POLICE BHAVAN KALABURAGI

POLICE BHAVAN KALABURAGI

18 July 2016

Kalaburagi District Reported Crimes

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ದಿನಾಂಕ:16/07/2016 ರಂದು ಶ್ರೀಮತಿ  ಭಾಗ್ಯಶ್ರೀ ಗಂಡ ವಿಠ್ಠಲ ಗಾಣಗಾಪೂರ ಸಾ:ಸ್ವಾಮಿ ವಿವೇಕಾನಂದ ಕಾಲೋನಿ ಆಳಂದ ರಸ್ತೆ ಕಲಬುರಗಿ ಇವರ ಇಸ್ತ್ರೀ ಅಂಗಡಿಗೆ ನಮ್ಮ ಬಡಾವಣೆಯ ರವಿ ತಂದೆ ರಾಮಣ್ಣಾ ಗಣೇರ ಎಂಬುವನು ಬಂದು ತನ್ನ ಮೈಮೇಲಿನಿಂದ ಅಂಗಿ ತಗೆದು ಇಸ್ತ್ರೀ ಹೊಡೆದು ಕೊಡು ಅಂತಾ ಹೇಳಿದಾಗ ನಾನು ಮೈಮೇಲೆ ಹಾಕಿಕೊಂಡು ಬಟ್ಟೆಯನ್ನು ಇಸ್ತ್ರೀ ಹೊಡೆಯುವದಿಲ್ಲಾ ನೀವು ಒಗೆದಿರುವ ಬಟ್ಟೆಯನ್ನು ಕೊಡಿರಿ ನಾನು ಇಸ್ತ್ರೀ ಹೊಡೆದು ಕೊಡುತ್ತೇನೆ ಅಂತಾ ಹೇಳಿದಾಗ ಅವನು ಏ ರಂಡಿ ಭೋಸಡಿ ನೀನು ಏಕೆ ನನ್ನ ಮೈಮೇಲಿನ ಶರ್ಟಗೆ ಏಕೆ ಇಸ್ತ್ರಿ ಹೊಡೆಯುವದಿಲ್ಲಾ ಅಂತಾ ನನ್ನ ಜೊತೆ ಜಗಳಕ್ಕೆ ಬಿದ್ದು ಕೈಯಿಂದ ಬೆನ್ನಿನ ಮೇಲೆ ಹೊಟ್ಟೆಯ ಮೇಲೆ ಹೊಡೆದು ಕೈ ಹಿಡಿದು ಎಳೆದಾಡಿ ಮತ್ತು ತಲೆ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ಮತ್ತು ಒಂದು ಬಡಿಗೆಯಿಂದ ನನ್ನ ಎರಡು ಮೊಳಕಾಲುಗಳ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತು ಕೈಯಿಂದ ಬಲ ಗಲ್ಲದ ಮೇಲೆ ಹೊಡೆದಿರುತ್ತಾನೆ ಆಗ ಇದನ್ನು ನೋಡಿ ರಸ್ತೆಗೆ ನಡೆದುಕೊಂಡು ಹೋಗುತ್ತಿರುವ ಚಿದಾನಂದ ಹೊಡ್ಡಿನ ಮನಿ ಮತ್ತು ನನ್ನ ತಮ್ಮ ಇವರು ಬಿಡಿಸಲು ಬಂದಾಗ ನನ್ನ ತಮ್ಮನಿಗೆ ಏ ಭೋಸಡಿ ಮಗನೆ ಮಲ್ಲಿಕಾರ್ಜುನ ನಿನ್ನ ಸುದ್ದಿ ಏನಿದೆ ಸೂಳೆ ಮಗನೆ ಅಂತಾ ಒಂದು ಕಲ್ಲು ತೆಗೆದುಕೊಂಡು ನನ್ನ ಬಲ ಗಲ್ಲದ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತೆ ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಚಿದಾನಂದ ಹೊಡ್ಡಿನ ಮನಿ ಇವನು ಬಿಡಿಸಿರುತ್ತಾನೆ. ಇಲ್ಲದಿದ್ದರೆ ಅವನು ನನಗೆ ಮತ್ತು ನನ್ನ ತಮ್ಮನಿಗೆ ಬಹಳ ಹೊಡೆಬಡೆ ಮಾಡುತ್ತಿದ್ದನು. ಕಾರಣ ನನಗೆ ಮತ್ತು ನನ್ನ ತಮ್ಮನಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ದೇವಿಂದ್ರಪ್ಪಾ  ತಂದೆ ಸೈಬಣ್ಣಾ ದೊಡ್ಡಮನಿ ಸಾ:ಮಿಣಜಗಿ ಇವರ  ಕಿರಿಯ ಮಗನಾದ  ಸೂರ್ಯಕಾಂತ ಈತನು  4 ವರ್ಷಗಳ ಹಿಂದೆ ಅಕಾಲಿಕವಾಗಿ ಮರಣ ಹೊಂದಿರುತ್ತಾನೆ.  ಈತನ ಹೆಂಡತಿಯಾದ ಭಾಗ್ಯಶ್ರೀ ಇವಳಿಗೆ ನಾನು  ಅವಳ ಪಾಲಿಗೆ ಬರುವ ಹೊಲ (ಜಮೀನು) ಹಂಚಿಕೊಟ್ಟಿರುತ್ತೇನೆ & ನನ್ನ ಹಾಗೂ ನನ್ನ ಹೆಂಡತಿಯ ಉಪಜೀವನಕ್ಕಾಗಿ ನಾನು 3 ಎಕರೆ ಹೊಲ ನನ್ನ ಹೆಸರಿಗೆ ಇಟ್ಟುಕೊಂಡಿರುತ್ತೇನೆ.ಆದರೆ ನನ್ನ ಸೊಸೆಯಾದ ಭಾಗ್ಯಶ್ರೀ  ಇವಳು ಆಗಾಗ ನನ್ನ ಹೆಸರಿಗೆ ಇರುವ 3 ಎಕರೆ ಹೊಲದಲ್ಲಿ  ಅರ್ದ ಹೊಲ ತನ್ನ ಹೆಸರಿಗೆ ಮಾಡು ಅಂತಾ ತಕರಾರು ಮಾಡುತ್ತಾ ಬಂದಿರುತ್ತಾಳೆ ಆದರೆ ನಾನು ಅವಳಿಗೆ ನಾನು ನನ್ನ ಹೆಂಡತಿ ಇರುವವರಗೆ 3 ಎಕರೆ ಹೊಲನಮ್ಮ ಹೆಸರಿಗೆ ಇಟ್ಟುಕೊಳ್ಳುತ್ತೇವೆ ನಮ್ಮ ಮರಣದ ನಂತರ ಇಬ್ಬರು ಹಂಚಿಕೊಳ್ಳಿರಿ ಅಂತಾ ಹೇಳುತ್ತಾ  ಬಂದಿರುತ್ತೇನೆ. ಮೊನ್ನೆ ದಿನಾಂಕ 14/07/2016 ರಂದು ರಾತ್ರಿ 8 ಪಿಎಮ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ಸದರಿ ನ್ನ ಸೊಸೊ ಭಾಗ್ಯಶ್ರೀ  ಇವನು ತನ್ನ ಸಹೋದರರಾದ ಶರಣಪ್ಪ ತಂದೆ ರಾಮಣ್ಣ ನಿಂಬರ್ಗಿ, ಶಂಖಪ್ಪಾ ತಂದೆ ರಾಮಣ್ಣ ನಿಂಬರ್ಗಿ , ಮಿಠಾಬಾಯಿ ಗಂಡ ಶಂಖಪ್ಪಾ, ಮಲ್ಲಮ್ಮ ಗಂಡ ರಾಮಣ್ಣಾ ನಿಂಬರ್ಗಿ ಸಾ: ಎಲ್ಲರೂ ಕಡಣಿ (ಕಣ್ಣಿ)  ತನ್ನ ಅಕ್ಕ ಶೆಟ್ಟೆಮ್ಮಾ ಗಂಡ ಹಣಮಂತ ಸಾ: ಸುಲ್ತಾನಪೂರ ಇವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದವಳೇ ನನಗೆ ಏ ರಂಡಿ ಮಗನೇ  ದೇವ್ಯಾ ನೀನು ನಿನ್ನ ಹೆಸರಿಗೆ ಇರುವ  3 ಎಕರೆ  ಹೊಲದಲ್ಲಿ  ಅರ್ದ ಭಾಗ್ಯಶ್ರೀ  ಇವಳ ಹೆಸರಿಗೆ ಮಾಡಿದರೆ ಸರಿ ಇಲ್ಲಾ ಅಂದ್ರ ನಿನಗೆ ಜೀವ ಸಹಿತ ಬಿಡುವುದಿಲ್ಲಾ  ಅಂತಾ ಜೀವದ ಬೆದರಿಕೆ ಹಾಕಿ ನನ್ನನ್ನು ಮನೆಯಿಂದ  ಎಳೆದು ಹೊರಗೆ ತಂದು ಭಾಗ್ಯಶ್ರೀ & ಶಂಕಪ್ಪಾ ಇವರು ನನಗೆ ಹಿಡಿದಿದ್ದು ಶೇಖಪ್ಪಾ ಇತನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ.  ಮಿಠಾಬಾಯಿ ಇವಳು ನನಗೆ ಕೈಯಿಂದ ಕಪಾಳಕ್ಕೆ ಹೊಡೆದಿದ್ದಾಳೆ ಮಲ್ಲಮ್ಮಾ  & ಶೆಟ್ಟೆಮ್ಮಾ  ಇವರಿಬ್ಬರೂ  ಹೋಡಿರಿ ಈ ಹಂಟ್ಯಾನಿಗೆ ಅಂತಾ ಪ್ರಚೋದನೇ  ನೀಡಿರುತ್ತಾರೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 16/07/16 ರಂದು ಮನೆಯಲ್ಲಿ ಊಟ ಮಾಡಿಕೊಂಡು ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತ್ತಾಗ ನನಗೆ ಪರಿಚಯದವನಾದ ವಿಜಯಕುಮಾರ ಎಂಬುವವನು ತನ್ನ ಮೋಟಾರ ಸೈಕಲ ಮೇಲೆ ನನ್ನಲ್ಲಿಗೆ ಬಂದು ನಿನ್ನ ಹತ್ತಿರ 5 ನಿಮಿಷ್ಯ ಮಾತಾಡುವುದು ಇದೆ ನನ್ನ ಜೋತೆಯಲ್ಲಿ ಬನ್ನಿರಿ ಎಂದು ಹೇಳಿದನು ನಾನು ಏನು ಮಾತಾಡುವುದು ಇದೆ ಎಂದು ಕೆಳಿದಕ್ಕೆ ನಾನು ಅವನ ಹಿಂದೆ ಮೋಟಾರ ಸೈಕಲ ಮೇಲೆ ಕುಳಿತು ಅವನ ಗೆಳೆಯರೊಂದಿಗೆ ಹೊರಟೇವು ನನಗೆ ಶಹಾಬಜಾರದ ಲಾಲಹನುಮಾನ ಗುಡಿಯ ಹಿಂದುಗಡೆ ರುದ್ರಭೂಮಿಯಲ್ಲಿ ಕರೆದುಕೊಂಡು ಹೋಗಿ ಭೋಸಡಿ ಮಗನೆ ನಿಮ್ಮಗೆ ಸೊಕ್ಕು ಬಹಳ ಬಂದಿದೆ ಎಂದು ವಿಜಯಕುಮಾರ ಹೇಳಿ ಬೈಯುತ್ತಿದ್ದಾಗ ಅವನ ಹಿಂದೆ ಇದ್ದ ಸಂದೀಪ ಎಂಬುವವನು ಕೈಮುಷ್ಠಿಮಾಡಿ ನನ್ನ ಮುಖದ ಎಡಗಡೆ ಜೋರಾಗಿ ಹೊಡೆದು ರಕ್ತಾಗಾಯ ಮಾಡಿದನು ಅವನ ಇನ್ನೊಬ್ಬ ಗೆಳೆಯನಾದ ಕರಿಚಿರತೆ ಎಂಬುವವನು ಜೋರಾಗಿ ಎಡಗಡೆ ಟೊಂಕದ ಮೇಲೆ ಕಲ್ಲಿನಿಂದ  ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ವಿಜಯಕುಮಾರ ಎಂಬುವವನು ಬಿಡಬೇಡ ಈ ಮಗನಿಗೆ ಎಂದು ಹೇಳಿ ಕಲ್ಲಿನಿಂದ ಬೆನ್ನಲ್ಲಿ ಜೋರಾಗಿ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಆಗ ನಾನು ಕೂಗಾಡುವುದು ಚಿರಾಡುವುದು ಮಾಡುತ್ತಿದ್ದಾಗ ಬೋಸಡಿ ಮಗನೆ ಇಲ್ಲಿ ನಿನಗೆ ಯಾರು ಬಿಡಿಸಲು ಬರುವುದಿಲ್ಲಾ ಎಷ್ಟು ಕೂಗಾಡುತ್ತಿ  ಕೂಗಾಡು ಅಂತಾ ಹೇಳುತ್ತಾ ನನ್ನ ಜೇಬಿನಲ್ಲಿದ್ದ 2 ಸ್ಯಾಮಸಾಂಗ ಮೋಬಾಯಿಲ ಮತ್ತು 2300 ರೂ ಗಳು ವಿಜಯಕುಮಾರ ಎಂಬುವವನು ತೆಗೆದುಕೊಂಡು ಎಡ ಕಪಾಳ ಮೇಲೆ ಹೊಡೆಯುತ್ತಿದ್ದಾಗ ಅಷ್ಟರಲ್ಲಿ ನನ್ನ ಅಣ್ಣಂದಿರಾದ ಶರಣಬಸಪ್ಪ ತಂದೆ ವೀರಣ್ಣ ಕಲಶೇಟ್ಟಿ ಮತ್ತು ಶಾಂತಯ್ಯಾ ತಂದೆ ಶಂಕ್ರಯ್ಯಾ ಭಾಸಗಿಮಠ ಇವರು ನಮ್ಮ ತಮ್ಮನಿಗೆ ಏಕೆ ಹೊಡೆಯುತ್ತಿದ್ದಿರಿ ಎಂದು ಹೇಳುತ್ತಾ ಬರುತ್ತಿದ್ದಾಗ ನನಗೆ ವಿಜಯಕುಮಾರ ಮಗನೆ ನೀನು ಹೇಗೆ ನಿನ್ನ ಓಣೆಯಲ್ಲಿ ಸಂಸಾರ ಮಾಡುತ್ತಿ ಎಂದು ಜೀವದ ಬೇದರಿಕೆ ಹಾಕಿ  ಅಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ :ಶ್ರೀ ಬಿಂದುಪ್ರಸಾದ ತಂದೆ ಕಮತಪ್ರಸಾದ ಸಾ : ಶಾಹಾಬಾದ ರವರು ದಿನಾಂಕ 17-07-2016 ರಂದು ಜೇವರಗಿಗೆ ಹೋಗುವಾಗ  ಮೊಟಾರ ಸೈಕಲ್ ನಂ ಕೆಎ – 32 ಓ – 124 ನೇದ್ದರ ಸವಾರನಾದ ಪ್ರೇಮಜಿ ಆನಂದರಾವ ಡಗೋಡೆ ಸಾ ಶಾಹಾಬಾದ ರವರು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನ್ನು ಅತೀವೇಗ ಅಜಾಗರುಕತೆಯಿಂದ ನಡೆಸಿ ಸ್ಕಿಡ್ ಆಗಿ ಬಿದ್ದು ತಲೆಗೆ ಬಾರಿಪೆಟ್ಟಾಗಿದ್ದು  ಉಪಚಾರ ಕುರಿತು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.