POLICE BHAVAN KALABURAGI

POLICE BHAVAN KALABURAGI

25 December 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ
: ಶ್ರೀಮತಿ ಮಹಿಬೂಬಿ ಗಂಡ ಮಹಿಬೂಬಸಾಬ ಸತ್ವರವಲಿ ವ:60 ವರ್ಷ ಸಾ: ಮಿಣಜಗಿ ಇವರ ಹೇಳಿಕೆ ನೀಡಿದ ಸಾರಾಂಶವೇನೆಂದರೆ ನಾನು ನನ್ನ ಮಗಳಾದ ಬೇಗಮಬಿ ಹಾಗೂ ನನ್ನ ಮೊಮ್ಮಗನಾದ ಆರಿಫ ಮೂರು ಜನರು ಕೂಡಿಕೊಂಡು ಮಂದರವಾಡ ಗ್ರಾಮದಿಂದ ಬಂದು ನದಿಸಿನ್ನೂರ ಬಸ ಸ್ಟ್ಯಾಂಡ ಹತ್ತಿ ಕುಳಿತು ಕೊಂಡಾಗ ನದಿಸಿನ್ನೂರ ಗ್ರಾಮದಿಂದ ಟ್ರ್ಯಾಕ್ಟರ ಚಾಲಕನು ಅತಿವೇಗದಿಂದ.ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಮೇಲೆ ಮತ್ತು ನನ್ನ ಮೊಮ್ಮಗನಿಗೆ ಡಿಕ್ಕಿ ಪಡಿಸಿದ ಪರಿಣಾಮ ನನಗೆ ತಲೆಯ ಹಣೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಬಲಗೈ ಹಸ್ತದ ಮೇಲೆ ರಕ್ತಗಾಯವಾಗಿರುತ್ತದೆ. ಮತ್ತು ನನ್ನ ಮೊಮ್ಮಗನಾದ ಆರಿಫ ಇವನಿಗೆ ಬಲಗಾಲ ಹಿಂಬಡಿ ಹತ್ತಿರ ರಕ್ತಗಾಯ ಮತ್ತು ಎರಡು ತೋಡೆಗಳಿಗೆ ಗುಪ್ತಗಾಯಗಳಾಗಿರುತ್ತದೆ. ಟ್ರ್ಯಾಕ್ಟರ ನಂ ಕೆಎ-32 ಟಿ.ಆರ್-4377 ನೇದ್ದರ ಶರಣಪ್ಪಾ ತಂದೆ ಕುಪ್ಪಣ್ಣಾ ದಂಡೋತಿ ಸಾ: ನದಿಸಿನ್ನೂರ ಇತನು ನಮಗೆ ಡಿಕ್ಕಿ ಪಡಿಸಿದ ಕೂಡಲೆ ಟ್ರ್ಯಾಕ್ಟರವನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಹೇಳಿಕೆಯ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 223/2011 ಕಲಂ 279.337.338. ಐ.ಪಿಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಾರಸುದಾರರಿಲ್ಲದ ಮತ್ತು ನಂಬರ ಇಲ್ಲದ ಮೋಟಾರ ಸೈಕಲ್ ವಶಪಡಿಸಿಕೊಂಡ ಬಗ್ಗೆ:
ಅಪಜಲಪೂರ ಠಾಣೆ:
ಸರ್ಕಾರಿ ತರ್ಪೆಯಾಗಿ ಶ್ರೀ ಮಂಜುನಾಥ ಎಸ್. ಪಿ ಎಸ್ ಐ ಅಫಜಲಪೂರ ಪೊಲೀಸ್ ಠಾಣೆ ರವರು ನಾನು ಮತ್ತು ಪಿಸಿ ಜಗನಾಥ ಮತ್ತು ಜೀಪ್ ಚಾಲಕ ಗುಂಡಪ್ಪಾ ದಿನಾಂಕ 24-12-2011 ರಂದು ರಾತ್ರಿ 11:30 ಪಿ ಎಮ್ ಕ್ಕೆ ಅಮವಾಸೆ ಪ್ರಯುಕ್ತ ಪೆಟ್ರೋಲಿಂಗ್ ಹೊರಟು ಅಫಜಲಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತ ದಿನಾಂಕ 25.12.11 ರಂದು 4:30 ಎ ಎಮ್ ಕ್ಕೆ ಸೊನ್ನ ಕ್ರಾಸ ಹತ್ತಿರ ಹೋದಾಗ ರಸ್ತೆಯ ಬಲಬಾಗದ ಪಕ್ಕದ ಹೊಲದಲ್ಲಿ ಒಂದು ಕಪ್ಪು ಬಣ್ಣದ ಬಜಾಜ ಕಂಪನಿಯ ಪಲ್ಸರ ಮೋಟರ್ ಸೈಕಲ ಇದ್ದು ಅದಕ್ಕೆ ನಂಬರ ಪ್ಲೇಟ ಇರುವುದಿಲ್ಲ,ಪರಿಶೀಲಿಸಿ ನೋಡಲು ಅದರ ಚೆಸ್ಸಿ ನಂ. MD2DHDJZZTCH40541 ಇಂಜಿನ ನಂ. DJGBTH83137 ನೇದ್ದು ಇರುತ್ತದೆ. ಸದರ ಬೈಕಿನ ಬಗ್ಗೆ ರಸ್ತೆಗೆ ಹೋಗಿ ಬರುವ ವಾಹನಗಳನ್ನು ತಡೆದು ಜನರಿಗೆ ಕೇಳಿ ವಿಚಾರಿಸಲು ವಾಹನ ಯಾರಿಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿರುವುದಿಲ್ಲ. ಯಾರೋ ಇಲ್ಲಿ ವಾಹನವನ್ನು ಬಿಟ್ಟು ಹೋಗಿದ್ದು ಸದರ ವಾಹನದ ವಾರಸದಾರರು ಯಾರೂ ಇಲ್ಲದ ಕಾರಣ ವಾಹನವನ್ನು ಠಾಣೆಗೆ ತಂದು ಠಾಣೆಯ ಗುನ್ನೆ ನಂ. 217/2011 ಕಲಂ 41 (ಡಿ), 102 ಸಿ ಆರ್ ಪಿ ಸಿ ನೇದ್ದರ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಕಾಣೆಯಾದ ಪ್ರಕರಣ:
ಮಹಿಳಾ ಠಾಣೆ:
ಶ್ರೀ ಮನ್ಸೂರಲಿ ಸಾ: ಮನೆ ನಂ.892/7/1,1ನೇ ಅಡ್ಡ ರಸ್ತೆ ಬುದ್ದ ನಗರ ಗುಲಬರ್ಗಾ ರವರು ನಾನು ದಿನಾಂಕ 17.12.2011 ರಂದು ಸಾಯಂಕಾಲ ಗಂಟೆಯ ಸುಮಾರು ಮನೆಗೆ ಬಂದು ಊಟವನ್ನು ಮಾಡಿಕೊಂಡು ಮತ್ತೇ ನನ್ನ ಕೆಲಸದ ಮೇಲೆ ಹೋಗುವಾಗ ನನ್ನ ಪತ್ನಿ ನಾನು ಬ್ಯೂಟಿಪಾರ್ಲರ್ಗೆ ಹೋಗಿ ಬರುತ್ತೇನೆ ನನಗೆ ಸ್ವಲ್ಪ ಹಣ ಕೊಡಿ ಅಂತಾ ಕೇಳಿದಕ್ಕೆ ನಾನು 50/- ರೂಪಾಯಿ ಕೊಟ್ಟು ಮನೆಯಿಂದ ಹೊರಗಡೆ ಹೋದೆನು. ನಾನು ನನ್ನ ಕೆಲಸವನ್ನು ಮುಗಿಸಿಕೊಂಡು ರಾತ್ರಿ 9.00 ಗಂಟೆಗೆ ನಾನು ಮನೆಗೆ ಬಂದಾಗ ಮನೆಗೆ ಬಿಗ ಹಾಕಿದ್ದು. ನಾನು ನನ್ನ ಮೊಬೈಲ್ ಫೋನಿನಿಂದ ಅವಳ ಮೊಬೈಲಗೆ ಫೋನ ಮಾಡಿ ಅವಳ ಫೋನ ಸ್ವಿಚ್ ಆಫ್ ಆಗಿತ್ತು. ಮನೆಯಲ್ಲಿನ ತನ್ನ ಮತ್ತು ಮಗನ ಬಟ್ಟೆ ಬರೆಗಳನ್ನು ಅಲ್ಲದೇ ತನ್ನ ಮೈಮೇಲೆ ಇದ್ದ 1 ½ ತೊಲೆ ಬಂಗಾರ ತೆಗೆದುಕೊಂಡು ಹೋಗಿರುತ್ತಾಳೆ. ನಾನು ಅವರ ತಂದೆ ತಾಯಿ ಹಾಗೂ ಅವರ ಸಂಬಂಧಿಕರಿಗೆ ಫೋನ ಮಾಡಿ ವಿಚಾರಿಸಿದ್ದಾಗ ಎಲ್ಲಿಯೂ ಅವಳ ಮಾಹಿತಿ ಸಿಗಲ್ಲಿಲ್ಲಾ ಎಲ್ಲಾ ಹುಡುಗಾಡಿದರು ನನ್ನ ಹೆಂಡತಿ ಪತ್ತೆಯಾಗಿರುವುದಿಲ್ಲಾ. ದಿನಾಂಕ :18.12.2011 ರಂದು ನನ್ನ ಹೆಂಡತಿ ತಂದೆ ತಾಯಿಯವರು ನನಗೆ ಫೋನ ಮಾಡಿ ತಿಳಿಸಿದೇನೆಂರೆ ನನ್ನ ಹೆಂಡತಿ ಅವರಿಗೆ ಫೋನ ಮಾಡಿ ನಾನು ನನ್ನ ಮಗನೊಂದಿಗೆ ಚನ್ನಾಗಿದ್ದೆನೆ ನಾನು ಮುಂಬೈ ಕಡೆಗೆ ಬಂದಿರುತ್ತೆನೆ ಅಂತಾ ತಿಳಿಸಿರುತ್ತಾಳೆ ಅಂತಾ ತಿಳಿಸಿದರು. ಆದರೆ ನನ್ನ ಹೆಂಡತಿಯ ತಂದೆ – ತಾಯಿ ಹಾಗೂ ಅವರ ಸಂಬಂದಿಕರು ನನ್ನಗೆ ವಿನಾ ಕಾರಣ ನನ್ನ ಮೇಲೆ ಹಾಗೂ ನನ್ನ ಸಂಬಂದಿಕರು ಮೇಲೆ ಕೇಸ ಮಾಡುವುದಾಗಿ ಹೇಳುತ್ತಿದ್ದಾರೆ. ಕಾರಣ ನನ್ನ ಕಾಣೆಯಾದ ನನ್ನ ಪತ್ನಿಗೆ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ನಮ್ಮ ಠಾಣೆಯ ಗುನ್ನೆ ನಂ 124/2011 ಕಲಂ ಹೆಣ್ಣು ಮಗಳು ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಮಹಿಳೆ ಚಹರೆ ಪಟ್ಟಿ ಹೆಸರು ತನಿವೀರ ಬೇಗಂ, ವ 25 ವರ್ಷ, ಜಾತಿ: ಮುಸ್ಲೀಂ, ಎತ್ತರ 5.2 ಅಡಿ ದುಂಡು ಮುಖ. ಕಪ್ಪು ಕೂದಲು ಕನ್ನಡ ಹಿಂದಿ ಇಂಗ್ಲೀಷ ಬಲ್ಲವಳಾಗಿರುತ್ತಾಳೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಮಹಿಳಾ ಠಾಣೆ ದೂರವಾಣಿ ಸಂ: 08472-263620 ಅಥವಾ ಗುಲಬರ್ಗಾ ಕಂಡ್ರೋಲ್ ರೂಮ್ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಸಂತೋಷ ತಂದೆ ಸುಭಾಶ್ಚಂದ್ರ ಮಾಲಿ ಪಾಟೀಲ ಡಗಿ ಸಂತೋಷ ಕಾಲೋನಿ ವರದಾನಗರ ಗುಲಬರ್ಗಾರವರು ನಾನು ರಾಮಮಂದಿರ ದಿಂದ ರೇಲ್ವೆ ಅಂಡರ ಬ್ರೀಡ್ಜ ರೋಡಿನಲ್ಲಿ ಬರುವ ಪಿ.ಡಬ್ಲೂ.ಡಿ ಕ್ವಾಟರ್ಸ ಹತ್ತಿರ ಬರುತ್ತಿದ್ದಾಗ ಕಾರ ನಂ:ಕೆಎ 32 ಎಮ್ 7259 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ ನಂ ಕೆಎ 32 ಡಬ್ಲೂ 5556 ನೇದ್ದಕ್ಕೆ ಡಿಕ್ಕಿ ಪಡಿಸಿರುತ್ತಾನೆ. ಮೋಟಾರ ಸೈಕಲ ಚಾಲಕನಿಗೆ ಮತ್ತು ಆತನ ಹಿಂದುಗಡೆ ಕುಳಿತಿದ್ದ ಶ್ರವಣಮ್ಮಾ ಇವರಿಗೆ ಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 160/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮನುಷ್ಯ ಕಾಣೆಯಾದ ಪ್ರಕರಣ:
ಚಿಂಚೋಳಿ ಠಾಣೆ:
ಸುರೇಶ ತಂದೆ ಸುಬ್ರಮಣ್ಯಂ ವರಕಿಲ್ಲಾ ಸಾ ನೇಲ್ಲೂರ ಆಂದ್ರ ಪ್ರದೇಶ ಸಧ್ಯ ಅಂಬೇಡ್ಕರ ಸರ್ಕಲ್ ಚಿಂಚೋಳಿ ರವರು ನನ್ನ ತಂದೆಯವರಾದ ಸುಬ್ರಮಣ್ಯಂ ತಂದೆ ಸುಬಬ್ರಾಮಯ್ಯ ವರಕಿಲ್ಲಾ ವಯ 60 ವರ್ಷ , ಬಿಳಿಯ ಕೂದಲು ಬ್ಲಾಕ್ ಹೆರ್ ಡ್ರಾಯ್ ಮಾಡಿರುತ್ತಾರೆ, ಎತ್ತರ 6 ಅಡಿ ಸಾದಾರಣ ಮೈಕಟ್ಟು , ದುಂಡು ಮುಖ, ಬಿಳಿ ಬಣ್ಣದ ಪಂಜೆ ಮತ್ತು ಬಿಳಿ ನೆಹರು ಶರ್ಟ ಧರಿಸಿರುತ್ತಾರೆ. ಅವರು ತೆಲಗು ಭಾಷೆ ಬಲ್ಲವರಾಗಿರುತ್ತಾರೆ ಇವರು ದಿನಾಂಕ: 12-12-2011 ರಂದು ಮನ್ನಾಏಖೇಳಿ- ಬೀದರ ಬಸ್ಸ ಹತ್ತುಕೊಂಡು ಹೋಗಿರುತ್ತಾರೆ. ಕಾರಣ ಅವರನ್ನು ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಮ: 154/2011 ಕಲಂ ಮನುಷ್ಯ ಕಾಣೆಯಾದ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಹಮ್ಮದ ಅಬ್ದಲ್ ಸಲೀಮ ತಂದೆ ಮುನೀರ ಮಿಯ್ಯಾ ಹೀರಾಪುರವಾಲೇ ವಯಾ:19 ವರ್ಷ ಸಾ:ಎಕಬಾಲ ಕಾಲೋನಿ ಎಮ್.ಎಸ್.ಕೆ ಮೀಲ ಗುಲಬರ್ಗಾರವರು ನನ್ನ ತಂದೆಯಾದ ಮುನೀರಮಿಯ್ಯಾ ಇವರು ದಿನಾಂಕ:-23/12/2011 ರಂದು 7:00 ಪಿ.ಎಮ್.ಸುಮಾರಿಗೆ ಮಿಜಬಾನಗರಕ್ಕೆ ಅಡಿಗೆ ಮಾಡಲು ಹೋಗಿ ಮರಳಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ಹಿಂದಿನಿಂದ ಆಟೋ ನಂ ಕೆ.ಎ 32 6833 ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಬಾರಿ ರಕ್ತಗಾಯಪಡಿಸಿ ಆಟೋ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 379/2011 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.