POLICE BHAVAN KALABURAGI

POLICE BHAVAN KALABURAGI

11 July 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 11-07-2014 ರಂದು ಘತ್ತರಗಿ ಗ್ರಾಮದಲ್ಲಿ ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಹೊರಟು. ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರು ಮರೆಯಾಗಿ ನಿಂತು  ನೋಡಲು ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಪ್ಪ ತಂದೆ ಅಣ್ಣಪ್ಪ ಹೂಗಾರ ಸಾ|| ಘತ್ತರಗಿ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 270/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ  ಪಂಪಣ್ಣ ತಂದೆ ನಿಂಗಪ್ಪ ಸಜ್ಜನ  ಸಾ|| ಮನೆ ನಂ; 1-949/70/2ಡಿ/50-51 ಆಕಾರ್ಶ ನಿಲಯ ಓಜಾ ಕಾಲೊನಿ ಗುಲಬರ್ಗಾ ಇವರು  ತಮ್ಮ ಸೈಕಲ್ ಮೋಟಾರ ಬಜಾಜ ಕ್ಯಾಲಿಬುರ ನಂ ಕೆಎ 38 ಹೆಚ್ 3422 ನೇದ್ದನ್ನು ದಿನಾಂಕ 29-06-2014 ರಂದು ರಾತ್ರಿ 9 ಗಂಟೆ ಸುಮಾರಿಗೆ ರೇಲ್ವೆ ಸ್ಟೇಷನ ಹತ್ತಿರ ನಿಲ್ಲಗಡೆ ಮಾಡಿ ತಮ್ಮ ಕೆಲಸ ಮುಗಿಸಿಕೊಂಡು ರಾತ್ರಿ 09-20 ಗಂಟೆಗೆ ಮರಳಿ ಬಂದು ನೋಡಲಾಗಿ ಸದರಿ ನನ್ನ ಸೈಕಲ್ ಮೋಟಾರ ಇರಲಿಲ್ಲಿ. ನಾನು ಎಲ್ಲಾಕಡೆ ಹುಡಕಾಡಿದರೂ ಸಹ  ಸೈಕಲ್ ಮೋಟಾರ ಸಿಕ್ಕಿರುವದಿಲ್ಲ.  ನನ್ನ ಸೈಕಲ್ ಮೋಟಾರ ಬಜಾಜ ಕ್ಯಾಲಿಬುರ ನಂ ಕೆಎ 38 ಹೆಚ್ 3422  ಚಸ್ಸಿ ನಂ; DDFBGC79949  ಇಂಜಿನ್ ನಂ;  DDMBGC29134  || ಕಿ|| 15000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಕಿರುಕಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಹಣಮಂತಪ್ಪಾ ಸವಳೆ ಸಾ: ಯಳಸಂಗಿ ತಾಲ್ಲುಕಾ ಆಳಂದ ರವರ ಮಗಳಾದ ಚೆನ್ನಮ್ಮಾ ಇವಳಿಗೆ ಮಂದ್ರುಪ ಜಿಲ್ಲಾ ಸೋಲಾಪೂರದಲ್ಲಿ ಮಾಹಾದೇವಪ್ಪಾ ಎಂಬುವನೊಂದಿಗೆ ಸುಮಾರು 6 ವರ್ಷಗಳ ಹಿಂದೆ ಮದುವೆ ಮಾಡಿ ಕೊಟಿದ್ದು ಆಕೆಗೆ ಒಂದು ಗಂಡು ಮಗು ಇದ್ದು 4 ವರ್ಷದವನಿದ್ದು ಮಹಾದೇವಪ್ಪನು ಪ್ರಕೃತಿ ವಿಕೋಪದಿಂದ ಮೃತಪಟ್ಟಿರುತ್ತಾನೆ. ನಂತರ ನನ್ನ ಮಗಳಿಗೆ ಅಂದಾಜು 24 ವರ್ಷದವಳಿದ್ದು ಚಿಕ್ಕವಳಾಗಿದ್ದರಿಂದ ಆಕೆಗೆ ಇನ್ನೊಂದು ಮದುವೆ ಮಾಡಿಕೊಡಬೇಕು ಅಂತಾ ನಿಶ್ಚಯ ಮಾಡಿ ಈ 3 ತಿಂಗಳ ಹಿಂದೆ ಎರಡನೇ ಸಂಬಂದ ಮಾಹಾಂತೇಶ ತಂದೆ ಬಸಣ್ಣಾ ಗೋಳಾ (ಬಿ) ಎಂಬುವನೊಂದಿಗೆ ಮಾಹಾರಾಷ್ಟ್ರದ ಸೋಲಾಪೂರ ತಾಲ್ಲಾಕಿನ ಕುಂಬಾರಿ ಗ್ರಾಮದಲ್ಲಿ ನಾನು ಮತ್ತು ಶಿವಪುತ್ರ ಯಲ್ದೆ ಹಾಗು ಮಾಹಾಂತೇಶನ ಮೋದನೆ ಹೆಂಡತಿ ಗಂಗಾಬಾಯಿ ಹಾಗು ಸುಗಲಾಬಾಯಿ ಕಾಳೆ ರವರ ಸಮ್ಮುಖದಲ್ಲಿ ಗಂಗಾಬಾಯಿ ಮದುವೆಯಾದ 10 ವರ್ಷದತನಕ ಮಕ್ಕಳಾಗದರಿಂದ ನನ್ನ ಮಗಳಿಗೆ ಸವತಿ ಮೇಲೆ ಉಡಕಿ ಮಾಡಿ ಕೊಟ್ಟಿರುತ್ತೆನೆ. ನನ್ನ ಮಗಳು ಹಾಗು ಸವತಿ ಗಂಗಾಬಾಯಿ ಗಂಡ ಮಾಹಾಂತೇಶ ಎಲ್ಗರೂ ಎಚ್‌ಕೆಇ ಡಿಗ್ರಿ ಕಾಲೇಜು ಹತ್ತಿರ ಬಾಡಿಗೆ ಮನೆಯಲ್ಲಿ ವಾಶಿಸುತ್ತಾ ಬಂದಿರುತ್ತಾರೆ. ನನ್ನ ಮಗಳು ಚಿಕ್ಕವಳಾಗಿದ್ದರಿಂದ ಉಡಕಿ ಮಾಡಿಕೊಂಡ ಕೆಲವು ದಿನ ಅಳಿಯ ಸರಿಯಾಗಿ ಇದ್ದು ನಂತರ ನನ್ನ ಮಗಳ ಶೀಲದ ಮೇಲೆ ಸಂಶಯ ಮಾಡುತ್ತಾ ಆಕೆಗೆ ಬೈಯುವುದು , ಹೊಡೆಯುವುದು ಮಾಡುತ್ತಿದ್ದರಿಂದ ಒಂದೆರಡು ಸಲ ಆಳಂದಕ್ಕೆ ಬಂದು ತಿಳಿ ಹೇಳಿ ಹೊಗಿರುತ್ತೇನೆ. ಆದರೂ ಕೂಡಾ ಪುನ: ನನ್ನ ಮಗಳ ಮೇಲೆ ಸಂಶಯ ಮಾಡಿ ಕಿರಕುಳ ಕೊಡುವುದು ಹೊಡೆಯುವುದು ಮಾಡುತ್ತಿದ್ದ ದಿನಾಂಕ 10/07/2014 ರಂದು ಸಾಯಾಂಕಾಲ  7:00 ಗಂಟೆ ಸುಮಾರಿಗೆ ನನ್ನ ಚಿಕ್ಕ ಮಗ ಶ್ರೀಶೈಲ ಇತನು ಪೋನ ಮುಖಾಂತರ ತಿಳಿಸಿದೆನೆಂದರೆ ಚೆನ್ನಮ್ಮಾ ಇವಳು ಆಳಂದದ ಲಾಡ್ಲಾಸಾಹೇಬ ದರ್ಗಾಕ್ಕೆ ಸಂಬಂದಿಸಿದ ಹಾಳ ಮೊಲ್ಲಾ ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ಥಾಳೆ ಕೂಡಲೆ ಬರಬೇಕು ಅಂತಾ ತಿಳಿಸಿದರ ಮೇರೆಗೆ ನಮ್ಮ ಊರಿಂದ ನಾನು ಹಾಗು ಕಾಶಿನಾಥ ಯಲ್ದೆ , ಸಂಗನಗೌಡ ಪಾಟೀಲ , ಯಶ್ವಂತ ಗಂಗನಳ್ಳಿ , ಬಾಬು ಯಲ್ದೆ ಹಾಗು ಇತರರು ಕೂಡಿ ಆಳಂದದಕ್ಕೆ ಬಂದು ನನ್ನ ಮಗಳ ಶವ ಸರಕಾರಿ ಆಸ್ಪತ್ರೆ ಶವಗಾರ ಕಟ್ಟೆಯ ಮೇಲೆ ನೋಡಿರುತ್ತೇನೆ. ನನ್ನ ಮಗಳಿಗೆ ಆಕೆಯ ಗಂಡ ಮಾಂತೇಶ ಇತನು ಆಕೆಗೆ ಶೀಲದ ಮೇಲೆ ಸಂಶಯ ಮಾಡಿ ಬೈಯುವುದು , ಹೊಡೆಬಡೆ ಮಾಡುತ್ತಿದ್ದರಿಂದ ಆಕೆ ಮನನೊಂದು ಸದರಿ ಭಾವಿಗೆ ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಹಾರಿ ನೀರು ಕುಡಿದು ಮೃತ ಪಟ್ಟಿರುತ್ತಾಳೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಗುರುರಾವ ತಂದೆ ನಾಗೇಂದ್ರಪ್ಪ ಪೊಲೀಸ ಪಾಟೀಲ ಸಾ|| ವೈಜಾಪೂರ ಇವರು ದಿನಾಂಕ 10-07-2014 ರಂದು ಫಿರ್ಯಾದಿ ಹಾಗೂ ಆತನ ತಮ್ಮ ಶಿವಕುಮಾರ ಇಬ್ಬರು ಕೂಡಿ ತಮ್ಮ ಮೋಟಾರ ಸೈಕಲ ನಂ. ಕೆ.ಎ 33, ಹೆಚ್.ಸಿ 9421 ನೇದ್ದರ ಮೇಲೆ ನಿಂಬರ್ಗಾಕ್ಕೆ ಹೋರಟಾಗ ಸಿದ್ದಣ್ಣಾ ಇವರ ಮನೆಯ ಮುಂದೆ ಸಿದ್ದಣ್ಣಾ ತಂದೆ ಶ್ರೀಮಂತರಾವ, ನಾಗೇಂದ್ರಪ್ಪ ತಂದೆ ಶ್ರೀಮಂತರಾವ, ಬಸಣ್ಣಾ ತಂದೆ ಶ್ರೀಮಂತರಾವ ಇವರು ಮೂರು ಜನರು ಕೂಡಿ ದಾರಿ ತರುಬಿ ಭೋಸಡಿ ಮಕ್ಕಳಾ ನಮಗೆ ಸಂಭಂಧಪಟ್ಟ ಹೊಲ ನಾವು ಇನ್ನು ರಜಸ್ಟರ ಮಾಡಿಕೊಟ್ಟಿಲ್ಲ ಆ  ಹೊಲ ಯಾಕೆ ಪಾಲಿಗೆ ಮಾಡಿರುವಿರಿ ಅಂತಾ ಅಂದು ಕುಡುಗೊಲಿನಿಂದ ಎದೆಗೆ, ಮತ್ತು ಭುಜಕ್ಕೆ ಹಾಗೂ ಎರಡು ಕೈ ರಟ್ಟೆಗಳೀಗೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯಪಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀ ಸಿದ್ದಣ್ಣಾ ರೆಡ್ಡಿ ತಂದೆ ಶ್ರೀಮಂತರಾವ ರಸ್ತಾಪೂರ, ಸಾ|| ವೈಜಾಪೂರ ಇವರು ದಿನಾಂಕ 10-07-2014 ರಂದು ಫಿರ್ಯಾದಿ ಹಾಗೂ ಅವರ ತಮ್ಮ ನಾಗಣ್ಣಾ ಕೂಡಿ ತಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತಾಗ ಅದೆ ಗ್ರಾಮದ 01] ಗುರುರಾವ ತಂದೆ ನಾಗೇಂದ್ರಪ್ಪ ಪೊಲೀಸ ಪಾಟೀಲ,02] ಶಿವಕುಮಾರ ತಂದೆ ನಾಗೇಂದ್ರಪ್ಪ ಪೊಲೀಸ ಪಾಟೀಲ ಇವರು ಬಂದು ನಾವು ಈ ಹಿಂದೆ ಪಾಲಿಗೆ ಮಾಡಿದ ಹೊಲವನ್ನು ಯಾಕೆ ಗಳೆ ಹೊಡೆಯ ಬೇಡ ಅಂತ ಅಂತಿರಿ ದಿನಾಲು ಈ ಬಗ್ಗೆ ನಮ್ಮೊಂದಿಗೆ ತಕರಾರು ಮಾಡುತ್ತೀರಿ ಅಂತಾ ಬೈದು ಕೈಯಲ್ಲಿದ್ದ ಬಡಿಗೆಯಿಂದ ಬಲಗಡೆ ಹಣೆಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀಮತಿ ಅಂಬವ್ವ ಕೋರಿ ಸಾ : ಅಫಜಲಪೂರ ರವರು  ದಿನಾಂಕ 10-07-2014 ರಂದು ಮದ್ಯಾಹ್ನ 3:00 ಗಂಟೆ ಸಮಯಕ್ಕೆ ನಮ್ಮ ಅಣ್ಣತಮ್ಮಕಿಯ ಸುನೀಲ ಕೋರಿ, ಮಲ್ಲು ಕೋರಿ ಇವರು ಜಗಳ ಮಾಡುತ್ತಿದ್ದಾಗ, ಮಲ್ಲು ಕೋರಿ ಈತನ ಕೈ ನನ್ನ ತಮ್ಮ ಮಹೇಶ ಈತನಿಗೆ ಬಡೆದಿರುತ್ತದೆ. ಆಗ ನನ್ನ ತಮ್ಮ ಮಹೇಶ ಈತನು ಸದರಿಯವರಿಗೆ ಏನ್ರೊ ನೋಡಿ ಜಗಳ ಮಾಡಿ, ನನಗೆ ನಿಮ್ಮ ಕೈ ಬಡೆಯುತ್ತಿದೆ ಎಂದು ಹೇಳಿದನು, ಅದಕ್ಕೆ ಮಲ್ಲು ಕೋರಿ ಮತ್ತು ಸುನೀಲ ಕೋರಿ ಇವರು ಸೂಳೆ ಮಗನೆ ನಿಂದೆ ತಿಂಡಿ ಜಾಸ್ತಿ ಆಗಿದೆ ಎಂದು ಅವನೊಂದಿಗೆ ಜಗಳ ಮಾಡಿರುತ್ತಾರೆ, ಆಗ ಅಲ್ಲೆ ಇದ್ದ ಕೆಲವು ಜನರು ಜಗಳ ಬಿಡಿಸಿ ಕಳುಹಿಸಿರುತ್ತಾರೆ ಎಂದು ನನ್ನ ತಮ್ಮ ಮಹೇಶ ಈತನು ನನಗೆ ತಿಳಿಸಿರುತ್ತಾನೆ, ಹಿಗಿದ್ದು ಇಂದು ಸಂಜೆ 8:00  ಗಂಟೆ ಸಮಯಕ್ಕೆ ನಾನು ಮತ್ತು ನನ್ನ ತಾಯಿ ಅಂಬವ್ವ , ತಂದೆ ಹಣಮಂತ, ನನ್ನ ಹೆಂಡತಿ ಭಾರತಿ, ತಮ್ಮಂದಿರಾದ ಮಹೇಶ ಮತ್ತು ರಮೇಶ ಹಾಗೂ ಮಹೇಶನ ಹೆಂಡತಿ ಸವಿತಾ ಎಲ್ಲರು ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತಿದ್ದಾಗಭೀಮಣ್ಣ ತಂದೆ ಶಿವಪ್ಪ ಕೋರಿ, ಮಲ್ಲು ತಂದೆ ಭೀಮಣ್ಣ ಕೋರಿ, ಸುನೀಲ ತಂದೆ ಭೀಮಣ್ಣ ಕೋರಿ, ಅನೀಲ ತಂದೆ ಭೀಮಣ್ಣ ಕೋರಿ ಇವರುಗಳು ನಮ್ಮ ಹತ್ತಿರ ಬಂದು, ಜಗಳ ತೆಗೆದು ಹೊಡೆಬಡೆ ಮಾಡಿ ಗಾಯಗೋಳಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನಾಡಗೌಡ ತಂದೆ ಸಿದ್ದಪ್ಪ ಗೌಡ ಬಿರಾದಾರ ಇವರು ಸುಪರ ಮಾರ್ಕೇಟ ದಿಂದ ತಮ್ಮ ಮನೆಗೆ ಹೋಗುವ ಕುರಿತು ಸಿ.ಟಿ. ಬಸ್ಸಿಗೆ ಹೋಗಬೇಕೆಂದು ಸಿ.ಟಿ.ಬಸ್ ನಿಲ್ದಾಣದ ಎಂಟ್ರನ್ಸ ಗೇಟನಿಂದ ಸಿ.ಟಿ. ಬಸ್ ನಿಲ್ದಾಣದ ಒಳಗೆ ನಡೆದುಕೊಂಡು ಹೋಗುತ್ತಿರುವಾಗ ಸಿ.ಟಿ.ಬಸ್ ನಿಲ್ದಾಣದಲ್ಲಿ ಹಿಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆಎ 32 ಎಫ್ 1842 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಪೆಟ್ಟು ಗೊಳಿಸಿದ್ದರಿಂದ ಸದರಿಯವನು ಸ್ಥಳದಲ್ಲಿ ಮೃತ ಪಟ್ಟಿದ್ದು .ಬಸ್ ಚಾಲಕ ತನ್ನ ಬಸ್ ಸ್ಥಳದಲ್ಲಿ ನಿಲ್ಲಿಸಿ ಚಾಲಕ ಓಡಿ ಹೋಗಿರುತ್ತನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 10-07-2014 ರಂದು 5 ಪಿ.ಎಮ್ ಕ್ಕೆ ಮಹ್ಮದ ರಫಿ ಚೌಕ ಹತ್ತಿರ ಇರುವ ಸಬಿಯಾ ಕರ್ನೂಲ ಆಸ್ಪತ್ರೆಯ ಎದರಗಡೆ ರೋಡಿನ ಮೇಲೆ ಶ್ರೀ ಗೌಸಿಯಾ ಬೇಗಂ ಗಂಡ ಜಮೀರ ಖುರೇಷಿ, ಸಾಃ ಟೀಪು ಚೌಕ, ಆಜಾದಪೂರ ರೋಡ, ಅಕ್ಬರಿಯಾ ಮಜೀದ ಹತ್ತಿರ ಅಹ್ಮದ ನಗರ ಗುಲಬರ್ಗಾ ರವರು ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಮಹ್ಮದ ಯುಸುಫ ಈತನು ಮದ್ಯ ಸೇವನೆ ಮಾಡಿ ತಾನು ಚಲಾಯಿಸುತ್ತಿದ್ದ ಅಟೋರಿಕ್ಷಾ ನಂ. ಕೆ.ಎ 32 2089 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ನನಗೆ ಎಡಗಾಲು ತೊಡೆಗೆ, ಸೊಂಟಕ್ಕೆ, ಗುಪ್ತ ಪೆಟ್ಟಾಗಿದ್ದು ಎಡಗೈ ಹಸ್ತದ ಬೆರಳಿಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 10-07-2014 ರಂದು 7-30 ಎ.ಎಮ್ ಕ್ಕೆ ಆಳಂದ ರೋಡಿನಲ್ಲಿ ಬರುವ ಗಂಧಗುಡಿ ಕ್ರಾಸ್ ಹತ್ತಿರ ಬಂಕ ಎದರುಗಡೆ ರೋಡಿನ ಮೇಲೆ ಶ್ರೀಕಾಂತ ತಂದೆ ಭೋಗಪ್ಪಾ ಹೊಡ್ಲಾ, ಸಾಃ ಗಂಧಿಗುಡಿ ಲೇಔಟ ಗುಲಬರ್ಗಾ ರವರು ತನ್ನ ಟಿ.ವಿ.ಎಸ್ ಎಕ್ಸ.ಎಲ್ ನಂ. ಕೆ.ಎ 32 ಕ್ಯೂ 4736 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅರೋಪಿ ತನ್ನ ಸಿಲ್ವರ ಕಲರ್ ಮೋಟಾರ ಸೈಕಲ ನಂ. ಕೆ.ಎ 32 7778 ನೇದ್ದನ್ನು ಆಳಂದ ಚೆಕ್ ಪೊಸ್ಟ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ. ಧೂಳಪ್ಪ ತಂದೆ ರಾಮಣ್ಣ ವಾಡಿ ಸಾ: ಬ್ಲಾಕ್ ನಂ; 2 , ಕೋಳಿವಾಡಾ ಕಮಲಾಪೂರ  ತಾ;ಜಿ: ಗುಲಬರ್ಗಾ ಇವರು ದಿನಾಂಕ: 07/07/2014 ರಂದು ಬೆಳೆಗ್ಗೆ 08-00 ಗಂಟೆಯ ಸುಮಾರಿಗೆ ನನ್ನ ಮಗಳಾದ ಪೂಜಾ ಇವಳು  ಕಾಲೇಜಿಗೆ  ಹೋಗಿ ಬರುತ್ತೇನೆ  ಅಂತಾ ನಮ್ಮ ಓಣಿಯ ತನ್ನ ಪಾರ್ವತಿ ತಂದೆ ಜಗದೀಶ ಮೈಲೆಬಾನ ಇವಳೊಂದಿಗೆ ಕಾಲೇಜಿಗೆ ಹೋಗಿದ್ದುಸಾಯಂಕಾಲ 05-00 ಗಂಟೆಯಾದರೂ ನನ್ನ ಮಗಳಾದ ಪೂಜಾ ಇವಳು ಮನೆಗೆ ಬಾರದೇ ಇದ್ದಿದ್ದರಿಂದ  ನಾವು ಗಾಬರಿಯಾಗಿ ಕಾಲೇಜು ಕಡೆಗೆ ಹೋಗಿ ನೋಡಲಾಗಿ ಕಾಲೇಜು ಮುಚ್ಚಿತ್ತು. ನಂತರ ಪಾರ್ವತಿ ಮೈಲೇಬಾನೆ ಇವಳ ಮನೆಗೆ ಹೋಗಿ ವಿಚಾರಿಸಲಾಗಿ ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಪೂಜಾ ಇವಳು ತನಗೆ ಹೊಟ್ಟೆ ನೋವು ಆಗುತ್ತಿದೆ, ನಾನು ಮನೆಗೆ ಹೋಗುತ್ತೇನೆ ಅಂತಾ ಕಾಲೇಜಿನಲ್ಲಿ ನನಗೆ  ಹೇಳಿ ಹೋಗಿರುತ್ತಾಳೆ. ನಂತರ ಅವಳು ಎಲ್ಲಿಗೆ  ಹೋಗಿರುತ್ತಾಳೆ  ಅಂತಾ  ನನಗೆ  ಗೊತ್ತಿರುವುದಿಲ್ಲ ಅಂತಾ  ತಿಳಿಸಿದಳು. ನಂತರ ನಾವು ಗಾಬರಿಯಾಗಿ ಕಮಲಾಪೂರದಲ್ಲಿ ಮತ್ತು  ನಮ್ಮ  ಸಂಭಂದಿಕರು ಇರುವ ಕಡೆಗಳಲ್ಲಿ ಹೋಗಿ ಹುಡುಕಾಡಲಾಗಿ ನನ್ನ ಮಗಳು ಪತ್ತೆ ಆಗಿರುವುದಿಲ್ಲ.  ನನ್ನ ಮಗಳಾದ ಪೂಜಾ ವ: 17 ವರ್ಷ ಇವಳು ದಿನಾಂಕ; 07/09/2014 ರಂದು ಮಧ್ಯಾಹ್ನ 12-30 ಗಂಟೆ ಯಿಂದ ಸಾಯಂಕಾಲ 05-00 ಗಂಟೆಯ ಮಧ್ಯದ  ಅವಧಿಯಲ್ಲಿ  ಕಮಲಾಪೂರ ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ  ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹತ್ತಿರ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಬರುವಾಗ ಯಾರೋ ಅಪರಿಚಿತರು ನನ್ನ ಮಗಳನ್ನು ಒತ್ತಾಯಪೂರ್ವಕವಾಗಿ ಯಾವುದೋ ವಾಹನದಲ್ಲಿ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಹಿಳಾ ಠಾಣೆ : ಹುಸೇನ ಕುಮಸಿ  ಸಾ:ಶೇಖ ರೋಜಾ ಆಳಂದ ರೋಡ ಗುಲಬರ್ಗಾ ರವರ  ಮಗಳಾದ  ಸೈಯದ ಉಮ್ಮ ಹಾನಿ ಇವಳು ಈಗ ಸಧ್ಯ ಎರಡನೇ ಪಿ.ಯು.ಸಿ ಇದ್ದು, ಇವಳು ಶಾಹಿನ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಅದಕ್ಕೆ ನನ್ನ ಮಗಳು ದಿನಾಂಕ 04-07-2014 ರಂದು ಬೆಳಿಗ್ಗೆ 7.30 ಎ.ಎಮ್ ಕ್ಕೆ ಕಾಲೇಜಿಗೆ ಹೋಗುತ್ತೇನೆ ಎಂದು ಹೋದವಳು ಮತ್ತೆ ಸಾಯಂಕಾಲವಾದರೂ ಮರಳಿ ಮನೆಗೆ ಬಂದಿರುವುದಿಲ್ಲ ಕಾರಣ ನಾವು ನಮ್ಮ ಮಗಳ ಕಾಲೇಜಿನ ಸ್ನೇಹಿತರನ್ನೇಲ್ಲ ವಿಚಾರಿಸಿದೆವು. ಆದರೆ ನಮ್ಮ ಮಗಳ ಬಗ್ಗೆ ಏನು ಗೋತ್ತಾಗಲಿಲ್ಲ. ನಂತರ ನಾವು ಈಗ ಸುಮಾರು 3 ದಿವಸಗಳಿಂದ ನಮ್ಮ ಸಂಬಂಧಿಕರ ಮನೆಗಳಿಗೆಲ್ಲ ಹೋಗಿ ವಿಚಾರಿಸಿದೆವು. ಅಲ್ಲದೇ ಹೈದ್ರಾಬಾದ, ಬಾಂಬೆ, ಶಹಾಬಾದ ಈ ಎಲ್ಲಾ ಸ್ಥಳಗಳಲ್ಲಿ ನಮ್ಮ ಸಂಬಂಧಿಕರ ಬಗ್ಗೆ ಹೋಗಿ ವಿಚಾರಿಸಿದೆವು. ಆದರೆ ಅಲ್ಲಿಯೂ ಕೂಡ ನಮ್ಮ ಮಗಳು ಬಂದಿರುವುದಿಲ್ಲ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ವೆಂಕಟೇಶ ತಂದೆ ಹೆಬ್ಬಾಳಪ್ಪಾ ಕಪಲಣ್ಣವರ್ ಸಾಃ ಪ್ಲಾಟ ನಂ. 04, ಲಕ್ಷ್ಮಿ ಗೋಪಾಲ್ ಅಪಾರ್ಟಮೆಂಟ್ ಪಿ.ಡಬ್ಲೂ.ಡಿ ಕ್ವಾಟರ್ಸ ಎದರುಗಡೆ ಹೊಸ ಜೇವರ್ಗಿ ರೋಡ್ ಗುಲಬರ್ಗಾ ಇವರು ದಿನಾಂಕಃ 23/04/2014 ರಂದು ಬೆಳಗ್ಗೆ 09:00 ಎ.ಎಂ. ಸುಮಾರಿಗೆ ನನ್ನ ಅಳಿಯನಾದ ಮೋಹನಕುಮಾರ ಈತನು ಸೇಡಂ ರಿಂಗ್ ರೋಡ್ ಹತ್ತಿರದ ದರ್ಶನ್ ಟವರ್ ಎದರುಗಡೆ ಪ್ಲೀಜರ್ ಮೋಟಾರ ಸೈಕಲ ನಂ. ಕೆ.ಎ 32 ಇಇ 1137 ಅಃಕಿಃ 45,000/- ರೂ. ನೇದ್ದನ್ನು ನಿಲ್ಲಿಸಿ ದರ್ಶನ್ ಟವರದಲ್ಲಿರುವ ಹೇರ್ ಕಟಿಂಗ್ ಅಂಗಡಿಗೆ ಹೋಗಿ ಕಟಿಂಗ್ ಮಾಡಿಸಿಕೊಮಡು ಮರಳಿ 09:30 ಎ.ಎಂ. ಸುಮಾರಿಗೆ ಬಂದು ನೋಡಲಾಗಿ ನಿಲ್ಲಿಸಿದ ಸ್ಥಳದಲ್ಲಿ ಮೋಟಾರ ಸೈಕಲ ಇರಲಿಲ್ಲಾ. ಎಲ್ಲಾ ಕಡೆ ಹುಡುಕಾಡಿ ನಂತರ ನನಗೆ ಫೋನ್ ಮಾಡಿ ವಿಷಯ ತಿಳಿಸಿದ್ದು ನಾವಿಬ್ಬರೂ ಕೂಡಿ ಎಲ್ಲಾ ಕಡೆಗೆ ಹುಡುಕಾಡಿದರೂ ವಾಹನ ಸಿಗಲಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.