POLICE BHAVAN KALABURAGI

POLICE BHAVAN KALABURAGI

02 May 2016

Kalaburagi District Reported Crimes

ಅತ್ಯಾಚಾರ ಪ್ರಕರಣ :
ಯಡ್ರಾಮಿ ಠಾಣೆ : ಫಿರ್ಯಾದಿಯ ತಂದೆಯವರು ಇಗ ಸುಮಾರು 15-16 ವರ್ಷಗಳ ಹಿಂದೆ ಮೃತ ಪಟ್ಟಿದ್ದು. ನನ್ನ ತಂಗಿ ಕುಮಾರಿ ಇವಳು ನಮ್ಮ ಮನೆಯವರೆಲ್ಲರಿಗೂ ಹೇಳಿದ್ದೆನೆಂದರೆ ಇಗ ಕೆಲವು ತಿಂಗಳಿಂದ ನಾನು ಬಯಲು ದಸೇಗೆ ಹೋದಾಗೆಲ್ಲ ನಮ್ಮೂರಿನ ಬಸವರಾಜ ತಂದೆ ಮಹಾಂತಪ್ಪ ದೊಡ್ಡಮನಿ ಇತನು ನನಗೆ ಲೈಗಿಂಕ ಉದ್ದೆಶದಿಂದ  ಹಿಂಬಾಲಿಸುವದು, ಕೈ ಸನ್ನೆ ಮಾಡಿ ಕರೆಯುವದು, ನನಗೆ ಮದುವೆ ಮಾಡಿಕೊ ಪುಸಲಾಯಿಸಿ ಪಿಡಿಸುತ್ತಿದ್ದ ಅಂತಾ ನನ್ನ ತಂಗಿಯಿಂದ ಕೇಳಿ ಗೊತ್ತಾಗಿದ್ದು ದಿನಾಂಕ 30-04-2016 ರಂದು ರಾತ್ರಿ ನಾವೆಲ್ಲರೂ ಮನೆಯಲ್ಲಿ ಊಟ ಮಾಡಿ ಮಾತಾಡುತ್ತಾ ಕುಳಿತ್ತಿದ್ದೆವು. ರಾತ್ರಿ 10 ಗಂಟೆಯ ಸುಮಾರಿಗೆ ನನ್ನ ತಂಗಿಯಾದ ಗೀತಾ ಇವಳು ಬಯಲು ದಸೆಗೆ ಹೋಗುವದಾಗಿ ಹೇಳಿದಾಗ ಆಕೆಯೊಂದಿಗೆ ನನ್ನ ತಾಯಿಯಾದ ಲಕ್ಷ್ಮಿಬಾಯಿ, ಹಾಗು ನನ್ನ ತಮ್ಮನ ಹೆಂಡತಿಯಾದ ನೀಲಮ್ಮ ಹೀಗೆಲ್ಲರೂ ಬಯಲು ದಸೆಗೆ ಹೊದರು. ಸಲ್ಪ ಸಮಯದ ನಂತರ ನನ್ನ ತಾಯಿ ಹಾಗು ನನ್ನ ತಮ್ಮನ ಹೆಂಡತಿ ಇಬ್ಬರೂ ಚೀರಾಡುತ್ತಾ ಮನೆಗೆ ಬಂದು ಹೇಳಿದ್ದೆನೆಂದರೆ  ನಾವೆಲ್ಲರೂ ಸ್ವಲ್ಪ ದೂರ ದೂರದಲ್ಲಿ ಬಯಲು ದಸೆಗೆ ಕುಳಿತಾಗ ನಮ್ಮೂರಿನ ಬಸವರಾಜ ಇತನು ಕುಮಾರಿ ಇವಳ ಕಡೆಗೆ ಬಂದಾಗ ಗೀತಾ ಇವಳು ಎದ್ದು ನಿಂತು ಯಾಕೆ ಬರುತ್ತಿ ಹೆಣ್ಣು ಮಕ್ಕಳು ಕುಳಿತಿದ್ದು ಕಾಣಿಸುವದಿಲ್ಲಾ ಅಂತಾ ಅಂದಿದ್ದಕ್ಕೆ ಬಸವರಾಜ ಇತನು ನನ್ನೊಂದಿಗೆ ಮದುವೆ ಮಾಡಿಕೊ ಅಂತಾ ಅಂದರು ವಲ್ಲಂತಿಯಾ ಅಂತಾ ಅಂದು ನಿನಗೆ ಮದುವೆಯಾಗಿದೆ ನಾನು ಇನ್ನು ಚಿಕ್ಕವಳಿದ್ದೆನೆ ಅಂತಾ ಅಂದರು ಕೂಡ ಕೇಳದೆ ಅವಳ ಕೈ ಹಿಡಿದು ಜಗ್ಗಾಡುತ್ತಿದ್ದಾಗ ನಾವಿಬ್ಬರೂ ಬಿಡಿಸಿಕೊಳ್ಳಲು ಹೋದಾಗ ನಮ್ಮಿಬ್ಬರಿಗೆ ಬಸವರಾಜ ಇತನು ನುಕಿಸಿಕೊಟ್ಟು  ಅಲ್ಲಿಂದ ನಮ್ಮ ಮಗಳನ್ನುಅಪಹರಿಕೊಂಡು ಹೋಗಿರುತ್ತಾನೆ ಹೋಗುವಾಗ ಗೀತಾಳನ್ನು ಅಪಹರಿಸಿಕೊಂಡು ಹೋದ ಬಗ್ಗೆ ಯಾರಿಗಾದರು ಹೇಳಿದರೆ ನಿಮಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಭೆದರಿಕೆ ಹಾಕಿರುತ್ತಾನೆ. ಅಂತಾ ಅರ್ಜಿ ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಮಾಡಿಕೊಂಡಿದ್ದು ಅಪಹರಣಕ್ಕೊಳಗಾದ ಕುಮಾರಿ ಇವಳು ಇಂದು ದಿನಾಂಕ: 02-05-2016 ರಂದು ಬೆಳಿಗ್ಗೆ 10 ಗಂಟೆಗೆ ಪತ್ತೆಯಾಗಿದ್ದು, ಅವಳ ಹೇಳಿಕೆಯನ್ನು ಪಡೆದುಕೊಳ್ಳಲಾಗಿ ಅವಳು ತನ್ನ ಹೇಳಿಕೆಯಲ್ಲಿ ಈಗ ಕೇಲವು ತಿಂಗಳಿಂದ ನನಗೆ ಬಸವರಾಜ ಇತನು ನಮ್ಮೂರಿನ ಬಯಲು ದೆಸೆಗೆ ಹೋದ ಗಿಡ ಗಂಟಿಗಳಲ್ಲಿ 2-3 ಸಲ ಜಬರಿ ಸಂಬೋಗ ಮಾಡಿದ್ದು, ಈ ಬಗ್ಗೆ ಯಾರಿಗಾದರು ಹೇಳಿದರೆ ನನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ ನಾನು ಯಾರಿಗೂ ಈ ವಿಷಯ ಹೇಳಿರುವದಿಲ್ಲ. ಅಲ್ಲದೆ ದಿನಾಂಕ 30-04-2016 ರಂದು ನನಗೆ ಅಪಹರಿಸಿಕೊಂಡು ಹೋಗಿ ನಮ್ಮೂರಿನ ಬಸ್ಸ ಸ್ಟ್ಯಾಂಡ ಮುಂದುಗಡೆ ಗೋದಾಮಿನ ಹತ್ತಿರ ನನ್ನ ಇಚ್ಚೆಗೆ ವಿರೋಧವಾಗಿ ಜಭರಿ ಸಂಬೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ್ದರ ದೂರು ಸಾರಾಂಶದ ಮೇಲಿಂದ  ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಭೀಮಾಶಂಕರ ತಂದೆ ನಾಗಶೇಟ್ಟಿ ಯದಲಾಪೂರ ಸಾಃ ಲಕ್ಷ್ಮೀ ಚೌಕ ಜೇವರಗಿ [ಬಿ] ರವರ ಮಗಳಾದ ಅಶ್ವಿನಿ ವಯ: 20 ವರ್ಷ, ಇವಳೆ ದೊಡ್ಡವಳಿದ್ದು ಇವಳಿಗೆ 31.05.2015 ರಂದು ಪ್ರೋಪಸರ್ ಕಾಲೋನಿ ಸಿಂದಗಿ ನಿವಾಸಿಯಾದ ಶ್ರೀಶೈಲ ತಂದೆ ಸಿದ್ದಣ್ಣ ಹಳ್ಳಿ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನನ್ನ ಮಗಳು ಮತ್ತು ಅಳಿಯ ಇಬ್ಬರು ಚೆನ್ನಾಗಿ ಇದ್ದರು. ಹೀಗಿದ್ದು ದಿನಾಂಕ 28.03.2016 ರಂದು ಯುಗಾದಿ ಹಬ್ಬಕ್ಕಾಗಿ ನನ್ನ ಮಗಳಿಗೆ ಗಂಡನ ಮನೆಯಿಂದ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದು ದಿನಾಂಕ  22.04.2016 ರಂದು ಮುಂಜಾನೆ 11-00 ಗಂಟೆಗೆ ನನ್ನ ಮಗಳು ಅಶ್ವಿನಿ ಇವಳಿಗೆ ಮನೆಯ ಮುಂದೆ ಇರು ಅಂತಾ ಹೇಳಿ ನಾನು ಮತ್ತು ನನ್ನ ಹೆಂಡತಿ ವಿಜಯಲಕ್ಷ್ಮೀ ಇಬ್ಬರು ಕೂಡಿಕೊಂಡು ಮಜೀದ ಹತ್ತಿರ ಇರುವ ನಮ್ಮ ಕಿರಾಣಿ ಅಂಗಡಿಗೆ ಬಂದು ಅಂಗಡಿಯ ವ್ಯಾಪಾರ ಮುಗಿಸಿಕೊಂಡು ನಂತರ ಸಾಯಂಕಾಲ 7.00 ಗಂಟೆಯ ಸುಮಾರಿಗೆ ನಾವಿಬ್ಬರು ನಮ್ಮ ಮನೆಗೆ ಹೋದಾಗ ನನ್ನ ಮಗಳು ಮನೆಯಲ್ಲಿ ಇರಲಿಲ್ಲಾ ಆಗ ನಾನು ಮತ್ತು ನನ್ನ ಹೆಂಡತಿ ನಮ್ಮ ಮನೆಯ ಅಕ್ಕ ಪಕ್ಕದ ರವರಿಗೆ ವಿಚಾರಿಸಲಾಗಿ ಅವಳು ನಮ್ಮ ಹತ್ತಿರ ಬಂದಿರುವದಿಲ್ಲಾ ಅಂತಾ ತಿಳಿಸಿದರು. ನಂತರ ರಾತ್ರಿಯಾಗಿದ್ದರಿಂದ ಅವಳು ಎಲ್ಲಿ ತನ್ನ ಗೆಳೆತಿಯರ ಮನೆಗೆ ಹೋಗಿರಬಹುದು ಅಂತಾ ತಿಳಿದುಕೊಂಡು ಸುಮ್ಮನೆ ಮನೆಯಲ್ಲಿದ್ದಾಗ ಮುಂಜಾನೆಯಾದರು ವಾಪಸ ಮನೆಗೆ ಬರದೇ ಇದ್ದುದ್ದಕ್ಕೆ ನಾವು ಗಾಬರಿಗೊಂಡು ಅಂದಿನಿಂದ ಇಲ್ಲಿಯ ವರೆಗೆ ನಮ್ಮ ಸಂಬಂಧಿಕರ ಊರುಗಳಲ್ಲಿ ವಿಚಾರಿಸಿದರೂ ಪತ್ತೆಯಾಗಿರುವದಿಲ್ಲಾ. ಮತ್ತು ನಮಗೆ ಪರಿಚಯಸ್ತರ ಹತ್ತಿರ ಹೋಗಿ ಅಶ್ವಿನಿ ಬಗ್ಗೆ ಕೇಳಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಮತ್ತು ಅವಳು ಇಲ್ಲಿಯವರೆಗೂ ಮರಳಿ ಮನೆಗೆ ಬಂದಿರುವುದಿಲ್ಲಾ ಅವಳು ಕಾಣೆಯಾಗಿರುತ್ತಾಳೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕಟ್ಟರಗಳ  ಜಪ್ತಿ ಮಾಡಿದ ಪ್ರಕರಣಗಳು:
ಜೇವರಗಿ ಠಾಣೆ : ದಿನಾಂಕ: 01.05.2016 ರಂದು ಜೇವರಗಿ ತಾಲೂಕಿನ ರಾಜವಾಳ ಗ್ರಾಮ ಸಿಮಾಂತರದ ಭೀಮಾನದಿಯ ದಡದಲ್ಲಿ ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ರಾಜವಾಳ ಗ್ರಾಮಕ್ಕೆ ಹೋಗಿ ಬೀಮಾ ನದಿ ಸ್ವಲ್ಪ ದೂರದಲ್ಲಿ ಗಿಡಗಂಟಿಗಳ ಮರೆಯಾಗಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೇಳಗೆ ಇಳಿದು ಬೀಮಾ ನದಿಯ ಕಡಗೆ ನಡೆದುಕೊಂಡು ಹೋಗಿ ಗಿಡಗಂಟಿಗಳ ಮರೆಯಾಗಿ ನಿಂತು ನೋಡಲಾಗಿ ಬೀಮಾ ನದಿಯಿಂದ ಟ್ರ್ಯಾಕ್ಟರಗಳಲ್ಲಿ ಉಸುಕು ತುಂಬುತ್ತಿರುವದನ್ನು ನೊಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾವೇಲ್ಲರೂ ಮುಂಜಾನೆ 7.00 ಗಂಟೆಗೆ ದಾಳಿ ಮಾಡಿ ಹಿಡಿಯಲು ಹೋದಾಗ ಟ್ರ್ಯಾಕ್ಟರ ಚಾಲಕರು ಬಿಟ್ಟು ಓಡಲು ಪ್ರಾರಂಬಿಸಿದರು ನಾವು ಅವರಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಸಿದರೂ ಸಿಕ್ಕಿರುವುದಿಲ್ಲಾ. ನಂತರ ಟ್ರ್ಯಾಕ್ಟರಗಳು ನಿಂತ ಸ್ಥಳಕ್ಕೆ ಬಂದು ಪಂಚರ ಸಮಕ್ಷಮ ಪರಿಶೀಲಿಸಲು ನೋಡಲು 1. ಕೆಂಪು ಬಣ್ಣದ ಮಹೇಂದ್ರಾ  ಕಂಪನಿಯಾ ಟ್ರಾಕ್ಟರ ನಂ ಕೆಎ-36-ಟಿಎ-730 ಇತ್ತು ಅದಕ್ಕೆ ನಿಲಿ ಬಣ್ಣ ನಂಬರ ಇರಲಾದ ಟ್ರ್ಯಾಲಿ ಇದ್ದು  ಅದರ ಟ್ರ್ಯಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು. ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳು ಅ.ಕಿ 1000/-ರೂ ಆಗಬಹುದು 2) ಒಂದು ಕೆಂಪು ಬಣ್ಣದ ಮಹಿಂದ್ರ ಟ್ರಾಕ್ಟರ ನಂಬರ ಕೆಎ-32-ಟಿ-7816 ಇದ್ದು ಅದಕ್ಕೆ ನಿಲಿ ಬಣ್ಣ ಟ್ರ್ಯಾಲಿ ಇತ್ತು  ಟ್ರ್ಯಾಲಿ ಮೇಲೆ ನಂಬರ ಇರುವುದಿಲ್ಲಾ, ಅದರ ಟ್ರಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳಿನ ಅಕಿ 1000/-ರೂ ಆಗಬಹುದು. ನೋಡಿದರೆ ಸದರಿ ಟ್ರ್ಯಾಕ್ಟರಗಳ ಚಾಲಕರು ಸರಕಾದಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಮೋಸ ಮಾಡಿ ಕಳ್ಳತನದಿಂದ ಮರಳು ಮಾರಾಟ ಮಾಡಲು ತುಂಬುತಿರುವದು ಮತ್ತು ಟ್ರಾಕ್ಟರಗಳಲ್ಲಿ ಮರುಳು ತುಂಬಲು ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಇರುವದು ಕಂಡು ಬಂದಿದ್ದರಿಂದ ಸದರಿ ಎರಡು  ಟ್ರ್ಯಾಕ್ಟರ್ ಮರಳು ಸಮೇತ ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ: 01.05.2016 ರಂದು ಜೇವರಗಿ ತಾಲೂಕಿನ ಮಲ್ಲಾ ( ಬಿ ) ಗ್ರಾಮ ಸಿಮಾಂತರದ ಭೀಮ ನದಿಯ ದಡದಲ್ಲಿ ಟ್ರಾಕ್ಟರಗಳು ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಾ (ಬಿ) ಗ್ರಾಮಕ್ಕೆ ಹೋಗಿ ಬಾತ್ಮಿ ಇದ್ದ ಸ್ಥಳದ ಕಡೆಗೆ ಹೊರಟ್ಟು ಸ್ವಲ್ಪ ದೂರದಲ್ಲಿ ಗಿಡಗಂಟಿಗಳ ಮರೆಯಾಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಬೀಮಾ ನದಿಯ ಕಡಗೆ ನಡೆದುಕೊಂಡು ಹೋಗಿ ನಮ್ಮ ಬ್ಯಾಟರಿ ಬೆಳಕಿನಲ್ಲಿ ನೋಡಲಾಗಿ ಬೀಮಾನದಿಯಿಂದ ಟ್ರ್ಯಾಕ್ಟರದಲ್ಲಿ ಉಸುಕು ತುಂಬುತ್ತಿರುವದನ್ನು ಖಚತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು ಹೋದಾಗ ಟ್ರ್ಯಾಕ್ಟರ ಚಾಲಕರು ಬಿಟ್ಟು ಓಡಲು ಪ್ರಾರಂಬಿಸಿದರು ನಾವು ಅವರಿಗೆ ಬೆನ್ನು ಹತ್ತಿ ಹಿಡಿಯಲು ಒಬ್ಬ ಸಿಕ್ಕಿದ್ದು ಉಳಿದವರು ಕತ್ತಲಲ್ಲಿ ಓಡಿ ಹೋದರು. ಸಿಕ್ಕವನಿಗೆ ಹೆಸರು ಕೇಳಲು ಮಲ್ಲಿಕಾರ್ಜುನ ತಂದೆ ಸಂಗಣ್ಣ ರೆಡ್ಡಿ ಸಾ: ಮಲ್ಲಾ ಬಿ ಮಸ್ಸಿ ಫರಗುಶೇನ್ ಕಂಪನಿಯಾ ಕೆಂಪು ಬಣ್ಣದ ಟ್ರಾಕ್ಟರ ನಂಬರ ಇರುವದಿಲ್ಲಾ ಅದರ ಟ್ರಾಲಿ ನಂ ಕೆಎ-32, ಟಿ-5293 ನೇದ್ದರ ಚಾಲಕ ಇರುತ್ತೇನೆ ಅಂತ ಹೇಳಿದ್ದು ಮತ್ತು ಓಡಿ ಹೋದವರ ಹೆಸರು ಗೊತ್ತಿರುವದಿಲ್ಲಾ ಹೇಳಿದನು. ಮತ್ತು ಮರಳು ತುಂಬುತ್ತಿರುವ ಬಗ್ಗೆ  ಪರವಾನಿಗೆ ಪತ್ರದ ಬಗ್ಗೆ ವಿಚಾರಿಸಲು ಏನು ಇರುವದಿಲ್ಲಾ ಅಂತ ಹೇಳಿದನು. ನಂತರ ಸ್ಥಳದಲ್ಲಿದ್ದ ಟ್ರಾಕ್ಟರಗಳು ಪಂಚರ ಸಮಕ್ಷಮ ಪರಿಶೀಲಿಸಲು ನೋಡಲು 1. ಕೆಂಪು ಬಣ್ಣದ ಮೇಸ್ಸಿ ಫರಗುಶೇನ್ ಕಂಪನಿಯಾ ಟ್ರಾಕ್ಟರ ಇಂಜಿನ ಮೇಲೆ ನಂಬರ ಇರುವದಿಲ್ಲಾ ಅದರ ಇಂಜಿನ ನಂಬರ ನೋಡಲು ಅದು ಎಸ್-325,03373 ಇದ್ದು ಅದರ ಟ್ರಾಲಿ ನಂ ಕೆಎ-32,ಟಿ5293 ಇತ್ತು ಅದರ ಟ್ರಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು. ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳು ಅ.ಕಿ 1000/-ರೂ ಆಗಬಹುದು 2) ಒಂದು ಕೆಂಪು ಬಣ್ಣದ ಮಹಿಂದ್ರ ಟ್ರಾಕ್ಟರ ಇಂಜಿನ ಮೇಲೆ ನಂಬರ ಇರುವದಿಲ್ಲಾ ಅದರ ಇಂಜಿನ ನಂಬರ ಆರ್.ಕೆಡಬ್ಲೂ 02297 ಅದರ ಟ್ರಾಲಿ ನಂಬರ ಕೆಎ-33,ಟಿ-1747 ಇದ್ದು ಅದರ ಟ್ರಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳಿನ ಅಕಿ 1000/-ರೂ ಆಗಬಹುದು 3. ಒಂದು ಹಸಿರು ಬಣ್ಣದ ಜಾನ್ ಡೀರ ಕಂಪನಿಯಾ ಟ್ರಾಕ್ಟರ ಇಂಜೆನ ಮತ್ತು ಟ್ರಾಲಿ ಮೇಲೆ ನಂಬರ ಇರುವದಿಲ್ಲಾ ಅದರ ಇಂಜಿನ ನಂಬರ ನೋಡಲು ಪಿ.ವಾಯಿ3029ಡಿ355324 & 30292ಡಿಪಿವಾಯಿ25 ಇತ್ತು ಟ್ರಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳಿನ ಅ,ಕಿ 1000/-ರೂ ಆಗಬಹುದು ಸದರಿ ಟ್ರ್ಯಾಕ್ಟರಗಳ ಚಾಲಕರು ಸರಕಾದಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಮೋಸ ಮಾಡಿ ಕಳ್ಳತನದಿಂದ ಮರಳು ಮಾರಾಟ ಮಾಡಲು ತುಂಬುತಿರುವದು ಮತ್ತು ಟ್ರ್ಯಾಕ್ಟರಗಳಲ್ಲಿ ಮರುಳು ತುಂಬಲು ಪರವಾನಿಗೆ ಪಡೆದುಕೊಳ್ಳದೇ ಇರುವದು ಕಂಡು ಬಂದಿದ್ದರಿಂದ ಸದರಿ ಮೂರು ಟ್ರ್ಯಾಕ್ಟರ್ ಮರಳು ಸಮೇತ ಜಪ್ತಿಮಾಡಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಹಣಮಂತರಾಯ ನಿಂಬಾಳ ಸಾಃ ವಿಜಯ ನಗರ ಕಾಲೋನಿ ಕಲಬುರಗಿ  ರವರು ಕಲಬುರಗಿ ನಗರದ 108 ಅಂಬುಲೈನ್ಸ್ನಲ್ಲಿ ಡ್ರೈವರ ನೌಕರಿ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಿಜಯ ನಗರ ಕಾಲೋನಿಯಲ್ಲಿರುವ ಶಿವಕುಮಾರ ಮೇಲಶೆಟ್ಟಿ ಎಂಬುವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ದಿನಾಂಕಃ 29.04.2016 ರಂದು ನನ್ನ ಹೆಂಡತಿಯ ತಂಗಿಯ ಮದುವೆ ಇರುವ ಕಾರಣ ನನ್ನ ಹೆಂಡತಿಯು ದಿನಾಂಕಃ 10.04.2016 ರಂದು ಸಿಂದನೂರಿಗೆ ಹೋಗಿದ್ದು  ಅವರಿಗೆ ಮುಂದೆ ಕಳುಹಿಸಿ ನಂತರ ದಿನಾಂಕಃ 26.04.2016  ರಂದು ಸಾಯಾಂಕಾಲ 6.00 ಗಂಟೆಯ ಸುಮಾರಿಗೆ ನಾನು ಮದುವೆಗೋಸ್ಕರ ಮನೆಗೆ ಸರಿಯಾಗಿ ಬೀಗ್ ಹಾಕಿಕೊಂಡು ಸಿಂದನೂರಿಗೆ ಹೋಗಿದ್ದು ದಿನಾಂಕಃ 29.04.2016 ರಂದು ಮದ್ಯಾಹ್ನ 4.00 ಗಂಟೆಯ ಸುಮಾರಿಗೆ ನನ್ನ ಸಂಗಡ ಕೆಲಸ ಮಾಡುವ ಶರಣಶಂಕರಯ್ಯಾ ಎಂಬುವರು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ನಿಮ್ಮ ಮನೆಯ ಮಾಲೀಕರಾದ ಶಿವಕುಮಾರ ಮೇಲಶೆಟ್ಟಿ  ಎಂಬುವರು ಪೋನ್ ಮಾಡಿ ತಿಳಿಸಿದೆನಂದರೆ ನಿಮ್ಮ ಮನೆಗೆ ಹಾಕೀರುವ ಬೀಗ ಮುರಿದಿದ್ದು ಮನೆಯಲ್ಲಿರುವ ಸಾಮಾನಗಳು ಚಲ್ಲಾ ಪಿಲ್ಲೇ ಆಗಿ ಬಿದ್ದರುತ್ತವೆ. ಯಾರೋ ಮನೆ ಕಳ್ಳತನ ಮಾಡಿಕೊಮಡು ಹೋಗಿದ ಹಾಗೆ ಕಾಣುತ್ತಿದೆ ಅಂತಾ ಪೋನ್ ಮಾಡಿ ತಿಳಿಸಿರುತ್ತಾರೆ. ಅಂತಾ ಹೇಳಿದ್ದಾಗ ನಾನು ದಿನಾಂಕಃ 30.04.2016 ರಂದು  ಸಿಂದನೂರಿನಿಂದ ಕಲಬುರಗಿ ನಗರಕ್ಕೆ ನೇರವಾಗಿ ಬಂದು ನಮ್ಮ ಮನೆಯಲ್ಲಿರುವ ಸಾಮಾನಗಳು ಪರಿಶೀಲನೆ ಮಾಡಿ ನೋಡಿದ್ದಾಗ ನಮ್ಮ ಮನೆಯಲ್ಲಿಟ್ಟಿರುವ 25000/- ನಗದು ಹಣ, 2 ತೋಲೆ ಬಂಗಾರದ ಉಂಗೂರ ಅಃಕಿಃ 30,000/-  ಒಂದು ಎಲ್ಇಡಿ ಟಿವಿ ಅಃಕಿಃ 5000/-4 ಜೋತೆ ಪ್ಯಾಂಟ,ಶರ್ಟಗಳು ಹಾಗೂ 2-3 ಸೀರೆಗಳು  ಹೀಗೆ ಒಟ್ಟು 60,000/- ಬೆಲೆ ಬಾಳುವ  ಸಾಮಾನಗಳು ದಿನಾಂಕಃ 28.04.2016 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ಮನೆಗೆ ಹಾಕಿರುವ ಕೀಲಿಯನ್ನು ಮುರಿದ್ದು ಮನೆಯಲ್ಲಿರುವ ಒಟ್ಟು ಅಃಕಿಃ 60,000/- ಬೆಳೆ ಬಾಳುವ  ಕಿಮ್ಮತಿನದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇವಿನ ಬಣವಿಗೆ ಬೆಂಕಿ ಹಚ್ಚಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ  ಚಂದ್ರಕಾಂತ ತಂದೆ ಬಂಡೆಪ್ಪ ರಂಜೇರಿ ಸಾ:ಆಲಗೂಡ ಇವರು ದಿನಾಂಕ:-30/04/2016 ರಂದು ಮದ್ಯಾಹ್ನ 01:30 ಗಂಟೆ ಸುಮಾರಿಗೆ ಫಿರ್ಯಾದಿ ಚಂದ್ರಕಾಂತ ಇವರ ಹೋಲಾ ಸರ್ವೆ ನಂ 136/1 ನೇದ್ದರಲ್ಲಿ ಇದ್ದ ಕಣಕಿ ಬಣಮಿಗೆ ಮಹಾದೇವಿ ಗಂಡ ಮಲ್ಲಿಕಾರ್ಜುನ ಹರಸೂರ ಸಾ:ಆಲಗೂಡ ಇವಳು ತನಗೆ ಹೋಲದಲ್ಲಿ ಕೆಲಸ ಮಾಡವುದು ಬೀಡಿಸಿದ ವಿಷಯದ ಉದ್ದೇಶದಿಂದ ಸದರಿ ಫಿರ್ಯಾದಿ ಹೋಲದಲ್ಲಿದ್ದ ಕಣಕಿ ಬಣಮಿಗೆ ಬೆಂಕಿ ಹಚ್ಚಿ ಅಕಿ-1,15000/-ರೂ ಬೆಲೆ ಬಾಳುವ ಸ್ವತ್ತನ್ನು ನಾಶಪಡಿಸಿರುತ್ತಾಳೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.