ಗ್ರಾಮೀಣ ಠಾಣೆ : ಶ್ರೀಮತಿ ಧೂಳಾಬಾಯಿ ಗಂಡ ಪಂಡಿತ ಬಂಗರಗಿ ಸಾ: ಖೂಜರಿ ತಾ:ಆಳಂದ ಜಿ: ಗುಲಬರ್ಗಾ ಇವರಮಗನಾದ
ಸುರೇಶ ಈತನು ದಿನಾಂಕ 21-08-13 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮಗ ತಾಜ ಸುಲ್ತಾನಪೂರ
ಗ್ರಾಮಕ್ಕೆ ಹೋಗಿ ತನ್ನ ಮಗಳಿಂದ ರಾಖೀ ಕಟ್ಟಿಸಿ ಕೊಂಡು ಬರುವುದಾಗಿ ಹೇಳಿ ಹೋದನು. ಆದರೆ ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ.
ಆದರೆ ಮಗ ಸುರೇಶ ಈತನು ತನ್ನ ಹೆಂಡತಿ ಮನೆಯಲ್ಲಿದ್ದಾಗ ನನಗೆ ಪೋನ ಮಾಡಿ ತಾನು ತಾಜ ಸುಲ್ತಾನಪೂರ
ಗ್ರಾಮದಲ್ಲಿ ಇರುವುದಾಗಿ ತಿಳಿಸಿದನು. ಅವನು ಎಲ್ಲಿಂದರು
ಪ್ರತಿ ದಿವಸ ಪೋನ ಮುಖಾಂತರ ನನಗೆ ತನ್ನ ಇರುವಿಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದ.
ಇಲ್ಲಿಯವರೆಗೆ ಮನೆಗೆ ಬರದೆ ಇದ್ದುದರಿಂದ ನಾವೆಲ್ಲರೂ ನಮ್ಮ ಸಂಬಂಧಿಕರಲ್ಲಿ ಮತ್ತು ನಮ್ಮ ಮಗ
ಸುರೇಶನ ಬಗ್ಗೆ ಗೆಳೆಯರಲ್ಲಿ ವಿಚಾರಿಸಿದ್ದು ಯಾವುದೇ ಉಪಯುಕ್ತ ಮಾಹಿತಿ
ಸಿಕ್ಕಿರುವುದಿಲ್ಲಾ. ನನ್ನ ಮಗ ಚಹರೆ ಪಟ್ಟಿ ಈ ರಿತಿ ಇದೆ. ಸುರೇಶ ತಂದೆ ಪಂಡಿತ ಬಂಗರಗಿ ವಯ 30 ವರ್ಷ, ಎತ್ತರ 5’6”
ಇದ್ದು ಬಲಗಾಲ ತೊಡೆ ಮೇಲೆ ಹಳೆಯ ಹುಣ್ಣಿನ ಗಾಯವಿದೆ ಪ್ಯಾಂಟ ಶರ್ಟ ಧರಿಸುತ್ತಿದ್ದು ಕನ್ನಡ
ಹಿಂದಿ ಮಾತನಾಡುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.