POLICE BHAVAN KALABURAGI

POLICE BHAVAN KALABURAGI

21 April 2015

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ
ಅಶೋಕ ನಗರ ಠಾಣೆ : ದಿನಾಂಕ 27/03/2015 ರಂದು ಮೋಟರ ಸೈಕಲ್ ನಂ.ಕೆಎ-32 ಇಬಿ- 3175 ನೇದ್ದನ್ನು ವಿದ್ಯಾನಗರ ಬಡಾವಣೆಯಲ್ಲಿರುವ ಎಸ್.ಬಿ. ಕಾಲೇಜದ ಪಾರ್ಕಿಂಗದಲ್ಲಿ ನಿಲ್ಲಿಸಿದ್ದು ನಂತರ ಕ್ಲಾಸ ಮುಗಿಸಿಕೊಂಡು ದಿನಾಂಕ 27/03/2015 ರಂದು ಸಾಯಂಕಾಲ 6 ಪಿ.ಎಂ.ಕ್ಕೆ ನೋಡಲು ನಾನು ಪಾರ್ಕಿಂಗ ಮಾಡಿದ ಸ್ಥಳದಲ್ಲಿ ನಿಲ್ಲಿಸಿದ ಹಿರೋ ಹೊಂಡಾ ಸ್ಲೇಂಡರ ಪ್ರೋ ಮೋಟರ ಸೈಕಲ್ ಇರಲಿಲ್ಲ. ಇದರ ಬಗ್ಗೆ ಎಲ್ಲಾ ಕಡೆ ಮಾಹಿತಿ ತಿಳಿಸಿ ಮತ್ತು ನನ್ನ ಸಂಬಂಧಿಕರಲ್ಲಿ ಮನೆಯ ಅಕ್ಕಪಕ್ಕದವರಲ್ಲಿ ಗೆಳೆಯರಲ್ಲಿ ಮೊಟರ ಸೈಕಲ್ ಬಗ್ಗೆ ವಿಚಾರಿಸಲಾಗಿ ನನ್ನ ಮೊಟರ ಸೈಕಲ್ ಎಲ್ಲಿ ಸಿಗಲಿಲ್ಲಾ ಯಾರೋ ಕಳ್ಳರು ನನ್ನ ಮೋಟಾರ ಸೈಕಲ್ ನನ್ನ ಮೋಟಾರ ಸೈಕಲ್ ನಂ. ಕೆಎ- 32 ಇಬಿ- 3175 ನೇದ್ದು ಉಪಯೋಗಿಸುತ್ತಿದ್ದು ಇದರ ಇಂಜಿನ ನಂ.HA10ELCHD17131 ಚೆಸ್ಸಿ ನಂ.MBLHA10ASCHD14243  ಸಿಲ್ವರ ಬಣ್ಣದ್ದು ಮಾಡೆಲ್ 2012 ಅ.ಕಿ. 25,000/- ರೂ. ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಶರಣಬಸಪ್ಪ ತಂದೆ ಭಾಗಣ್ಣ ಬಿರಾದಾರ ಸಾ: ಯಡ್ರಾಮಿ ತಾ: ಜೇವರ್ಗಿ ಹಾ.ವ : ಪ್ಲಾಟ ನಂ. 25 ದತ್ತ ನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸೇಡಂ ಠಾಣೆ : ದಿನಾಂಕ:18-04-2015 ರಂದು ರಾತ್ರಿ ಮನೆಯಲ್ಲಿದ್ದ ನನ್ನ 15 ವರ್ಷದ ಮಗಳಾದ ಕು.ಉಮಾಶ್ರೀ ಇವಳು ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋಗಿರುತ್ತಾಳೆ, ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವದಿಲ್ಲ. ಇಂದು ದಿ:20-04-2015 ರಂದು ಮುಂಜಾನೆ 09-00 ಗಂಟೆಗೆ ನಾವು ಮನೆಯಲ್ಲಿದ್ದ ನಮ್ಮೂರ ಬಸವರಾಜ ತಂದೆ ಭೀಮರಾಯ ಜಮಾದಾರ ಇವರು ನಮ್ಮ ಮನೆಗ ಬಂದು ತಿಳಿಸಿದ್ದೇನೆಂದರೆ, ದಿ:18-04-2015 ರಂದು ನಮ್ಮ ಆಕಳು ಮನೆಗೆ ಬರದ ಕಾರಣ ಹುಡುಕುತ್ತಾ ಹೋಗಿ ವಾಪಸು ಮರಳಿ ಮನೆಗೆ ಬರುವಾಗ ರಾತ್ರಿ 09-00 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ಶರಣಪ್ಪ ತಂದೆ ಹಾಶಪ್ಪ ಪೂಜಾರಿ ಇವರ ಕುತಿ ದೊಡ್ಡಿಯ ಹತ್ತಿರ ನಿನ್ನ ಮಗಳಾದ ಉಮಾಶ್ರೀ ಇವಳನ್ನು ನಮ್ಮ ಗ್ರಾಮದ ಅಶೋಕ ತಂದೆ ಸಾಬಣ್ಣ ಅನ್ನಾರ್, ಈತನು ಜಬರದಸ್ತಿಯಿಂದ ನಡಿ, ನಡಿ ಯಾರ ಏನ್ ಮಾಡ್ತರ್ ನನಗೆ ಬಿಬ್ಬಳ್ಳಿ ಗ್ರಾಮ ಇಬ್ಬರು ಗೆಳೆಯರಾದ ಮಲ್ಲಪ್ಪ ತಂದೆ ಮಾಳಪ್ಪ ಪೂಜಾರಿ ಮತ್ತು ಜಗಪ್ಪ ತಂದೆ ನರಸಪ್ಪ ಪುಜಾರಿಯವರ ಬೆಂಬಲವಿದೆ, ನೀನು ಬರದೇ ಇದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತ ಜೀವದ ಬೆದರಿಕೆ ಹಾಕುತ್ತಾ ಎಳೆದುಕೊಂಡು ಹೋಗುತ್ತಿದ್ದನು. ನಾನು ಅವರನ್ನು ನನ್ನ ಬ್ಯಾಟರಿ ಬೆಳಕಿನಲ್ಲಿ ಗುರುತಿಸಿರುತ್ತೇನೆ. ಅಂತ ಹೇಳಿದು ಈ ವಿಷಯ ನಮಗೆ ತಡವಾಗಿ ತಿಳಿದು ಖಚಿತಪಡಿಸಿಕೊಂಡಿರುತ್ತೆವೆ. ಕಾರಣ ನನ್ನ ಮಗಳಿಗೆ ಅಪಹರಿಕೊಂಡು ಓಯ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತ ಶ್ರೀ. ಸಾಬಣ್ಣ ತಂದೆ ನಿಂಗಪ್ಪ ಪೂಜಾರಿ, ಸಾ:ತರನಳ್ಳಿ ಗ್ರಾಮ. ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.