POLICE BHAVAN KALABURAGI

POLICE BHAVAN KALABURAGI

29 November 2011

GULBARGA DIST REPORTED CRIME

ವೈದ್ಯರ ನಿರ್ಲಕ್ಷತನದಿಂದ ಮಹಿಳೆ ಸಾವು:

ಅಶೋಕ ನಗರ ಠಾಣೆ : ಶ್ರೀ. ಮಲ್ಲಪ್ಪಾ ತಂದೆ ಸಾಯಿಬಣ್ಣ ಕವಾಲ್ದರ ಸಾ: ಕೊಡಚಿ ತಾ: ಜೇವರ್ಗಿ ಜಿ: ಗುಲಬರ್ಗಾ ರವರು ನನ್ನ ಅಕ್ಕನವರಾದ ಶ್ರೀಮತಿ ಶರಣಮ್ಮಾ ಗಂಡ ಹುಲಗಪ್ಪಾ ಸಾ: ಕೊಡಚಿ ವಯಸ್ಸು 38 ವರ್ಷ ಇವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಇವರನ್ನು ತಪಾಸಣೆ ಸಲುವಾಗಿ ದಿನಾಂಕ 22/11/2011 ರಂದು ಬೆಳಿಗ್ಗೆ ಅಂದಾಜು 11 ಗಂಟೆಗೆ ಗುಲಬರ್ಗಾದ ಶೋಭಾ ಹೆರಿಗೆ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು, ಡಾ|| ಶೋಭಾ ಪಾಟೀಲ ಇವರು ಸರಿಯಾಗಿ ಆಫರೇಶನ್ (ಶಸ್ತ್ರ ಚಿಕಿತ್ಸೆ) ಮಾಡದೆ ನಿರ್ಲಕ್ಷತನ ಮಾಡಿದ್ದರಿಂದ ಆಫರೇಶನ್ ಮಾಡಿದ ಜಾಗದಲ್ಲಿಂದ ರಕ್ತ ಶ್ರಾವ ಆಗುತ್ತರಿದ್ದ ಡಾಕ್ಟರವರೆ ಖುದ್ದಾಗಿ ಸಿದ್ದಗಂಗಾ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೆರಿಕೆ ಮಾಡಿದ್ದು , ಅಲ್ಲಿಯೂ ಗುಣಮುಖವಾಗದೇ ಇರುವದರಿಂದ ದಿನಾಂಕ : 24/11/2011 ರಂದು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಸಿರುತ್ತೆವೆ ಶ್ರೀಮತಿ ಶರಣಮ್ಮ ಇವಳು ಸಾವು ಬದುಕಿನ ನಡುವೆ ಹೊರಾಡುತ್ತ ದಿನಾಂಕ: 28/11/2011 ರಂದು ಈ ಪ್ರಕರಣದಲ್ಲಿ ನೊಂದ ಶ್ರೀಮತಿ ಶರಣಮ್ಮ ಗಂಡ ಹುಲುಗಪ್ಪ ಗುರೆಕಾರ ಇವಳು ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 127/2011 ಕಲಂ 269, 337, 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ. ದ್ದು ಇರುತ್ತದೆ.

No comments: