POLICE BHAVAN KALABURAGI

POLICE BHAVAN KALABURAGI

08 September 2015

Kalaburagi District Reported Crimes.

ಮಾಡಬೂಳ ಠಾಣೆ : ದಿನಾಂಕ-07/09/2015 ರಂದು 3 ಪಿ.ಎಮ್‌ ಕ್ಕೆ ಚಂದ್ರಶೇಖರ ತಿಗಡಿ ಪಿ.ಎಸ್.ಐ. ಮಾಡಬೂಳ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಇಬ್ಬರೂ ಆರೋಪಿ ಹಾಗೂ ಮುದ್ದೆ ಮಾಲನೊಂದಿಗೆ ಜ್ಷಾಪನ ಪತ್ರ ನೀಡಿದರ ಸಾರಾಂಶವೆನೆಂದರೆ, ದಿನಾಂಕ:-07/09/2015 ರಂದು 12-15 ಪಿ.ಎಮ್. ಕ್ಕೆ ಠಾಣೆಯಲ್ಲಿದ್ದಾಗ ನನಗೆ ಫೋನ ಮುಖಾಂತರ ಖಚಿತ ಬಾತ್ಮಿ ಬಂದಿದ್ದೇನೆಂದರೆ ಕೋರವಾರ ಗ್ರಾಮದ ಬಸ್ ನಿಲ್ದಾಣ ಹತ್ತಿರ ರೋಡಿನ ಮೇಲೆ ಇಬ್ಬರೂ ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/-ರೂಪಾಯಿ ಅಂತ ಮಟಕಾ ನಂಬರ ಚೀಟಿ ಬರೆಯಿಸಿಕೊಳ್ಳುತ್ತಿದ್ದಾರೆ ಅಂತ ಬಾತ್ಮೀ ಬಂದ ಮೇರೆಗೆ ಠಾಣೆ ಸಿಬ್ಬಂದಿ ಜನರಾದ ಹೆಚ್.ಸಿ-89 ಮಹಾದೇವ, ಹೆಚ್.ಸಿ-183 ರಾಮು ಹಾಗೂ ಪಿ.ಸಿ. 462 ಹುಸೇನ ರವರನ್ನು ಕರೆದು ವಿಷಯ ತಿಳಿಸಿ ಪಂಚರಾದ 1] ರವಿ ತಂದೆ ಹೀರು ಪವಾರ ವಯ:-34 ವರ್ಷ ಜಾ:ಲಂಬಾಣಿ ಉ:ಕೂಲಿ ಕೆಲಸ ಸಾ: ಮಾಡಬೂಳ ತಾಂಡಾ 2] ಧರ್ಮ ತಂದೆ ಚಿಂಗೂ ಪವಾರ ವಯ:37 ವರ್ಷ ಜಾ:ಲಂಬಾಣಿ ಉ:ಕೂಲಿ ಕೆಲಸ ಸಾ: ಮಾಡಬೂಳ ತಾಂಡಾ ರವರನ್ನು ಬರ ಮಾಡಿಕೊಂಡು ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿದ್ದರಿಂದ ಸದರಿ ಇಬ್ಬರು ಪಂಚರ ಸಮೇತ ಠಾಣೆಯ ಜೀಪ ನಂ ಕೆಎ-32 ಜಿ-311 ನೇದ್ದರಲ್ಲಿ ಕುಳಿತು 12-30 ಪಿ.ಎಮ್.ಕ್ಕೆ ಹೊರಟು 1 ಪಿ.ಎಮ್ ಕ್ಕೆ ಕೋರವಾರ ಗ್ರಾಮದ ಹತ್ತಿರ ಹೋಗಿ ಬಸ್ ನಿಲ್ದಾಣ ಹತ್ತಿರ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಬಸ ನಿಲ್ದಾಣ ರೋಡಿನ ಎದುರಿನ ರೋಡಿನ ಮೇಲೆ ಇಬ್ಬರೂ ಒಂದು ಮೋಟಾರ ಸೈಕಲ ಹಚ್ಚಿ ಅದರ ಮೇಲೆ ಒಬ್ಬ ಕುಳಿತು ಇನ್ನೋಬ್ಬನು ಪಕ್ಕದಲ್ಲಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಒಂದು ರೂಪಾಯಿಗೆ 80/- ರೂಪಾಯಿಗಳು ಬರುತ್ತವೆ ಮಟಕಾ ನಂಬರ ಹಚ್ಚಿರಿ ಅದು ದೈವಲಿಲೆ ಆಟ ಅಂತ ಕರೆದು ಸಾರ್ವಜನಿಕರಿಗೆ ನಂಬಿಸಿ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 1 ಪಿ.ಎಮ್.ಕ್ಕೆ ನಾನು ಹಾಗೂ ಸಿಬ್ಬಂದಿ ಜನರೂ ಪಂಚರ ಸಮಕ್ಷಮ ದಾಳಿಮಾಡಿ ಸದರಿ ಇಬ್ಬರೂ ವ್ಯಕ್ತಿಗಳನ್ನು ಹಿಡಿದು ವಿಚಾರಿಸಲಾಗಿ ಅವರು ತಮ್ಮ ಹೆಸರು 1] ಬಸವರಾಜ ತಂದೆ ಶಂಕರೆಪ್ಪಾ ಕಂಟೋಳ್ಳಿ  ವಯ:35 ವರ್ಷ ಜಾ: ಲಿಂಗಾಯತ ಉ: ಖಾಸಗಿ ಕೆಲಸ ಸಾ: ಬೂಲೆವಾಡ ತಾ:ಜಿ: ಕಲಬುರಗಿ ಅಂತ ತಿಳಿಸಿದನು. ಸದರಿಯವನಿಗೆ ಅಂಗ ಶೋಧನೆ ಮಾಡಲಾಗಿ ಸದರಿಯವನ ಹತ್ತಿರ 3800/-ರೂ ಹಾಗೂ ಮಟಕಾ ನಂಬರ ಬರೆದ 2 ಚೀಟಿ ಹಾಗೂ ಒಂದು ಸ್ಯಾಮಸಾಂಗ್ ಕಂಪನಿ ಮೋಬೈಲ್ ಅಂದಾಜು ಕಿಮ್ಮತ್ತು 800/- ರೂ 2] ಶ್ಯಾಮರಾವ ತಂದೆ ಶಿವಶರಣಪ್ಪಾ ಕಂಟಿ ವ: 65 ವರ್ಷ ಜಾ: ಲಿಂಗಾಯತ ಉ: ಬಟ್ಟಿ ಅಂಗಡಿ ಸಾ: ಕೋರವಾರ ಅಂತಾ ತಿಳಿಸಿದರು. ಸದರಿಯವನಿಗೆ ಅಂಗ ಶೋಧನೆ ಮಾಡಲಾಗಿ ಸದರಿಯವರ ಹತ್ತಿರ 700/- ರೂ ನಗದು ಹಣ, ಹಾಗೂ ಒಂದು ಮಟಕಾ ನಂಬರಗಳು ಬರೆದ ಚೀಟಿ ಮತ್ತು ಒಂದು ಬಾಲ ಪೆನ್, ಒಂದು ಸ್ಯಾಮಸಾಂಗ್ ಕಂಪನಿ ಮೋಬೈಲ್ ಅಂದಾಜು ಕಿಮ್ಮತ್ತು 500/- ರೂ ದೊರೆತ್ತಿದ್ದು. ಸದರಿಯವರಿಗೆ ಸಾರ್ವಜನಿಕರಿಂದ ಪಡೆದ ಹಣವನ್ನು ಹಾಗೂ ಮಟಕಾ ನಂಬರಗಳನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಲಾಗಿ ಸದರಿ ಇಬ್ಬರೂ ದಿನಾಲು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಹಾಗೂ ಹಣ ಸಂಗ್ರಹಿಸಿದ್ದನ್ನು ಮಲ್ಲಿಕಾಜರ್ುನ ಒಳಕಿಂಡಿ ಸಾ: ಅಶೋಕನಗರ ಇವರಿಗೆ ಕೊಡುತ್ತೇವೆ ಅಂತಾ ತಿಳಿಸಿದರು. ಸದರಿಯವರ ಹತ್ತಿರ 1] ಒಂದು ಬಾಲ ಪೆನ್ 2] ಮೂರು ಮಟಕಾ ನಂಬರಗಳು ಬರೆದ ಚೀಟಿ 3] ನಗದ ಹಣ 4500/-ರೂ ಹಾಗೂ 4] ಮಟಕಾ ಬರೆದುಕೊಳ್ಳಲು ಉಪಯೋಗಿಸುತ್ತಿರುವ ಒಂದು ಬಜಾಜ ಕಂಪನಿಯ ಮೋ.ಸೈಕಲ ನಂಬರ ಕೆಎ-32 ಎಲ್-1425 ಅಂದಾಜು ಕಿಮ್ಮತ್ತು 10.000 ರೂ 5] ಎರಡು ಮೋಬೈಲ್ ಸ್ಯಾಮಸಾಂಗ್ ಕಂಪನಿ ಅಂದಾಜ ಕಿಮ್ಮತ್ತು 1300/-ರೂ ದೊರೆತ್ತಿದ್ದು. ಹೀಗೆ ಒಟ್ಟು 15.800/- ರೂ ಬೆಲೆವುಳ್ಳಗಳನ್ನು ಗುನ್ನೆ ಸ್ಥದಲ್ಲಿಯೆ 1-15 ಪಿ.ಎಮ್. ದಿಂದ  2-15 ಪಿ.ಎಮ್.ದ ವರೆಗೆ ಪಂಚರ ಸಮಕ್ಷಮ ಜಪ್ತ ಪಂಚನಾಮೆ ಮಾಡಿಕೊಂಡು  ಸದರಿಯವುಗಳಿಗೆ ಪಂಚರ ಸಹಿ ಮಾಡಿದ  ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಮುದ್ದೆ ಮಾಲು ಹಾಗೂ ಆರೋಪಿತರೊಂದಿಗೆ ಮರಳಿ ಠಾಣೆಗೆ 3 ಪಿ.ಎಮ್.ಕ್ಕೆ ಬಂದು ಹಾಜರ ಇದ್ದ ಎಸ್.ಹೆಚ್.ಓ ರವರರಾದ ಹೆಚ್.ಸಿ-466 ರಾಮಚಂದ್ರ ರವರಿಗೆ ಮುಂದಿನ ಕ್ರಮ ಕುರಿತು ಜ್ಞಾಪನಾ ಪತ್ರ ನೀಡಿದರ ಸಾರಾಂಶದ ಮೇಲಿಂದ ಗುನ್ನೆ ನಂ, 116/2015 ಕಲಂ 78 [3] ಕೆಪಿ ಆಕ್ಟ್ ಸಂಗಡ 420 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.