ಸುಲಿಗೆ ಪ್ರಕರಣ :
ಜೇವರ್ಗಿ ಠಾಣೆ :ಶ್ರೀ ಸಿದ್ದಣ್ಣ ತಂದೆ ಬಸಪ್ಪ ಫರತಬಾದ ಸಾ: ಚನ್ನೂರ ದಿನಾಂಕ: 23/09/2011 ರಂದು ರವರು ತನ್ನ ಮೋಟಾರ ಸೈಕಲ ನಂಬರ ಕೆ.ಎ. 32 ಎಕ್ಸ 8476 ನೇದ್ದರ ಮೇಲೆ ತಮ್ಮೂರಿನಿಂದ ಜೇವರ್ಗಿ ಪಟ್ಟಣದ ಬಿ.ಎನ್. ಪಾಟೀಲ ಇವರ ದಾಲಮೀಲ್ಲಿಗೆ ಬಂದು ನಾನಾಗೌಡರ ಸಂಗಡ ಮಾತಾನಾಡಿ ಪು:ನ ತಮ್ಮೂರಾದ ಚನ್ನೂರಕ್ಕೆ ಸದರಿ ಮೋಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ರಾತ್ರಿ 8-30 ಗಂಟೆಯ ಸುಮಾರಿಗೆ ಗುಲಾಮ ಸೇಟ ಇವರ ಹೋಲದ ಹತ್ತಿರ ರೋಡಿನಲ್ಲಿ ಎದುರುಗಡೆಯಿಂದ ಇಬ್ಬರೂ ಮನುಷ್ಯರು ತನ್ನ ಮೋಟಾರ ಸೈಕಲಕ್ಕೆ ಬಡಿಗೆಯಿಂದ ಅಡ್ಡಗಟ್ಟಿ ನಿಲ್ಲಿಸಿ ಬಡಿಗೆಯಿಂದ ಹೊಡೆದು ಅಲ್ಲೆ ಪಕ್ಕದ ಹೊಲದಲ್ಲಿ ಕರೆದುಕೊಂಡು ಹೋಗಿ ಹತ್ತಿರ ಇದ್ದ ನಗದು ಹಣ 6000 ರೂಪಾಯಿ ಮತ್ತು ಒಂದು ನೋಕಿಯಾ ಕಂಪನಿಯ ಮೊಬೈಲ, ಹಾಗೂ ಪಿರ್ಯಾದಿಯ ಮೋಟಾರ ಸೈಕಲ ಹೀಗೆ ಒಟ್ಟು 42000 ರೂ ಜಬರದಸ್ತಿಯಿಂದ ಕಸಿದುಕೊಂಡು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾದನ ಹಿಪ್ಪರಗಾ ಠಾಣೆ :ಶ್ರೀ. ಬಸವರಾಜ ತಂದೆ ಲಕ್ಷ್ಮಣ ಪಾಟೀಲ ಸಾ:ನಿಂಗದಳ್ಳಿ ದಿನಾಂಕ 23-09-2011 ರಂದು ರಾತ್ರಿ 8: ಗಂಟೆ ಸುಮಾರಿಗೆ 1.ರಾಜಶೇಖರ ತಂದೆ ಕಲ್ಯಾಣಿ ಪಾಟೀಲ 2.ಶ್ರೀಶೈಲ ತಂದೆ ಕಲ್ಯಾಣಿ ಪಾಟೀಲ 3.ಬಸವರಾಜ ತಂದೆ ಕಲ್ಯಾಣಿ ಪಾಟೀಲ 4.ಕಲ್ಯಾಣಿ ತಂದೆ ತೇಜಪ್ಪ ಪಾಟೀಲ ಸಾ: ಎಲ್ಲರೂ ನಿಂಗದಳ್ಳಿ ಕುಡಿಕೊಂಡು ಮನೆಗೆ ಬಂದು ಪಿತ್ರಾರ್ಜಿತ ಆಸ್ತಿಯ ವಿಷಯದ ಸಂಬಂಧದ ವೈಮನಸ್ಸಿನಿಂದ ಜಗಳ ತಗೆದು ಅವ್ಯಾಚ್ಯೆವಾಗಿ ಬೈದು ಹೊಡೆ ಬಡೆ ಮಾಡಿ ಜೀವ ಭಯದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನ ಹಿಪ್ಪರಗಾ ಠಾಣೆ :ಶ್ರೀ. ಬಸವರಾಜ ತಂದೆ ಕಲ್ಯಾಣಿ ಪಾಟೀಲ ಸಾ: ನಿಂಗದಳ್ಳಿ ದಿನಾಂಕ 23-09-2011 ರಂದು ರಾತ್ರಿ 8 ಗಂಟೆ ಸುಮಾರಿಗೆ ಮಲ್ಲೇಶಪ್ಪ ಪಾಟೀಲ ರವರ ಮನೆಗೆ ಹಾಲು ಕೊಟ್ಟು ಬರುವಾಗ 1.ಬಸವರಾಜ ತಂದೆ ಲಕ್ಷ್ಮಣ ಪಾಟೀಲ 2.ಸಿದ್ರಾಮ ತಂದೆ ಲಕ್ಷ್ಮಣ ಪಾಟೀಲ 3.ಶಂಕರ ತಂದೆ ಸಿದ್ರಾಮ ಪಾಟೀಲ 4.ಸೋಮನಾಥ ತಂದೆ ಬಸವರಾಜ ಪಾಟೀಲ ಸಾ: ಎಲ್ಲರೂ ನಿಂಗದಳ್ಳಿ ರವರು ಕುಡಿಕೊಂಡು ತನ್ನನ್ನು ನೋಡಿ ಪಿತ್ರಾರ್ಜಿತ ಆಸ್ತಿಯ ವಿಷಯದ ಸಂಬಂಧದ ವೈಮನಸ್ಸಿನಿಂದ ಅವಾಚ್ಯೆ ಶಬ್ದ ಬೈಯುತ್ತಾ ತನ್ನ ಕೈಯಲ್ಲಿದ್ದ ಕಲ್ಲಿನಿಂದ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಮತ್ತು ಪಿರ್ಯಾದಿಯ ಅಣ್ಣತಂಮಂದಿರಿಗೂ ಬಿಡಿಸಲು ಬಂದಾಗ ಅವರಿಗೂ ಸಹ ಕೈಯಿಂದ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿ ಜೀವ ಭಯದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment