POLICE BHAVAN KALABURAGI

POLICE BHAVAN KALABURAGI

31 December 2013

Gulbarga District Reported Crimes

ದ್ವೀಚಕ್ರ ವಾಹನ ಕಳವು  ಪ್ರಕರಣ :
ಬ್ರಹ್ಮಪೂರ ಠಾಣೆ :  ಶ್ರೀ.ಶಿವಶರಣಯ್ಯಾ ತಂದೆ ಬಸಯ್ಯಾ ಮಠಪತಿ ಸಾ|| ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕ 30-12-2013 ರಂದು 11-30 ರಿಂದ 1200 ಗಂಟೆಯ ನಡುವಿನ ವೇಳೆಯಲ್ಲಿ ದೇವಿದಾಸ ಬ್ರದರ ಬಟ್ಟೆ ಅಂಗಡಿಯ ಎದರು ಸುಪರ ಮಾರ್ಕೆಟ ಗುಲಬರ್ಗಾ ನನ್ನ ಟಿ,ವಿ.ಎಸ್.ಎಕ್ಸಎಲ್ ಸೂಪರ ಹ್ಯಾವಿ ಡ್ಯೂಟಿ ನಂ: ಕೆ.ಎ 32-ಆರ್-3073 ಅ||ಕಿ|| 20,000/-ನೇದ್ದನ್ನು ನಿಲ್ಲಿಸಿ ಕೆನರಾ ಬ್ಯಾಂಕಿಗೆ ಹೋಗಿ ಬರುವಷ್ಟ್ರಲ್ಲಿ ಯಾರೋ ಕಳ್ಳರು ನನ್ನ ವಾಹನ ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಬಗ್ಗೆ ಎಷ್ಟು ಹುಡಕಾಡಿದರು ಸಿಕ್ಕರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.