POLICE BHAVAN KALABURAGI

POLICE BHAVAN KALABURAGI

17 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಮುನಯ್ಯಾ ತಂದೆ ವೆಂಕಯ್ಯಾ ಗುತ್ತೇದಾರ ಸಾ;ಸಾವಳಗಿ ಸ್ಟೇಶನ ತಾ;ಜಿ;ಕಲಬುರಗಿ ರವರು ದಿನಾಂಕ.16-12-2018 ರಂದು ಮುಂಜಾನೆ ಸ್ಟೇಶನ ಸಾವಳಗಿಯಿಂದ  ಕಲಬುರಗಿಗೆ ನನ್ನ ಮೋಟಾರ ಸೈಕಲ್ ಮೇಲೆ ಬರುತ್ತಿರುವಾಗ  ಪಟ್ಟಣ್ಣ ಕ್ರಾಸದಾಟಿ ಮುಂದೆ ರಾಜಸ್ಥಾನ ದಾಬ, ಮತ್ತು ಬಿರಾದರ ಪೆಟ್ರೋಲ್ ಪಂಪ ಸಮೀಪ ಆಳಂದ ರೋಡಿಗೆ  ಮುಂಜಾನೆ 9-00 ಗಂಟೆಯ ಸುಮಾರಿಗೆ ಒಬ್ಬ ವ್ಯಕ್ತಿಯ ಮೇಲೆ ಯಾವುದೋ ಒಂದು ಭಾರವಾದ  ವಾಹನವು ಆತನ ಮೈಮೇಲಿಂದ ಹಾಯ್ದು ಹೋಗಿರುತ್ತದೆ ಅಂತಾ ಜನರು ಸೇರಿ ನೋಡುತ್ತಿದ್ದರು ಆಗ ನಾನು ಮತ್ತು ನನ್ನಂತೆ ನನಗೆ ಪರಿಚಯದವರಾದ ಸಂಜುಕುಮಾರ ತಂದೆ ನಾಗಪ್ಪಾ ಕಮ್ಮನ ಸಾ;ಪಟ್ಟಣ ಇಬ್ಬರೂ ಕೂಡಿಕೊಂಡು ನೋಡಲು ಒಬ್ಬ ಅಪರಿಚಿತ ವ್ಯಕ್ತಿ ಇದ್ದು ಆತನ ವಯಸ್ಸು ಅಂದಾಜು 25-30 ವರ್ಷ ದವನಿದ್ದು ಕಪ್ಪು ಮೈಬಣ್ಣ ದಿದ್ದವನಾಗಿದ್ದು ಆತನ ಮೈ ಮೇಲೆ ಭಾರಿವಾಹನ ಹಾಯ್ದು ಹೋಗಿದ್ದರಿಂದ ಮುಖ ಪೂರ್ತೆ ಜಜ್ಜಿ ಹೋಗಿದ್ದು ವಿರೂಪವಾಗಿರುತ್ತದೆ ತಲೆಗೂ ಕೂಡಾ ಭಾರಿಗಾಯವಾಗಿ ಜಜ್ಜಿಹೋಗಿದ್ದು ಮುಖ ಮತ್ತು ತಲೆಯಲ್ಲಿನ ಮಾಂಸ ಖಂಡಗಳು ಹೋರಬಂದಿರುತ್ತವೆ. ಹಾಗೂ ಬೆನ್ನ,ಟೊಂಕ, ಹೊಟ್ಟೆ ಮೇಲೆ ಭಾರಿಗುಪ್ತ ಪೆಟ್ಟಾಗಿದ್ದು ಮೂಳೆಗಳು ಮುರಿದಂತೆ ಕಂಡುಬಂದಿದ್ದು ಹೊಟ್ಟೆಯ ಕೆಳಬಾಗದಲ್ಲಿ ಭಾರಿಗಾಯಗಳಾಗಿ ಮಾಂಸ ಖಂಡಗಳು ಹೊರಬಂದಿರುತ್ತವೆ. ಹಾಗೂ ಬಲತೋಡಯಿಂದ ಭಾರಿಗಾಯಗಳಾಗಿ ಮಾಂಸಖಂಡಗಳು ಹೋರಬಂದಿರುತ್ತವೆ. ಹಾಗೂ ಗುದದ್ವಾರದಿಂದ ಮಾಂಸಖಂಡ ಹೊರಬಂದಿರುತ್ತವೆ. ಮೃತನ ಮೈ ಮೇಲೆ ಒಂದು ನೀಲ ಬಣ್ಣದ ಅದರಲ್ಲಿ ಕಪ್ಪು ಮತ್ತು ಕೆಂಪು ಲೈನಿಂಗ ಇರುವ ಟಾವೆಲ ಇರುತ್ತದೆ. ಸದರಿಯವನು ಯಾರೂ ಅನ್ನುವ ಬಗ್ಗೆ ಗೊತ್ತಾಗಿರುವದಿಲ್ಲಾ  ಸದರಿ ಅಪಘಾತ ಘಟನೆಯು ದಿನಾಂಕ. 15-12-2018 ರಂದು ರಾತ್ರಿ ಅಂದರೆ 11-00 ಪಿ.ಎಂ. ದಿಂದ ದಿನಾಂಕ. 16-12-2018 ರಂದು 8-00 ಎ.ಎಂ. ಮದ್ಯದ ಅವಧಿಯಲ್ಲಿ ಜರುಗಿರುತ್ತದಂತೆ ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ.ಮಲ್ಲಿನಾಥ ತಂದೆ ಮಹಾಂತಗೌಡ ಮಾಲಿಪಾಟೀಲ್ ಮುಡಬೂಳ ತಾ;ಚಿತ್ತಾಪೂರ ಜಿಲ್ಲಾ; ಕಲಬುರಗಿ ರವರ ಮಗಳಾದ ಕಾವೇರಿಗೆ ಉದನೂರ ಗ್ರಾಮದ ಬಸವರಾಜನಿಗೆ  ದಿನಾಂಕ.28-5-2017 ರಂದು ಜನರ ಸಮಕ್ಷಮ ನಮ್ಮ ಧಾರ್ಮಿಕ ಪದ್ದತಿಯಂತೆ ಮುಡಬೂಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮದುವೆ ಮಾಡಿಕೊಟ್ಟು ಜನರ ಸಮಕ್ಷಮ ಊಡುಗರೆಯಾಗಿ 4 1/2 ತೊಲೆಬಂಗಾರ ಹಾಗು 51000/-ಸಾವಿರ ರೂಪಾಯಿಗಳು ಹಾಗೂ ಗೃಹ ಬಳಕೆಯ ವಸ್ತುಗಳು ಕೊಟ್ಟಿರುತ್ತವೇ. ಹೀಗಿದ್ದು ಮದುವೆಯಾದ ನಂತರ ನನ್ನ ಮಗಳು ಮತ್ತು ಗಂಡ 6 ತಿಂಗಳವರೆಗೆ ಚನ್ನಾಗಿದ್ದು ನಂತರದ ದಿನಗಳಲ್ಲಿ ನನ್ನ ಮಗಳ ಗಂಡ ಬಸವರಾಜ ಕುಡಿಯುವ ಚಟದವನಾಗಿದ್ದು ನನ್ನ ಮಗಳಿಗೆ ತವರು ಮನೆಯಿಂದ ಬಂಗಾರ ಮತ್ತು ಹಣ ತೆಗೆದುಕೊಂಡು ಬಾ ಅಂತಾ ದೈಹಿಕ ಮತ್ತು ಮಾನಸಿಕವಾಗಿ ಕಿರಕುಳ ನೀಡುತ್ತಾ ಬಂದಿದ್ದು ಅವನಂತೆ ಅವಳ ಅತ್ತೆ ಪಾರ್ವತಿ ಭಾವ ಸಿದ್ದಾರೋಡ ಅರುಣ ಶಿವಕುಮಾರ ಹಾಗೂ ಅರುಣನ ಹೆಂಡತಿ ರೇಣುಕಾಹಾಗೂ ಶಿವುಕುಮಾರನ ಹೆಂಡತಿ ಪೂಜಾ , ಮತ್ತು ಸಿದ್ದಾರೂಡನ ಹೆಂಡತಿಯಾದ ಚಂದಮ್ಮಾ ಇವರೆಲ್ಲರೂ ಸೇರಿ ನನ್ನ ಮಗಳಿಗೆ ದಿನಾಲು ಮನೆಯಲ್ಲಿ  ವರದಕ್ಷಿಣ ತರುವಂತೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೀರಕುಳ ನೀಡುತ್ತಾ ಬಂದಿದ್ದು ಸದರಿ ವಿಷಯವನ್ನು ನನ್ನ ಮಗಳು ತವರು ಮನೆಗೆ ಬಂದಾಗ ಅವರು ಅವರು ಕಿರಕುಳ ನೀಡುವ ವಿಷಯತಿಳಿಸಿದಾಗ ನಾನು ನನ್ನ ಹೆಂಡತಿ ಆಕೆಯ ಗಂಡನ ಮನೆಗೆ ಹೋಗಿ ಸದ್ಯ ನಮಗೆ ಹಣ ಬಂಗಾರ ಕೋಡಲು ಆಗುವದಿಲ್ಲಾ ಅಂದಾಗ  ನಮ್ಮೊಂದಿಗೂ ಸಹ ಜಗಳ ತೆಗೆದು ನಿಮ್ಮ ಮಗಳಿಗೆ ಕರೆದುಕೊಂಡು ಹೋಗಿ ಎಂದು ಬೆದರಿಕೆ ಹಾಕಿರುತ್ತಾರೆ. ನಂತರ ನನ್ನ ಮಗಳು ಹೆರಿಗೆ ಗೋಸ್ಕರ ತವರು ಮನೆಗೆ ಕರೆದು ಕೊಂಡು ಹೋಗಿದ್ದು 5 ತಿಂಗಳ ಹಿಂದೆ 1 ಗಂಡು ಮಗುವಾಗಿದ್ದು ಆ ಮಗವಿನ ಹೆಸರು ಅಂಬರಾಯ ಎಂದು ನಾಮಕರಣ ಮಾಡಿದ್ದು ನನ್ನ ಮಗಳು 5 ತಿಂಗ ತವರು ಮನೆಯಲ್ಲಿ ಇದ್ದಾಗ ನನ್ನ ಮಗಳ ಗಂಡ ಅತ್ತೆ ಭಾವಂದಿಯರು ನೀನು ಗಂಡನ ಮನೆಗೆ ಬರುವದಾದರೆ ವರದಕ್ಷಣೆ ತೆಗೆದುಕೊಂಡು ಬರಬೇಕೆಂದು ಫೋನನಲ್ಲಿ ಪೀಡಿಸುತಿದ್ದರು ದಿನಾಂಕ.10-12-2018 ರಂದು ರಾತ್ರಿ.7-30ಕ್ಕೆಬಂದು ಭಾವನಾದ ಅರುಣಕುಮಾರ ಕರೆದುಕೊಂಡು ಹೋಗಿರುತ್ತಾನೆ. ಅಂದಿನಿಂದ ನಾವು ಸುಮಾರು ಬಾರಿ ಫೋನ ಮಾಡಿದರೂ ನಾನು ಹೊರಗಡೆ ಇದ್ದೇನೆ ಎಂದು ಸುಳ್ಳು ಹೇಳುತ್ತಾ ಮಗಳೊಂದಿಗೆ ಮಾತನಾಡಲು ಕೋಡುತ್ತಿರಲಿಲ್ಲಾ. ದಿನಾಂಕ.15-12-2018 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನನ್ನ ಮಗನಿಗೆ ಫೋನ ಮಾಡಿ ಅರುಣ ಫೋನ ಮಾಡಿ ತಿಳಿಸಿದ್ದೇನೆಂದರೆ ಗಾಬರಿಯಿಂದ ನೀವು ತುರ್ತಾಗಿ ನಮ್ಮ ಮನೆಗೆ ಬರಲು ತಿಳಿಸಿದ್ದಾಗ ನಾವು ಗಾಬರಿಯಾಗಿ ನನ್ನ ಮಗಳಿಗೆ ಎನಾಧರೂ ಆತರಬಹುದೆಂದು ನಾನು ನನ್ನ  ಮಗ ಹಾಗು ನಮ್ಮ ಗ್ರಾಮದ ನೀಲಕಂಠ ಪಾಟೀಲ್, ಚನ್ನಬಸ್ಸಪ್ಪಾ ಬಟಗೇರಿ ಹಾಗೂ ಇತರರು  ಕೂಡಿ ಕೊಂಡು ನನ್ನ ಮಗಳ ಗಂಡನ ಮನೆಗೆ ಬಂದು ನೋಡಲು ಅವಳ ಮನೆಯ  ಮಹಡಿಯ ಮೇಲೆ ಇರುವ ಒಂದು ಕೋಣೆಯ ಫ್ಯಾನಿಗೆ ಸೀರೆಯಿಂದ ನೇಣು ಬೀತದ ಸ್ಥಿತಿಯಲ್ಲಿ ಇತ್ತು ಆಗ ನಾವು ಪರೀಶಿಲಿಸಿ ನೋಡಲಾಗಿ ನಮ್ಮ ಮಗಳಿಗೆ ವರದಕ್ಷಿಣೆ ಕಿರಕುಳದಿಂದಾ ಹೊಡೆಬಡಿ ಮಾಡಿಕೊಲೆ ಮಾಡಿ ಸಾಕ್ಷಿನಾಶ ಪಡಿಸಲು ಕುತ್ತಿಗೆಗೆ ಸೀರೆಯಿಂದ ಬೀತದು ಕೊಲೆ ಮಾಡಿರುತ್ತಾರೆ. ಅದರಿಂದ ನನ್ನ ಮಗಳಿಗೆ ವರದಕ್ಷಣೆ ತರುವಂತೆ  ದಿನಾಲು ಪೀಡಿಸುತ್ತಾ  ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೀರಕುಳ ನೀಡಿ ನಿನ್ನೆ ದಿನಾಂಕ. 15-12-2018 ರಂದು ಮದ್ಯಾನ 3-00 ಗಂಟೆಯಿಂದ 4-30 ಮದ್ಯದ ಅವಧಿಯಲ್ಲಿ ನನ್ನ ಮಗಳಿಗೆ ಕೊಲೆ ಮಾಡಿ ನೇಣು ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.