POLICE BHAVAN KALABURAGI

POLICE BHAVAN KALABURAGI

22 March 2015

Kalaburagi District Reported Crimes

ಆಕ್ರಮ ಶಸ್ತ್ರಾಸ್ತ್ರ  ಸಾಗಾಟ ಮಾಡುತ್ತಿದ್ದ ಮೂರು ಜನರ ಬಂಧನ ಆರು ಪಿಸ್ತೂಲಗಳ ಜಪ್ತಿ :
ಸ್ಠೇಷನ ಬಜಾರ ಠಾಣೆ :  ದಿನಾಂಕ. 22.03.2015 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ಸ್ಟೇಷನ ಏರಿಯಾದ ಪಿ.ಡಿ. ರೋಡಿಗೆ ಹೋಗುವ ರಸ್ತೆಯಲ್ಲಿ ಮೂರು ಜನರು ಕೂಡಿ ಅನಧಿಕೃತವಾಗಿ ಕಾನೂನು ಬಾಹಿರವಾಗಿ ಆಯುಧಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಂದ ಖಚಿತ ಭಾತ್ಮಿ ಮೇರೆಗೆ ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ, ಮಾನ್ಯ ಹೆಚ್ಚುವರಿ ಎಸ್.ಪಿ ಸಾಹೇಬರು ಕಲಬುರಗಿ, ಮಾನ್ಯ ಡಿ.ಎಸ್.ಪಿ ಸಾಹೇಬರುಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸ್ಟೇಷನ್ ಬಜಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಶ್ರೀ ರಾಜಶೇಖರ ಹಳಗೋದಿ ಮತ್ತು ಶ್ರೀ ಪಿ.ವಿ.ಸಾಲಿಮಠ ಸಿಪಿಐ ಅಫಜಲಪೂರ ಹಾಗೂ ಸಿಬ್ಬಂದಿರವರಾದ ಮಾರುತಿ, ಚನ್ನಮಲ್ಲಪ್ಪಾ, ರಾಜಕುಮಾರ, ರೇವಣಸಿದ್ದ, ಶಿವಾನಂದ, ಮಲ್ಲನಗೌಡ, ಶಿವರಾಜ, ಅರವಿಂದ, ರಾಜು, ಗುರುರಾಜ ರವರೊಂದಿಗೆ ಸ್ಟೇಷನ ಏರಿಯಾದ ಪಿ.ಡಿ. ಕಾಲೇಜ ರಸ್ತೆಯಲ್ಲಿ ದಾಳಿ ಮಾಡಿ 1)) ರಜಾಕ @ ಅಬ್ದುಲ ರಜಾಕ ತಂದೆ ಮಹಮ್ಮದಸಾಬ @ ಮಮ್ಮುಲಾಲ ಕಾಂಬಳೆ ವಯಃ 39 ವರ್ಷ ಸಾಃ ಶಿರವಾಳ ತಾಃ ಅಫಜಲಪೂರ ಜಿಲ್ಲಾಃ ಕಲಬುರಗಿ, 2) ಮಶಾಕಸಾಬ ತಂದೆ ಅಬ್ದುಲ ಖಾದರ @ ಅಬ್ದುಲ ಸಾಬ ಜಾಗಿರದಾರ ವಯಃ 35 ವರ್ಷ ಸಾಃ ಶಿರವಾಳ ತಾಃ ಅಫಜಲಪೂರ ಜಿಲ್ಲಾಃ ಕಲಬುರಗಿ, 3) ಪ್ರಭು ತಂದೆ ತುಕಾರಾಮ ಜಮಾದಾರ ವಯಃ 45 ವರ್ಷ ಸಾಃ ದುದ್ದಣಗಿ ತಾಃ ಅಫಜಲಪೂರ ರವರನ್ನು ದಸ್ತಗಿರಿ ಮಾಡಿ ಸದರಿಯವರಿಂದ ಆರು ನಾಡ ಪಿಸ್ತೂಲಗಳು ಹಾಗೂ ಎಂಟು ಜೀವಂತ ಗುಂಡುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.
ಆಪಾದಿತರ ಹಿನ್ನಲೆ :- ಬಂದಿತ ರಜಾಕ ಈತನು ಶಿರವಾಳ ಗ್ರಾಮದ ನಿವಾಸಿಯಾಗಿದ್ದು ಈ ಹಿಂದೆ ಐದು ಕೊಲೆ ಪ್ರಕರಣಗಳಲ್ಲಿ ಆರೋಪಿತನಾಗಿರುತ್ತಾನೆ. ಆತನ ಸಹಚರನಾದ ಮಶಾಕ ಈತನು ಅಫಜಲಪೂರ ಠಾಣಾ ವ್ಯಾಪ್ತಿಯ ಬಳೂರ್ಗಿ ತಾಂಡಾದಲ್ಲಿ ನಡೆದ ಶೂಟೌಟ ಪ್ರಕರಣದಲ್ಲಿ ಆರೋಪಿತನಾಗಿರುತ್ತಾನೆ. ಹಾಗೂ ಪ್ರಭು ಜಮಾದಾರ ಈತನು ಹಾಲಿ ತಾಲ್ಲೂಕಾ ಪಂಚಾಯತ ಅಫಜಲಪೂರ ಸದಸ್ಯನಾಗಿದ್ದು, ಈತನ ವಿರುದ್ದ ಈ ಹಿಂದೆ ಮೂರು ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಹಾಗೂ ಸರಬರಾಜು ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ.    ಈ ಮೂರು ಜನರ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಿಕೊಡಲಾಗಿದೆ.   
ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಹಣಮಂತರಾತಯ ತಂದೆ ಚಂದ್ರಪ್ಪ ಶಿವಮೂರ್ತಿ ಸಾ:ಚೊಂಚಿ ತಾ:ಚಿತ್ತಾಪುರ ಇವರ ಮಗನಾದ ಸಿದ್ದಣ್ಣಾನು ಚೊಂಚಿ ಗ್ರಾಮದಿಂದ ಕಲಬುರಗಿ ರಾಮನಗರಕ್ಕೆ ಬಂದು ಹೋಗುತ್ತಿದ್ದನು ಅವನಿಗೆ ರಾಮನಗರ ಬಡಾವಣೆಯ ಗೆಳೆಯರಿದ್ದರು ತನ್ನ ಮಗನಾದ ಸಿದ್ಧಣ್ಣನ ಹತ್ತಿರ ಅಪಘಾತದ ಅನುದಾನದ ಹಣ 70 ಸಾವಿರ ರೂಪಾಯಿ ಬ್ಯಾಂಕಿನಲ್ಲಿ ಇಟ್ಟಿದ್ದನು ಈಗ್ಗೆ 3 ದಿವಸಗಳ ಹಿಂದೆ ಸಿದ್ದಣ್ಣನು ಕಲಬುರಗಿಗೆ ಬಂದಿದ್ದು ದಿನಾಂಕ:-20/03/2015 ರಂದು ರಾತ್ರಿ 08:40 ಗಂಟೆ ಸುಮಾರಿಗೆ ಸಿದ್ದಣ್ಣ ಪೋನ ಮಾಡಿ ತಿಳಿಸಿದೆನೆಂದರೆ ರಾಮನಗರದ ನಿವಾಸಿ ಶ್ರೀನಾಥ ಗೆಳೆಯನು ಬ್ಯಾಂಕಿನಿಂದ 20 ಸಾವಿರ ರೂಪಾಯಿ ಡ್ರಾ ಮಾಡಿಕೊಡಬೇಕೆಂದು ಜಗಳ ಮಾಡುತ್ತಿದ್ದಾನೆ ಅಂತಾ ಅಂದನು ನಾನು ಅವನಿಗೆ ಜಗಳ ಮಾಡಬಾರೆಂದು ತಿಳಿಸಿದೇನು ಇಂದು ದಿನಾಂಕ:-21/03/2015 ರಂದು ಫಿರ್ಯಾದಿ ಹೆಂಡತಿಯ ತಮ್ಮನಾದ ಮಡೆಪ್ಪನು ಸಿದ್ದಣ್ಣ ಇತನಿಗೆ ದಿನಾಂಕ:-20/03/2015 ರಂದು ರಾತ್ರಿ ರಾತ್ರಿ ವೇಳೆಯಲ್ಲಿ ರಾಮನಗರದ ಮೆಹೇತಾ ಲೇಔಟದ ನೀರಿನ ಟ್ಯಾಂಕಿನ ಹತ್ತಿರ ಯಾರೋ ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿರುತ್ತಾರೆ ಸಿದ್ದಣ್ಣನ ಶವ ಸರಕಾರಿ ಆಸ್ಪತ್ರೆಯಲ್ಲಿ ಇದೆ ಅಂತಾ ತಿಳಿಸಿದರು ಫಿರ್ಯಾದಿದಾರನು ಸರಕಾರಿ ಆಸ್ಪತ್ರೆಗೆ ಹೋಗಿ ತನ್ನ ಮಗ ಸಿದ್ದಣ್ಣನ ಶವ ನೋಡಿ ದಿನಾಂಕ:-20/03/2015 ರಂದು ರಾತ್ರಿ 08:40 ರಿಂದ 11:30 ಅವದಿಯಲ್ಲಿ ರಾಮನಗರ ಬಡಾವಣೆಯ ಶ್ರೀನಾಥ ಮತ್ತು ಅವನ ಗೆಳೆಯರು ಕೂಡಿ ಸಿದ್ದಣ್ಣನು ಹಣ ಕೋಡದಿದ್ದಕ್ಕೆ ಕಲ್ಲಿನಿಂದ ತಲೆಯ ಮೇಲೆ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಮಳಖೇಡ ಠಾಣೆ : ಶ್ರೀ ಹಣಮಂತ ರಾವ ತಂದೆ ವೀರಣ್ಣಾ ಕುರಿಕೊಟಾ ಸಾ: ಗಂಗಾನಗರ ಮಳಖೇಡ ರವರು ದಿನಾಂಕ 21-3-2015 ರಂದು ಸಾಯಂಕಾಲ ನಮ್ಮ ಮನೆಗೆ ಕೀಲಿ ಹಾಕಿಕಕೊಂಡು ಕುರಿಕೊಟಾ ಗ್ರಾಮಕ್ಕೆ ಜಾತ್ರೆ ಪ್ರಯುಕ್ತ ಕುಟುಂಬ ಸಮೇತವಾಗಿ ಹೋಗಿದ್ದು ದಿನಾಂಕ 22-3-2015 ರಂದು ಬೆಳಗಿನ ಜಾವ 5-30 ಗಂಟೆಗೆ ಮಳಖೇಡಕ್ಕೆ ಬಂದು ನಮ್ಮ ಮಾವನವರ ಮನೆಯಲ್ಲಿ ಮಲಗಿಕೊಂಡಿದ್ದು ನಂತರ ನಮ್ಮ ಓಣಿಯ ಚನ್ನಪ್ಪ ತಂದೆ ರೇವಣಸಿದ್ದಪ್ಪ ಈತನು ಫೋನ ಮಾಡಿ ತಿಳಿಸಿದ್ದೇನೆಂದರೆ ಮಳಖೇಡದಲ್ಲಿ ನಿನ್ನೆ ರಾತ್ರಿ ಸುಮಾರು ಮನೆಗಳು ಕಳ್ಳತನವಾಗಿದ್ದು ನಿಮ್ಮ ಮನೆ ಸಹ ನೋಡಿರಿ ಅಂತಾ ಹೇಳಿದಾಗ ನಾನು ಕೂಡಲೇ ನಮ್ಮ ಮನೆಗೆ ಹೋಗಿ ನೋಡಲಾಗಿ ನನ್ನ ಮನೆಗೆ ಹಾಕಿದ ಕೀಲಿ ಮುರಿದಿದ್ದು ಬಾಗಿಲು ತೆರೆದಿದ್ದು, ಮನೆಯಲ್ಲಿ ಹೋಗಿ ನೋಡಲಾಗಿ ಅಲಮಾರಿಯ ಲಾಕರನಲ್ಲಿ ಇಟ್ಟಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು ಒಟ್ಟು 1,74,500-00 ರೂ. ಮಾಲು ನನ್ನ ಮನೆಯಿಂದ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಲ್ಲದೇ ನಮ್ಮ ಮನೆಯ ಅಕ್ಕಪಕ್ಕದಲ್ಲಿ  ಇರುವ ಶ್ರೀಮಂತ ತಂದೆ ವಿಠಲ ಸೋಲಾಪುರ, ಇವರ ಮನೆಯಲ್ಲಿಯು ಸಹ ಕೀಲಿ ಮುರಿದು, ಅವರ ಮನೆಯಲ್ಲಿದ್ದ ಬಂಗಾರದ ಆಭರಣ ಮತ್ತು ನಗದು ಹಣ ಹೀಗೆ ಒಟ್ಟು 80,000-00 ರೂ. ಕಿಮ್ಮತಿನ ಮಾಲು ಅವರ ಮನೆಯಲ್ಲಿ ಕಳುವಾಗಿದ್ದು ಅಂತಾ ತಿಳಿಸಿದರು. ಮತ್ತು ಶ್ರೀ ಕಾಶಿನಾಥ ತಂದೆ ಸುಬ್ಬಣ್ಣ ಪುಜಾರಿ ಇವರ ಮನೆ ಸಹ ಕೀಲಿ ಮುರಿದು ಕಳ್ಳತನ ಮಾಡಿದ್ದು, ಅವರ ಮನೆಯಲ್ಲಿ ಬಂಗಾರದ ಆಭರಣ ಮತ್ತು ನಗದು ಹಣ  ಹೀಗೆ ಒಟ್ಟ 1,61,000-00 ರೂ. ಕಳ್ಳತನವಾಗಿದ್ದರ ಬಗ್ಗೆ ನನಗೆ ತಿಳಿಸಿದರು.  ಶ್ರೀ ಸಂಗಮೇಶ ತಂದೆ ನಾಗಪ್ಪ ಸೇಡಂ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿದ್ದ ನಗದು ಹಣ 5000-00 ರೂ. ಕಳ್ಳತನ ಮಾಡಿದ್ದು ಅಂತಾ ತಿಳಿಸಿದರು.  ಶ್ರೀಮತಿ ಜಗದೇವಮ್ಮ ಗಂಡ ಶಿವಶರಣಪ್ಪ ನಿಂಗಮಾರಿ ಅಂಗನವಾಡಿ ಕಾರ್ಯಕರ್ತೆ ಇವರ ಅಂಗನವಾಡಿ ಕಾರ್ಯಾಲಯದಲ್ಲಿ ಇರುವ ಸ್ಟಿಲನ 20 ಪ್ಲೇಟ, ಸ್ಟೀಲಿನ 20 ಗ್ಲಾಸ, ಸ್ಟೀಲಿನ ಒಂದು ಚಮಚಾ, ಹಾಗು ನಗದು ಹಣ 2000-00 ರೂ. ಹೀಗೆ ಒಟ್ಟು 3000-00 ರೂ. ನೇದ್ದರ ಕಿಮ್ಮತ್ತಿನ ಮಾಲು ಕೀಲಿ ಮುರಿದು ಕಳ್ಳತನ ಮಾಡಿದ್ದು ಅಂತಾ ತಿಳಿಸಿದರು. ಅಲ್ಲದೇ ಮಲ್ಲಿಕಾರ್ಜುನ ತಂದೆ ಯಲ್ಲಪ್ಪ ನಂದೂರ ಇವರ ಮನೆಯ ಕೀಲಿ ಸಹ ಮುರಿದು ಅವರ ಮನೆಯಲ್ಲಿ ಇರುವ ಕಂಚಿನ ಒಂದು ಹಾಂಡೆ , ಮತ್ತು ತಾಮ್ರದ ಕೊಡಾ ಎರಡೂ ಸೇರಿ ಅ.ಕಿ 2000-00 ರೂ. ಹಾಗು ನಗದು ಹಣ 2500-00 ರೂ. ಹೀಗೆ ಒಟ್ಟು 4500-00 ರೂ. ಕಿಮ್ಮತ್ತಿನ ಸಾಮಾನು ಕಳ್ಳತನ ಮಾಡಿಕೊಂಡು ಹೋಗಿದ್ದರ ಬಗ್ಗೆ ತಿಳಿಸಿದರು. ಹೀಗೆ ಎಲ್ಲರ ಮನೆಗಳನ್ನು ಕೀಲಿ ಮುರಿದು ಒಟ್ಟು 4,28,000-00 ರೂ. ಕಿಮ್ಮತ್ತಿನ ಬಂಗಾರ, ಬೆಳ್ಳಿ, ಹಾಗು ಇತರೆ ಸಾಮಾನುಗಳನ್ನು  ದಿನಾಂಕ 21-3-2015 ರಂದು ಮತ್ತು 22-3-2015 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ  ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಅಫಜಲಪೂರ ಠಾಣೆ : ²æàಸೋಮಯ್ಯಾ ತಂದೆ ನಾಗಯ್ಯಾ ಮಠಪತಿ ಸಾ|| ಮಳೇಂದ್ರ ಮಠದ ಹತ್ತಿರ ಅಫಜಲಪೂರ  ರವರಿಗೆ  ಗುರುಲಿಂಗಯ್ಯಾ ಮತ್ತು ನಿಂಗಯ್ಯಾ ಅಂತಾ ಇಬ್ಬರು ಗಂಡು ಮಕ್ಕಳಿದ್ದುಸದ್ಯ ಅವರು ನಮ್ಮಿಂದ ಬೇರೆಯಾಗಿ ಸಂಸಾರ ಮಾಡುತ್ತಿರುತ್ತಾರೆ. ನಾನು ಮತ್ತು ನನ್ನ ಹೆಂಡತಿ ಪ್ರತಿ ತಿಂಗಳ ಅಮವಾಸೆಗೆ ಗುಡ್ಡಾಪೂರ ಧಾನಮ್ಮ ದೇವಿ ದರ್ಶನ ಸಲುವಾಗಿ ಹೂಗುತ್ತಾಬಂದಿರುತ್ತೇವೆ. ಪ್ರತಿ ಸಲದಂತೆ ನಿನ್ನೆ ದಿನಾಂಕ 20-03-2015 ರಂದು ಬೆಳಿಗ್ಗೆ 10;00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಮನೆಯಲ್ಲಿಯ ಅಲ್ಮಾರಿಯಲ್ಲಿ ತೊಲಿ ಬಂಗಾರದ ಪಾಟ್ಲಿಒಂದು ತೊಲಿ ಬಂಗಾರದ ಬೋರಮಾಳಅರ್ದಾ-ಅರ್ದಾ ತೊಲಿಯ 4ಉಂಗುರಗಳನ್ನು ಇಟ್ಟು ಅದಕ್ಕೆ ಕೀಲಿ ಹಾಕಿ ಗುಡ್ಡಾಪೂರಕ್ಕೆ ಹೋಗಿರುತ್ತೇವೆ. ಇಂದು ದಿನಾಂಕ 21-03-2015 ರಂದು ಬೆಳಿಗ್ಗೆ 09;00 ಗಂಟೆ ಸುಮಾರಿಗೆ ನನ್ನ ಮಗ ಗುರುಲಿಂಗಯ್ಯಾ ಇವನು ನನಗೆ ಫೋನ ಮಾಡಿ ರಾತ್ರಿ ಯಾರೋ ನಿಮ್ಮ ಮನೆ ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ ಅಲ್ಮಾರಿಯ ಬಾಗಿಲ ಮುರಿದು ಸಾಮಾನುಗಳು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸದ ಮೇರೆನೆ ನಾನು ನನ್ನ ಹೆಂಡತಿ ಮರಳಿ ಅಫಜಲಪೂರಕ್ಕೆ ಬಂದು ಮನೆಯೊಳಗೆ ಹೋಗಿ ನೋಡಲು ಅಲ್ಮಾರಿಯ ಬಾಗಿಲ ಮುರದಿದ್ದುಅಲ್ಮಾರಿಯಲ್ಲಿ ಬಂಗಾರದ ಆಭರಣ ಹಾಗು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 1,80,000/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ದಿನಾಂಕ 21-03-2015 ರಂದು ಅಂದಾಜ 02;00 ಎ.ಎಂ ದಿಂದ 03;30 ಎ.ಎಂ ದ ಮದ್ಯಧ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಮತ್ತು ಶೆಟರ್ಸ ಕಿಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀದೇವಿ ಗಂಡ ಮಲ್ಲಿಕಾರ್ಜುನ ಜಮಾದಾರ ಸಾ|| ಕುಡಕಿ ಇವಳು ದಿನಾಂಕ 18/03/2015 ರಂದು  ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಾಗ ಹಿರೊಡೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿ ಮೇಲೆ ಆನಂದರಾವ ಗೌಡರ ಹೊಲದ ಹತ್ತಿರ ಆಕಸ್ಮಿಕವಾಗಿ ಶ್ರೀದೇವಿ ಗಂಡ ಮಲ್ಲಿಕಾರ್ಜುನ ಜಮಾದಾರ ಸಾ|| ಕುಡಕಿ ಇವಳ ಬಲಗಾಲ ಹಿಮ್ಮಡಿಯ ಮೇಲ್ಭಾಗದಲ್ಲಿ ಮೂರು ಬಾರಿ ಹಾವು ಕಚ್ಚಿದ್ದರಿಂದ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಕಲಬುರಗಿವಾತ್ಸಲ್ಸ ಆಸ್ಪತ್ರೆ ಕಲಬುರಗಿಗಳಲ್ಲಿ ಚಿಕಿತ್ಸೆ ಕೊಡಿಸಿ ದಿನಾಂಕ 21/03/2015 ರಂದು ಹೆಚ್ಚಿನ ಉಪಚಾರ ಕುರಿತು ಸೊಲ್ಲಾಪೂರ ಆಸ್ಪತ್ರೆಗೆ ಒಯ್ಯುತ್ತಿರುವಾಗ ಮಧ್ಯಾಹ್ನ  ಅಕ್ಕಲಕೋಟ ಹತ್ತಿರ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಶ್ರೀಮತಿ ಲಕ್ಷ್ಮಿಬಾಯಿ ಗಂಡ ಚಂದ್ರಶೇಖರ ಧೂಳಖೇಡ  ಸಾ|| ಕವಲಗಾ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಕಸ್ತೂರಿಬಾಯಿ ಗಂಡ ಲಕ್ಷ್ಮಣ ರೆಡ್ಡಿ ಸಾ|| ಕೋಳಕುರ ರವರಿಗೆ  ದಿನಾಂಕ 17.03.2015 ರಂದು ಮುಂಜಾನೆ 1)  ಮರೆಪ್ಪ ದೊಡ್ಡಮನಿ 2)   ಗುಂಡಪ್ಪ ತಂದೆ ಮರೆಪ್ಪ ದೊಡ್ಡಮನಿ 3)   ಗಂಗಮ್ಮ ಗಂಡ ಮರೆಪ್ಪ ದೊಡ್ಡಮನಿ 4)  ಶಾಂತಮ್ಮ ತಂದೆ ಮರೆಪ್ಪ ದೊಡ್ಡಮನಿ ಸಾ|| ಎಲ್ಲರು ಕೋಳಕುರ ಗ್ರಾಮ ಕೂಡಿಕೊಂಡು ಫಿರ್ಯಾದಿಗೆ ಮತ್ತು ಅವಳ ತಾಯಿ ಪುತಳಬಾಯಿ ಹಾಗು ತಂಗಿ ಶಾರದಾ ಮಗಳು ಭಾಗ್ಯಶ್ರೀ. ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಬಡೆಗೆಯಿಂದ ಹೊಡೆದು ಮಾನಭಂಗ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರ್ಗಿ ಠಾಣೆ : ದಿನಾಂಕ 21-03-15  ರಂದು ಪಿಎಸ್.ಐ. ಜೇವರ್ಗಿ ರವರು ಕೋಳಕೂರ  ಗ್ರಾಮದಲ್ಲಿ  ಜಾತ್ರೆ  ಬಂದೋಬಸ್ತ  ಕರ್ತವ್ಯದಲ್ಲಿದ್ದಾಗ  ಕೋಳ್ಳಕೂರ  ಗ್ರಾಮದ ಬ್ರಿಡ್ಜ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ 3 ಜನರು  ಗುಂಪಾಗಿಕುಳಿತುಕೊಂಡು   ಇಸ್ಪೇಟ ಎಲೆಗಳ  ಸಹಾಯದಿಂದ ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ನಾನು ಮತ್ತು ಸಿಬ್ಬಂದಿ ಸಮೇತ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ವಿಚಾರಸಲು 1) ಹಸನ್ ಸಾಬ  ತಂದೆ ಬಾಬಾಸಾಬ ಹತ್ತರಕಿ 2) ಸಿದ್ದರಾಮ ತಂದೆ  ಸೋಮನಾಥ ಶೇಖಜೀ 3) ದತ್ತು ತಂದೆ ಶ್ರೀಮಂತರಾಯ  ಪೊಲೀಸ ಪಾಟೀಲ  ಸಾಎಲ್ಲರು ಕೋಗನೂರ  ಅಂತಾ ತಿಳಿಸಿದ್ದು ಅವರಿಂದ  52 ಇಸ್ಪೇಟ ಎಲೆಗಳು ಮತ್ತು ನಗದು ಹಣ 5520/- ರೂಗಳನ್ನು ವಶಪಡಿಸಿಕೊಂಡು  ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮನುಷ್ಯ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮಹೇಶ ತಂದೆ ನಾಗಪ್ಪ ಅಲಬನುರ ಸಾಃ ಮನೆ ನಂ. 11-1986 ರಾಮ ನಗರ ಎಸ್.ಬಿ ಕಾಲೇಜ ಹತ್ತಿರ ಕಲಬುರಗಿ  ರವರ ಅಣ್ಣ ಯಲ್ಲಪ್ಪ ತಂದೆ ನಾಗಪ್ಪ ಅಲಬನುರ ಇವರು ಈಗ ಸುಮಾರು 8 ವರ್ಷಗಳಿಂದ ಮಾನಸಿಕ ಅಸ್ವಸ್ಧರಾಗಿದ್ದು, ಬೆಂಗಳೂರ, ಹೈದ್ರಾಬಾದ, ಧಾರವಾಡ ಗಳಲ್ಲಿ ಉಪಚಾರ ಮಾಡಿಸಿದ್ದು ಇರುತ್ತದೆ. ಆದರು ಕೂಡಾ ಇನ್ನು ಪೂರ್ತಿ ಆರಾಮವಾಗಿರುವುದಿಲ್ಲ. ಹೀಗಿರುವಾಗ ದಿನಾಂಕ: 09/02/2015 ರಂದು 10-30 ಎ.ಎಮ್.ಕ್ಕೆ ನನ್ನ ಅಣ್ಣ ಎಲ್ಲಪ್ಪ ಇವರು ಮನೆಯಿಂದ ಹೇಳದೆ ಕೆಳದೆ ಹೋಗಿದ್ದು ಅಂದು ಸಾಯಂಕಾಲ ಮರಳಿ ಬಂದಿರುವುದಿಲ್ಲಾ. ಅಂದಿನಿಂದ ಇಲ್ಲಿಯವರೆಗೆ ನಾವು ಎಲ್ಲಾ ಕಡೆಗೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ ಕಾಣೆಯಾಗಿರತ್ತಾನೆ. ಅವರ ಮೈಮೇಲೆ ನೀಲಿ ಬಣ್ಣದ ಶರ್ಟ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ ಧರಿಸಿರುತ್ತಾರೆ. ಎತ್ತರ ಅಂದಾಜು 5’5’’ ಎತ್ತರ ಇದ್ದು, ಕೆಂಪು ಮೈಬಣ್ಣಯಿದ್ದು, ತೆಳ್ಳನೇಯ ಮೈಕಟ್ಟು ಇರುತ್ತದೆ, ತಲೆಯ ಮೇಲೆ ಕಪ್ಪು ಕೂದಲುಗಳಿರುತ್ತವೆ. ಕನ್ನಡ, ಹಿಂದಿಯಲ್ಲಿ ಮಾತನಾಡುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.