POLICE BHAVAN KALABURAGI

POLICE BHAVAN KALABURAGI

03 April 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-04-2015 ರಂದು ಅಫಜಲಪೂರ ಪಟ್ಟಣದ ಪಾಲ್ಟೆಕ್ನಿಕ್ ಕಾಲೇಜ ಮುಂದೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣಹಚ್ಚಿ ಇಸ್ಪೇಟ ಏಲೆಗಳ ಸಾಹಾಯದಿಂದ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿ.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಪಾಲ್ಟೆಕ್ನಿಕ ಕಾಲೇಜದಿಂದ ಸ್ವಲ್ಪ ದೂರು ಹೋಗಿ, ಮರೆಯಾಗಿ ನಿಂತು ನೊಡಲು ಪಾಲ್ಟೆಕ್ನಿಕ್ ಕಾಲೇಜ ಮುಂದೆ ಲೈಟಿನ ಬೆಳಕಿನಲ್ಲಿ 05 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ನಮ್ಮ ಸಿಬ್ಬಂದಿ ಜನರು ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ,  05 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಸಂತೋಶ ತಂದೆ ಶಂಕರ ಚಲವಾದಿ 2) ಸಂತೋಶ ತಂದೆ ಸಿದ್ದಣ್ಣಾ ಬಿಲ್ಯಾಡ 3) ದತ್ತು ತಂದೆ ಹಣಮಂತ ಕೋರಿ 4) ಶಿವಪ್ಪಾ ತಂದೆ ಭೀಮಶಾ ಸಿಂಗೆ 5) ಲಕ್ಷ್ಮೀಪುತ್ರ ತಂದೆ ಪರೆಪ್ಪಾ ಬಳೂರಗಿ ಸಾ|| ಎಲ್ಲರು ಅಫಜಲಪೂರ ಅಂತಾ ತಿಳಿಸಿದ್ದು  ಸದರಿಯವರಿಂದ ಜೂಜಾಟಕ್ಕೆ ಬಳಸಿದ  52 ಇಸ್ಪೆಟ ಎಲೆಗಳು ನಗದು ಹಣ 3860/- ರೂ ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. .
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಧರ್ಮಣ್ಣಾ ತಂದೆ ಭೀಮಶ್ಯಾ ಭೀಮಳ್ಳಿ ಸಾ:ಪಟ್ಟಣ ತಾ:ಜಿ:ಕಲಬುರಗಿ  ಇವರು ದಿನಾಂಕ:-02/03/2015 ರಂದು ರಾತ್ರಿ ಪಟ್ಟಣ ಗ್ರಾಮದ ಬಸವಂತರಾಯ ಇವರ ಹೋಲದಲ್ಲಿ ಫಿರ್ಯಾದಿ ಹೆಂಡತಿ ಮತ್ತು ತಾಯಿ ಇಬ್ಬರು ಕೂಡಿಕೊಂಡು ಸಂಡಾಸಕ್ಕೆ ಹೋಗುತ್ತಿದ್ದಾಗ ಆಗ ಲಕ್ಷಿಕಾಂತ ಇತನು ನಮ್ಮ ಮಾಲಿಕರ ಹೋಲದಲ್ಲಿ ಸಂಡಾಸಕ್ಕೆ ಯಾಕೇ ಬಂದಿದಿರಿ ಅಂತಾ ಬಾಯಿ ಮಾತಿನ ತಕರಾರು ಮಾಡುತ್ತಿದ್ದಾಗ ಆಗ ಫಿರ್ಯಾದಿ ವಿಚಾರಿಸಲು ಹೋದಾಗ 1. ಲಕ್ಷ್ಮಿಕಾಂತ ತಂದೆ ಮಾರುತಿ ನಾಯಿಕೋಡಿ 2. ರಾಚಣ್ಣಾ ತಂದೆ ಶಿವಶರಣಪ್ಪ ನಾಯಿಕೋಡಿ 3. ಚಂದ್ರು ತಂದೆ ಶರಣಪ್ಪ ನಾಯಿಕೋಡಿ 4. ಮಹಾದೇವಪ್ಪ ತಂದೆ ಸಿದ್ದಣ್ಣಾ ನಾಯಿಕೋಡಿ 5. ಶರಣಬಸಪ್ಪ ತಂದೆ ಸಿದ್ದಣ್ಣಾ ನಾಯಿಕೋಡಿ ಸಾ: ಎಲ್ಲರು ಪಟ್ಟಣ ತಾ:ಜಿ:ಕಲಬುರಗಿ ಎಲ್ಲರು  ಕೂಡಿಕೊಂಡು ಜಗಳ ತೆಗದು ಮಾದಿಗ ಸೂಳೇ ಮಕ್ಕಳದು ಬಹಳ ಆಗಿದೆ ಅಂತಾ ಜಾತಿ ಎತ್ತಿ ಬೈಯ್ದ ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡುತ್ತಿದ್ದಾಗ ಬೀಡಿಸಲು ಬಂದ ಫಿರ್ಯಾದಿ ತಾಯಿಗೆ ಕೈ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಹೊಡೆ ಬಡೆ ಮಾಡಿ ಜಗಳ ನಂತರ ಸದರಿ ಆರೋಪಿತರೆಲ್ಲರೂ ಇನ್ನೊಮ್ಮೆ ಈ ಹೋಲಕ್ಕೆ ಸಂಡಾಸಕ್ಕೆ ಬಂದರೇ ನಿಮಗೆ ಗಳ್ಯಾದ ದಿಂಡಿಗೆ ಹಚ್ಚಿ ಕೊಡಲಿಯಿಂದ ಕಡಿಯುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಬಸಪ್ಪ ತಂದೆ ಪರಮೇಶ್ವರ ಮೇಳಕುಂದಿ  ಸಾ: ಕೊಳಕೂರ ತಾ: ಜೇವರ್ಗಿ ಜಿ: ಕಲಬುರಗಿ ರವರು ದಿನಾಂಕ 02-04-2015 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಹೆಂಡತಿ ವಿಜಯಲಕ್ಷ್ಮಿ ಇವಳಿಗೆ ಕಲಬುರಗಿ ಚಿಣಮಗೇರಿ ಆಸ್ಪತ್ರೆಯಲ್ಲಿ ತೋರಿಸುವ ಸಲುವಾಗಿ ನಮ್ಮೂರಿನಿಂದ ನಾನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂಬರ ಕೆಎ-32 ಇಎಫ-8417 ನೇದ್ದರ ಮೇಲೆ ಕೂಡಿಸಿಕೊಂಡು ಕಲಬುರಗಿ ರಾಮ ಮಂದಿರ ರಿಂಗ ರೋಡ ಮುಖಾಂತರವಾಗಿ ಆರ್.ಪಿ. ಸರ್ಕಲ ಕಡೆಗೆ ಹೋಗುವಾಗ ದಾರಿ ಮದ್ಯ ಬಂಜಾರ ಕ್ರಾಸ್ ಸಮೀಪವಿರುವ ಪೆಟ್ರೊಲ ಪಂಪ ಎದುರಿನ ರೋಡ ಮೇಲೆ ಹಿಂದಿನಿಂದ ಸಂಜಯ ಇತನು ತಾನು ಚಲಾಯಿಸುತ್ತಿರುವ ಎನ್.ಈ.ಕೆ.ಆರ್.ಟಿ.ಸಿ ಬಸ ನಂಬರ ಕೆಎ-32 ಎಫ-1546 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ನನ್ನ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬಸ ಮುಂದಿನ ಗಾಲಿಯು ನನ್ನ ಎಡಗಾಲಿಗೆ ಹಾಯಿಸಿ ನನ್ನ ಎಡಗಾಲಿನ ಮೊಳಕಾಲ ಕೆಳಗೆ ಭಾರಿಗುಪ್ತಪೆಟ್ಟು ತರಚಿದಗಾಯ, ಹಾಗು ಎಡ ತೊಡೆಗೆ ಗುಪ್ತಗಾಯ, ಎಡಗಾಲ ರಿಸ್ಟ ಹತ್ತಿರ ತರಚಿದಗಾಯ, ಹಾಗು ನನ್ನ ಹೆಂಡತಿಗೆ ಎಡ ಟೊಂಕಿಗೆ ಮತ್ತು ಎಡತೊಡೆಗೆ ಗುಪ್ತಪೆಟ್ಟುಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.