POLICE BHAVAN KALABURAGI

POLICE BHAVAN KALABURAGI

24 September 2011

Gulbarga District Reported Crimes

ಸುಲಿಗೆ ಪ್ರಕರಣ :

ಜೇವರ್ಗಿ ಠಾಣೆ :ಶ್ರೀ ಸಿದ್ದಣ್ಣ ತಂದೆ ಬಸಪ್ಪ ಫರತಬಾದ ಸಾ: ಚನ್ನೂರ ದಿನಾಂಕ: 23/09/2011 ರಂದು ರವರು ತನ್ನ ಮೋಟಾರ ಸೈಕಲ ನಂಬರ ಕೆ.ಎ. 32 ಎಕ್ಸ 8476 ನೇದ್ದರ ಮೇಲೆ ತಮ್ಮೂರಿನಿಂದ ಜೇವರ್ಗಿ ಪಟ್ಟಣದ ಬಿ.ಎನ್. ಪಾಟೀಲ ಇವರ ದಾಲಮೀಲ್ಲಿಗೆ ಬಂದು ನಾನಾಗೌಡರ ಸಂಗಡ ಮಾತಾನಾಡಿ ಪು:ನ ತಮ್ಮೂರಾದ ಚನ್ನೂರಕ್ಕೆ ಸದರಿ ಮೋಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ರಾತ್ರಿ 8-30 ಗಂಟೆಯ ಸುಮಾರಿಗೆ ಗುಲಾಮ ಸೇಟ ಇವರ ಹೋಲದ ಹತ್ತಿರ ರೋಡಿನಲ್ಲಿ ಎದುರುಗಡೆಯಿಂದ ಇಬ್ಬರೂ ಮನುಷ್ಯರು ತನ್ನ ಮೋಟಾರ ಸೈಕಲಕ್ಕೆ ಬಡಿಗೆಯಿಂದ ಅಡ್ಡಗಟ್ಟಿ ನಿಲ್ಲಿಸಿ ಬಡಿಗೆಯಿಂದ ಹೊಡೆದು ಅಲ್ಲೆ ಪಕ್ಕದ ಹೊಲದಲ್ಲಿ ಕರೆದುಕೊಂಡು ಹೋಗಿ ಹತ್ತಿರ ಇದ್ದ ನಗದು ಹಣ 6000 ರೂಪಾಯಿ ಮತ್ತು ಒಂದು ನೋಕಿಯಾ ಕಂಪನಿಯ ಮೊಬೈಲ, ಹಾಗೂ ಪಿರ್ಯಾದಿಯ ಮೋಟಾರ ಸೈಕಲ ಹೀಗೆ ಒಟ್ಟು 42000 ರೂ ಜಬರದಸ್ತಿಯಿಂದ ಕಸಿದುಕೊಂಡು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣಗಳು :

ಮಾದನ ಹಿಪ್ಪರಗಾ ಠಾಣೆ :ಶ್ರೀ. ಬಸವರಾಜ ತಂದೆ ಲಕ್ಷ್ಮಣ ಪಾಟೀಲ ಸಾ:ನಿಂಗದಳ್ಳಿ ದಿನಾಂಕ 23-09-2011 ರಂದು ರಾತ್ರಿ 8: ಗಂಟೆ ಸುಮಾರಿಗೆ 1.ರಾಜಶೇಖರ ತಂದೆ ಕಲ್ಯಾಣಿ ಪಾಟೀಲ 2.ಶ್ರೀಶೈಲ ತಂದೆ ಕಲ್ಯಾಣಿ ಪಾಟೀಲ 3.ಬಸವರಾಜ ತಂದೆ ಕಲ್ಯಾಣಿ ಪಾಟೀಲ 4.ಕಲ್ಯಾಣಿ ತಂದೆ ತೇಜಪ್ಪ ಪಾಟೀಲ ಸಾ: ಎಲ್ಲರೂ ನಿಂಗದಳ್ಳಿ ಕುಡಿಕೊಂಡು ಮನೆಗೆ ಬಂದು ಪಿತ್ರಾರ್ಜಿತ ಆಸ್ತಿಯ ವಿಷಯದ ಸಂಬಂಧದ ವೈಮನಸ್ಸಿನಿಂದ ಜಗಳ ತಗೆದು ಅವ್ಯಾಚ್ಯೆವಾಗಿ ಬೈದು ಹೊಡೆ ಬಡೆ ಮಾಡಿ ಜೀವ ಭಯದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದನ ಹಿಪ್ಪರಗಾ ಠಾಣೆ :ಶ್ರೀ. ಬಸವರಾಜ ತಂದೆ ಕಲ್ಯಾಣಿ ಪಾಟೀಲ ಸಾ: ನಿಂಗದಳ್ಳಿ ದಿನಾಂಕ 23-09-2011 ರಂದು ರಾತ್ರಿ 8 ಗಂಟೆ ಸುಮಾರಿಗೆ ಮಲ್ಲೇಶಪ್ಪ ಪಾಟೀಲ ರವರ ಮನೆಗೆ ಹಾಲು ಕೊಟ್ಟು ಬರುವಾಗ 1.ಬಸವರಾಜ ತಂದೆ ಲಕ್ಷ್ಮಣ ಪಾಟೀಲ 2.ಸಿದ್ರಾಮ ತಂದೆ ಲಕ್ಷ್ಮಣ ಪಾಟೀಲ 3.ಶಂಕರ ತಂದೆ ಸಿದ್ರಾಮ ಪಾಟೀಲ 4.ಸೋಮನಾಥ ತಂದೆ ಬಸವರಾಜ ಪಾಟೀಲ ಸಾ: ಎಲ್ಲರೂ ನಿಂಗದಳ್ಳಿ ರವರು ಕುಡಿಕೊಂಡು ತನ್ನನ್ನು ನೋಡಿ ಪಿತ್ರಾರ್ಜಿತ ಆಸ್ತಿಯ ವಿಷಯದ ಸಂಬಂಧದ ವೈಮನಸ್ಸಿನಿಂದ ಅವಾಚ್ಯೆ ಶಬ್ದ ಬೈಯುತ್ತಾ ತನ್ನ ಕೈಯಲ್ಲಿದ್ದ ಕಲ್ಲಿನಿಂದ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಮತ್ತು ಪಿರ್ಯಾದಿಯ ಅಣ್ಣತಂಮಂದಿರಿಗೂ ಬಿಡಿಸಲು ಬಂದಾಗ ಅವರಿಗೂ ಸಹ ಕೈಯಿಂದ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿ ಜೀವ ಭಯದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Gulbarga District Reported Crimes

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ :ಕುಮಾರಿ ದೀಪಾ ತಂದೆ ಅಶೋಕ ಸಿಂಧೇ ವ: 17 ವರ್ಷ ಸಾ: ಶರಣಸಿರಸಗಿ ಮಡ್ಡಿ ತಾ: ಜಿ: ಗುಲಬರ್ಗಾ ಇವಳು 1 ವರ್ಷದಿಂದ ನಮ್ಮೂರ ಶಿವಾನಂದ ಸೀತನೂರ ಇವರ ಹೊಲಕ್ಕೆ ಕೂಲಿಕೆಲಸಕ್ಕೆ ಹೋಗುತ್ತಿದ್ದು. ಸದರಿ ಹೊಲದ ಮಾಲಿಕನಾದ ಶಿವಾನಂದ ಇವನೊಂದಿಗೆ ಕೂಲಿಕೆಲಸಕ್ಕೆ ದಿನ ನಿತ್ಯ ಹೋಗುತ್ತಿದ್ದಾಗ ಅವರ ಹೊಲದ ಹಳ್ಳದ ಹತ್ತಿರ ಹೋಗು ತ್ತಿದ್ದಾಗ ಆರೋಪಿತನಾದ ಶಿವಾನಂದ ಇತನು ಪುಸಲಾಯಿಸಿ ನನಗೆ ದಿನಾಂಕ 24-12-10 ರಂದು ಜಬರದಸ್ತಿಯಿಂದ ಸಂಬೋಗ ಮಾಡಿದ್ದು ಅಲ್ಲದೆ ಹೀಗೆ ಸುಮಾರು 9 ತಿಂಗಳಿಂದ ನನ್ನೊಂದಿಗೆ ಜಬರಿ ಸಂಬೋಗ ಮಾಡುತ್ತಾ ಬಂದಿರುತ್ತಾನೆ ಹಾಗೂ 2011 ನೇ ಸಾಲಿನ ಮಾರ್ಚ ತಿಂಗಳಲ್ಲಿ ಗರ್ಭೀಣಿ ಆದಾಗ ಆ ವಿಷಯ ಆರೋಪಿತನಿಗೆ ತಿಳಿಸಿ ಮದುವೆ ಯಾಗಲು ಹೇಳಿದಾಗ ಅವನು ಮದುವೆಯಾಗುತ್ತೇನೆಂದು ಹೇಳುತ್ತಾ ದಿನಮುಂದೊಡುತ್ತಾ ಬಂದಿದ್ದು ಇರುತ್ತದೆ ಈ ವಿಷಯವನ್ನು ತನ್ನ ತಂದೆ ತಾಯಿಗೆ ಹಾಗೂ ಬೇರೆಯವರಿಗೆ ತಿಳಿಸಿರುವುದಿಲ್ಲ ದಿ: 20-9-11 ರಂದು 11 ಎಎಮಕ್ಕೆ ಗುಲಬರ್ಗಾಕ್ಕೆ ತಂದು ಬಸ್ಸ ಸ್ಟ್ಯಾಂಡ್‌ ಹತ್ತಿರ ಒಂದು ಗುಳಿಗೆ ಕೊಟ್ಟು ಬೇಹುಷ ಮಾಡಿ ನನಗೆ ಅಭಾರಷನ್ ಮಾಡಿಸಿದ್ದು ನಂತರ ಆರೋಪಿತನು ನನ್ನ ತಾಯಿಗೆ ಕರೆಯಿಸಿ ಅವರೊಂದಿಗೆ ಮನೆಗೆ ಕಳುಹಿಸಿದ್ದು ಇರುತ್ತದೆ ಗ್ರಾಮದ ಸಮಾಜದ ಸಮ್ಮುಖದಲ್ಲಿ ಪಿರ್ಯಾದಿಗೆ ಮದುವೆ ಮಾಡಿಕೊಳ್ಳುವಂತೆ ಕೇಳಲು ಹೋದಾಗ ಆರೋಪಿತನ ತಂದೆ ತಾಯಿ ಇವರು ಹೊಲೆಯ ಜಾತಿಗೆ ಸೇರಿದ ಹೆಣ್ಣಿಗೆ ತಮ್ಮ ಮನೆಯ ಸೋಸೆ ಮಾಡಿಕೊಳ್ಳುವುದಿಲ್ಲ ಅಂತಾ ಜಾತಿ ನಿಂದನೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣಗಳು :

ಕಮಲಾಪೂರ ಠಾಣೆ :ಶ್ರೀ. ಅಜೀಜಸಾಬ ತಂದೆ ಶಮಶೋದ್ದಿನ ನದಾಫ ಸಾಃಕಮಲಾಪೂರ ತಾಃಜಿಃ ಗುಲಬರ್ಗಾ ನನ್ನ ಮಗನಾದ ಮಹ್ಮದ್ ನಿಜಾಮೋದ್ದೀನ್ ಈತನು ಸುಮಾರು ದಿವಸಗಳಿಂದ ಮಾನಸಿಕ ರೋಗಿಯಂತೆ ಹುಚ್ಚನಂತೆ ವರ್ತಿಸುತ್ತಾ ಯಾವುದೇ ಕೆಲಸ ಮಾಡದೇ ಮನಃಬಂದ ಕಡೆ ತಿರುಗಾಡುತ್ತಿದ್ದು. ಹುಚ್ಚತನದಿಂದ ವರ್ತನೆ ಮಾಡಿಕೊಂಡು ಮನೆಗೆ ಬರದೇ ಊರಲ್ಲಿ ತಿರುಗಾಡುತ್ತಿರುತ್ತಾನೆ. ಆತನಿಗೆ ಎಷ್ಟು ಸಾರಿ ವೈದ್ಯಕೀಯ ಉಪಚಾರ ಕೊಡಿಸಿದರು ಯಾವುದೇ ಫಲಕಾರಿಯಾಗಿರುವುದಿಲ್ಲಾ. ಹೀಗಿದ್ದು. ದಿನಾಂಕ 23-09-2011 ರಂದು ಬೆಳಿಗ್ಗೆ ನಾನು, ನನ್ನ ಹೆಂಡತಿ ಮುಮತಾಜ ಬೇಗಂ ಇಬ್ಬರೂ ಕೂಡಿಕೊಂಡು ಮಗ ಮಹ್ಮದ್ ನಿಜಾಮೋದ್ದೀನ್ ಈತನಿಗೆ ಊಟ ಮಾಡಿಸಿ, ನಂತರ ನನಗೆ ಕೆಲಸವಿದ್ದ ಪ್ರಯುಕ್ತ ಗುಲಬರ್ಗಾಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಮರಳಿ ಮನೆಗೆ ಬಂದಾಗ ಗುಲಬರ್ಗಾ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ರಸ್ತೆಯ ಕಮಲಾಪೂರ ಸೀಮಾಂತರದ ಹನಿಫಸಾಬ ಓಕಳಿ ರವರ ಹೊಲದ ಹತ್ತಿರ ಇರುವ ಮುಖ್ಯ ರಸ್ತೆಯ ಹತ್ತಿರ ಯಾವುದೋ ಒಬ್ಬ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಮಹ್ಮದ್ ನಿಜಾಮೋದ್ದೀನ್ ಈತನೇ ಅಪಘಾತ ಪಡಿಸಿದ್ದರಿಂದ ತೆಲೆಗೆ, ಮುಖಕ್ಕೆ ಭಾರಿ ರಕ್ತಗಾಯಗಳಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ಶ್ರೀಮತಿ ಜಯಶ್ರೀ ಗಂಡ ಮಹಾಂತಗೌಡ ಪೊಲೀಸ್ ಪಾಟೀಲ್ ಸಾ:ಮನೆ ನಂ.ಎಲ್.ಐ.ಜಿ.-7 ಹೌಸಿಂಗ ಬೋರ್ಡ ಕಾಲೂನಿ ಹೈಕೊರ್ಟ ಎದರುಗಡೆ ರವರು ದಿನಾಂಕ 22-08-11 ರಂದು ರಾತ್ರಿ ತಮ್ಮ ತಾಯಿ ಲಕ್ಷ್ಮೀಬಾಯಿ ಇಬ್ಬರು ಕೂಡಿಕೊಂಡು ಹೈಕೋರ್ಟ ಎದರುಗಡೆ ರಿಂಗರೋಡ ಪಕ್ಕದ ಅಕ್ಕಮಾಹಾದೇವಿ ಕಾಲೂನಿ ಹೌಸಿಂಗ ಬೋರ್ಡ ಕ್ರಾಸ ಸಮೀಪ ಬ್ರಜ್ ಹತ್ತಿರ ವಾಕಿಂಗ ಮಾಡುತ್ತಾ ಹೋಗುತ್ತಿರುವಾಗ ಅದೇ ವೇಳೆಗೆ ನಮ್ಮ ಹಿಂದಿನಿಂದ ಮೋಟಾರ ಸೈಕಲ್ ನಂಬರ ಕೆಎ 32 ಅರ್-6844 ನೇದ್ದರ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ನನ್ನ ತಾಯಿಗೆ ಡಿಕ್ಕಿ ಹೋಡೆದಿದ್ದು. ಡಿಕ್ಕಿ ಹೊಡೆದಿದ್ದರಿಂದ ಗಾಯಾಳು ಲಕ್ಷ್ಮೀಬಾಯಿಗೆ ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ. ಎಡಗಣ್ಣಿನ ಹತ್ತಿರ ಮೇಲಕಿಗೆ ರಕ್ತಗಾಯ ವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣಗಳು :

ಕಮಲಾಪೂರ ಠಾಣೆ :ಶ್ರೀ ಗೋಪಾಲ ತಂದೆ ಶಂಕರ ಚವ್ಹಾಣ ಸಾಃ ಸರಫೋಸಕಿಣ್ಣಿ ತಾಂಡಾ ತಾ;ಜಿ; ಗುಲಬರ್ಗಾ ದಿನಾಂಕ: 22-09-2011 ರಂದು ನಾನು ಮನೆಯಲ್ಲಿದ್ದಾಗ ನನ್ನ ಅಣ್ಣತಮ್ಮಕೀಯರಾದ ಲಕ್ಷ್ಮಣ ಮತ್ತು ಆತನ ಸಂಬಂಧಿಕನಾದ ರಮೇಶ ಇಬ್ಬರು ಕೂಡಿಕೊಂಡು ಬಂದು ನಮ್ಮ ಹಿರಿಯರ ಆಸ್ತಿಯಲ್ಲಿ ಸರಿಯಾಗಿ ಹಂಚಿಕೆ ಮಾಡಿರುವುದಿಲ್ಲಾ ಮತ್ತು ನಿನ್ನ ಮಗ ಗುರುನಾಥ ಈತನು ನಮಗೆ ಗುತ್ತೇದಾರಿಕೆ ಕೆಲಸದಿಂದ ಬಿಡಿಸಿರುತ್ತಾನೆ. ತಾಂಡಾದಲ್ಲಿ ನಿಮಗೆ ಬಹಳ ಸೊಕ್ಕು ಬಂದಿದೆ. ಅಂತಾ ಅವಾಚ್ಯವಾಗಿ ಬೈದು ತಕರಾರು ಮಾಡಿ ನಮ್ಮ ತಾಂಡಾದ ವಾಲು ಈತನ ಕಿರಾಣಿ ಅಂಗಡಿ ಹತ್ತಿರ ರೋಡಿನ ಮೇಲೆ ಹೋಗುತ್ತಿದ್ದಾಗ ಸಾಯಂಕಾಲ 1.ಲಕ್ಷ್ಮಣ ತಂದೆ ಖೀರು ಚವ್ಹಾಣ 2.ರಮೇಶ ತಂದೆ ಸೀನು ರಾಠೋಡ ಆತನ ಹೆಂಡತಿಯಾದ 3.ಮೀರಾಬಾಯಿ ಗಂಡ ರಮೇಶ ರಾಠೋಡ 4.ನಾಥೂರಾಮ ತಂದೆ ಲಕ್ಷ್ಮಣ 5.ದಿಲೀಪ ತಂದೆ ಕಿಶನ ರಾಠೋಡ 6.ಸಂತೋಷ ತಂದೆ ಕಾಶಿರಾಮ ರಾಠೋಡ 7.ರವಿ ತಂದೆ ಕಿಶನ ಜಾಧವ 8.ಅಶೋಕ ತಂದೆ ಶೇರು ಚವ್ಹಾಣ 9.ಮುರಳಿ ತಂದೆ ವಿಠಲ ಚಿನ್ನಾರಾಠೋಡ ಎಲ್ಲರೂ ಕೂಡಿ ಏಕೋದ್ದೇಶದಿಂದ ಗುಂಪು ಕಟ್ಟಿಕೊಂಡು ಬಂದುವರೇ ನನಗೆ, ನನ್ನ ಮಗ ಗುರುನಾಥ ಇಬ್ಬರಿಗೂ ತಡೆದು ನಿಲ್ಲಿಸಿ, ಏ ಭೊಸಡಿ ಮಕ್ಕಳೆ ಮುಖ ತಪ್ಪಿಸಿಕೊಂಡು ನೀವು ಎಲ್ಲಿಗೆ ಹೊರಟಿದ್ದಿರಿ ಅಂತಾ ಅವಾಚ್ಯವಾಗಿ ಬೈದು ಕಾಲಿನಿಂದ ಒದ್ದು, ಬಡಿಗೆಯಿಂದ ಹೊಡೆದು, ಕೈಯಿಂದ ನನ್ನ ಕುತ್ತಿಗೆ ಜೋರಾಗಿ ಒತ್ತಿ ಹಿಡಿದು ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿದ್ದು ಅಲ್ಲದೇ ನನ್ನ ಮಗ ಗುರುನಾಥ ಮತ್ತು ಜಗಳ ಬಿಡಿಸಲು ಬಂದ ಮಾಣಿಕ ಇವರಿಗೂ ಸಹ ಬಡಿಗೆಯಿಂದ ಹೊಡೆಬಡೆ ಮಾಡಿ, ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಮಲಾಪೂರ ಠಾಣೆ :ಶ್ರೀಮತಿ ಮೀರಾಬಾಯಿ ಗಂಡ ರಮೇಶ ರಾಠೋಡ ಸಾಃ ಸರಫೋಸಕಿಣ್ಣಿ ತಾಂಡಾ ತಾ
;ಜಿ; ಗುಲಬರ್ಗಾ ರವರು ದಿನಾಂಕ: 22-09-2011 ರಂದು ಸಾಯಂಕಾಲ ತನ್ನ ದೊಡ್ಡಪ್ಪನ ಮಗನಾದ ಗುರುನಾಥ ತಂದೆ ಗೋಪಾಲ ಈತನು ತನ್ನ ತಂದೆಯೊಂದಿಗೆ ವಾಲು ಚವ್ಹಾಣ ಈತನ ಕಿರಾಣಿ ಅಂಗಡಿ ಮುಂದಿನ ರೋಡಿನ ಮೇಲೆ ಬರುತ್ತಿರುವದನ್ನು ನಾವು ನೋಡಿ, ನಾನು, ನನ್ನ ಗಂಡ ರಮೇಶ ಮತ್ತು ತಂದೆ ಲಕ್ಷ್ಮಣ ಎಲ್ಲರೂ ಕೂಡಿಕೊಂಡು ಹೋಗಿ ಗುರುನಾಥ ಈತನಿಗೆ ನಾವು ಮಾಡಿದ ಕೆಲಸದ ಲೆಕ್ಕ ಕೊಡು ಅಂದರೆ ಕೊಡುತ್ತಿಲ್ಲಾ ಯಾಕೆ ಸುಮ್ಮನೇ ಮುಂದಕ್ಕೆ ಹಾಕುತ್ತಿರುವಿ ಅಂತಾ ಕೇಳಿದಕ್ಕೆ ಗುರುನಾಥ ಈತನು ನನ್ನ ಗಂಡನಿಗೆ ಏ ಭೋಸಡಿ ಮಗನೇ ನಿನ್ನದು ಯಾವ ಲೆಕ್ಕ ಕೊಡುವುದಿದೆ. ನಾನು, ನಿನ್ನೊಂದಿಗೆ ಕೆಲಸ ಮಾಡುವದನ್ನು ಬಿಟ್ಟು ಒಂದ ವರ್ಷ ವಾಗಿದೆ. ಯಾವುದೇ ಲೆಕ್ಕ ಕೊಡುವುದು ಬಾಕಿ ಇರುವುದಿಲ್ಲಾ. ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನನ್ನ ತಂದೆಯು ಹೀಗೆ ಬೈಯುವುದು ಸರಿ ಅಲ್ಲಾ ಸುಮ್ಮನೇ ಲೆಕ್ಕ ಮಾಡಿ ಕೊಡು ಯಾಕೇ ತಕರಾರು ಮಾಡುತ್ತಿದ್ದಿ ಅಂತಾ ಕೇಳಿದಕ್ಕೆ ನಮ್ಮ ಬಾಯಿ ಮಾತಿನ ಸಪ್ಪಳ ಕೇಳಿ, ಗುರುನಾಥ ಈತನ ಅಣ್ಣನಾದ 2. ಭೀಮಶೆಟ್ಟಿ 3.ಗಿನ್ನಾಬಾಯಿ ಗಂಡ ಭೀಮಶೆಟ್ಟಿ 4. ಕವಿತಾಬಾಯಿ ಗಂಡ ಗುರುನಾಥ 5.ಸೀತಾಬಾಯಿ ಗಂಡ ಗೋಪಾಲ ಚವ್ಹಾಣ ಮತ್ತು 6.ಗುರುನಾಥ ಕಲ್ಲೂರ ತಾಂಡಾ ತಾಃಹುಮನಾಬಾದ ಇವರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ನನ್ನ ಗಂಡನಿಗೆ ವಿನಾಃಕಾರಣ ಜಗಳ ತೆಗೆದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾಲಯ ಠಾಣೆ :ಶ್ರೀ ಶಿವಯೋಗಿ ತಂದೆ ಶರಣಪ್ಪಾ ಗಚ್ಚಿನಮನಿ ಸಾ|| ನಾಗನಹಳ್ಳಿ ಇವರು ದಿನಾಂಕ 23-09-2011 ರಂದು ಬೇಳಿಗ್ಗೆ ಹೊಲಕ್ಕೆ ಹೋಗಬೇಕೆಂದು ನಮ್ಮದೊಂದು ಜರ್ಸಿ ಆಕಳು ಹಿಡಿದುಕೊಂಡು ನಾಗನಹಳ್ಳಿ ರಿಂಗ್ ರೋಡ ಕ್ರಾಸ್ ಕಡೆಗೆ ಹೊರಟಾಗ ನಾಲಿ ನೀರು ಹೋಗುವ ಒಂದು ಬ್ರಿಜ್ ಹತ್ತಿರ ನಾನು ಹೊರಟಾಗ ನಮ್ಮೂರ ಪ್ರಕಾಶ ತಂದೆ ಶಂಕರಲಿಂಗ ಗೂಳನೂರ ಇತನು ತನ್ನ ಎಮ್ಮೆಯನ್ನು ರೋಡ ಬದಿಗೆ ಮೇಯಿಸುತ್ತಾ ಇದ್ದಾಗ ಆತನ ಸಂಗಡ ನಾನು ಮಾತಾಡುತ್ತಾ ರೋಡ ಮೇಲೆ ನಿಂತಾಗ ಧರ್ಮಪಾಲ ತಂದೆ ನಾನು ರಾಠೋಡ ಸಾ|| ಖಣದಾಳ ತಾ|| ಗುಲಬರ್ಗಾ ನಾಗನಹಳ್ಳಿ ಪಿ.ಟಿ.ಸಿ ಕಡೆಯಿಂದ ತನ್ನ ಸೈಕಲ್ ಮೋಟಾರ ಮೇಲೆ ಬಂದವನೇ ನನಗೆ ಅವಾಚ್ಯ ಶಬ್ದಗಳಿಂದ ಬೈದು ರೋಡ ಬಿಟ್ಟು ಸೈಡಿಗೆ ನಿಂತು ಮಾತಾಡಲಿಕ್ಕೆ ಬರುವುದಿಲ್ಲಾ ಅಂತಾ ಬೈದನು ಆಗ ನಾನು ಯಾಕೇ ಅವಾಚ್ಯ ಶಬ್ದ ಬೈದು ಹೇಳುತ್ತೀ ಅಂತಾ ಕೇಳಿದ್ದಕ್ಕೆ ಅಲ್ಲೆ ಬಿದ್ದಿದ್ದ ಬಡಿಗೆಯಿಂದ ನನ್ನ ತಲೆಯ ಎಡಬಾಗಕ್ಕೆ ಹೊಡೆದು ರಕ್ತಗಾಯ ಮಾಡಿದನು. ನಂತರ ನನ್ನ ಕೈಯಲ್ಲಿದ್ದ ಕುಡಗೋಲು ಕಸಿದುಕೊಂಡು ನನ್ನ ಎಡಗಲ್ಲಕ್ಕೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿತರ ಬಂಧನ :
ಚೌಕ ಠಾಣೆ :
ಚೌಕ ಪೊಲೀಸ್ ಠಾಣೆಯ ಗುನ್ನೆ ನಂ. 196/2011 ನೇದ್ದರಲ್ಲಿಯ ಆರೋಪಿತರಾದ 1. ನಾಗೇಶ @ ನಾಗಶಾಸ್ತ್ರಿ ತಂದೆ ಚಂದ್ರಶಾ ಕಲಶೇಟ್ಟಿ ಸಾಃ ಎಲೆನಾದಗಿ ಹಾಃವಃ ಕಬಾಡ ಗಲ್ಲಿ ಗುಲಬರ್ಗಾ 2.ವಿರೇಶ ತಂದೆ ಶರಣಪ್ಪ ಮೈಂದರಗಿ ಸಾಃ ಕಟಗರಪುರ ಶಹಾಬಜಾರ ಗುಲಬರ್ಗಾ 3.ಶರಣು @ ಶರಣಬಸಪ್ಪ ತಂದೆ ಆನಂದ ಪೂಜಾರಿ ಸಾಃ ಕನಕನಗರ ಬ್ರಹ್ಮಪೂರ ಗುಲಬರ್ಗಾ ರವರಿಗೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ, ಅಪರ ಎಸ್.ಪಿ ಸಾಹೇಬ ಗುಲಬರ್ಗಾ, ಮಾನ್ಯ ಡಿ.ಎಸ್.ಪಿ ಸಾಹೇಬ "ಬಿ" ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ವಿರೇಶ ಪಿ.ಐ ಚೌಕಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಚೌಕ ಠಾಣೆಯ ಸಿಬ್ಬಂದಿರವರು ಕೂಡಿಕೊಂಡು ದಿನಾಂಕ 23.09.2011 ರಂದು ಕಪನೂರ ಕ್ರಾಸ ಹತ್ತಿರ ಮತ್ತು ಉಮ್ಮರಗಾ ಕ್ರಾಸ ರಸ್ತೆಯಲ್ಲಿ ಮಿಂಚಿನ ಕಾರ್ಯಚರಣೆಯ ನಡೆಸಿ ಹಿಡಿದು ಆರೋಪಿತರನ್ನು ದಸ್ತಿಗಿರಿ ಮಾಡಿ ನ್ಯಾಯಾಂಗ ಬಂಧನ ಕುರಿತು ಕಳಿಸಿರುತ್ತಾರೆ.

ಕಳವು ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ :ಶ್ರೀಮತಿ ಬಸಮ್ಮಾ ಗಂಡ ದತ್ತಪ್ಪ ಹೂಗಾರ ಸಾ|| ಅವರಳ್ಳಿ ರವರು ದಿನಾಂಕ 22-09-2011 ರಂದು ಬೆಳಿಗ್ಗೆ ಗಂಡ ದತ್ತಪ್ಪ ಹೂಗಾರ ಸಂಗಡ ಮನೆಯ ಕೀಲಿ ಹಾಕಿ ತಮ್ಮ ಹೊಲಕ್ಕೆ ಹೋಗಿದ್ದು. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಸಾಯಂಕಾಲ 7-00 ಗಂಟೆಗೆ ಮನಗೆ ಬಂದು ಮನೆಯ ಕೀಲಿ ತೆರೆದು ನೋಡಲಾಗಿ ಒಳಗಡೆ ಕೋಣೆಯ ಬಾಗಿಲು ತೆರೆದಿದ್ದು ನಮಗೆ ಸಂಶಯ ಬಂದು ಒಳಗೆ ಹೋಗಿ ನೋಡಲು ಕಟ್ಟೆಗೆಯ ಪೆಟ್ಟಿಗೆಯಲ್ಲಿರುವ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು, ಪೆಟ್ಟಿಗೆಯಲ್ಲಿದ್ದ ಅಂದಾಜು ಕಿಮ್ಮತ್ತು 49,500/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಹಗಲು ಹೊತ್ತಿನಲ್ಲಿ ನಮ್ಮ ಮನೆಯ ಕೀಲಿ ತೆರೆದು ಪೆಟ್ಟಿಗೆಯ ಕೊಂಡಿ ಮುರಿದು ಬಂಗಾರದ ಒಡವೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಠಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಠಾಣೆ :ಶ್ರೀ ಹಣಮಂತ ತಂದೆ ಚಂದ್ರಶೇಖರ ಬಿರಾದಾರ ಇವರು ದಿನಾಂಕ 22-09-2011 ರಂದು ರಾತ್ರಿ ಹೊಸ ರಾಘವೇಂದ್ರ ಕಾಲೋನಿಯಲ್ಲಿರುವ ತನ್ನ ಮನೆಯ ಮುಂದೆ ನಿಲ್ಲಿಸಿದ ಟಿ.ವಿ.ಎಸ್. ಎಕ್ಸೆಲ್ ಸೂಪರ್ ಹ್ಯಾವಿ ಡ್ಯೂಟಿ ಮೊಟಾರ್ ಸೈಕಲ್ ನಂ ಕೆಎ-32/ಯು-6503 ಮೊಟಾರ್ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಹಾಬಾದ ನಗರ ಠಾಣೆ :ದಿನಾಂಕ:22-09-2011 ರಂದು ಬೆಳಗ್ಗೆ 08.00 ಸುಮಾರಿಗೆ ಶ್ರೀ ರಾಜು ತಂದೆ ಮುಕುಂದ ಸಾ:ಶಿಬೀರ ಕಟ್ಟಾ ಶಹಾಬಾದ ತಾ:ಚಿತ್ತಾಪುರ ತಮ್ಮ ಮೋಟಾರ ಸೈಕಲ ಸಿಟಿ-100 ಬಜಾಜ ಕೆ.ವಿ.-32 ಕ್ಯೂ 8412 ಅ.ಕಿ.20000/-ನೇದ್ದು ಬಸವೇಶ್ವರ ಸರ್ಕಲದಲ್ಲಿ ನಿಲ್ಲಿಸಿದಾಗ ಕಳ್ಳತನ ಮಾಡಿಕೊಂಡು ಹೋಗಿದ್ದು ಸಂಶಯುಕ್ತ ರಾಜು ಜಾದವ ಎಂಬುವನು ಕಳ್ಳತನ ಮಾಡಿಕೊಂಡು ಹೋಗಿರಬಹುದೆಂದು ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.