POLICE BHAVAN KALABURAGI

POLICE BHAVAN KALABURAGI

17 October 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಗಂಗವ್ವ ಗಂಡ ಗುರಪ್ಪ ಗೊಲ್ಲರ ಸಾ|| ಅಫಜಲಪೂರ ರವರ ಗಂಡ ಮತ್ತು ಮಗ ಇಬ್ಬರು ಹಂದಿ ಸಾಕಾಣಿಕೆ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಗಂಡನು ಅತನೂರ ಗ್ರಾಮದಲ್ಲಿಯೂ ಕೆಲವೊಂದು ಹಂದಿಗಳನ್ನು ಬಿಟ್ಟಿರುತ್ತಾನೆ.      ನಮ್ಮ ಸಂಭಂದಿಕನಾದ ಸಿದ್ದಪ್ಪ ತಂದೆ ಗುರಪ್ಪ ಗೊಲ್ಲರ ಎಂಬಾತನು ಹಂದಿಗಳನ್ನು ಸಾಕಿದ್ದು ಈಗ ಒಂದು ವರ್ಷದ ಹಿಂದೊಮ್ಮೆ, 6 ತಿಂಗಳ ಹಿಂದೊಮ್ಮೆ ಮತ್ತು  ಒಂದು ತಿಂಗಳ ಹಿಂದೊಮ್ಮೆ ಅವರು ನಮ್ಮ ಹಂದಿಗಳು ತಮ್ಮ ಹಂದಿಗಳು ಇರುತ್ತವೆ ಅಂತಾ ಹಂದಿಗಳನ್ನು ತಗೆದುಕೊಂಡು ಹೋಗಿ ಮಾರಾಟ ಮಾಡಿದ್ದರಿಂದ ಸಿದ್ದಪ್ಪನಿಗೂ ಮತ್ತು ಆತನ ಮಕ್ಕಳಾದ ಅಶೋಕ, ಶಾಮಣ್ಣ, ಭೀಮು @ ಭೀಮಶಾ ರವರಿಗೂ ನನ್ನ ಗಂಡನಿಗೂ ಸಣ್ಣ  ಪುಟ್ಟ ಜಗಳ ಆಗಿ ಈ ವಿಷಯದಲ್ಲಿ ಅವರು ನನ್ನ ಗಂಡನ ಮೇಲೆ ದ್ವೇಷ ಹೊಂದಿದ್ದರು. ದಿನಾಂಕ 16-10-2018 ರಂದು ಬೆಳಿಗ್ಗೆ ಅತನೂರ ಗ್ರಾಮದವರು ಹಂದಿಗಳು ತಮ್ಮ ಹೊಲದಲ್ಲಿ ಹೋಗಿ ಬೆಳೆ ನಾಶ ಪಡಿಸುತ್ತಿವೆ ಅಂತಾ ಪೋನ ಮಾಡಿ ತಿಳಿಸಿದ್ದರಿಂದ ಹಂದಿಗಳನ್ನು ಹಿಡಿದುಕೊಂಡು ಬರಲು ನನ್ನ ಗಂಡ ಮತ್ತು ನನ್ನ ಚಿಕ್ಕಮ್ಮನ ಮಗನಾದ ಭೀಮ @ ಭೀಮಪ್ಪ ತಂದೆ ಗುರಪ್ಪ ಗೊಲ್ಲರ ಮತ್ತು ನಮ್ಮ ಸಹೋದರ ಸಂಭಂದಿಯವರಾದ ರವಿ ತಂದೆ ಸಿದ್ರಾಮ ಗೊಲ್ಲರ, ಮಂಗಲ ತಂದೆ ಸಿದ್ರಾಮ ಗೊಲ್ಲರ, ನನ್ನ ಮಗ ಬಸವರಾಜ ಗೊಲ್ಲರ ಹಾಗೂ ನನ್ನ ಮೈದುನ ರವಿ ತಂದೆ ಯಲ್ಲಪ್ಪ ಗೊಲ್ಲರ ರವರೆಲ್ಲರೂ, ಮೋಟರ ಸೈಕಲಗಳ ಮೇಲೆ ಮದ್ಯಾಹ್ನ 12:00 ಗಂಟೆ ಸುಮಾರಿಗೆ ಅತನೂರ ಗ್ರಾಮಕ್ಕೆ ಹೋಗಿದ್ದು ಮದ್ಯಾಹ್ನ 3:15 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಚಿಕ್ಕಮ್ಮನ ಮಗನಾದ ಭೀಮ @ ಭೀಮಪ್ಪ ಅವಸರ ಅವಸರದಲ್ಲಿ ಅಳುತ್ತಾ ಮನೆಗೆ ಬಂದು ನನಗೆ ತಿಳಿಸಿದ್ದೆನೆಂದರೆ, ನಾನು ಮತ್ತು ಮಾವ ಗುರಪ್ಪ ಇಬ್ಬರು ಮೋಟರ ಸೈಕಲ ಮೇಲೆ ಅತನೂರ ಗ್ರಾಮದಿಂದ ಮರಳಿ ಅಫಜಲಪೂರಕ್ಕೆ ಬರುತ್ತಿದ್ದಾಗ ಮಾತೋಳಿ ಗ್ರಾಮ ದಾಟಿ ಸ್ವಲ್ಪ ಮುಂದೆ ಬಂದ ನಂತರ ಕುರಿಗಳ ಮೇವಿನ ಸಲುವಾಗಿ ಗಿಡಗಳ ತಪ್ಪಲು ತಗೆದುಕೊಂಡು ಬರಲು ಮೋಟರ ಸೈಕಲ ನಿಲ್ಲಿಸಿ ರೋಡಿನ ಬದಿಯಲ್ಲಿರುವ ಗಿಡಗಳ ತಪ್ಪಲು ತಗೆದುಕೊಂಡು ಮೋಟರ ಸೈಕಲ ಹತ್ತಿರ ಬರುತ್ತಿದ್ದಾಗ ಮದ್ಯಾಹ್ನ 3:00 ಗಂಟೆಯ ಸುಮಾರಿಗೆ 1) ಸಿದ್ದಪ್ಪ ತಂದೆ ಗುರಪ್ಪ ಗೊಲ್ಲರ 2) ಅಶೋಕ ತಂದೆ ಸಿದ್ದಪ್ಪ ಗೋಲ್ಲರ 3) ಶಾಮಣ್ಣ ತಂದೆ ಸಿದ್ದಪ್ಪ ಗೊಲ್ಲರ ಇವರು ಒಂಧು ಮೋಟರ ಸೈಕಲ ಮೇಲೆ, ಮತ್ತೊಂದು ಮೋಟರ ಸೈಕಲ ಮೇಲೆ 4) ಭೀಮು ತಂದೆ ಸಿದ್ದಪ್ಪ ಗೊಲ್ಲರ 5) ಜಗಪ್ಪ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ 6) ಜಂಗಪ್ಪ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ ರವರು ಬಂದು ಮಾವ ಗುರಪ್ಪನಿಗೆ ಅಶೋಕ, ಭೀಮ, ಜಗಪ್ಪ, ರವರು ಹಿಡಿದು ನೆಲಕ್ಕೆ ಹಾಕಿದಾಗ ಸಿದ್ದಪ್ಪನು ಚಾಕುವಿನಿಂದ ಕುತ್ತಿಗೆ ಕೊಯ್ದಿದಿದ್ದು, ಜಂಗಪ್ಪನು ಮುಖದ ಮೇಲೆ ಕಲ್ಲುಗಳು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ. ಆಗ ಸಿದ್ದಪ್ಪನು ಈ ಮಗನಿಗೆ ಬಿಟ್ಟರೆ ಮುಂದೆ ಇವನು ನಮ್ಮ ವಿರುದ್ದ ಸಾಕ್ಷೀ ಹೇಳುತ್ತಾನೆ ಇವನಿಗೂ ಬಿಡಬೇಡಿರಿ ಮತ್ತು ಅತನೂರಿನಲ್ಲಿ ಉಳಿದವರಿಗೂ ಬಿಡಬೇಡಿರಿ ಅಂತಾ ಅಂದಾಗ ಶಾಮಣ್ಣನು ಬಡಿಗೆಯಿಂದ ನನ್ನ ಎಡಗೈ ರಟ್ಟೆಗೆ ಮತ್ತು ಎಡಗಾಲಿನ ತೊಡೆಗೆ ಹೊಡೆದು ಭಾರಿ ಒಳಪೆಟ್ಟು ಪಡಿಸಿರುತ್ತಾನೆ. ನಾನು ಅವರಿಂದ ತಪ್ಪಿಸಿಕೊಂಡು ಮೋಟರ ಸೈಕಲ ಸಮೇತ ಓಡಿ ಹೋಗಿರುತ್ತೇನೆ. ನಾನು ಓಡಿ ಹೊಗದಿದ್ದರೆ ನನಗೂ ಹೊಡೆದು ಕೊಲೆ ಮಾಡುತ್ತಿದ್ದರು. ಇದಲ್ಲದೆ 7) ರಾಮ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ 8) ಸುನೀಲ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ, 9) ಅನೀಲ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ, 10) ರಮೇಶ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ ಹಾಗೂ 11) ರವಿತ್ ತಂದೆ ದೇವಣ್ಣ ಗೊಲ್ಲರ ರವರು ಅತನೂರದಲ್ಲಿ ಉಳಿದಿದ್ದ ನನ್ನ ಮಾವ ಗುರಪ್ಪನ ತಮ್ಮಂದಿರಾದ ರವಿ ತಂದೆ ಸಿದ್ರಾಮ ಗೊಲ್ಲರ, ಮಂಗಲ ತಂದೆ ಸಿದ್ರಾಮ ಗೊಲ್ಲರ, ಹಾಗೂ ಬಸವರಾಜ ಮತ್ತು ರವಿ ತಂದೆ ಯಲ್ಲಪ್ಪ ಗೊಲ್ಲರ ರವರಿಗೆ ಹೊಡೆಯಲು ಹೋಗಿರುತ್ತಾರೆ ಸಿಕ್ಕರೆ ಅವರಿಗೂ ಹೊಡೆದು ಸಾಯಿಸುತ್ತಾರೆ ಅಂತಾ ತಿಳಿಸಿದನು. ನಂತರ ನಾನು ಮತ್ತು ನನ್ನ ನೆಗೆಣಿ ಅಂಬವ್ವ ಗಂಡ ಸಿದ್ರಾಮ ಗೊಲ್ಲರ, ಹಾಗೂ ಮೈದುನರಾದ ಸೋಮಣ್ಣ ತಂದೆ ಯಲ್ಲಪ್ಪ ಗೊಲ್ಲರ, ಜಗನ್ನಾಥ ತಂದೆ ಯಲ್ಲಪ್ಪ ಗೊಲ್ಲರ, ಸಿದ್ರಾಮ ತಂದೆ ಯಲ್ಲಪ್ಪ ಗೊಲ್ಲರ, ಹಾಗೂ ನಮ್ಮ ಸಂಭಂಧಿಕರಾದ ಸಿದ್ರಾಮ ತಂದೆ ಭೀಮ ಗೊಲ್ಲರ, ಭೀಮವ್ವ ಗಂಡ ಸಿದ್ರಾಮ ಗೊಲ್ಲರ ಮತ್ತಿತರರೂ ಘಟನೆ ಜರೂಗಿದ ಸ್ಥಳಕ್ಕೆ ಹೋಗಿ ನನ್ನ ಗಂಡನ ಶವವನ್ನು ನೋಡಿರುತ್ತೇವೆ. ನನ್ನ ಗಂಡನ ಕೊಲೆ ಮಾಡಿದವರ ಮತ್ತು ನನ್ನ ತಮ್ಮ ಭೀಮಪ್ಪನಿಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಹಾಗೂ ನನ್ನ ಮಗ ಬಸವರಾಜ ಮೈದುನರಾದ ರವಿ ತಂದೆ ಸಿದ್ರಾಮ ಗೊಲ್ಲರ, ಮಂಗಲ ತಂದೆ ಸಿದ್ರಾಮ ಗೊಲ್ಲರ, ಹಾಗೂ ರವಿ ತಂದೆ ಯಲ್ಲಪ್ಪ ಗೊಲ್ಲರ ರವರಿಗೆ ಹೊಡೆಯಲು ಬೆನ್ನು ಹತ್ತಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯುಧದಿಂದ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಿರೇಶ ತಂದೆ ಸೊಮಶೇಖರ ಚಿಂಚಕೊಟಿ ಸಾ: ಚಿಂಚಕೊಟಿ ಹಾ:ವ: ಶಟ್ಟಿ ಚಿತ್ರ ಮಂದಿರ ಹತ್ತಿರ ಕಲಬುರಗಿ ರವರು ಮತ್ತು  ತಮ್ಮ ವಿಕಾಸ ಅಂತ ಇಬ್ಬರು ಗಂಡು ಮಕ್ಕಳಿದ್ದು ನನ್ನ ತಮ್ಮ ಬಿ.ಇ ಓದುತ್ತಿದ್ದು, ನಮ್ಮ ತಂದೆಯಾದ ಸೊಮಶೇಖರ ಇವರು ಮಾಜಿ ಸೈನಿಕರಿದ್ದು, ಸೇವೆಯಿಂದ ನಿವೃತ್ತಿ ಹೊಂದಿದ್ದು, ನಮ್ಮ ತಂದೆ ಆಯುಧ ಲೈಸನ್ಸ್‌‌‌ ಪಡೆದುಕೊಂಡು ಒಂದು ಆಯುಧವನ್ನು ಖರಿದಿಸಿ ಎ.ಟಿ.ಎಮ್‌‌ ಗಳಿಗೆ ಹಣ ತುಂಬುವ ಸೇಕ್ವೂರ್ ಕಂಪನಿಯಲ್ಲಿ ವಾಹನಗಳ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ನಮ್ಮ ತಾಯಿಯಾದ ಬಸಮ್ಮ ಇವರು ಮನೆ ಕೆಲಸ ಮಾಡಿಕೊಂಡಿರುತ್ತಾರೆ.ನಾನು, ನನ್ನ ವ್ಯಯಕ್ತಿಕ ಖರ್ಚಿನ ಸಂಬಂದ ನಮ್ಮ ತಂದೆ ತಾಯಿಗೆ ಪದೆ ಪದೆ ಹಣ ಕೇಳುತ್ತಾ ಬಂದಿದ್ದು. ಅವರು ಹೆಚ್ಚಾಗಿ ನನಗೆ ಹಣ ಕೊಡಲು ನಿರಾಕರಿಸುತ್ತಾ ಬಂದಿದ್ದು ಇರುತ್ತದೆ. ನಮ್ಮ ತಂದೆ ನನ್ನ ಬಗ್ಗೆ ದ್ವೇಷ ಭಾವನೆ ಬೆಳೆಯಿಸಿಕೊಂಡು ಬಂದಿದ್ದು ಇರುತ್ತದೆ. ಈಗ 3-4 ದಿವಸಗಳ ಹಿಂದೆ ನಾನು, ನನ್ನ ಗೆಳೆಯರೊಂದಿಗೆ ತುಳಜಾಪೂರಕ್ಕೆ ನಡೆದುಕೊಂಡು ಹೋಗಿ ನಿನ್ನೆ ದಿನಾಂಕ 16.10.2018 ರಂದು ಬೆಳ್ಳಿಗ್ಗೆ ಮರಳಿ ಬಂದಿದ್ದು ಇರುತ್ತದೆ. ನಾನು ತುಳಜಾಪೂರಕ್ಕೆ ಹೋಗುವ ಸಂಬಂದ ನಾನು ನನ್ನ ಗೆಳೆಯರಲ್ಲಿ ಹತ್ತು ಸಾವೀರ ರುಪಾಯಿ ಕೈಗಡ ತೆಗೆದುಕೊಂಡಿದ್ದು ನನ್ನ ಗೆಳೆಯರಿಗೆ ಹಣ ಮರಳಿ ಕೊಡುವ ಸಂಬಂದ ನಿನ್ನೆ ದಿನಾಂಕ 16.10.2018 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ನಮ್ಮ ತಂದೆಯವರು ಕೆಲಸದಿಂದ ಮನೆಗೆ ಬಂದಾಗ ನಾನು ನಮ್ಮ ತಂದೆಗೆ ಹತ್ತು ಸಾವೀರ ರೂಪಾಯಿ ಕೊಡಿ ಅಂತ ಹೇಳಿದ್ದು ಆಗ ನಮ್ಮ ತಂದೆಯವರು ರಂಡಿ ಮಗನೆ ನೀನಗೆ ಎಲ್ಲಿಂದ ಹಣ ಕೊಡಲಿ ನೀನಗೆ ಯಾರು ತುಳಜಾಪೂರಕ್ಕೆ ಹೋಗು ಅಂತ ಹೇಳಿದ್ದಾರೆ ಭೋಸಡಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ನಮ್ಮ ತಂದೆಯವರಿಗೆ ನಾನು ನನ್ನ ಗೆಳೆಯರಿಗೆ ಹಣ ಕೊಡಬೇಕಾಗಿದೆ ನನಗೆ ಹಣ ಬೇಕೆ ಬೇಕು ಅಂತ ಹೇಳಿದ್ದು ಅದೆ ವೇಳೆಗೆ ನನ್ನ ತಮ್ಮನಾದ ವಿಕಾಸ ಮತ್ತು ಅವನ ಇಬ್ಬರು ಗೆಳೆಯರು ಕೂಡಿಕೊಂಡು ನಮ್ಮ ಮನೆಗೆ ಬಂದಿದ್ದು ನಾನು ನನ್ನ ತಂದೆಯೊಂದಿಗೆ ಹಣದ ವಿಷಯವಾಗಿ ಜಗಳ ಮಾಡುವದನ್ನು ನೋಡಿ ನನ್ನ ತಮ್ಮ ಈ ರಂಡಿ ಮಗನ ಕಾಟ ಸಾಕಾಗಿ ಹೋಗಿದೆ ಇವತ್ತು ಇವನಿಗೆ ಖಲಾಸ ಮಾಡಿಯೇ ಬಿಡೊಣ ಅಂತ ಹೇಳಿ ನನ್ನ ತಮ್ಮ ಮತ್ತು ಅವನ ಗೇಳೆಯರಲ್ಲಿ ಒಬ್ಬನಾದ ರಡ್ಡಿ, ಹಾಗೂ ಇನ್ನೂಬ್ಬ ಕೂಡಿಕೊಡು ನನಗೆ ಒತ್ತಿಯಾಗಿ ಹಿಡಿದುಕೊಂಡಿದ್ದು ಅದೆ ವೇಳೆಗೆ ನಮ್ಮ ತಂದೆ ತನ್ನ ಕೆಲಸ ಸಂಬಂದ ತೆಗೆದುಕೊಂಡು ಹೋಗುತ್ತಿದ್ದ ಆಯುಧವನ್ನು ತೆಗೆದುಕೊಂಡು ಬಂದು ಈ ರಂಡಿ ಮಗನಿಗೆ ಸಾಯಿಸಿ ಬಿಡುತ್ತೆನೆ ಅಂತ ಅನ್ನುತ್ತಾ ಅವರ ಕೈಯಲಿದ್ದ ಆಯುಧ ದಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಎಡಗಾಲ ತೊಡೆಗೆ ಗುಂಡು ಹಾರಿಸಿದ್ದು ನನ್ನ ಎಡಗಾಲ ತೊಡೆಗೆ ಭಾರಿ ರಕ್ತಗಾಯವಾಗಿದ್ದು ಆಗ ಮನೆಯಲ್ಲಿ ನಮ್ಮ ತಾಯಿ ಚಿರಾಡಲು ಪ್ರಾರಂಭಿಸಿದ್ದು ನಮ್ಮ ತಾಯಿ ಚಿರಾಡುವದನ್ನು ಕೇಳಿ ಪಕ್ಕದ ಮನೆಯ ಶಿವಶರಣಪ್ಪ ಹತ್ತರಗಾ, ಪ್ರಯಾಗಬಾಯಿ ಹಾಗೂ ಇತರರು ನಮ್ಮ ಮನೆಗೆ ಬಂದು ನೋಡಿ ನಮ್ಮ ತಂದೆಗೆ ನನ್ನ ತಮ್ಮನಿಗೆ ಬೈದು ನನಗೆ ಹೊಡೆಯುವದನ್ನು ಬಿಡಿಸಿದ್ದು ಇರುತ್ತದೆ ಸದರಿ ಸಮಯದಲ್ಲಿ ನಮ್ಮ ತಾಯಿ ಬೇಹುಸ ಆಗಿಬಿದ್ದಿದ್ದು ಯಾರೊ 108 ಅಂಬುಲೇನ್ಸಕ್ಕೆ ಕರೆ ಮಾಡಿದ್ದರಿಂದ ಅಂಬುಲೇನ್ಸ ಸ್ಥಳಕ್ಕೆ ಬಂದು ನನಗೆ ನಮ್ಮ ತಾಯಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೇಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನನಗೆ ಹಣ ಕೊಡುವ ವಿಷಯವಾಗಿ ನಮ್ಮ ತಂದೆ ಸೊಮಶೇಖರ, ನನ್ನ ತಮ್ಮ ವಿಕಾಸ ಹಾಗೂ ಅವನ ಗೇಳೆಯರು ಕೂಡಿಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನಗೆ ಹಿಡಿದು ಕೊಂಡು ನನ್ನ ಮೇಲೆ ಪೈರ ಮಾಡಿದವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ತಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 16.10.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಎಮ್.ಎಸ್.ಕೆ.ಮೀಲ್ ಜಿಲಾನಾಬಾದ ಸೈದಾಪೂರಿ ಹೊಟೆಲ ಹತ್ತಿರ ಒಬ್ಬ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೈದಾಪೂರಿ ಹೊಟೇಲ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತುಕೊಂಡು ನೋಡಲು ಸೈದಾಪೂರಿ ಹೊಟೇಲ ಮುಂದಿನ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಗೌಸ @ ಮಹ್ಮದ ಗೌಸ ತಂದೆ ಮಹೀಬೂಬ ಸಾಬ ಸಾ: ಜಿಲಾನಾಬಾದ ಎಮ್.ಎಸ್.ಕೆ. ಮೀಲ ಕಲಬುರಗಿ. ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 850/- ರೂ 2 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.