POLICE BHAVAN KALABURAGI

POLICE BHAVAN KALABURAGI

13 July 2014

Gulbarga District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಸರಸಗವತಿ ಗಂ ಯಮನಪ್ಪಾ ದೊರೆ  ಸಾ|| ಸಥ್ಯಂಪೇಠ ಸೋಲಾಪೂರ ರವರ ಸೋದರಳಿಯನ ಹೆಂಡತಿ ತಿರಿಕೊಂಡಿದ್ದು ಅವರ ಮಣ್ಣಿಗಾಗಿ ನಾನು ಮತ್ತು ನನ್ನ ಗಂಡ ಯಮನಪ್ಪ,ನಮ್ಮ ತಾಯಿ ನಿಂಗಮ್ಮ, ನಮ್ಮ ತಂಗಿಯ ಗಂಡ ಭೀಮಣ್ಣ, ನಮ್ಮ ಅಣ್ಣ ಸೋಮಲಿಂಗ ಎಲ್ಲರೂ ಕೂಡಿಕೊಂಡು ದಿನಾಂಕ: 12/07/ 2014 ರಂದು ರೇಲ್ವೆ ಮೂಲಕ ಗುಲಬರ್ಗಾಕ್ಕೆ ಬಂದು ರೆಲ್ವೆ ಸ್ಟೇಶನ್‌ನಿಂದ ಬಸ್‌ ನಿಲ್ದಾಣಕ್ಕೆ ಬಂದು ಅಲ್ಲಿಂದ ಶಹಾಪೂರಕ್ಕೆ ಹೊಗುವ ಬಸ್ಸಿನಿಂದ ಬೆಳಗ್ಗೆ 5:30 ಗಂಟೆಯ ಸುಮಾರಿಗೆ ಹೊರಟಿದ್ದು ಇರುತ್ತದೆ. ಸದರಿ ಬಸ್ಸಿನಲ್ಲಿ ನಮ್ಮಂತೆ ಬೇರೆ ಬೇರೆ ಕಡೆಗೆ ಹೋಗುವ ಪ್ರಯಾಣಿಕರು ಕೂಡಾ ಹೊರಟಿದ್ದು  ದಿನಾಂಕ:12/07/2014 ರಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಫರಹತಾಬಾದ ದಾಟಿ ರಾಷ್ಟ್ರಿಯ ಹೆದ್ದಾರಿ 218 ರಸ್ತೆಯ ಫಿರೋಜಾಬಾದ ದರ್ಗಾ ಹತ್ತಿರ ಹೊಗುತ್ತಿದ್ದಾಗ ಸದರಿ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ರೋಡಿನ ಎಡಬಾಗದಲ್ಲಿ ನಿಂತಿರುವ ಲಾರಿಗೆ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನನಗೆ ಬಲಗಾಲಿನ ಮೊಣಕಾಲಿನ ಕೆಳಗೆ ರಕ್ತಗಾಯ ವಾಗಿರುತ್ತದೆ, ಭೀಮಣ್ಣನಿಗೆ ಬಲಗಾಲಿನ ಮೊಣಕಾಲಿನ ಕೆಳಗೆ ರಕ್ತಗಾಯವಾಗಿರುತ್ತದೆ, ಹಾಗೂ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಇತರೆ ಪ್ರಯಾಣಿಕರಾದ ಮೈನೊದ್ದಿನ ಮತ್ತು ಮಸ್ತಾನ ಅಲೀ ಎನ್ನುವವರಿಗೆ ಕೂಡಾ ನಾನಿದ್ದ ಆಸ್ಪತ್ರೆಗೆ ಚೀಕಿತ್ಸೆ ಕುರಿತು ಸೇರಿಕೆಯಾಗಿದ್ದು ಅವರಿಗೂ ಕೂಡಾ ಅಲ್ಲಲ್ಲಿ ಗುಪ್ತಗಾಯ ರಕ್ತಗಾಯ ಆಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರರಕಣ : 
ಸ್ಟೇಷನ ಬಜಾರ ಠಾಣೆ : ಶ್ರೀ ಶಿವಕುಮಾರ್ ತಂದೆ ಚನ್ನಬಸಪ್ಪಾ ಪಾಟೀಲ ಸಾ|| ಪ್ಲಾಟ ನಂ. 125 ಬಸವ ನಿಲಯ ವೀರಬದ್ರೆಶ್ವರ ಕಾಲೂನಿ ಉದನೂರ ರಸ್ತೆ ಗುಲಬರ್ಗಾ ರವರು, ದಿನಾಂಕ: 12-07-2014 ರಂದು ಎನ್.ಜಿ.ಓ ಕಾಲೋನಿಯ ಚವ್ಹಾಣ ಕಾಂಪ್ಲೇಕ್ಸ ನ್ಯೂ ಜೇವರ್ಗಿ ರಸ್ತೆಯಲ್ಲಿರುವ ನನ್ನ ಗೀತಾ ಸ್ಟುಡಿಯೋದಲ್ಲಿ ರಾತ್ರಿ 21 ಗಂಟೆ ವರೆಗೆ ಕೆಲಸ ಮಾಡಿ ಸ್ಟುಡಿಯೋ ಮುಚ್ಚಿಕೊಂಡು ಮನೆಗೆ ಹೋಗಿರುತ್ತೆನೆ. ಇಂದು ದಿನಾಂಕ: 13-07-2014 ರಂದು ಬೆಳಿಗ್ಗೆ 6 ಗಂಟೆಗೆ ಯಥಾಪ್ರಕಾರ ನಾನು ವಾಕಿಂಗ್ ಕುರಿತು ನನ್ನ ಅಂಗಡಿ ಮುಂದೆ ಬರಲುಅಂಗಡಿ ಬಾಗಿಲು ತೆರೆದಿದ್ದು ನೋಡಿ, ಒಳಗಡೆ ಹೋಗಿ ನೋಡಲಾಗಿ ಸ್ಟುಡಿಯೋದಲ್ಲಿದ್ದ 1] Fuji Printer-1, 2] Sony Camara-1, 3] Oscar Company Monitor-1, 4] Epson Scanner-1, 5] Intex CPU-1 ನೇದ್ದವುಗಳ ಅ.ಕಿ||  24,560/- ರು ಕಿಮ್ಮತ್ತಿನವುಗಳನ್ನು   ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಬಾಗಿಲು ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.