾಜು, ಖಾಸಿಂ, ಮೆಹಬೂಬ, ಸಿದ್ದರಾಮ, ಅಕ್ತರಪಾಶಾ, ಮಹಮದ ಶರಿಫ ರವರನ್ನು ವಶಕ್ಕೆ ತೆಗೆದುಕೊಂಡು ನಗದು ಹಣ ಒಟ್ಟು 105023 ರೂ ಮತ್ತು 52 ಇಸ್ಪಿಟ ಎಲೆ 2 ಚಾಪೆಗಳು ಮತ್ತು 12 ಮೊಟರ ಸೈಕಲಗಳು ಅ||ಕಿ|| ಒಟ್ಟು 225000 ಬೆಲೆಬಾಳುವ ಮೋಟರ ಸೈಕಲ ಜಪ್ತ ಪಡಿಸಿಕೊಂಡಿರುತ್ತಾರೆ. ಮತ್ತು ಜೂಜಾಟದ ನಡೆಸುತ್ತಿದ್ದ ಮಾಲಿಕ ಖಧಿರ ತಂದೆ ಮಹಮ್ಮದ ಹುಸೇನ ಓಡಿ ಹೊಗಿರುತ್ತಾನೆ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಂಡಿದ್ದರಿಂದ ಠಾಣೆ ಗುನ್ನೆ ನಂ 223/2011 ಕಲಂ 87 ಕೆ,ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಮಹಿಳೆಯ ಕೊಲೆ:

ದೇವಲಗಾಣಗಾಪೂರ ಠಾಣೆ: ಮಾರುತಿ ತಂದೆ ಭೀಮಶ್ಯಾ ದೇವರಮನಿ ಉ: ಲಾಡ್ಜ ವ್ಯವಹಾರ ಸಾ|| ದೇವಲಗಾಣಗಾಪೂರ ರವರು ನಾನು ಕೆಲಸ ಮಾಡುವ ರಘುನಂದನ ಲಾಡ್ಜದಲ್ಲಿ ನಿನ್ನೆ ದಿನಾಂಕ: 26-11-2011 ರಂದು ರಾತ್ರಿ 9:30 ಗಂಟೆ ಸುಮಾರಿಗೆ ನನ್ನ ಮಗ ಅಶ್ವತ ಇವನು ಲಾಡ್ಜನಲ್ಲಿ ಇದ್ದಾಗ ಒಬ್ಬನು ಸುಮಾರು 20 ರಿಂದ 25 ವರ್ಷದ ಹುಡುಗ ಮತ್ತು ಒಬ್ಬಳು ಹೆಣ್ಣು ಮಗಳೊಂದಿಗೆ ನಮ್ಮ ಲಾಡ್ಜಿಗೆ ಬಂದು ದೇವರ ದರ್ಶನಕ್ಕಾಗಿ ಬಂದಿದ್ದೆವೆ, ನಾನು ನನ್ನ ತಾಯಿ ಬಂದಿದ್ದು ಒಂದು ರೂಮ ಕೊಡಲು ಕೇಳಿದರು, ನಾವು ಅವರಿಗೆ ನಮ್ಮ ಲಾಡ್ಜಿನ 11 ನೇ ನಂ. ರೂಮ ಬಾಡಿಗೆ ಕೊಟ್ಟೆವು. ನಮ್ಮ ಲಾಡ್ಜಿಂಗದ ಎಂಟ್ರಿ ರಜಿಸ್ಟ್ರದಲ್ಲಿ ಅವನು ತನ್ನ ಹೆಸರು, ರಾಜಕುಮಾರ ತಂದೆ ಸಿದ್ದಪ್ಪ ದೇವಿ ಕಾಲೋನಿ ತಾರಪೈಲ್ ಗುಲಬರ್ಗಾ ಅಂತಾ ಬರೆದು ತನ್ನ ಮೊ. ನಂ. 9972082210 ಅಂತಾ ಬರೆದಿರುತ್ತಾನೆ. ಇಬ್ಬರೂ ರೂಮಿನಲ್ಲಿ ಹೋದ ನಂತರ ರಾಜಕುಮಾರನು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋಗಿ ಬಂದಿರುತ್ತಾನೆ. ದಿನಾಂಕ:27-11-2011 ರಂದು ಬೆಳಗಿನ ಜಾವ 02:30 ಗಂಟೆ ಸುಮಾರಿಗೆ ರಾಜಕುಮಾರನು ತಾನು ಇದ್ದ ರೂಮಿನ ಕೊಂಡಿ ಹಾಕಿ ಹೊರಗೆ ಬಂದು ನಮ್ಮ ದೊಸ್ತರು ಇಲ್ಲೆ ಬಸ್ಸ ಸ್ಟ್ಯಾಂಡನಲ್ಲಿ ಬಂದಿದ್ದಾರೆ, ಅವರಿಗೂ ರೂಮ ಬಾಡಿಗೆ ಬೇಕಾಗಿದೆ ಅವರಿಗೆ ಕರೆದುಕೊಂಡು ಬರುತ್ತೇನೆ ಅಂತಾ ಅಂದಾಗ ನಮ್ಮ ಹುಡುಗ ವಿಶಾಲನಿಂದ ಲಾಡ್ಜಿನ ಮೇನ ಶಟರ್ ಬಾಗಿಲು ತಗೆಸಿಕೊಂಡು ಹೊರಗಡೆ ಹೋಗಿರುತ್ತಾನೆ. ಅವನು ಹೋರಗಡೆ ಹೋದವನು ಬಂದಿರಬಹುದೆಂದು ನಾವು ಸುಮ್ಮನಿದ್ದೆವು. ಈ ದಿನ ಹಗಲು ಹೊತ್ತಿನಲ್ಲಿ ಆ ರೂಮಿನಲ್ಲಿದ್ದವರು ಯಾರು ಹೊರಗಡೆ ಬರದೆ ಇದುದ್ದರಿಂದ ನಮಗೆ ಸಂಶಯ ಬಂದು ಬಾಗಿಲು ತೆರೆದು ನೋಡಲು ಹೆಣ್ಣು ಮಗಳ ಶವ ಬೆತ್ತಲಾಗಿ ಅಂಗಾತವಾಗಿ ಬಿದ್ದಿತ್ತು. ಅವಳ ಎರಡು ಕೈಗೆ ದಾರದಿಂದ ಕಟ್ಟಿದ್ದು ಅವಳ ವಯಸ್ಸು ಅಂದಾಜು 40 ರಿಂದ 45 ವರ್ಷ ಇರಬಹುದು ರಾಜಕುಮಾರ ಇತನು ಯಾವುದೋ ವಿಷಯದಲ್ಲಿ ಅವಳೊಂದಿಗೆ ದ್ವೇಷ ಇಟ್ಟುಕೊಂಡು ಅವಳಿಗೆ ದೇವರ ದರ್ಶನದ ನೆಪದಲ್ಲಿ ದೇವಲಗಾಣಗಾಪೂರಕ್ಕೆ ಕರೆದುಕೊಂಡು ಬಂದು ರಾತ್ರಿ ಕತ್ತು ಹಿಚುಕಿ ಕೊಲೆ ಮಾಡಿ ಹೋಗಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 118/2011 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

27 November 2011

GULBARGA DIST REPORTED CRIMES

ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಸತೀಶ ತಂದೆ ಬೈಲಪ್ಪಾ ಸಾ:ಅಪ್ಪರಮಡ್ಡಿ ಶಹಾಬಾದ ರವರು ನಾನು ನನ್ನ ಮೋಟಾರ ಸೈಕಲ್ ನಂ: ಕೆಎ 32 ಈಕ್ಯೂ2163 ನೇದ್ದು ಶಹಾಬಾದ ನಗರದ ಸಭೆ ಆಪೀಸ್ ಎದುರುಗಡೆ ದಿನಾಂಕ:16/11/2011 ರಂದು 10.00 ಗಂಟೆ ಸುಮಾರಿಗೆ ನಿಲ್ಲಿಸಿದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 178/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .

ಶಹಾಬಾಧ ನಗರ ಠಾಣೆ: ದಿನಾಂಕ 26/11/11 ರಂದು ಮುಂಜಾನೆ 11-05 ಗಂಟೆಯ ಸುಮಾರಿಗೆ ಪೊಲೀಸ್ ಇನ್ಸಪೇಕ್ಟರ್ ರವರು ಮತ್ತು ಮತ್ತು ಸಿಬ್ಬಂದಿಯವರು ಪೆಟ್ರೋಲಿಂಗ ಮಾಡುತ್ತ ಹೊರಟಾಗ ರೈಲ್ವೇ ನಿಲ್ದಾಣದ ಎದುರಗಡೆ ಸತೀಶ ತಂದೆ ಶಂಕರ ಇತನು ತನ್ನನ್ನು ಮರೆ ಮಾಚಿಕೊಳ್ಳುತ್ತಿರುವದ್ನು ಗಮನಿಸಿ ಸಂಶಯ ಬಂದ್ದಿದ್ದರಿಂದ ಅವನನ್ನು ಚೆಕ್ಕ ಮಾಡಲಾಗಿ ಆತನಲ್ಲಿ 4 ಮೋಬೈಲಗಳು ದೊರೆತ್ತಿದ್ದು ಅವುಗಳ ಬಗ್ಗೆ ಸರಿಯಾದ ಉತ್ತರ ನೀಡಲಾರದ ಕಾರಣ ಆತನನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಮೋಬಾಯಿಲ್ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 179/2011 ಕಲಂ 41 (ಡಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ:

ಚೌಕ ಪೊಲೀಸ್ ಠಾಣೆ: ಶ್ರೀ ಪದ್ಮನಾಭ ತಂದೆ ಹನುಮಂತಚಾರಿ ವಯ 55 ವರ್ಷ ಉಃ ಎಸ್.ಬಿ.ಹೆಚ್ ಬ್ಯಾಂಕ ನೆಹರು ಗಂಜದ ಮ್ಯಾನೇಜರ ಗುಲಬರ್ಗಾ ರವರು ನೆಹರು ಗಂಜದ ಎದುರುಗಡೆ ಇರುವ ನಮ್ಮ ಎಸ.ಬಿ.ಎಚ. ಎ.ಟಿ.ಎಮ್ ಮಶೀನ್ ನ್ನು ದಿನಾಂಕ 27.11.2011 ರಿಂದ 28-11-2011 ರ ಬೆಳಗಿನ ಜಾವದ ತನಕ ಯಾರೋ ಕಳ್ಳರು ಎ.ಟಿ.ಎಂ ಮಶಿನ ಒಡೆದು ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 238/2011 ಕಲಂ 454, 457, 380 , 511 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮತಿ ಚಂದ್ರಕಲಾ ಗಂಡ ರಾಜಕುಮಾರ ಮೂಲಭಾರತಿ ಸಾ; ಕೆ.ಹೆಚ್.ಬಿ.ಕಾಲೋನಿ ರಾಜಾಪೂರ ಗುಲಬರ್ಗಾ ರವರು ನಾನು ದಿನಾಂಕ 26-11-2011 ರಂದು ರಾತ್ರಿ 9-30 ಗಂಟೆಗೆ ಸುಪರ ಮಾರ್ಕೇಟ ದಿಂದ ಎಸ್.ವಿ.ಪಿ.ಸರ್ಕಲ್ ಮೇನ ರೋಡಿನಲ್ಲಿ ಬರುವ ಜಗತ ಸರ್ಕಲ್ಹ ಹತ್ತಿರದ ಮಹಾನಗರ ಪಾಲಿಕೆಯ ಕಮಿಷನರ ಮನೆಯ ಕಂಪೌಡ ಗೋಡೆಯ ಹತ್ತಿರ ರೋಡಿನ ಮೇಲೆ ಅಟೋರೀಕ್ಷಾ ನಂ: ಕೆಎ 32 ಎ 7537 ನೇದ್ದರ ಚಾಲಕ ರಾಜಕುಮಾರ ಇತನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತನ್ನಿಂದ ತಾನೆ ಅಟೋ ಪಲ್ಟಿಮಾಡಿ ಭಾರಿ ಗಾಯಹೊಂದಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 152/2011 ಕಲಂ 278, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST


ಆಸ್ತಿಗಾಗಿ ವೃದ್ದನ ಕೊಲೆ, ಮಗ, ಮೊಮ್ಮಕಳ ಸೇರಿ ಮೂರು ಜನರ ಬಂಧನ

ದಿನಾಂಕ 25/11/2011 ರಂದು ರಾತ್ರಿ 11-00 ಗಂಟೆಗೆ ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ಹೆಚ್. ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಭೋಜರಾಜ ರಾಠೋಡ ಪಿ.ಎಸ್.ಐ ಫರಹತಾಬಾದ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ, ಕುಮಾರಿ ಶ್ರೀದೇವಿ ಬಿರಾದಾರ ಪ್ರೊ.ಪಿ.ಎಸ್.ಐ ಫರಹತಾಬಾದ ಹಾಗೂ ಸಿಬ್ಬಂದಿಯವರಾದ ಶಂಕರ ಹೆಚ್.ಸಿ, ಪ್ರಭಾಕರ ಪಿಸಿ, ಕರಣಸಿಂಗ ಪಿಸಿ, ಮಶಾಕ ಪಿಸಿ, ಚಂದ್ರಕಾಂತ ಪಿಸಿ, ಜಮೀಲ ಅಹ್ಮದ ಪಿಸಿ, ಮಶಾಕ ಪಿಸಿ ರವರು ಕೊಲೆಯಾದ ಕರಿಬಸಪ್ಪಾ ತಂದೆ ವಿರಭದ್ರಪ್ಪಾ ಕುಂಬಾರ ವಃ 75 ಸಾ|| ಹಾರುತಿ ಹಡಗಿಲ್ ಎಂಬುವರಿಗೆ ಕೊಲೆ ಮಾಡಿದ ಆತನ ಹಿರಿಯ ಮಗ ಪ್ರಭುಲಿಂಗ ತಂದೆ ಕರಿಬಸಪ್ಪ ಕುಂಬಾರ ಮತ್ತು ಮೊಮ್ಮಕ್ಕಳಾದ ಲೊಕೇಶ ತಂದೆ ಪ್ರಭುಲಿಂಗ ಕುಂಬಾರ ಹಾಗೂ ಶಿವರಾಜ ತಂದೆ ಪ್ರಭುಲಿಂಗ ಕುಂಬಾರ ಎಲ್ಲರೂ ಸಾ|| ಹಾರುತಿ ಹಡಗಿಲ್ ಇವರನ್ನು ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿದಾಗ ತನಿಖೆ ಕಾಲದಲ್ಲಿ ಆರೋಪಿತರು ಆಸ್ತಿಗಾಗಿ ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದರಿಂದ ನ್ಯಾಯಾಂಗ ಬಂಧನ ಕುರಿತು ಒಪ್ಪಿಸಲಾಗುತ್ತಿದ್ದು ಈ ಬಗ್ಗೆ ತನಿಖೆ ಮುಂದುವರೆಯಿಸಿರುತ್ತಾರೆ ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಇಲಾಖಾ ವತಿಯಿಮದ ಬಹುಮಾನ ಘೋಷಣೆ ಮಾಡಲಾಗಿದೆ.

GULBARGA DIST REPORTED CRIMES

ಕಳವು ಪ್ರಕರಣ:

ಬ್ರಹ್ಮಪೂರ ಠಾಣೆ: ಶ್ರೀ.ವಿಠಲ ತಂದೆ ಈಶ್ವರಪ್ಪ ಹೊಸಮನಿ, || ಮುಖ್ಯ ಶಿಕ್ಷಕರು ಸಾ|| ಪ್ಲಾಟ ನಂ:587/3/7 ದೇವಿ ನಗರ ಆಳಂದ ರೋಡ ಗುಲಬರ್ಗಾ ರವರು ನಾನು ದೇವಿನಗರದ ಪ್ಲಾಟ ನಂ: 587/3/7 ನೇದ್ದರಲ್ಲಿ ಮನೆ ಕಟ್ಟುವ ಸಲುವಾಗಿ ಸುಪರ ಮಾರ್ಕೆಟನಲ್ಲಿರುವ ಕಾರ್ಪೊರೇಶನ ಬ್ಯಾಂಕನಿಂದ ಸಾಲ ಪಡೆದು ದಿನಾಂಕ: 26/11/2011 ರಂದು ಬೆಳಿಗ್ಗೆ 11:00 ಗಂಟೆಗೆ ಸುಪರ ಮಾರ್ಕೆಟ ಕಾರ್ಪೊರೇಶನ ಬ್ಯಾಂಕನಿಂದ 2,05,000/- ರೂಪಾಯಿ ಡ್ರಾ ಮಾಡಿಕೊಂಡು ನನ್ನ ಮೋಟರ ಸೈಕಲ ನಂ: ಕೆಎ 32 ಆರ್ 1759 ನೇದ್ದರ ಡಿಕ್ಕಿಯಲ್ಲಿ ಹಾಕಿಕೊಂಡು ಭಾರತ ಶಿಕ್ಷಣ ಸಂಸ್ಥೆಯ ಇನ್ನೊಂದು ಶಾಲೆಯಾದ ಕನ್ಯಾ ಪ್ರೌಢ ಶಾಲೆ ಜಗತ ಗುಲಬರ್ಗಾಕ್ಕೆ ಹೋಗಿ ಶಾಲೆಯ ಮುಂದೆ ನನ್ನ ಮೋಟರ ಸೈಕಲ ನಿಲ್ಲಿಸಿ ಆಫೀಸದಲ್ಲಿ ಕೆಲಸ ಇರುವದರಿಂದ ಒಳಗೆ ಹೋಗಿ 5 ನಿಮಿಷದಲ್ಲಿ ಹೊರಗೆ ಬಂದು ನೋಡಲಾಗಿ ನನ್ನ ಡಿಕ್ಕಿಯಲ್ಲಿದ್ದ ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ರಿಹಾನ ರಸೀದ ತಂದೆ ಶೇಖ ಹಸನ ಮುಜಾವರ ಸಾ; ಎಮ್.ಐ.ಜಿ.-7 ಹೌಸಿಂಗ ಬೋರ್ಡ ಕೆ.ಹೆಚ್.ಬಿ.ಕಾಲೋನಿ ಹಳೆ ಜೇವರ್ಗಿ ಗುಲಬರ್ಗಾ ರವರು ನಾನು ದಿನಾಂಕ 26-11-2011 ರಂದು ಸಾಯಂಕಾಲ ಕೊರಂಟಿ ಹನುಮಾನ ಗುಡಿಯಿಂದ ಹಳೆ ಜೇವರ್ಗಿ ರೋಡಿನಲ್ಲಿ ಬರುವ ಆರ್ಮಿ ಬಿಲ್ಡಿಂಗ ಹತ್ತಿರ ಹೊರಟಾಗ ಮೋಟಾರ ಸೈಕಲ್ ನಂ: ಕೆಎ 32 ವಿ 4108 ನೇದ್ದರ ಸವಾರ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಪಡಿಸಿ ಅಪಘಾತ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 151/11 ಕಲಂ: 279 .337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

26 November 2011

GULBARGA DIST REPORTED CRIMES

ಹಲ್ಲೆ ಕೊಲೆ ಪ್ರಯತ್ನ ಪ್ರಕರಣ:

ದೇವಲಗಾಣಗಾಪುರ ಠಾಣೆ : ಶ್ರೀ ಪ್ರವೀಣ ತಂದೆ ದತ್ತಪ್ಪ ಕಟ್ಟಿಮನಿ ಸಾ|| ದೇವಲಗಾಣಗಾಪುರ ರವರು ನಾನು ಈಗ ಸುಮಾರು 3 ತಿಂಗಳ ಹಿಂದೆ ನಮ್ಮೂರ ದತ್ತಪ್ಪ ಹೊಸಮನಿ, ಅವಧೂತ ವಗ್ಗೆ ಇವರ ಹತ್ತಿರ ತಲಾ 500/- ರೂಪಾಯಿಯಂತೆ ಸಾಲ ಮಾಡಿದ್ದು , ಅವರು ಬಡ್ಡಿ ಸಮೇತ ವಾಪಸ ಮಾಡುವಂತೆ ಒತ್ತಾಯ ಮಾಡುತ್ತ ಬಂದಿದ್ದು ನನಗೆ ಹಣ ಮರಳಿ ಕೊಡದಿದ್ದಕ್ಕೆ ಆಗದೆ ಇದ್ದುದಕ್ಕೆ ಅವರು ನನ್ನ ಸಂಗಡ ಆಗಾಗ ತಕರಾರು ಮಾಡುತ್ತ ವೈಮನಸ್ಸು ಬೆಳಿಸಿಕೊಂಡು ಬಂದಿರುತ್ತಾರೆ. ನಾನು ರಾತ್ರಿ ರಾಜು ಅಳ್ಳಗಿ ಇವನ ಸಂಗಡ ಅಟೋಕ್ಕೆ ಪೆಟ್ರೋಲ ಹಾಕಿಕೊಂಡು ಬರಲು ಹೊರಟಾಗ ಅವಧೂತ ವಗ್ಗೆ , ದತ್ತಪ್ಪ ಹೊಸಮನಿ ಇವರು ನನ್ನನ್ನುಅಟೋದಿಂದ ಹೊರಗೆ ಎಳೆದು ಅವಾಚ್ಯ ಶಬ್ದಗಳಿಂದ ಬೈದು ದತ್ತಪ್ಪ ಇತನು ಚಾಕುವಿನಿಂದ ನನ್ನ ಕುತ್ತಿಗಿಗೆ ಹೊಡೆಯಲು ಬಂದಾಗ ನಾನು ನನ್ನ ಎಡ ಕೈ ಅಡ್ಡ ತಂದಿದ್ದಕ್ಕೆ ಆ ಏಟು ನನ್ನ ಎಡ ಕೈಗೆ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:103/2011 ಕಲಂ.341,504,323,307 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಶಿವರಾಯ ತಂದೆ ಮುತ್ತಣ್ಣ ಮರ್ತುರಕರ್ ;29 ವರ್ಷ ಉ: ಕಾರ ಚಾಲಕ ಸಾ; ಮನೆ ನಂ:2-689/5 ಬಿ ಸುಂದರ ನಗರ ಗುಲಬರ್ಗಾ ರವರು ನಗರ ಗುಲಬರ್ಗಾ ನಾನು ದಿನಾಂಕ 25-11-2011 ರಂದು ರಾತ್ರಿ 8-15 ಗಂಟೆಗೆ ಹೆಚ್.ಕೆ.ಸೊಸೈಟಿ ಫಾರಮಸಿ ಕಾಲೇಜ ಎದುರು ರೋಡಿನ ಮೇಲೆ ಕೆಎ 32 ಕ್ಯೂ 4448 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 150/2011 ಕಲಂ 279,338 ಐಪಿಸಿ ಸಂಗಡ 187 ಐಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:

ಫರಹತಾಬಾದ ಠಾಣೆ : ಶ್ರೀ ಅನೀಲ ತಂದೆ ವಾಲ್ಮೀಕ ಚವ್ಹಾಣ ವಯ: 21 ವರ್ಷ ಉ: ಕ್ಲಿನರ್ ಸಾ: ಖಾನಾಪೂರ ತಾಂಡಾ ತಾ: ಬಾಲ್ಕಿ ಜಿ: ಬೀದರ ರವರು ನಮ್ಮ ಸ್ವಂತ ಲಾರಿ ನಂ: ಕೆಎ-36 / 2216 ನೇದ್ದು ಈಗ ಕಳೇದ 4-5 ದಿನಗಳಿಂದ ಭೋಪಾಲ ತೆಗನೂರ ಗ್ರಾಮದಿಂದ ಯಾದಗಿರಿಗೆ ಕಿರಾಯಿ ಮುಖಾಂತರ ಕಬ್ಬಿನ ಲೋಡ ಹಾಕಿಕೊಂಡು ಹೋಗಿ ಬಂದು ಮಾಡುತ್ತಿದ್ದೇವು. ದಿನಾಂಕ: 25-11-2011 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಮ್ಮ ಲಾರಿಯಲ್ಲಿ ಭೋಪಾಲ ತೆಗನೂರ ಗ್ರಾಮದಿಂದ ಕಬ್ಬಿನ ಲೋಡ್ ಮಾಡಿಕೊಂಡು ಯಾದಗಿರಿಗೆ ಹೊರಟ್ಟಿದ್ದೇವು. ಲಾರಿಯನ್ನು ಮೆಹಿಬೂಬ ತಂದೆ ಗಫೂರ ಸಾಬ ಮುಲ್ಲಾವಾಲೆ ಈತನು ಚಲಾಯಿಸುತ್ತಿದ್ದು ಸರಡಗಿ ಖಣಿ ಹತ್ತಿರ ಲಾರಿ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಲಾರಿಯನ್ನು ಚಲಾಯಿಸಿಕೊಂಡು ಹೋಗಿತ್ತಿದ್ದರಿಂದ ಲಾರಿಯ ಹಿಂದುಗಡೆ ಎಡಗಡೆಯ ಟಾಯರ್ ಒಡೆದು ಲಾರಿ ವೇಗದ ಹತೋಟಿ ತಪ್ಪಿ ರಸ್ತೆಯ ಮೇಲೆ ಬೊರಲಾಗಿ ಪಲ್ಟಿಯಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 210/2011 ಕಲಂ 279 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ : ಶ್ರೀ ಸಿದ್ದಪ್ಪ ತಂದೆ ಬಸಪ್ಪ ಕೆಮಣ್ಣನವರ ಸಾ|| ಸನ್ನಾಳ ತಾ|| ಜಮಖಂಡಿ ಜಿ|| ಭಾಗಲಕೋಟ ರವರು ನಾನು ಘತ್ತರಗಾ ದೇವಿ ದರ್ಶನಕ್ಕಾಗಿ ಬಂದು ದರ್ಶನಕ್ಕಾಗಿ ಸಾಲಿನಲ್ಲಿ ನಿಂತಾಗ ನನ್ನ ಕೀಸೆಯಲ್ಲಿನ 11,000/- ರೂ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದಠಾಣೆ ಗುನ್ನೆ ನಂ. 194/11 ಕಲಂ 379 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ : ಎಸ್.ನರಸಿಂಹಲು ತಂದೆ ಲಕ್ಷ್ಮಣ ಸಾ|| ತಾಂಡೂರ ಜಿ|| ರಂಗಾರೆಡ್ಡಿ ರಾಜ್ಯ : ಆಂದ್ರ ಪ್ರದೇಶ ರವರು ನಾನು ಮತ್ತು ಸಂಜು ರಚೋಳ್ಳಿ, ಶಿವಪ್ಪಾ ಹರಿಜನ ಮೂರು ಜನರು ದೇವಿಗೆ ನಮಸ್ಕಾರ ಮಾಡುತ್ತಿದ್ದಾಗ ಯಾರೋ ಕಳ್ಳರು ನನ್ನಲ್ಲಿರುವ ನಗದು ಹಣ 4000/- ರೂ. ಸಂಜೀವನ ಹತ್ತಿರದಿಂದ 400/- ರೂ. ಹಾಗು ಶಿವಪ್ಪನ ಹತ್ತಿರದಿಂದ 400/- ರೂ. ಹೀಗೆ ಒಟ್ಟು 4800/- ರೂ. ಯಾರೋ ಕಳ್ಳರು ಜೇಬಿನಿಂದ ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 193/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ : ಶ್ರೀ ಜಕ್ಕು ತಂದೆ ದರೆಪ್ಪ ತೇಲಸಂಗಿ ಸಾ|| ಹಿರೆಬೆಣ್ಣೂರ ತಾ|| ಇಂಡಿ ಜಿ|| ಬಜಾಪೂರ ರವರು ನಾನು ದಿನಾಂಕ 25/11/2011 ರಂದು ಮಧ್ಯಾಹ್ನ ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ನದಿಯ ದಡದಲ್ಲಿ ಬಟ್ಟೆ, ಬಂಗಾರದ ಆಭರಣ, ಒಂದು ಮೋಬೈಲ ಹಾಗೂ ನಗದು ಹಣವನ್ನು ಬಟ್ಟೆಯಲ್ಲಿ ಇಟ್ಟು ಸ್ನಾನವನ್ನು ಮಾಡಲು ನೀರಿಗೆ ಇಳಿದಾಗ ಬಟ್ಟೆಯ ಮೇಲೆ ಇಟ್ಟಿದ್ದ ಆಭರಣ ನಗದು ಹಣ ಮತ್ತು ಮೋಬೆಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 195/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮನೆ ಎದುರು ನಿಲ್ಲಿಸಿದ ಮೋಟಾರ ಸೈಕಲ ಕಳ್ಳತನ:

ರಾಘವೇಂದ್ರ ನಗರ ಠಾಣೆ: ಶ್ರೀ ಭಗವಂತಪ್ಪ ತಂದೆ ಶ್ರೀಮಂತಪ್ಪ ರವರು ನಾನು ದಿನಾಂಕ 14-11-2011 ರಂದು ರಾತ್ರಿ ಮಹಾಲಕ್ಷ್ಮಿ ನಗರದಲ್ಲಿರುವ ನನ್ನ ಮನೆಯ ಮುಂದೆ ನಿಲ್ಲಿಸಿದ ಹೀರೊ ಹೊಂಡಾ ಸಿಡಿ-100 ಮೊಟಾರ್ ಸೈಕಲ್ ನಂ ಕೆಎ-32/ಕೆ-5106 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 November 2011

Gulbarga Dist Reported Crime

ಹಲ್ಲೆ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶ್ರೀಮತಿ ಕಾಂತಾಬಾಯಿ ಗಂಡ ಗೌರಿಶಂಕರ ದೇಶಟ್ಟಿ ಸಾ|| ದೇವಂತಗಿ ರವರು ನಮ್ಮ ಮನೆಗೆ ಪಕ್ಕದಲ್ಲಿ ಶರಣಬಸಪ್ಪ ತಂದೆ ತಿಪ್ಪಣ್ಣಾ ದೇಶಟ್ಟಿ ಮನೆ ಇದ್ದು ಇಬ್ಬರೂ ಅಣ್ಣತಮ್ಮಂದಿರಾಗಬೇಕು ಮನೆಯ ಮುಂದಿನ ಕಟ್ಟೆಯು ಇಬ್ಬರ ಮಧ್ಯದಲ್ಲಿದ್ದು ಮಹಾದೇವಿ ಗಂಡ ತಿಪ್ಪಣ್ಣಾ ಇವಳು ಬಟ್ಟೆ ಒಗೆದ ನೀರು ಕಟ್ಟೆಯ ಮೇಲೆ ಚೆಲ್ಲಿದ್ದು, ಚೆಲ್ಲಿದ್ದ ನೀರು ನಮ್ಮ ಮನೆಯ ಒಳಗೆ ಹೋಗಿದ್ದರಿಂದ ಕೇಳಿದ್ದಕ್ಕೆ ಶರಣಬಸಪ್ಪನು ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಬಲಗೈ ಹಸ್ತದ ಹತ್ತಿರ, ಮುಂಗೈ ಹತ್ತಿರ ಮತ್ತು ಬಲಗೈ ಮುಂಡೆಗೆ ಹೊಡೆದು ಸಾದಾ ಮತ್ತು ಭಾರಿ ಗುಪ್ತ ಗಾಯಪಡಿಸಿದ್ದು ಮತ್ತು ಮಾನ ಭಂಗ ಮಾಡುವ ಉದ್ದೇಶದಿಂದ ಅವರ ತಲೆಯ ಕೂಡಲು ಹಿಡಿದ್ದು ಬಗ್ಗಿಸಿ ಬೆನ್ನ ಮೇಲೆ ಹೊಡೆದಿದ್ದು, ಮತ್ತು ಮಹಾದೇವಿ ಇವಳು ಸಹ ಹೊಡೆದು ಗುಪ್ತಗಾಯಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 123/2011 ಕಲಂ.323, 324,354, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Gulbarga Dist Reported Crime

ಮಟಕಾ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 24/11/2011 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಚಿದಾನಂದ ತಂದೆ ಬಾಬುರಾವ ಕಾಂಬಳೆ ಸಾ|| ನಿಂಬರ್ಗಾ ತಾ|| ಆಳಂದ ಇತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಮಟಕಾ ಆಡಿರಿ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಜನರಿಗೆ ಹೇಳುತ್ತಾ ಹಣ ಪಡೆದು ಮಟಕಾ ಜೂಜಾಟ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರ ಜೋತೆ ಪಿ.ಎಸ.ಐ ಶ್ರೀ ಎಸ್.ಎಸ್ ದೊಡ್ಡಮನಿ ಮತ್ತು ಠಾಣೆಯ ಸಿಬ್ಬಂದಿಯರಾದ ದೇವಿಂದ್ರಪ್ಪ ಎ.ಎಸ್.ಐ. ನಿಸಾರ ಅಹಮದ ಸಿಪಿಸಿ, ಶಿವರಾಯ ಸಿಪಿಸಿ ರವರು ಕುಡಿಕೊಂಡು ಮಟಾಕಾ ಬರೆಡುಕೊಳ್ಳುತ್ತಿದ್ದ ಶ್ರೀ ರಾಜಶೇಖರ ತಂದೆ ಶಂಕರ ಹೊನಗುಂಡ ಸಾ|| ನಿಂಬರ್ಗಾ ಮತ್ತು ಶ್ರೀ ಬಸವರಾಜ ತಂದೆ ನಾಗಪ್ಪ ಕೋರೆ ಸಾ|| ನಿಂಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 570/- ರೂ, ಪೆನ್ನು, ಹಾಗೂ ಮಟಕಾ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಅಲ್ಲದೇ ಮಟಕಾ ಚೀಟಿ ತೆಗೆದುಕೊಳ್ಳುವರಾದ ರಪೀಕ ಸಾ|| ಬೈರಾಮಡಗಿ ಮತ್ತು ಚಿದಾನಂದ ತಂದೆ ಬಾಬುರಾವ ಕಾಂಬಳೆ ಸಾ|| ನಿಂಬರ್ಗಾ ತಾ|| ಆಳಂದ ಇವರ ಮೇಲೆ ಕ್ರಮ ಕೈಕೊಳ್ಳುವ ಕುರಿತು ಠಾಣೆ ಗುನ್ನೆ ನಂ. 122/2011 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.