POLICE BHAVAN KALABURAGI

POLICE BHAVAN KALABURAGI

13 April 2012

GULBARGA DIST REPORTED CRIME

ಮಟಕಾ ಜೂಜಾಟ ಪ್ರಕರಣ:

ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 12/04/2012 ರಂದು ಮಧ್ಯಾಹ್ನ 1-00 ಮಕ್ತಂಪೂರ ಶಂಕರಲಿಂಗ ಗುಡಿಯ ಹತ್ತಿರ ಒಬ್ಬ ವ್ಯಕ್ತಿ ಮೊಬೈಲ ಫೋನ ಮುಖಾಂತರ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೆರೆಗೆ ಮಾನ್ಯ ಎ.ಎಸ್.ಪಿ (ಎ) ಉಪ-ವಿಭಾಗ ರವರ ನೇತ್ರತ್ವದಲ್ಲಿ ಶ್ರೀ.ಡಿ.ಸಂತೋಷಕುಮಾರ ಪಿ.ಎಸ್.ಐ ಬ್ರಹ್ಮಪೂರ ಪೊಲೀಸ ಠಾಣೆ ರವರು ಮತ್ತು ಪಂಚರರೊಂದಿಗೆ ಮಟಕಾ ಜೂಜಾಟದ ಚೀಟಿ ಬರೆದುಕೊಳ್ಳುತ್ತಿರುವವನ್ನು ಮೇಲೆ ದಾಳಿ ಮಾಡಿ ಹೆಸರು ವಿಚಾರಿಸಲು ರಾಜಶೇಖರ ತಂದೆ ಗುರುಲಿಂಗಪ್ಪ ಖಜೂರಿ, ಸಾ|| ಶಂಕರಲಿಂಗ ಗುಡಿಯ ಹತ್ತಿರ ಮಕ್ತಂಪೂರ ಗುಲಬರ್ಗಾ ಅಂತಾ ಹೇಳಿದ್ದು, ಸದರಿಯವನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1100,1 ಮಟಕಾ ಚೀಟಿ, 1 ಬಾಲ ಪೆನ್ನ, ಒಂದು ನೊಕಿಯಾ ಕಂಪನಿಯ ಮೊಬೈಲ ಫೋನ್, ಒಂದು ಸ್ಯಾಮಸಂಗ ಕಂಪನಿಯ ಮೊಬೈಲ ಫೋನ್ ಜಪ್ತ ಮಾಡಿಕೊಂಡಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/12 ಕಲಂ: 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಗುಲಬರ್ಗಾ ನಗರದಲ್ಲಿ ಐಪಿಎಲ್ ಕ್ರಿಕೇಟ ಬುಕ್ಕಿಯ ಬಂದನ: ಬಂದಿತನಿಂದ 2,50,048/- ಮತ್ತು 3 ಮೊಬಾಯಿಲ್ ವಶ.

ಅಶೋಕ ನಗರ ಠಾಣೆ: ಗುಲಬರ್ಗಾ ನಗರದಲ್ಲಿ ಐಪಿಎಲ್ ಕ್ರಿಕೇಟ ಪಂದ್ಯಗಳ ಮೇಲೆ ಬುಕ್ಕಿಗಳು ಬೆಟ್ಟಿಂಗ ಆಡುತ್ತಿದ್ದಾರೆ. ಅಂತಾ ಮಾಹಿತಿಯ ಮೇರೆಗೆ ಶ್ರೀ ಭೂಷಣ ಬೊರಸೆ ಐ.ಪಿ.ಎಸ್ ಎ.ಎಸ್.ಪಿ (ಎ) ಉಪ ವಿಭಾಗಧಿಕಾರಿಗಳು ಗುಲಬರ್ಗಾ ರವರು ಮತ್ತು ಸಿಬ್ಬಂದಿ ಜನರಾದ ಚನ್ನಪ್ಪ, ಸುರೇಶ, ಶಿವಪ್ರಕಾಶ, ರಫೀಕ್,ರಾಮುಪವಾರ, ದೇವಿಂದ್ರ, ಪಿಸಿ ರವರು ಮತ್ತು ಲಕ್ಷ್ಮಣ ರಾಠೋಡ ಎ.ಪಿ.ಸಿ ರವರನ್ನೊಳಗೊಂಡ ತಂಡವು ದಿನಾಂಕ 12/04/2012 ರಂದು ಮಧ್ಯಾಹ್ನ 3-30 ಗಂಟೆಗೆ ರಾಮ ಮಂದಿರ ಹತ್ತಿರ ಐಪಿಎಲ್ ಟೂರ್ನಿಯ ಮ್ಯಾಚಗಳ ಮೇಲೆ ಬೆಟ್ಟಿಂಗ ಹಣ ಬರೆದುಕೊಳ್ಳುತ್ತಿರುವ ಬುಕ್ಕಿ ಅನಿಲಕುಮಾರ ತಂದೆ ನಾಗನಾಥ ಗರ್ಜೆ ಸಾ: ಶಹಾಬಾದ (ಹಾ.ವ) ಬಡೇಪೂರ ಕಾಲೋನಿ ಗುಲಬರ್ಗಾ ಇತನಿಗೆ ದಸ್ತಗಿರಿ ಮಾಡಿ ಕ್ರಿಕೇಟ ಬೆಟ್ಟಿಂಗ ಹಣ ಒಟ್ಟು 2,50,048/- ರೂಗಳು ನಗದು ಹಣ ಮತ್ತು 3 ಮೋಬಾಯಿಲಗಳು ವಶಪಡಿಸಿಕೊಳ್ಳಲಾಗಿದೆ. ಕ್ರಿಕೇಟ ಬುಕ್ಕಿಗಳ ಜಾಲ ಪತ್ತೆ ಹಚ್ಚುವ ಕಾರ್ಯ ಜಾರಿಯಲ್ಲಿರುತ್ತದೆ. ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯ ಗುನ್ನೆ ನಂ: 30/2012 ಕಲಂ. 78 ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

ಅಪಹರಣ ಪ್ರಕರಣ:

ಗ್ರಾಮೀಣ ಪೊಲೀಸ್ ಠಾಣೆ:ಶ್ರೀಮತಿ ಫಾತಿಮಾ ಬೇಗಂ@ ಛೋಟಿಬೀ ಗಂಡ ಮಹಮ್ಮದ ಜಾನಿಮಿಯಾ ವ;55 ಜ್ಯಾತಿ;ಮುಸ್ಲಿಂಉ;ಮನೆಕೆಲಸ ಸಾ;ದಂಡೋತಿ ತಾ;ಚಿತ್ತಾಪೂರ ಜಿ;ಗುಲಬರ್ಗಾ ಹಾವ. ನಿಯರ ನಗಮಾ ಮಜೀದ ಬುಲಂದ ಪರ್ವೆಜ ಕಾಲೂನಿ ಗುಲಬರ್ಗಾರವರು ನನ್ನ ಮಗಳು ಅಫ್ರೀನ್ ಬೇಗಂ ವಯ;17 ವರ್ಷ ಇವಳು ಟೇಲರಿಂಗ ಕಲಿಯುವ ಸಲುವಾಗಿ ನೂರಾನಿ ಮೋಹಲ್ಲಾ ಕಾಲೋನಿಗೆ ಹೋಗಿ ಬರುತ್ತಿದ್ದಳು. ದಿನಾಂಕ:07-04-2012 ರಂದು ಮುಂಜಾನೆ 9-30 ಗಂಟೆಯ ಸುಮಾರಿಗೆ ನನ್ನ ಮಗಳು ಆಫ್ರೀನ್ ಬೇಗಂ ಇವಳು ಟೇಲರಿಂಗ ಕಲಿಯುವ ಕ್ಲಾಸಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲಾ. ನಾವು ಎಲ್ಲಾ ಕಡೆ ಸಂಬಂಧಿಕರೆಲ್ಲರಿಗೆ ವಿಚಾರಿಸಲಾಗಿ ಅವಳು ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲಾ. ನಮ್ಮ ಕಾಲೋನಿಯ ಹುಡುಗ ಶಫೀ ಹೈದ್ರಾಬಾದ ವಾಲೆ ವಯ;25 ವರ್ಷ ಸಾ;ಬುಲಂದ ಪರ್ವೆಜಕಾಲೂನಿ ಗುಲಬರ್ಗಾ ಇತನು ನನ್ನ ಮಗಳನ್ನ ಜಬರ ದಸ್ತಿಯಿಂದ ಅಪಹರಿಸಿಕೊಂಡು ಹೋಗಿರಬಹುದು ಅಂತಾ ಸಂಶಯ ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಮೇಲಿಂದ ಠಾಣೆ ಗುನ್ನೆ ನಂ: 109/2012 ಕಲಂ. 366 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.