POLICE BHAVAN KALABURAGI

POLICE BHAVAN KALABURAGI

26 April 2016

KALABURAGI DISTRICT REPORTED CRIMES.

ರಾಘವೇಂದ್ರ ನಗರ  ಠಾಣೆ : ದಿ|| 25/04/16 ರಂದು ರಾತ್ರಿ 9.30 ಗಂಟೆಗೆ ನೀಲಮ್ಮ ಪಿ,ಎಸ್,ಐ ಜಿಲ್ಲಾ ವಿಶೇಷ ಅಪರಾಧ ವಿಭಾಗ ಕಲಬುರಗಿ ರವರು ಠಾಣೆಗೆ ಬಂದು ಒಬ್ಬ ಯುವಕನನ್ನು ಹಾಗೂ ಜಪ್ತಿ ಮಾಡಿದ ಮುದ್ದೆಮಾಲು ಜಪ್ತಿಪಂಚನಾಮೆ ಹಾಜರಪಡಿಸಿ ಸರ್ಕಾರಿ ತರ್ಪೆಯಾಗಿ ಒಂದು ವರದಿ ಸಲ್ಲಿಸಿದ್ದು ಅದರ ಸಾರಂಶವೇನಂದರೆ ಇಂದು ದಿ|| 25/04/16 ರಂದು ಸಾಯಂಕಾಲ 7.00  ಗಂಟೆಯ  ಕಲಬುರಗಿ ನಗರದ ರಾಘವೇಂದ್ರ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮದೀನಾ ಕಾಲೋನಿಯ ಗ್ರೀನ ಸರ್ಕಲ ಹತ್ತಿರ ಒಬ್ಬ ಯುವಕನು ಮಟಕಾ ಜೂಜಾಟ ನಡೆಸುತ್ತಿರುವ ಮಾಹೀತಿ ಮೇರೆಗೆ ದಾಳಿ ಮಾಡುವಗೋಸ್ಕರ ನನ್ನ ಜೋತೆಯಲ್ಲಿ ಸಿಬ್ಬಂದಿ ಜನರಾದ ಅಂಬದಾಸ ಹೆಚ್,ಸಿ, 222 ನಾಗೇಂದ್ರ ಪಿ,ಸಿ, 777 ಸಂತೋಶ ಪಿ,ಸಿ, 900 ನಾಗೇಂದ್ರ ಪಿ,ಸಿ, 386 ಮತ್ತು ಜೀಪ ಚಾಲಕ ಮಂಜುನಾಥ ಎ,ಪಿ,ಸಿ,151 ರವರನ್ನು ಮತ್ತು ಇಬ್ಬರೂ ಪಂಚರನ್ನು ಬರಮಾಡಿಕೊಂಡು ಮಾನ್ಯ ಡಿ,ಎಸ್,ಪಿ, ಡಿಸಿಅರ್,ಬಿ ಮತ್ತು ಪಿ,ಐ ಸಾಹೇಬರು ಡಿಸಿಬಿ ರವರ ಮಾರ್ಗದರ್ಶನದಲ್ಲಿ ಘಟನಾ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಖಾಜಾ ತಂದೆ ರಸೂಲಸಾಬ ವ|| 27 ಉ||ಗೌಂಡಿಕೆಲಸ ಸಾ|| ಮದೀನಾ ಕಾಲೋನಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 11120=00 ರೂ ಮತ್ತು 5 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೋರೆತಿದ್ದು ಮತ್ತು ಮಟಕಾ ಜೂಜಾಟ ಕೃತ್ಯ ಕ್ಕೆ ಉಪಯೋಗಿಸಲು ತಂದಿದ ಒಂದು ಹೀರೊ ಹೊಂಡಾ ಮೋಟಾರ ಸೈಕಲ ನಂ ಕೆ,,32 ವಾಯ 3988 ಅದರ ಅ||ಕಿ|| 15000/-ರೂ ಬೆಲೆಬಾಳುವುದನ್ನು ದೊರೆತ್ತಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿಪಂಚನಾಮೆ ಮುಲಕ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಸದರಿ ಅರೋಪಿ ಹಾಗೂ ಮುದ್ದೆಮಾಲು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಒಪ್ಪಿಸಿದ್ದು ಸದರಿ ಆರೋಪಿತರ ಮೇಲೆ ಕಲಂ: 78(3) ಕೆ.ಪಿ ಆಕ್ಟ್‌‌ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳತಕ್ಕದ್ದು ಅಂತಾ ವರದಿಯಾಗಿರುತ್ತದೆ.
ರಾಘವೇಂದ್ರ ನಗರ ಠಾಣೆ : ದಿ|| 25/04/16 ರಂದು ಮದ್ಯಾನ 1.00 ಗಂಟೆಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ಸಿದ್ದಣ್ಣ ಪೂಜಾರ ವ|| 40 ಉ|| ಸರಕಾರಿ ಶಾಲೆ ಶಿಕ್ಷಕ ಸಾ|| ವಿವೇಕಾನಂದ ಕಲಬುರಗಿರವರು ಠಾಣೆಗೆ ಹಾಜರಾಗಿ ಒಂದು ಲೀಖಿತ ದೂರು ಸಲ್ಲಿಸಿದ್ದು ಅದರಲ್ಲಿ ದಿನಾಂಕ 13/03/16 ರಂದು ಬೆಳಗ್ಗೆ 8.00 ಗಂಟೆಗೆ ಮನೆಗ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ ಸುನೀತಾ ಇಬ್ಬರೂ  ಕಲಬುರಗಿ ನಗರದ ಬನ್ನಾಳೆ ದವಾಖಾನೆಗೆ ಹೋಗಿದ್ದು ದಿ|| 14/03/16 ರಂದು ಬೆಳಗ್ಗೆ 9.00 ಗಂಟೆಗೆ ಮನೆಗೆ ಬಂದಿದ್ದು ಮುಂದಿನಾ ಬಾಗೀಲು ಕೀಲಿ ತೆಗೆದು ನೋಡಲು ಬಾಗೀಲು ತೆರೆಯಲಿಲ್ಲಾ ಹಿಂದಿನ ಬಾಗೀಲು ಕಡೆ ಹೋಗಿ ನೋಡಿದ್ದಾಗ ಬಾಗೀಲ ಕೊಂಡಿ ಮುರದಿದ್ದು ಬಾಗೀಲು ತೆರೆದಿದ್ದು ಇದ್ದು ಮನೆಯ ಒಳಗೆ ಹೋಗಿ ನೋಡಲು ಅಲಮಾರ ತೆರೆದಿದ್ದು ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ ಅಲಮಾರದಲ್ಲಿದ್ದ ತಲಾ 5 ಗ್ರಾಂ ಬಂಗಾರದ 2 ಉಂಗೂರುಗಳು 6 ಗ್ರಾಂ ಬಂಗಾರದ ಕೀವಿಯ ಒಲೆಗಳು 10 ಗ್ರಾಂ ಬಂಗಾರದ 2 ಜೋತೆ ಕೀವಿ ಓಲೆ ಹೀಗೆ ಒಟ್ಟು 65000/- ರೂ ಬಂಗಾರದ ಆಭರಣಗಳು ಹಾಗೂ ನಗದು ಹಣ 10000=00 ರೂ ಇರಲಿಲ್ಲಾ ಯಾರೋ ಕ ಳ್ಳರು ಕಳವು  ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಬಗ್ಗೆ ನಾನು ಪೊಲೀಸ ಠಾಣೆಯಲ್ಲಿ ದೂರುಕೊಟ್ಟು ಕೋರ್ಟ ಕಛೇರಿ ಎಲ್ಲಿ ಓಡಾಡಬೇಕು ಅಂತಾ ಪ್ರಕರಣ ದಾಖಲಿಸಿರಲಿಲ್ಲಾ ನಿನ್ನೆ ದಿನಾಂಕ ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಕಳ್ಳರೂ ಸಿಕ್ಕಿಬಿದ್ದು ಕಳವು ಮಾಡಿರುವ ಮನೆಗಳು ತೋರಿಸುತ್ತಿದ್ದಾರೆ ನಾನು ಮನೆಯಲ್ಲಿ ಇಲ್ಲದ್ದಾಗ ನಮ್ಮ ಮನೆ ಕೂಡಾ ಅರೋಪಿತರು ಪೊಲೀಸರಿಗೆ ತೋರಿಸಿದ್ದಾರೆ ಎಂದು ಮಾಹಿತಿ ಗೊತ್ತಾಗಿರುತ್ತದೆ ಕಾರಣ ನನ್ನ ಮನೆ ಕೀಲಿ ಮುರಿದು ಓಳಗೆ ಪ್ರವೇಶ ಮಾಡಿ ಬಂಗಾರದ ಆಭರಣ ಹಾಗೂ ನಗದು ಹಣ ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಪಿರ್ಯಾದಿಯ ದೂರಿನ ಸಾರಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ ನಂ 63/16 ಕಲಂ 454,457,380 ಐ,ಪಿ,ಸಿ, ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನೀಖೆ ಕೈಕೊಳ್ಳಲಾಗಿದೆ
ನಿಂಬರ್ಗಾ  ಠಾಣೆ : ದಿನಾಂಕ 23/04/2016 ರಂದು  ಮನೆಯ ಜಾಗೆಯ ಸಂಭಂಧ ದ್ವೇಶ ಕಟ್ಟಿಕೊಂಡು ಆಪಾದಿತರೆಲ್ಲರೂ ಭೂತಾಳಿ ತಂದೆ ಶಂಕ್ರೇಪ್ಪ ನಡಗೇರಿ ವ|| 64 ವರ್ಷ, ಜಾ|| ಹೊಲೆಯ, || ಒಕ್ಕಲುತನ, ಸಂಗಡ 3 ಜನರು ಸಾ|| ಮಾಡಿಯಾಳ ಸೇರಿ ಫಿರ್ಯಾದಿಗೆ ಶ್ರೀ ಜೈಕುಮಾರ ತಂದೆ ಪ್ರಭು ನಡಗೇರಿ ವ|| 40 ವರ್ಷ, ಜಾ|| ಹೊಲೆಯ, || ಸಮಾಜ ಸೇವೆ, ಸಾ|| ಮಾಡಿಯಾಳ ಮತ್ತು ಆತನ ಕಡೆಯವರಿಗೆ ಅವಾಚ್ಯವಾಗಿ  ಬೈದು ಕೈಯಿಂದ ಹೊಡೆ ಬಡೆ ಮಾಡಿ ಹಲ್ಲೆ ಮಾಡಿ ಜೀವ ಭಯಪಡಿಸಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಲಿಖೀತ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.  
ಎಂ.ಬಿ.ನಗರ ಠಾಣೆ :     ದಿನಾಂಕ 25/04/2016 ರಂದು 5.00 ಎ.ಎಮಕ್ಕೆ ಬಸವೇಶ್ವರ ಆಸ್ಪತ್ರೆ ಕಲಬುರಗಿಯಯಿಂದ ನಿಸ್ತಂತು ಮೂಲಕ ಠಾಣೆ ಗುನ್ನೆ ಗುನ್ನೆ ನಂ 45/2016 ನೇದ್ದರಲ್ಲಿನ ಗಾಯಾಳು ಮಹೇಂದ್ರ ತಂದೆ ನೀಲಕಂಠರಾವ ಕುಲಕರ್ಣಿ ಈತನು ಮೃತ ಪಟ್ಗ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದು, ಆಸ್ಪತ್ರೆಗೆ ಬೇಟ್ಟಿ ನೀಡಿ, ಪ್ರಕರಣದಲ್ಲಿ ಮೃತ ಮಹೇಂದ್ರ ಈತನ ತಾಯಿಯಾದ ಶ್ರೀ ಸುಧಾಬಾಯಿ ಗಂಡ ನೀಲಕಂಠ ಕುಲಕರ್ಣಿ ಇವರಿಗೆವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಅದರ ಸಾರಾಂಶವೆನೆಂದರೇ, ದಿನಾಂಕ 24/04/2016 ರಂದು 11.00 ಪಿ.ಎಮ ದಿಂದ ದಿನಾಂಕ 25/04/2016 ರಂದು 00.05 ಎ.ಎಮ್ ಅವಧಿಯಲ್ಲಿ ವಿರೇಂದ್ರ ಪಾಟೀಲ ಬಡಾವಣೆಯ ಕಮಾನ ಎದುರುಗಡೆ ರೋಡಿನ ಮೇಲೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಕತನದಿಂದ ಚಲಾಯಿಸಿಕೊಂಡು ಬಂದು ರಾತ್ರಿ ಡ್ಯೂಟಿಗೆ ಎಂ.ಬಿ ನಗರ ಪೊಲೀಸ ಠಾಣೆಗೆ ಸೈಕಲ ಮೇಲೆ ಹೋಗುತ್ತಿದ್ದ ನನ್ನ ಮಗ ಮಹೇಂದ್ರ ಈತನಿಗೆ ಡಿಕ್ಕಿಪಡಿಸಿದ ಪರಿಣಾಮ ನನ್ನ ಮಗ ಮಹೇಂದ್ರ ಈತನ ತಲೆಗೆ ತಲೆಗೆ ಭಾರಿ ರಕ್ತಗಾಯಗಳಾಗಿದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25/04/2016 ರಂದು 4.30 ಎ.ಎಮಕ್ಕೆ ಮೃತಪಟ್ಟಿರುತ್ತಾನೆ ಕಾರಣ ಮುಂದಿನ ಕ್ರಮ ಜರೂಗಿಸಬೆಕೆಂದು ಇತ್ಯಾದಿಯಾಗಿ ನೀಡಿದ ಹೇಳಿಕೆ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.ದಿನಾಂಕಃ  25/04/2016 ರೆಂದು 1.00 ಎ.ಎಮಕ್ಕೆ ಶ್ರೀ ಮಂಜುನಾಥ ಸಿಪಿಸಿ-1072 ಎಂ.ಬಿ ನಗರ ಪೊಲೀಸ ಠಾಣೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರು ಸಲ್ಲಿಸಿದ್ದು, ಅದರ ಸಂಕ್ಷಿಪ್ತ ಸಾರಾಂಶವೆನಂದರೆ, ದಿನಾಂಕ 24/04/2016 ರಂದು 11.00  ಪಿ.ಎಮ್ ದಿಂದ ದಿನಾಂಕ 25/04/2016 ರಂದು 00.05 ಎ.ಎಮ್ ಅವಧಿಯಲ್ಲಿ ವಿರೆಂದ್ರ ಪಾಟೀಲ ಬಡಾವಣೆಯ ಕಮಾನ ಎದುರುಗಡೆ ಸೇಡಂ ಕಡೆಗೆ ಹೋಗುವ ರಸ್ತೆಯ ಮೇಲೆ ರಾತ್ರಿ ಗಸ್ತು ಕರ್ತವ್ಯಕ್ಕೆ ಎಂ.ಬಿ ನಗರ ಪೊಲೀಸ ಠಾಣೆಗೆ ಸೈಕಲ್ ಮೇಲೆ ಹೋಗುತ್ತಿದ್ದ ಮಹೇಂದ್ರ ಹೋಮಗಾರ್ಡ ನಂ.119 ಈತನಿಗೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಹೇಂದ್ರ ಈತನಿಗೆ ಡಿಕ್ಕಿಪಡಿಸಿ ಹಾಗೆಯೇ ತನ್ನ ವಾಹನವನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ. ಮಹೇಂದ್ರ ಈತನಿಗೆ ಡಿಕ್ಕಿಪಡಿಸಿದ ಪರಿಣಾಮ ಆತನ ತಲೆಗೆ ಭಾರಿ ರಕ್ತಗಾಯ, ಮೂಗಿನಿಂದ & ಕಿವಿಯಿಂದ ರಕ್ತ ಸೋರುತ್ತಿತ್ತು ಮತ್ತು ಎಡಗೈ ಮುಂಗೈ ಹತ್ತಿರ ತರಚಿದ ರಕ್ತಗಾಯಗವಾಗಿತ್ತು. ಸದರಿಯವನು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ಬೇಹೂಷ ಆಗಿದನು. ಕಾರಣ ಸದರ ಅಪರಿಚಿತ ವಾಹನದ ಚಾಲಕನು ವಿರುದ್ದ ಸೂಕ್ರ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು ವಗೈರೆಯಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/2016 ಕಲಂ 279,338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.