POLICE BHAVAN KALABURAGI

POLICE BHAVAN KALABURAGI

12 March 2017

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:11/03/2017 ರಂದು ಮಧ್ಯಾನ ಬ್ರಹ್ಮಪೂರ ಬಡಾವಣೆಯ ಕೊಂಡೆದಗಲ್ಲಿಯಲ್ಲಿರುವ ಹಳೆ ಚಾಣುಕ್ಯ ಬಾರ ಹಿಂದುಗಡೆ 7 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ಜೂಜಾಟ ಆಡುತ್ತಿದ್ದಾರೆ ಅಂತಾ ಬಂದ ಮಾಹಿತಿ ಮೇರೆಗೆ ಶ್ರೀ ಸಂಜೀವಕುಮಾರ ಪಿ.ಎಸ್‌‌. ಆರ್‌‌.ಜಿ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಚಾಣುಕ್ಯಬಾರ ಹಿಂದುಗಡೆ ಖುಲ್ಲಾ ಸ್ಥಳದಲ್ಲಿ ಕಂಟೆಗಳ ಮರೆಯಲ್ಲಿ ನಿಂತು ನೋಡಲು 7 ಜನರು ದುಂಡಾಗಿ ಕುಳಿತು ಇಸ್ಪೇಟ್ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ 7 ಜನರನ್ನು  ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ಗುರುರಾಜ ತಂದೆ ಭೀಮಶೇನರಾವ ಕುಲಕರ್ಣಿ ಸಾ:ಸುಭಾಸ ಚೌಕ ಈಶ್ವರ ದೇವಸ್ಥಾನ ಹತ್ತಿರ ಕಲಬುರಗಿ 2) ಆಕಾಶ ತಂದೆ ಮುರಳಿಧರ ಕುಲಕರ್ಣಿ ಸಾ:ಹಳೆ ಜಗತ ರಾಯರ ಗುಡಿಯ ಹತ್ತಿರ ಕಲಬುರಗಿ 3) ದಿಗಂಬರ ತಂದೆ ಪ್ರಭಾಕರ ಕುಲಕರ್ಣಿ ಸಾ:ಸದಾಶಿವ ನಗರ ಹಳೆ ಜೇವರ್ಗಿ ರಸ್ತೆ ಪಿ.ಎನ್‌‌.ಟಿ ಕ್ವಾಟರ್ಸ 4 )ದಿಲೀಪ ತಂದೆ ಕಮಲಾಕರ ಕುಲಕರ್ಣಿ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 5) ಸುರೇಶ ತಂದೆ ಶ್ರೀನಿವಾಸರಾವ ಪಾಟೀಲ ಸಾ:ಗಾಜಿಪುರ ಬೀಗಬಜಾರ ಹಿಂದುಗಡೆ ಕಲಬುರಗಿ 6) ಪದ್ಮಾಕರ ತಂದೆ ರಾಮರಾವ ಕುಲಕರ್ಣಿ ಸಾ:ಖಾಸಗಿ ಕೆಲಸ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 7) ಶ್ರೀನಾಥ ತಂದೆ ಸುಭಾಸ ಬರಾಡ ಸಾ:ಶಾಂತಿನಗರ ಹೌಸಿಂಗ ಬೋರ್ಡ ಕಾಲೋನಿ ಬಸಸ್ಟಾಂಡ ಎದರುಗಡೆ ಕಲಬುರಗಿ  ಅಂಥಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಸಂಬಂಧಿಸಿದ  ನಗದು ಹಣ  12800/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 10/03/2017 ರಂದು  ಶಹಾಬಾದ ಪಟ್ಟಣದ ಮಿಲನ ಚೌಕ ಹತ್ತಿರ ಮಟಕಾ ಬರೆದುಕೊಳ್ಳುತ್ತಿ ದ್ದಾರೆ  ಅಂತಾ ಖಚಿತ ಬಂದ ಮೇರೆಗೆ ಶ್ರಿ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಮಿಲತ ಚೌಕ ಹತ್ತಿರ ಒಬ್ಬ ಸಾರ್ವಜನಿಕರಿಂದ ಹಣ ಪಡೆದುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತಾ ಮೋಸದಿಂದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲು ಯುನುಸ ತಂದೆ ಬಾಬುಮಿಯಾ ಸಾ: ಮಜ್ಜೀದ ಚೌಕ ಶಹಾಬಾದ ಇತನಿಗೆ ಹಿಡಿದು ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟು ನಗದು ಹಣ 680-00 ರೂ ಒಂದು ಮಟಕಾ ನಂಬರ ಬರೆದ ಚೀಟಿ, ಅ.ಕಿ ಒಂದು ಬಾಲು ಪೆನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 10/03/2017 ರಂದು ರಾತ್ರಿ ಭೀರಪ್ಪಾ  ತಂದೆ ಹುಣಚಪ್ಪಾ ಮರತೂರ ಮೋ/ಸೈ ನಂ ಕೆಎ-32 ಇಜೆ-2282 ನೇದ್ದರ ಸವಾರ ಸಾ : ಹಸನಾಪೂರ ತಾ :ಜಿ :ಕಲಬುರಗಿ  ತನ್ನ ವಷದಲ್ಲಿ ಇದ್ದ ಮೋ/ಸೈ ನಂ ಕೆಎ-32 ಇಜೆ-2282 ನೇದ್ದನ್ನು ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ  ಎನ್.ಹೆಚ್ 218 ರೋಡಿನ ಮೇಲೆ  ನದಿಶಿನ್ನೂರ ಕ್ರಾಸ ಹತ್ತೀರ  ಪಂಚರ ಆಗಿ ರೋಡಿನ ಬದಿಗೆ ನಿಂತಿರು ಲಾರಿ ನಂ  ಎಪಿ-13 ಎಕ್ಸ- 1373 ನೇದ್ದಕ್ಕೆ ಡಿಕ್ಕಿ ಪಡಿಸಿ ಗಾಯ ಮಾಡಿಕೊಂಡಿರುತ್ತಾನೆ ಅಂತಾ  ಶ್ರೀ ಶಿವಪ್ಪಾ ತಂದೆ ಹುಣಚಪ್ಪಾ ಮರತೂರ ಸಾ : ಹಸನಾಪೂರ ತಾ : ಜಿ :ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಕಲ್ಲಣ್ಣಗೌಡ ತಂ ಸಿದ್ರಾಮಪ್ಪಗೌಡ ಹುಲಿಗುಡ್ಡ ಸಾ: ಜಮಖಂಡಿ ತಾ: ಜೇವರಗಿ ರವರು 09-03-2017 ರಂದು ಬೆಳಗ್ಗೆ 10 ಗಂಟೆಗೆ ನಾನು ಸಿಂದಗಿಗೆ ಖಾಸಗಿ ಕೆಲಸದ ನಿಮಿತ್ಯ ಹೋಗಿ ಅಲ್ಲೆ ಉಳಿದುಕೊಂಡಿದ್ದು ದಿನಾಂಕ: 10-03-17 ರಂದು ನನ್ನ ಮಗ ನನಗೆ ಪೋನ ಮಾಡಿ  ತಿಳಿಸಿದ್ದೇನೆಂದರೆ ರಾತ್ರಿ ನಾವೆಲ್ಲರೂ ಕೆಳಗಿನ ಮನೆಗೆ ಕಿಲಿ ಹಾಕಿಕೊಂಡು ಮಾಳಗಿ ಮೇಲೆ ಮಲಗಿಕೊಂಡಿದ್ದೆವು. ನಮ್ಮ ಅಳಿಯ ಅಯ್ಯಣ್ಣ ತಂ ಶಿವಪುತ್ರ ಹುಲಿಗುಡ್ಡ ಇವರು ಬೆಳಗಿನ ಜಾವ 2 ಗಂಟೆಗೆ ಎದ್ದು ಕಾಲುಮಡಿಯಲು ಬಂದಾಗ ನಮ್ಮ ಮನೆಯ ಬಾಗಿಲು ತೆರೆದಿದ್ದು, ನೋಡಿ ಮಾಳಗಿ ಮೇಲೆ ಬಂದು ವಿಷಯ ತಿಳಿಸಿದನು ಆಗ ನಾವೆಲ್ಲರೂ ಗಾಬರಿಗೊಂಡು ಕೆಳಗೆ ಬಂದು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದಿದ್ದು, ಟ್ರಜರಿ ಸಹ ತೆರೆದು ಕಳುವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಹೇಳಿದ್ದು, ನಾನು ಗಾಬರಿಗೊಂಡು ಸಿಂದಗಿಯಿಂದ ನಮ್ಮೂರಿಗೆ ಬಂದು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದ್ದಿದ್ದು, ಟ್ರಜರಿಯ ಮೇಲುಗಡೆಯಿಟ್ಟ ಕೀಲಿಯಿಂದ ಟ್ರಜರಿ ತೆಗೆದು ಒಳಗೆ ಬಂಗಾರ , ಹಣ ಇಟ್ಟ ಲಾಕರ ತೆರೆದು ಅದರಲ್ಲಿದ್ದ  ನಗದು ಹಣ ಮತ್ತು ಬಂಗಾರದ ಆಭರಣಗಳು  ಒಟ್ಟು  2,62,500=00 ರೂ   ಬೆಲೆಬಾಳುವ ಆಭರಣಗಳು ಮತ್ತು ಹಣ ದಿನಾಂಕ: 10-03-17 ರಂದು ರಾತ್ರಿ 12-05 ಗಂಟೆಯಿಂದ 01-45 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.