POLICE BHAVAN KALABURAGI

POLICE BHAVAN KALABURAGI

10 May 2012

GULBARGA DIST REPORTED CRIME


ಕಳ್ಳತನ ಪ್ರಕರಣ:
ಸ್ಟೇಶನ ಬಜಾರ ಪೊಲೀಸ ಠಾಣೆ: ಶ್ರೀ ರಮೇಶ ತಂದೆ ಹಣಮಂತರಾವ ಕಣ್ಣೂರು ಸಾ: ಮನೆ ನಂ 1-29/1 ಖೂಬಾ ಪ್ಲಾಟ ವರು ನಾವು ಕುಟುಂಬ ಸಮೇತ ದಿನಾಂಕ 08-05-2012 ರಂದು ಬೆಳಿಗ್ಗೆ 8-00  ಗಂಟೆ ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು ಹೈದ್ರಾಬಾದಕ್ಕೆ ಹೋಗಿದ್ದು,  ಮರಳಿ ದಿನಾಂಕ 09-05-12 ರಂದು ರಾತ್ರಿ 9-00 ಗಂಟೆಗೆ ಬಂದು ಬಾಗಿಲ ತೆರೆಯಲು ನೋಡಿದಾಗ ಯಾರೋ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿಟ್ಟಿದ  22 ತೊಲಿ ಬಂಗಾರದ ಒಡವೆಗಳು ಅ.ಕಿ 720000 ರೂ, 4 ಕೆ.ಜಿ ಬೆಳ್ಳಿ ಸಾಮಾನುಗಳು 270000/- ರೂ,  ಹಾಗೂ ನಗದು 10000/- ರೂಪಾಯಿಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಮೇಶ ರವರು ಇಂದು ದಿನಾಂಕ 10-05-2012 ರಂದು ಮಧ್ಯಾಹ್ನ 1-00 ಗಂಟೆಗೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 69/2012 ಕಲಂ 454 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ವರದಕ್ಷಿಣೆ ಕಿರುಕುಳ ಪ್ರಕರಣ:
ಚಿಂಚೋಳಿ ಠಾಣೆ:ಶ್ರೀಮತಿ ಜ್ಯೋತಿ @ ಪುಟ್ಟಮ್ಮ ಗಂಡ ಅಶೋಕ ನಂದಿ ಸಾ|| ಪಂಡರಗೇರಾ ಹಾ||ವ|| ಬ್ರಾಹ್ಮಣ ಗಲ್ಲಿ ಚಿಂಚೋಳಿ ರವರು ನನಗೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪಂಡರಗೇರಾ ಗ್ರಾಮದ ಅಶೋಕ ತಂದೆ  ಹುಲಿಯಪ್ಪಾ ನಂದಿ  ಇತನೊಂದಿಗೆ ದಿನಾಂಕ 20-05-2011 ರಂದು ಮದುವೆ ಮಾಡಿದ್ದು, ಮದುವೆಯ ಕಾಲಕ್ಕೆ 1 ಲಕ್ಷ ರೂಪಾಯಿ 8 ತೋಲಿ ಬಂಗಾರ ವರದಕ್ಷಿಣೆ ರೂಪದಲ್ಲಿ ಕೊಟ್ಟು ಮದುವೆ ಮಾಡಿರುತ್ತಾರೆ,ಮದುವೆಯಾದ ಬಳಿಕ 2 ತಿಂಗಳ ವರೆಗೆ ಚನ್ನಾಗಿ ನೋಡಿಕೊಂಡು ನಂತರ ನನಗೆ ತವರು ಮನೆಯಿಂದ ಇನ್ನೂ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಗಂಡ ಹಾಗೂ ಇತರರು ಕೂಡಿಕೊಂಡು ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ನಾನು ತವರು ಮನೆಗೆ ಬಂದಿದ್ದು ಇರುತ್ತದೆ. ದಿನಾಂಕ 06-05-2012 ರಂದು 1100 ಗಂಟೆಗೆ ನನ್ನ ಗಂಡ ಹಾಗೂ ನನ್ನ ಗಂಡನ ಮನೆಯವರು  ಕೂಡಿಕೊಂಡು ನನ್ನ ತವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೋಡೆ ಬಡೆ ಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 49/2012 ಕಲಂ 498(ಎ) 323 504 506 ಸಂಗಡ 34 ಐಪಿಸಿ ಮತ್ತು 3&4 ಡಿಪಿ ಆಕ್ಯ್ಟ ಪ್ರಕಾರ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.
ಮನುಷ್ಯ ಕಾಣೆಯಾದ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಸುರೇಶ ತಂದೆ ಬಾಬುರಾವ ಗದಲಗೆ ಸಾ|| ಜಮಗಾ (ಆರ್) ತಾ|| ಆಳಂದ ಜಿ|| ಗುಲಬರ್ಗಾ ರವರು ನನ್ನ ತಂದೆಯಾದ ಬಾಬುರಾವ ಇತನಿಗೆ ಆರಾಮ ಇಲ್ಲದ್ದರಿಂದ ದಿನಾಂಕ:07/05/2012 ರಂದು ನಮ್ಮೂರಿನಿಂದ ನನ್ನ ತಂದೆಯನ್ನು ಗುಲಬರ್ಗಾದಲ್ಲಿರುವ ಘನಾತೆ ಮಾನಸಿಕ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಡಾಕ್ಟರ್‌‌‌ರಲ್ಲಿ ತೋರಿಸಿ ನನ್ನ ತಂದೆಯನ್ನು ಅದೇ ಆಸ್ಪತ್ರೆಯ  ಹತ್ತಿರ ಕೂಡಿಸಿ ಬಾಜು ಇದ್ದ ಮೇಡಿಕಲ್ ಶಾಪಿನಲ್ಲಿ ಔಷಧಿಯನ್ನು ತರಲು ನಾನು ಹೋಗಿ ಬರುವಷ್ಟರಲ್ಲಿಯೇ ನನ್ನ ತಂದೆ ಆ ಸ್ಥಳದಲ್ಲಿ ಇರದೆ ಕಾಣೆಯಾಗಿರುತ್ತಾರೆ, ನಾನು ರೇಲ್ವೆ ನಿಲ್ದಾಣ , ಬಸ್ಸ ನಿಲ್ದಾಣ ಇನಿತರೆ ಸ್ಥಳದಲ್ಲಿ ಹುಡುಕಾಡಿದ್ದು, ಅಂದಿನಿಂದ ಇಂದಿನ ವರೆಗೆ ನಾನು ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 67/2012 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.