POLICE BHAVAN KALABURAGI

POLICE BHAVAN KALABURAGI

24 December 2011

GULBARGA DIST REPORTED CRIMES.

ಮಹಿಳೆ ಕಾಣೆಯಾದ ಪ್ರಕರಣ:
ಮಹಿಳಾ ಠಾಣೆ:
ತನವೀರಬೇಗ ತಂದೆ ಹೈದರ ಅಲಿ ಬೇಗ ವ: 26 ವರ್ಷ ಜಾ: ಮುಸ್ಲಿಂ ಉ: ಒಕ್ಕಲುತನ ಸಾ: ನೆಲ್ಲೂರ ತಾ: ಚೆನ್ನಗೇರಿ ಜಿ:ದಾವಣಗೇರೆ ರವರು ನನ್ನ ಅಕ್ಕಳಾದ ಅಬೀದಬೇಗಂ ಇವಳು ಹಾಗೂ ಇವರ ಗಂಡನ ಮನೆಯವರು ಕೂಡಿ ಪ್ರವಾಸ ಕುರಿತು ದಿನಾಂಕ 18.12.2011 ರಂದು ತಮ್ಮ ಗ್ರಾಮದಿಂದ ಬಿಜಾಪೂರಕ್ಕೆ ಬಂದು ಅಲ್ಲಿಂದ ದಿ:19.12.2011 ರಂದು ಗುಲಬರ್ಗಾಕ್ಕೆ ಬಂದು ಗುಲಬರ್ಗಾದ ಬಂದೇ ನವಾಜ ದರ್ಗಾದಲ್ಲಿ ಉಳಿದುಕೊಂಡಿದ್ದು ಇರುತ್ತದೆ.ದಿನಾಂಕ::20.12.2011 ರಂದು ಬೆಳಗಿನ ಜಾವ 4.00 ಗಂಟೆ ಸುಮಾರಿಗೆ ನನ್ನ ಅಕ್ಕಳಾದ ಅಬೀದಾಬೇಗಂ ಇವಳು ದರ್ಗಾದಲ್ಲಿ ಇರದೇ ಎಲ್ಲಿಯೊ ಕಾಣೆಯಾಗಿರುತ್ತಾಳೆ ಅವಳು ಗಂಡ ಹಾಗೂ ಗಂಡನ ಮನೆಯವರು ಕೂಡಿ ಗುಲಬರ್ಗಾದಲ್ಲಿ ಎಲ್ಲಾ ಕಡೆ ಹೂಡಿಕಾಡಿದ್ದರು ಸಿಗಲ್ಲಿಲಾ ನಮ್ಮ ಬಾವ ನಮಗೆ ಫೋನ ಮಾಡಿ ತಿಳಿಸಿದರು ನಮ್ಮ ಅಕ್ಕ ಎಮ್.ಎ ಓದಿದ್ದು ಇರುತ್ತದೆ ಹಾಗೂ ಅವಳಿಗೆ ಓದಿನಲ್ಲಿ ತುಂಬಾ ಆಸಕ್ತಿ ಇದ್ದು ಶಿಕ್ಷಿಕಿ ಆಗಬೇಕೆಂದು ಅವಳ ಆಸೆಯಾಗಿತ್ತು ಅವಳ ಗಂಡ ಮನೆಯವರು ಹೊರಗಡೆ ಹೋಗುವದು ಅವಳಿಗೆ ಇಷ್ಷ ಇರುವುದಿಲ್ಲಾ. ಆದ್ದರಿಂದ ಅವಳು ತನ್ನ ಗೆಳತಿಯರ ಸಹಾಯ ಅಥವಾ ಸಂಘ ಸಂಸ್ಥೆಗಳ ಸಹಾಯ ಪಡೆದುಕೊಂಡು ಮುಂದೆ ಬರುವಗೊಸ್ಕರ ಎಲ್ಲಿಯಾದರು ಹೋಗಿರಬಹುದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 123/11 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಡಿರುತ್ತಾರೆ. ಕಾಣೆಯಾದ ಮಹಿಳೆಯ ಹೆಸರು ಶ್ರೀಮತಿ ಅಬೀದಾಬೇಗಂ ವಯ:31 ವಿದ್ಯಾರ್ಥತೆ ಎಮ.ಎ.ಬಿ.ಎಡ್. , ಸಾದಾರಣ ಮೈಕಟ್ಟು ಸಾದ ಕಪ್ಪು ಬಣ್ಣ, 5.3” ಎತ್ತರ, ದುಂಡು ಮುಖ ಕಪ್ಪು ಕೂದಲು, ಕನ್ನಡ ಹಿಂದಿ, ಇಂಗ್ಲೀಷ ಭಾಷೆ ಬಲ್ಲವಳಾಗಿರುತ್ತಾಳೆ ಸದರಿ ವಿವರದ ಮಹಿಳೆ ಕಾಣೆಯಾದಲ್ಲಿ ಈ ದೂರವಾಣಿ ಸಂಖ್ಯೆಗಳಿಗೆ 08472-263620, 948080355 ಗ ಸಂಪರ್ಕಿಸಲು ಕೋರಲಾಗಿದೆ.
ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ಶ್ರೀ.ಶಿವಶರಣಪ್ಪ ಎ,ಎಸ್,ಐ ಬ್ರಹ್ಮಪೂರ ಠಾಣೆರವರು ನಾನು ಮತ್ತು ರಾಜಕುಮಾರ ಸಿ.ಪಿ.ಸಿ 1575 ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಸಿ.ಟಿ ಬಸ್ ನಿಲ್ದಾಣ ಹತ್ತಿರ 1800 ಗಂಟೆಗೆ ಹೋದಾಗ ಅಲ್ಲಿ ಎರಡು ಜನ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು )ಕಲ್ಯಾಣಿ ತಂದೆ ಬಸಣ್ಣ ಮಾನಕರ ವಯ 31 ವರ್ಷ ಜಾತಿ ಸಾಮಗಾರ ಉ ಹಮಾಲಿ ಕೆಲಸ, ಸಾ ಸಿದ್ದರಾಮೇಶ್ವರ ಗುಡಿಯ ಹತ್ತಿರ ದುಧನಿ ಮಹಾರಾಷ್ಟ್ರ ರಾಜ್ಯ, ಅಂಬಣ್ಣ ತಂದೆ ಲಕ್ಷ್ಮಣ ಮಾನಕರ್ ವಯ 33 ವರ್ಷ ಜಾತಿ ಸಾಮಗಾರ ಉ ಹಮಾಲಿ ಕೆಲಸ, ಸಾ ಸಿದ್ದರಾಮೇಶ್ವರ ಗುಡಿಯ ಹತ್ತಿರ ದುಧನಿ ಮಹಾರಾಷ್ಟ್ರ ರಾಜ್ಯ ಅಂತಾ ತಿಳಿದು ಬಂದ್ದಿದ್ದು ಇವರನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 230/11 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

No comments: