POLICE BHAVAN KALABURAGI

POLICE BHAVAN KALABURAGI

01 March 2017

Kalaburagi District Reported Crimes

ಹಲ್ಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಮುನಿರ್ ಪಟೇಲ್ ತಂದೆ ಮೌಲಾಲಿ ಪಟೇಲ್ ಸಾಃ ತಾಜ ಶಾಲೆಯ ಹತ್ತಿರ ತಾಜ ನಗರ ಮುಸ್ಲಿಂ ಸಂಘ ಕಲಬುರಗಿ ಇವರು ದಿನಾಂಕ  27.02.2017 ರಂದು ರಾತ್ರಿ ನಮ್ಮ ಓಣಿಯಲ್ಲಿರುವ ದುಬೈ ಹೋಟೆಲ ಏದುರಿನಿಂದ ಮೌಲಾಲಿ ಕಟ್ಟಾದ ಕೆಡೆಗೆ ನೆಡೆಯುತ್ತಾ ಹೊಗುವಾಗ ಅಷ್ಠರಲ್ಲಿ ನನ್ನ ಏದುರಿನಿಂದ ಸುಮಾರು 5-6 ಛೆಕ್ಕಾ ಜನರು & ಇವರ ಸಂಗಡ 6-7 ಹುಡುಗರು ಕೈಯಲ್ಲಿ ರಾಡ್ & ಬಡಿಗೆ ಹಿಡಿದುಕೊಂಡು ಓಡುತ್ತಾ ನನ್ನ ಹತ್ತಿರ ಬಂದವರೆ, ನನಗೆ ತಡೆನಿಲ್ಲಿಸಿ  ಏ ಬೋಸಡಿಕೆ ರಿಂಗ್ರೋಡ ಹತ್ತಿರ ನಮ್ಮ ಛೆಕ್ಕಾ ಹುಡುಗಿಗೆ ಚುಡಾಯಿಸಿ, ಅವಳ ಮೊಬೈಲ್ ಯ್ಯಾಕೆ ತೆಗೆದುಕೊಂಡು ಬಂದಿದ್ದಿರಿ ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು, “ನಮ್ಮ ಮೊಬೈಲ್ ಕೊಡು, ಇಲ್ಲಿದಿದ್ದರೆ ನಿನಗೆ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗುತ್ತೆವೆ  ಅಂತಾ ಅಂದಾಗ ನಾನು ಈಗ ತಾನೆ ಮನೆಯಿಂದ ಊಟ ಮಾಡಿ ಹೊರಗಡೆ ಬಂದಿದ್ದೇನೆ, ನನಗೆ ಯಾವುದೆ ವಿಷಯ ಗೊತ್ತಿಲ್ಲಾ ಅಂತಾ ಅಂದಾಗ ಅವರು  ಎ ಛಿನಾಕೆ ನೀನು ಸುಳ್ಳು ಹೆಳುತ್ತಿಯಾ, ನಮ್ಮ ಮೋಬೈಲ್ ಕೊಡು ಅಂದರೆ ಯಾವುದು ಗೊತ್ತಿಲ್ಲಾ ಅಂತಿಯಾ  ಅಂದವರೆ ಇವರಲ್ಲಿಯ ಇಬ್ಬರು ಛೆಕ್ಕಾ ಜನರು ನನ್ನ ಎರೆಡು ಕೈಗಳು ಒತ್ತಿ ಹಿಡಿದಿದ್ದು, ಒಬ್ಬ ಛೆಕ್ಕಾ & ಇವರೊಂದೆಗೆ ಬಂದಿದ್ದ ಒಬ್ಬ ಹುಡುಗ ಇವರಿಬ್ಬರೂ ತಮ್ಮ ಕೈಯಲ್ಲಿದ್ದ ರಾಡಿನಿಂದ ಜೋರಾಗಿ ನನ್ನ ತಲೆಯ ಬಲಭಾಗಕ್ಕೆ & ಬಲಕಿವಿಗೆ ಹೊಡೆದು ಭಾರಿರಕ್ತಗಾಯ ಮಾಡಿದ್ದು ಅಲ್ಲದೆ ಇವರೊಂದೊಗೆ ಬಂದಿದ್ದ ಉಳಿದ ಛೆಕ್ಕಾ ಜನರು & ಹುಡುಗರು ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿದ್ದಾಗ, ನಾನು ಕೆಳಗೆ ಬಿದ್ದು ಚಿರಾಡುತ್ತಿದಾಗ ಇದನ್ನು ನೋಡಿ ಅಲ್ಲಿಂದ ಬರುತ್ತಿದ್ದ ನಮ್ಮ ಓಣಿಯ ನನ್ನ ಗೆಳೆಯರಾದ ಮಹ್ಮದ ದಸ್ತಗೀರ ತಂದೆ ಖಾಜಾ ಮೈನೊದ್ದಿನ & ಇಸ್ಮಾಯಿಲ್ ಇವರು ಜಗಳ ಬಿಡಿಸಲು ಬಂದಾಹ ಇವರಿಗೂ ಸಹಃ ಸದರಿ ಛೆಕ್ಕಾ ಜನರು ಹಾಗೂ ಅವರ ಸಂಗಡ ಇದ್ದ ಹುಡುಗರೆಲ್ಲರೂ ಕೂಡಿಕೊಂಡು ನನ್ನ ಇಬ್ಬರೂ ಗೆಳೆಯರಿಗೂ ಕೈಯಿಂದ ಹೊಡೆದು ಗುಪ್ತಪೆಟ್ಟುಗೊಳಿಸಿದ್ದು, ಆಗ ನಾವು ಇವರಿಂದ ಬಿಡಿಸಿಕೊಂಡು ಓಡಿಹೊಗುವಾಗ ಈ ಮೇಲ್ಕಂಡ ಛೆಕ್ಕಾ ಜರು & ಅವರ ಹಿಂದೆ ಬಂದಿದ್ದ ಹುಡುಗರು ನಮಗೆ ಬೆನ್ನುಹತ್ತಿ ಹಿಡಿದು, ನಮ್ಮ ಛೆಕ್ಕಾ ಹುಡಿಗಿಗೆ ಚುಡಾಯಿಸಿ, ಮೊಬೈಲ ತೆಗದುಕೊಂಡಿರುತ್ತಾರೆ ಇವರಿಗೆ ಜೀವ ಸಹಿತ ಬಿಡಬೇಡಿರಿ ಖಲಾಸ್ ಮಾಡಿ ಬಿಡಿರಿ  ಅಂತಾ ಅಂದಾಗ ಅವರಲ್ಲಿಯ ಒಬ್ಬನು ಒಂದು ದೊಡ್ಡ ಕಲ್ಲು ಎತ್ತಿ ನನ್ನ ತಲೆಮೇಲೆ ಹಾಕಲು ಬಂದಾಗ ನಾನು ಆ ಕಲ್ಲಿನ ಎಟಿನಿಂದ ತಪ್ಪಿಸಿಕೊಂಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಹಣಮಂತ ತಂದೆ ಲಕ್ಕಪ್ಪ ಜಮಾದಾರ ಸಾ|| ಬನ್ನೇಟ್ಟಿ ಇವರದು ನ್ಯೂ ಹಾಲೆಂಡ ಕಂಪನಿಯ ಟ್ಯಾಕ್ಟರ ನಂ ಕೆಎ-32 ಟಿಎ-5952 ನೇದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ನಾನು ಈಗ 02 ವರ್ಷಗಳ ಹಿಂದೆ ನಮ್ಮೂರಿನ ಲಕ್ಷ್ಮಣ ತಂದೆ ರಾಮಣ್ಣ ಜಮಾದಾರ ಇವರಿಗೆ, ನಮ್ಮೂರಿನ ಶರಣಪ್ಪ ತಂದೆ ಕಲ್ಲಪ್ಪ ಜಮಾದಾರ ಹಾಗೂ ಲಕ್ಷ್ಮಣ ತಂದೆ ಕುಪ್ಪಣ್ಣ ಜಮಾದಾರ ಇವರ ಸಮಕ್ಷಮ ಪ್ರತಿ ತಿಂಗಳು 15,000/- ರೂ ಕೊಡಬೇಕು ಅಂತಾ ಎಂಗೇಜ್ ಮೇಲೆ ಟ್ಯಾಕ್ಟರ ಕೊಟ್ಟಿರುತ್ತೇನೆ. ಲಕ್ಷ್ಮಣ ಈತನು ಟ್ಯಾಕ್ಟರ ತಗೆದುಕೊಂಡ ಮೇಲೆ ಇಲ್ಲಿಯವರೆಗೆ ಒಟ್ಟು 50,000/- ರೂ ಹಣ ಕೊಟ್ಟಿದ್ದು ಉಳಿದ ಹಣ ಕೊಡು ಎಂದು ಕೇಳಿದರೆ, ಇಂದು ಕೊಡುತ್ತೇನೆ ನಾಳೆ ಕೊಡುತ್ತೇನೆ ಎಂದು ದಿನ ಹಾಕುತ್ತಾ ಬಂದಿರುತ್ತಾನೆ. ಸದರಿ ಲಕ್ಷ್ಮಣ ಈತನು ಹಣ ಕೊಡದೆ ಇದ್ದರಿಂದ ನಾನು ಹಣ ಆದರೂ ಕೋಡು ಇಲ್ಲವಾದರೆ ನನ್ನ ಟ್ಯಾಕ್ಟರ ನನಗೆ ವಾಪಸ ಕೊಡು ಎಂದು ಕೆಳುತ್ತಾ ಬಂದಿದ್ದಕ್ಕೆ ನನ್ನ ಮೇಲೆ ಸಿಟ್ಟು ಮಾಡಿಕೊಂಡು ಟ್ಯಾಕ್ಟರ ಇಂಜೆನ್ ಕೊಟ್ಟು, ಟ್ರೈಲಿ ಅವನ ಹತ್ತಿರವೆ ಇಟ್ಟುಕೊಂಡಿರುತ್ತಾನೆ. ದಿನಾಂಕ 21-02-2017 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ನನ್ನ ಸ್ಕಾರ್ಪಿಯೋ ವಾಹನದಲ್ಲಿ ನನ್ನ ಗೆಳೆಯರಾದ ಗುರಪ್ಪ ತಂದೆ ಕರೇಪ್ಪ ಜಮಾದಾರ ಹಾಗೂ ರಾಮಣ್ಣ ತಂದೆ ಸಿದ್ದಪ್ಪ ಜಮಾದಾರ ಇವರೊಂದಿಗೆ ಅಫಜಲಪೂರಕ್ಕೆ ಹೋಗುತ್ತಿದ್ದಾಗ ಬನ್ನೇಟ್ಟಿ ಕ್ರಾಸ ಹತ್ತಿರ, ಹಿಂದೆ ಟ್ಯಾಕ್ಟರ ಸಂಬದ ನನ್ನೊಂದಿಗೆ ತಕರಾರು ಮಾಡಿಕೊಂಡು ಲಕ್ಷ್ಮಣ ತಂದೆ ರಾಮಣ್ಣ ಜಮಾದಾರ ಮತ್ತು ಅವನ ಮಕ್ಕಳಾದ ಹಣಮಂತ ತಂದೆ ಲಕ್ಷ್ಮಣ ಜಮಾದಾರ ಹಾಗೂ ರಾಮಣ್ಣ ತಂದೆ ಲಕ್ಷ್ಮಣ ಜಮಾದಾರ ಮೂರು ಜನರು ಕೂಡಿ ಮೋಟರ ಸೈಕಲ ಮೇಲೆ ಬಂದು ನನ್ನ ಸ್ಕಾರ್ಪಿಯೋ ವಾಹನಕ್ಕೆ ತಮ್ಮ ಮೋಟರ ಸೈಕಲನ್ನು ಅಡ್ಡ ನಿಲ್ಲಿಸಿದರು ಆಗ ನಾನು ಸದರಿಯವರಿಗೆ ಮೋಟರ ಸೈಕಲ ತಗೆಯಲು ಹೇಳಿದಾಗ, ಲಕ್ಷ್ಮಣ ಈತನು ಬೋಸಡಿ ಮಗನೆ ನಿಂದು ತಿಂಡಿ ಜಾಸ್ತಿ ಆಗಿದೆ ನನಗೆ ಟ್ಯಾಕ್ಟರ ವಾಪಸ ಕೊಡು ಅಂತಾ ಕೇಳುತ್ತಿ ಎಂದು ಬೈಯುತ್ತಾ ನನ್ನ ಹತ್ತಿರ ಬಂದು ಮೂರು ಜನರು ಕೂಡಿ ನನ್ನನ್ನು ಹಿಡಿದು ನನ್ನ ವಾಹನದಿಂದ ಜಗ್ಗಿ ನನಗೆ ನೆಲಕ್ಕೆ ಹಾಕಿ ಮೂರು ಜನರು ಕೂಡಿ ನನಗೆ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡುತ್ತಿದ್ದರು, ಆಗ ನನ್ನ ಜೋತೆಗೆ ಬಂದಿದ್ದ ನನ್ನ ಗೇಳೆಯರಾದ ಗುರಪ್ಪ ಜಮಾದಾರ ಹಾಗೂ ರಾಮಣ್ಣ ಜಮಾದಾರ ಇಬ್ಬರು ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿದರು, ಆಗ ಸದರಿಯವರು ಮಗನೆ ಇನ್ನೊಮ್ಮೆ ಟ್ಯಾಕ್ಟರ ಕೇಳಲು ಬಾ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಜೀವ ಬೇದರಿಕೆ ಹಾಕಿ ಅಲ್ಲಿಂದ ಹೊಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಬಾಬು@ ಭವಾನಿ ತಂದೆ ನಾಗಪ್ಪ ಓಂಕಾರ @ ಗುರು ವೈಷ್ಠವಿ ಪವ್ಹಾರ ಸಾ : ಹೊಡೆ ಬೀರನಹಳ್ಳಿ ಸಧ್ಯ ಲಂಗರ ಹನುಮಾನ ನಗರ ಕಲಬುರಗಿ ಇವರು ದಿನಾಂಕ 27-02-2017 ರಂದು ರಾತ್ರಿ ಕಲಬರಗಿ ನಗರದ ತಾಜ ಸುಲ್ತಾನಪೂರ ರಿಂಗ ರೋಡಿಗೆ ಇರುವ ಪೆಟ್ರೋಲ್ ಪಂಪ ಎದುರಗಡೆ ಬಿಕ್ಷಾಟನೆ ಕುರಿತು ಹೋಗಬೇಕೆಂದು ರೇಲ್ವೆ ಸ್ಟೇಶನ ಆಟೋಕ್ಕಾಗಿ ನಾನು ಮತ್ತು 2) ಮೊಗಲಪ್ಪ @ ಮರಿಯಮ್ಮಾ ತಂದೆ ರಾಜಾ @ ಗುರು ಮನೀಶಾ ಚವ್ಹಾಣ, 3) ಮಹಮ್ಮದ ನವಾಜ @ ನಜಮಾ ತಂದೆ ನೂರ ಮಹಮ್ಮದ @ ಗುರು ಶಬ್ಬನಮ್ 4) ಶೇಖ ಇರಫಾನ @ ಶೈಹನಾಜ್ ತಂದೆ ಗುಲಾಮ ರಸೂಲ್ @ ಗುರು ಮುಸಕಾನ್ 5) ಶೇಖ ನದೀಮ್ @ ಸುಮೇರಾ ತಂದೆ ಸಿರಾಜ @ ಗುರು ವೈಷ್ಠವಿ ಪವ್ಹಾರ  ಎಲ್ಲರೂ ನಿಂತಾಗ ಆಗ ತಾಜ ನಗರ ಮುಸ್ಲಿಂ ಕಡೆಯಿಂದ ಮುನೀರ ಪಟೇಲ್ ತಂದೆ ಮೌಲಾಲಿ ಪಟೇಲ್ ಸಂಗಡ 5-6 ಜನರು ಕೂಡಿಕೊಂಡು ಬಂದು ನಮಗೇ ಹಣ ಕೊಡು ಅಂತಾ ಕೇಳಿದರು ನಾವೆಲ್ಲರೂ ನಮ್ಮ ಹತ್ತಿರ ಹಣವಿಲ್ಲಾ ಅಂತಾ ಅಂದಿದ್ದಕ್ಕೆ ಅವರಲ್ಲಿ ಮುನೀರ ಪಟೇಲ್ ಇತನು ನಮಗೇ ಹಣ ಕೊಡು ಅಂತಾ ಹೇಳಿ ಅವಮಾನ ಮಾಡುವ ಉದ್ದೇಶದಿಂದ ನಮ್ಮೆಲ್ಲರ ಕೈ ಹಿಡಿದು ಎಳೆದಾಡಿ 05 ಜನರಿಗೆ ಕೈಯಿಂದ ಕಪಾಳ ಮೇಲೆ ಮತ್ತು ಇತರೇ ಕಡೆಗಳಲ್ಲಿ ಹೊಡೆ ಬಡೆ ಮಾಡಿದರು. ಅವರಿಗೆ ಹೆದರಿ ಅಲ್ಲಿಂದ ನಮ್ಮ ಓಣಿಯ ಕಡೆಗೆ ಹೋಗಿ ಈ ವಿಷಯ ನಮ್ಮ ಗುರುಗಳಾದ ಮನೀಶಾ ಚವ್ಹಾಣ, ನೀಲೂ ರಾಠೋಡ, ವೈಷ್ಠವಿ ಪವ್ಹಾರ, ಶಬನಾಮ್ ಚವ್ಹಾಣ, ಇವರಿಗೆ ಈ ಮೇಲಿನ ವಿಷಯ ತಿಳಿಸಿದಾಗ ತಾಜ ಸುಲ್ತಾನಪುರ ರಿಂಗ ರೋಡಕ್ಕೆ ನಾವೆಲ್ಲರೂ ಹೋಗಬೆಂಕೆಂದು ಹೊರಟಾಗ ರಾತ್ರಿ 10-30 ಗಂಟೆ ಸುಮಾರಿಗೆ ಈ ಮೇಲಿನ ಮುನೀರ ಪಟೇಲ್ ತಂದೆ ಮೌಲಾಲಿ ಪಟೇಲ್ ಸಂಗಡ 5-6 ಜನರು ಕೂಡಿಕೊಂಡು ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ನಮ್ಮ ಓಣಿಗೆ ಬಂದು ನನಗೆ ಮತ್ತು ಮೊಗಲಪ್ಪ @ ಮರಿಯಮ್ಮಾ, ಮಹಮ್ಮದ ನವಾಜ್ @ ನಜಮಾ, ಶೇಖ ಇರಫಾನ @ ಶೈಹನಾಜ್, ಶೇಖ ನದೀಮ್ @ ಸುಮೇರಾ, ನಮ್ಮ ಎಲ್ಲರಿಗೂ ಬಡಿಗೆಯಿಂದ ಕಲ್ಲಿನಿಂದ, ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ ಈ ಜಗಳ ಅಲ್ಲಿಯೇ ಇದ್ದ ನಮ್ಮ ಗುರುಗಳಾದ ಮನೀಶಾ ಚವ್ಹಾಣ, ನೀಲೂ ರಾಠೋಡ, ವೈಷ್ಠವಿ ಪವ್ಹಾರ, ಶಬನಾಮ್ ಚವ್ಹಾಣ ಇವರು ಬೀಡಿಸಲು ಬಂದಾಗ ಅವರಿಗೂ ಕೂಡಾ ಬಡಿಗೆಯಿಂದ, ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ ಮತ್ತು ನಮ್ಮಲ್ಲರ ಕೈ ಕಾಲು ಕಡಿದು ಜೀವ ತೆಗೆಯುತ್ತೇವೆ ಅಂತಾ ಚಾಕು ತೋರಿಸಿ ಭಯ ಹಾಕಿದಾಗ ಅವರಿಗೆ ಅಂಜಿ ನಾವೆಲ್ಲರು ಸಿಕ್ಕ ಸಿಕ್ಕ ಕಡೆಗೆ ಓಡಿ ಹೋದೇವು ಮುನೀರ ಪಟೇಲ ಸಂಗಡ ಇದ್ದ ಜನರು ನಮ್ಮ ಮನೆಗಳಿಗೆ ಹೋಗಿ ಮನೆಯಲ್ಲಿನ ವಸ್ತುಗಳನ್ನು ಚಲ್ಲಾ ಪಿಲ್ಲಿ ಮಾಡಿ ಟಿವಿ ಪ್ರಿಡ್ಜ ಒಡೆದು ಸುಮಾರು 50,000/- ರೂ ಗಳಷ್ಟು ಲುಕ್ಸನ ಮಾಡಿ. ಕಾರಣ ನನಗೆ ಮತ್ತು ಈ ಮೇಲಿನ 4 ಜನರಿಗೆ  ಹೊಡೆ ಬಡೆ ಮಾಡಿದ್ದು.  ದಲಿತನಾದ ನನ್ನ ಮೇಲೆ ಮತ್ತು ದಲಿತ ಗುರುಗಳಾದ ಮನೀಶಾ ಚವ್ಹಾಣ, ನೀಲೂ ರಾಠೋಡ, ವೈಷ್ಠವಿ ಪವ್ಹಾರ ಇವರ ಮೇಲೆ ದೌರ್ಜನ್ಯ ಮಾಡಿದವರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ