POLICE BHAVAN KALABURAGI

POLICE BHAVAN KALABURAGI

25 December 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಸಂತೋಷ ತಂದೆ ಸುಭಾಶ್ಚಂದ್ರ ಮಾಲಿ ಪಾಟೀಲ ಡಗಿ ಸಂತೋಷ ಕಾಲೋನಿ ವರದಾನಗರ ಗುಲಬರ್ಗಾರವರು ನಾನು ರಾಮಮಂದಿರ ದಿಂದ ರೇಲ್ವೆ ಅಂಡರ ಬ್ರೀಡ್ಜ ರೋಡಿನಲ್ಲಿ ಬರುವ ಪಿ.ಡಬ್ಲೂ.ಡಿ ಕ್ವಾಟರ್ಸ ಹತ್ತಿರ ಬರುತ್ತಿದ್ದಾಗ ಕಾರ ನಂ:ಕೆಎ 32 ಎಮ್ 7259 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ ನಂ ಕೆಎ 32 ಡಬ್ಲೂ 5556 ನೇದ್ದಕ್ಕೆ ಡಿಕ್ಕಿ ಪಡಿಸಿರುತ್ತಾನೆ. ಮೋಟಾರ ಸೈಕಲ ಚಾಲಕನಿಗೆ ಮತ್ತು ಆತನ ಹಿಂದುಗಡೆ ಕುಳಿತಿದ್ದ ಶ್ರವಣಮ್ಮಾ ಇವರಿಗೆ ಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 160/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮನುಷ್ಯ ಕಾಣೆಯಾದ ಪ್ರಕರಣ:
ಚಿಂಚೋಳಿ ಠಾಣೆ:
ಸುರೇಶ ತಂದೆ ಸುಬ್ರಮಣ್ಯಂ ವರಕಿಲ್ಲಾ ಸಾ ನೇಲ್ಲೂರ ಆಂದ್ರ ಪ್ರದೇಶ ಸಧ್ಯ ಅಂಬೇಡ್ಕರ ಸರ್ಕಲ್ ಚಿಂಚೋಳಿ ರವರು ನನ್ನ ತಂದೆಯವರಾದ ಸುಬ್ರಮಣ್ಯಂ ತಂದೆ ಸುಬಬ್ರಾಮಯ್ಯ ವರಕಿಲ್ಲಾ ವಯ 60 ವರ್ಷ , ಬಿಳಿಯ ಕೂದಲು ಬ್ಲಾಕ್ ಹೆರ್ ಡ್ರಾಯ್ ಮಾಡಿರುತ್ತಾರೆ, ಎತ್ತರ 6 ಅಡಿ ಸಾದಾರಣ ಮೈಕಟ್ಟು , ದುಂಡು ಮುಖ, ಬಿಳಿ ಬಣ್ಣದ ಪಂಜೆ ಮತ್ತು ಬಿಳಿ ನೆಹರು ಶರ್ಟ ಧರಿಸಿರುತ್ತಾರೆ. ಅವರು ತೆಲಗು ಭಾಷೆ ಬಲ್ಲವರಾಗಿರುತ್ತಾರೆ ಇವರು ದಿನಾಂಕ: 12-12-2011 ರಂದು ಮನ್ನಾಏಖೇಳಿ- ಬೀದರ ಬಸ್ಸ ಹತ್ತುಕೊಂಡು ಹೋಗಿರುತ್ತಾರೆ. ಕಾರಣ ಅವರನ್ನು ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಮ: 154/2011 ಕಲಂ ಮನುಷ್ಯ ಕಾಣೆಯಾದ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಹಮ್ಮದ ಅಬ್ದಲ್ ಸಲೀಮ ತಂದೆ ಮುನೀರ ಮಿಯ್ಯಾ ಹೀರಾಪುರವಾಲೇ ವಯಾ:19 ವರ್ಷ ಸಾ:ಎಕಬಾಲ ಕಾಲೋನಿ ಎಮ್.ಎಸ್.ಕೆ ಮೀಲ ಗುಲಬರ್ಗಾರವರು ನನ್ನ ತಂದೆಯಾದ ಮುನೀರಮಿಯ್ಯಾ ಇವರು ದಿನಾಂಕ:-23/12/2011 ರಂದು 7:00 ಪಿ.ಎಮ್.ಸುಮಾರಿಗೆ ಮಿಜಬಾನಗರಕ್ಕೆ ಅಡಿಗೆ ಮಾಡಲು ಹೋಗಿ ಮರಳಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ಹಿಂದಿನಿಂದ ಆಟೋ ನಂ ಕೆ.ಎ 32 6833 ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಬಾರಿ ರಕ್ತಗಾಯಪಡಿಸಿ ಆಟೋ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 379/2011 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: