POLICE BHAVAN KALABURAGI

POLICE BHAVAN KALABURAGI

09 August 2011

GULBARGA DISTRICT REPORTED CRIMES


ಹೆಣ್ಣು ಮಗಳು ಕಾಣೆಯಾದ ಪ್ರಕರಣ:

ಅಶೋಕ ನಗರ ಠಾಣೆ :ಶ್ರೀ ಸಂಗಯ್ಯಾ ಸ್ವಾಮಿ ತಂದೆ ಶರಣಯ್ಯ ಸ್ವಾಮಿ ಮಠಪತಿ ಸಾ:ತೋಳನವಾಡಿ ತಾ:ಆಳಂದ ಜಿ: ಗುಲಬರ್ಗಾ ರವರು ನನ್ನ ತಂಗಿ ಶ್ರೀಮತಿ ನಾಗಮ್ಮ ಗಂಡ ಬೂದಯ್ಯಾಸ್ವಾಮಿ ಹಿರೇಮಠ ವಯ: 19 ಜಾತಿ: ಸ್ವಾಮಿ ಸಾ: ರಾಮಪೂರ ತಾ: ಜೇವರ್ಗಿ ಜಿ: ಗುಲಬರ್ಗಾರವರು ತನ್ನ ಗಂಡನ ಮನೆಗೆ ಹೋಗುವ ಕುರಿತು ದಿನಾಂಕ 08/08/2011 ರಂದು ಮಧ್ಯಾಹ್ನ ಗುಲಬರ್ಗಾಕ್ಕೆ ಬಂದು ಗುಲಬರ್ಗಾ ಕೇಂದ್ರ ಬಸ್ಸ ನಿಲ್ದಾಣದಿಂದ ತನ್ನ ಗಂಡ ನಾದ ಬೂದಯ್ಯಾ ಇತನು ಹೂವು ತೆಗದುಕೊಂಡು ಬರುವಷ್ಠರಲ್ಲಿಯೆ ಬಸ್ಸ ನಿಲ್ದಾಣದಿಂದ ಕಾಣೆಯಾಗಿರುತ್ತಾಳೆ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀ ಮಹ್ಮದ ಆರೀಫ ತಂದೆ ಮಹ್ಮದ ಮಹಿಮೂದ ಸೋನಿಯಾಗಾಂದಿ ಕಾಲೋನಿ ಮಾಲಗತ್ತಿ ರೋಡ ಗುಲಬರ್ಗಾ ರವರು ನಾನು ದಿನಾಂಕ:08-08-2011 ರಂದು ರಾತ್ರಿ ರಾಷ್ಟ್ರಪತಿ ಸರ್ಕಲ್ ದಿಂದ ಪಟೇಲ್ ಸರ್ಕಲ್ ಮೇನ ರೋಡಿನಲ್ಲಿ ಬರುತ್ತಿರುವಾಗ ಕೆ .ಎಸ್.ಆರ್.ಟಿ.ಸಿ.ಬಸ್ ಡಿಪೊ ನಂ: 01 ಮೇನ ಗೇಟ ಎದುರು ರೋಡಿನ ಮೇಲೆ ಅಟೋರಿಕ್ಷಾ ನಂ: ಕೆಎ 32 -8896 ನೆದ್ದರ ಚಾಲಕ ಕೇಂದರ ಬಸ್ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಅಟೋರಿಕ್ಷಾ ನಂ: ಕೆಎ 32 ಬಿ 1739 ನೆದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ಎರಡು ಅಟೋರೀಕ್ಷಾ ಪಲ್ಟಿಯಾಗಿದ್ದು ಅಟೋರೀಕ್ಷಾ ನಂ; ಕೆಎ 32 ಬಿ 1739 ನೆದ್ದರಲ್ಲಿದ್ದ ಚಾಲಕನಿಗೆ ಮತ್ತು ಅಟೋರೀಕ್ಷಾ ನಂ: ಕೆಎ 32 -8896 ನೆದ್ದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಾಯಗಳಾಗಿದ್ದು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ:

ಸುಲೇಪೇಟ ಠಾಣೆ : ದಿನಾಂಕ: 08-08-2011 ರಂದು ಹೂವಿನಹಳ್ಳೀ ಗ್ರಾಮದಲ್ಲಿ ಶ್ರೀ ಬೀರಣ್ಣ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತ ಮಾಃಇತಿ ಬಂದ ಮೇರೆಗೆ ಸಿಪಿಐ ಸುಲೇಪೇಟ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಮಾಶೆಪ್ಪಾ ತಂದೆ ಬುದ್ದಪ್ಪಾ ವಡ್ಡರ ಸಾ|| ಹೂವಿನಹಳ್ಳಿ ತಾ|| ಚಿಂಚೋಳಿ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಮಟಕಾ ಚೀಟಿ ಬರೆದುಕೊಂಡ ಸಂಗ್ರಹಿಸಿದ ರೂ 3040/- ಹಾಗು ಮಟಕಾ ಚೀಟಿಗಳು ಹಾಗು ಇನ್ನಿತರ ವಸ್ತುಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ದರೋಡೆ ಪ್ರರಕಣ :
ಅಶೋಕ ನಗರ ಪೊಲೀಸ್ ಠಾಣೆ
: ಶ್ರೀಮತಿ. ಜಯಶ್ರೀ ಗಂಡ ವಸಂತ ಜೋಶಿ ಸಾ: ಧ್ಯಾನಂಜಯ ನಗರ ಮಾಕಾ ಲೇಔಟ ಎನ್‌.ಜಿ.ಒ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನ ಅಣ್ಣ ಅನಂತ, ತಂದೆ ಚಿಂತಾಮಣಿ ಮತ್ತು ಅತ್ತಿಗೆ ನಳಿನಿ ಗಂಡ ಅನಂತ ಮೂರು ಜನರು ಶ್ರೀ. ಭವಾನಿ ಪೋಟೋ ಸ್ಟುಡಿಯೊದಲ್ಲಿ ಫೋಟೋ ತೆಗೆಸಿಕೊಂಡು ವೆಂಕಟಗಿರಿ ಹೊಟೇಲಿಗೆ ಕಾಫೀ ಕೂಡಿಯಲು ಹೊಗಿ ಮರಳಿ ಮನೆಗೆ ಬರುತ್ತಿರುವಾಗ ರಾತ್ರಿ 8:45 ಗಂಟೆ ಸುಮಾರಿಗೆ ಘಾಟಗೇ ಮನೆಗೆ ಹೊಗುವ ರಸ್ತೆಯಲ್ಲಿ ಸ್ವಲ್ಪ ಕತ್ತಲು ಇದ್ದ ಸ್ಥಳದಲ್ಲಿ ಅಂದಾಜು 20-25 ವರ್ಷದ ಒಬ್ಬ ಹುಡುಗ ಮೊಬೈಲನಲ್ಲಿ ಮಾತಾಡುತ್ತಾ ನಮ್ಮ ಹತ್ತಿರ ಬಂದು ಒಮ್ಮೇಲೆ ನನ್ನ ಕುತ್ತಿಗೆ ಹತ್ತಿರ ಕೈ ಹಾಕಿ ನನ್ನ ಕೊರಳಲ್ಲಿ ಇದ್ದ ಎರಡು ಎಳೆಯ ಬಂಗಾರದ 2 ತೊಲೆಯ ಚೈನ, ಒಂದು ಎಳೆಯ ಬಂಗಾರ 1 ತೊಲೆ ಚೈನ ಎರಡೂ ಕೂಡಿ ಒಟ್ಟು 30 ಗ್ರಾಮ ಬಂಗಾರದ ಚೈನಗಳು ಕಿತ್ತುಕೊಳ್ಳುತ್ತಿರುವಾಗ ನಾನು ಚಿರಾಡುತ್ತಾ ಚೈನಗಳನ್ನು ಹಿಡಿದಾಗ ಅದರಲ್ಲಿ ಅಂದಾಜು 4 ಇಂಚು ಚೈನ ತುಕಡಿ ಮತ್ತು ಒಂದು ಪೆಂಡೇಂಟ ನನ್ನ ಕೈಯಲ್ಲಿ ಉಳಿದಿರುತ್ತದೆ. ಉಳಿದ ಅಂದಾಜು 2 ½ ವರೆ ತೊಲೆ ಬಂಗಾರದ ಚೈನಗಳನ್ನು ಕಿತ್ತಿಕೊಂಡು ಅಲ್ಲೆ ಹತ್ತಿರ ಇನ್ನೊಬ್ಬ ಹುಡುಗ ನಿಲ್ಲಿಸಿದ ಮೊಟರ ಸೈಕಲ ಮೇಲೆ ಕುಳಿತುಕೊಂಡು ಹೊಗಿರುತ್ತಾರೆ. ಆ ವೇಳೆಯಲ್ಲಿ ನನ್ನ ಅಣ್ಣ ಅನಂತ ಕುಲಕರ್ಣಿ ಮತ್ತು ಅತ್ತಿಗೆ ನಳಿನಿ ರವರು ಚಿರಾಡಿದರು ಸಹ ಯಾರು ಸಹಾಯಕ್ಕೆ ಬರಲಿಲ್ಲ. ನನ್ನ ಕೊರಳಲ್ಲಿ ಕೈ ಹಾಕಿ ಒಟ್ಟು 25 ಗ್ರಾಂ ಬಂಗಾರದ ಚೈನ ಅಂದಾಜು 50,000/- ಮೌಲ್ಯದ ಬಂಗಾರದ ಆಭರಣಗಳನ್ನು ಕಿತ್ತಿಕೊಂಡು ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ
: ರುಕ್ಮಬಾಯಿ ಗಂಡ ಸಿದ್ದರಾಮ ಸೋನಕಾಂಬಳೆ ಸಾ: ಕಿಣ್ಣಿಅಬ್ಬಾಸ ರವರು ನಾನು ಮಗಳಿಗೆ ಬಾಣೆತನಕ್ಕೆ ಕೆರೆದುಕೋಂಡು ಬರಲು ದುದನಿಗೆ ಹೊಗುವ ಸಲುವಾಗಿ ದಿನಾಂಕ;-03/08/2011 ರಂದು ಸಾಯಂಕಾಲ ಕಿಣ್ಣಿಅಬ್ಬಾಸ ಗ್ರಾಮದಿಂದ ಬಸ್ಸು ಇರಲಾರದ ಕಾರಣ ನಡೆದುಕೋಂಡು ಮೋಘಾ(ಬಿ) ಗ್ರಾಮಕ್ಕೆ ನಾನು ಮತ್ತು ನಾಜೂಕಮ್ಮ ನಡೆದುಕೊಂಡು ಹೋಗುತ್ತಿರುವಾಗ ಸಾವಳೇಶ್ವರ ಕ್ರಾಸ್ ಹತ್ತಿರ ಹೊಗುತ್ತಿರುವಾಗ ಎದುರು ಗಡೆಯಿಂದ ಸೈಕಲ್ ಮೋಟಾರ ಕೆಎ-19ಡಬ್ಲು-3407 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.