POLICE BHAVAN KALABURAGI

POLICE BHAVAN KALABURAGI

29 September 2016

KALABURAGI DISTRICT REPORTED CRIMES

ಕಳವು ಪ್ರಕರಣ:
ಸ್ಟೇಷನ್ ಬಜಾರ ಪೊಲೀಸ್ ಠಾಣೆ :  ದಿನಾಂಕ 29/09/2016 ರಂದು ಶ್ರೀಮತಿ ಚಂದ್ರಕಲಾ ಗಂಡ ಅನಿಲಕುಮಾರ ಅಲ್ಲೂರೆ ಸಾ: ಸಿ ಪಿ.ಡಬ್ಲೂಡಿ ಕ್ವಾಟರ್ಸ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ 28/09/2016 ರಂದು ರಾತ್ರಿ 9 ಪಿ.ಎಂ.ಕ್ಕೆ ತಾವು ಮನೆಯ ಬಾಗಿಲ ಕೀಲಿ ಹಾಕಿಕೊಂಡು ಕೊಟನೂರದ ತಮ್ಮ ತಂಗಿ ರೇಖಾ ಕನಕಗಿರಿ ರವರ  ಮನೆಗೆ ಹೋಗಿ ಇಂದು  ದಿನಾಂಕ 29/09/2016 ರಂದು ಬೆಳಿಗ್ಗೆ 11ಗಂಟೆಗೆ ಮರಳಿ ಬಂದು ನೋಡಲಾಗಿ ಯಾರೂ ಮನೆಯ ಬಾಗಿಲ ಕೊಂಡಿ ಮುರಿದು ಒಳಗಡೆ ಪ್ರವೇಶ ಮಾಡಿ ಮನೆಯಲ್ಲಿದ್ದ ಎರಡು ಅಲಮಾರಿಗಳನ್ನು  ಮುರಿದು 1) 4 ತೊಲೆ ಬಂಗಾರದ ಎರಡು ಬಳೆಗಳು ಅ.ಕಿ. 1,00,000/- 2) 3 ತೊಲೆ ಬಂಗಾರದ ಚೈನ್ ಅ.ಕಿ. 80,000/- 3) 1 ತೊಲೆ ನೆಕ್ಲೆಸ್ ಅ.ಕಿ. 20,000/- 4) 10 ತೊಲೆ ಬಂಗಾರದ ಎರಡು ಪಾಟಲಿ ನಾಲ್ಕು ಬಿಲ್ಲವಾರಗಳು ಅ.ಕಿ. 2,50,000/- ಮತ್ತು ನಗದು ಹಣ 60,000/- ಹೀಗೆ ಒಟ್ಟು 5,10,000/- ರೂ ಬೇಲೆ ಬಾಳುವ ಬಂಗಾರದ ಒಡವೆಗಳು ಹಾಗು ನಗದು ಹಣ ಯಾರೋ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿ ಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಕಮಲಾಪೂರ ಪೊಲೀಸ ಠಾಣೆ: ದಿನಾಂಕ 28-09-2016  ರಂದು ಶ್ರೀ ಮಹಾದೇವ ತಂ ಮಲ್ಲಪ್ಪ ಸಾ: ಮರಗುತ್ತಿ ಇವರು ಠಾಣೆಗೆ ಹಾಜರಾಗಿ ದಿ: 27-09-2016 ರಂದು ರಾತ್ರಿ 10 ಗಂಟೆ ಸುಮಾರಿ ತಮ್ಮ ಮನೆಗೆ ಅಡುಗೆ ಕೋಣೆ ಮತ್ತು ಪಕ್ಕದ ಇನ್ನೊಂದು ಕೋಣೆಗೆ ಕೀಲಿ ಹಾಕಿಕೊಂಡು ಅದರ ಪಕ್ಕದಲ್ಲಿರುವ ರೂಮಿನಲ್ಲಿ ತಾನು ಮತ್ತು ತನ್ನ ಕುಟುಂಬದವರು ಮಲಗಿಕೊಂಡಿದ್ದು ದಿ: 28-09-2016 ರಂದು ಬೆಳಿಗ್ಗೆ 4-00 ಗಂಟೆಗೆ ಎದ್ದು ನೋಡಲಾಗಿ ತಾವು ಮಲಗಿದ್ದ ರೂಮಿಗೆ ಯಾರೊ ಹೊರಗಡೆಯಿಂದ ಕೊಂಡಿ ಹಾಕಿದ್ದು ನಾನು ಚೀರಾಡಿದಾಗ ಪಕ್ಕದ ಮನೆಯವರು ಬಂದಿ ಹೊರಗಡೆಯ ಕೊಂಡಿ ತೆಗೆದಾಗ ನೋಡಲಾಗಿ ನಾನು ರಾತ್ತರ ಕೀಲಿ ಹಾಕಿದ್ದ ಕೋಣೆಗಳ ಕೀಲಿಗಳನ್ನು ಯಾರೊ ಮುರಿದಿದ್ದು ನಾನು ಘಾಬರಿಗೊಂಡು ಕೀಲಿ ಮುರಿದ ಮನೆಗಳ ಒಳಗೆ ಹೋಗಿ ನೋಡಲಾಗಿ ಎಲ್ಲಾ ಸಾಮನುಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನೋಡಲಾಗಿ ಮನೆಯ ಸಂದೂಕಿನಲ್ಲಿ ಇಟ್ಟಿದ್ದ 1) ಎರಡು ತೊಲೆಯ ಬಂಗಾರದ ಚೈನ್ ಅಂ.ಕಿ. 60,000/-, 2) ಒಂದು ತೊಲೆಯ ಬಂಗಾರದ ಭೋರಮಳ ಸರ, ಅಂ.ಕಿ. 30,000/- 3) ಒಂದು ತೊಲೆ ಬಂಗಾರದ ಸುತ್ತುಂಗುರ ಅಂ.ಕಿ 15,000/- 4) ಒಂದುವರೆ ತೊಲೆಯ ಬಂಗಾರದ 2 ಪಾಟ್ಲಿಗಳು 5) ಬೆಳ್ಳಿಯ ಸಾಮಾನುಗಳು ಒಟ್ಟು  5 ತೊಲೆ ಅಂ.ಕಿ 4,000/- ಹೀಗೆ ಒಟ್ಟು 2,24,000/- ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳು ಮತ್ತು ನಗದು ಕಳ್ಳತನವಾಗಿದ್ದು ಕಳ್ಳತನವಾದ ತಮ್ಮ ಸಾಮಾನುಗಳನ್ನ ಪತ್ತೆ ಹಚ್ಚುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಲಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

27 September 2016

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 26/09/16 ರಂದು ಮೃತ ಚಂದ್ರಕಾಂತ ಇತನು ಹಿರೋ ಹೊಂಡಾ ಸ್ಪೆಂಡರ ಕೆಎ 32 Y 5698 ನೇದ್ದರ ಹಿಂದೆ ಕಾಮಣ್ಣಾನಿಗೆ ಕೂಡಿಸಿಕೊಂಡು ಸೈಯ್ಯದ ಚಿಂಚೋಳಿ ಕ್ರಾಸದಿಂದ ಅಂದಾಜ ಎರಡು ಫರ್ಲಾಂಗ ದೂರದಲ್ಲಿ ಇರುವ ರೇಣುಕಾ ನಗರ ಕ್ರಾಸ ಹತ್ತಿರ ಇರುವ ರೋಡ ಡಿವೈಡರ ಮಧ್ಯದಲ್ಲಿ ಇರುವ ಸಂದಿಯಿಂದ ಮೋಟಾರ ಸೈಕಲನ್ನು ಸಾವಕಾಶವಾಗಿ ಹುಮನಾಬಾದ ರಿಂಗ ರೋಡ ಕಡೆ ಟರ್ನ ಮಾಡುತ್ತಿದ್ದಾಗ ಆಗ ಅದೇ ಸಮಯಕ್ಕೆ ಅಳಂದ ಚೆಕ್ಕ ಪೋಸ್ಟ ರೋಡ ಕಡೆಯಿಂದ ಕೆಂಪು ಬಣ್ಣದ MH 04 BQ 5728 ಕಾರ ಚಾಲಕನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಹಾರ್ನ ವಗೈರೇ ಹಾಕದೇ  ನಡೆಯಿಸಿಕೊಂಡು ಬಂದವನೇ ನಮ್ಮ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ ಕಾರ ಚಾಲಕ ಸ್ಥಳದಲ್ಲಿ ಕಾರು ನಿಲ್ಲಿಸಿದನು. ಇದರಿಂದಾಗಿ  ಮೃತ ತಲೆ ಹಿಂದೆ ಭಾರಿ ರಕ್ತಗಾಯವಾಗಿದ್ದು, ಕಾಮಣ್ಣಾನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಕಾರ ಚಾಲಕ ಅಪಘಾತಪಡಿಸಿದ ಕಾರಿನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಿಗಿಗೆ ತೆಗೆದುಕೊಂಡು ಹೋದಾಗ ವೈದ್ಯರು ಚಂದ್ರಕಾಂತನಿಗೆ ನೋಡಿ ಈಗಾಗಲೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದಾಗ ಕಾರ ಚಾಲಕ ಅಲ್ಲಿಂದ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

26 September 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :ಶ್ರೀ  ಅಶೋಕ ತಂದೆ ಶಾಂತಪ್ಪ ಸಾವು ಹೊಸಮನಿ ಸಾ: ನೆಲ್ಲೊಗಿ ತಾ: ಜೆವರ್ಗಿ ಜಿ: ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 25/09/2016 ರಂದು ಬೆಳಿಗ್ಗೆ 9 ಗಂಟೆಗೆ ನಮ್ಮ ಚಿಕ್ಕಪ್ಪನ ಮಗನಾದ ಆನಂದ ತಂದೆ ಅಪ್ಪಸಾಬ ಹೊಸಮನಿ ಮತ್ತು ಕಾರ ಚಾಲಕ ರಾಜು @ ರಾಜಶೇಖರ ಕೂಡಿ ಸುಜುಕಿ ಸಿಫ್ಟ್ ಕಾರ ನಂ. ಕೆಎ-32ಎಮ್-8035 ತೆಗೆದುಕೊಂಡು ಕಲಬುರಗಿಗೆ ಹೋಗುವಾಗ ಸರಡಿಗಿ (ಬಿ) ಗ್ರಾಮ ಇನ್ನೂ 1 ಕಿಮಿ ದೂರ ಇರುವಾಗ ರಾಷ್ಟ್ರೀಯ ಹೆದ್ದಾರಿ 218 ರ ತಿರುವಿನಮಲ್ಲಿ ಚಾಲಕ ರಾಜು @ ರಾಜಶೇಖರನು ಕಾರನ್ನು ಅತಿವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸಿ ಎದುರಿನಿಂದ ಬರುತ್ತಿದ್ದ  ವಾಹನದಿಂದ ತಪ್ಪಿಸಲು ಹೋಗಿ ಒಮ್ಮೆಲೆ ಕಟ್ ಹೊಡೆದಿದ್ದಕ್ಕೆ ಕಾರ್ ಅದೆ ವೇಗದಲ್ಲಿ ಹೋಗಿ ರೋಡಿನ ಎಡಬದಿಯ ಮರಕ್ಕೆ ಅಪಘಾತವಾಗಿ ಕಾರಿನಲ್ಲಿ ಕುಳಿತಿದ್ದ ಆನಂದನಿಗೆ ಭಾರಿ ಗಾಯವಾಗಿ ಕಾರಿನಲ್ಲಿಯೆ ಮೃತಪಟ್ಟಿದ್ದು. ಕಾರಿನ ಚಾಲಕ ರಾಜು @ ರಾಜಶೇಖರನಿಗೆ ಗಾಯಗಳಾಗಿದ್ದು ಉಪಚಾರ ಕುರಿತು ಕಲಬುರಗಿಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಾರ ನಂ. ಕೆಎ-32 ಎಮ್ -8035 ನೇದ್ದರ ಚಾಲಕ ರಾಜಿ @ ರಾಜಶೇಖರ ಅಳ್ಳಗಿ ಈತನು ಅತೀ ವೇಗ ಹಾಗೂ ಅಲಕ್ಷತನದಿಂದ ಓಡಿಸಿ ಮರಕ್ಕೆ ಡಿಕ್ಕಿ ಮಾಡಿ ಆನಂದನ ಸಾವಿಗೆ ಕಾರಣನಾಗಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಂತಾ ಹೇಳಿ ಬರೆಯಿಸಿದ ಹೇಳಿಕೆ ನಿಜವಿರುತ್ತದೆ.  ಅಂತಾ ಕೊಟ್ಟ ದೂರಿನ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಳಂದ ಠಾಣೆ:
ವರದಕ್ಷಿಣೆ ಕಿರುಕುಳ ಪ್ರಕರಣ:ದಿನಾಂಕ:25/09/2016 ರಂದು ಶ್ರೀಮತಿ ಗೋಮುಬಾಯಿ ಗಂಡ ವೆಂಕಟ್‌ ರಾಠೋಡ ಸಾ: ಜೆಮಗಾ (ಕೆ) ತಾಂಡಾ ತಾ: ಆಳಂದರವರು ಠಾಣೆಗೆ ಹಾಜರಾಗಿ ತನ್ನ ಮಗಳಾದ ನಿಖಿತಾಳಿಗೆ ಜೆಮಗಾ (ಕೆ) ತಾಂಡಾದ ಸಂಜುಕುಮಾರನೊಂದಿಗೆ ದಿನಾಂಕ 01-05-2016 ರಂದು ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ಅವಳ ಗಂಡ ಅತ್ತೆ ಮಾವ ಇವರು ನನ್ನ ಮಗಳೊಂದಿಗೆ ಎರಡು-ಮೂರು ತಿಂಗಳ ಚನ್ನಾಗಿ ಇದ್ದು ನಂತರ ಅವಳಿಗೆ ಹೊಲ-ಮನೆ ಕೆಲಸ ಬರುವುದಿಲ್ಲ ನೀನು ನಮ್ಮ ಮನೆಗೆ ಹೊಂದಾಣಿಕೆ ಆಗುವದಿಲ್ಲ. ಅಂತಾ ಹೊಡೆ-ಬಡೆ ಮಾಡುತ್ತಾ ಅವಾಚ್ಯವಾಗಿ ಬೈಯುವುದು ಮತ್ತು ಅದೆ ತಾಂಡಾದಲ್ಲಿರುವ ನಮ್ಮ ಮನೆಗೆ ಬರದಂತೆ ಅವಳಿಗೆ ಹೆದರಿಸುವುದು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದು. ನನಗೆ ಗಂಡನ ಮನೆಯವರ ಕಿರಕುಳ ಸಾಕಾಗಿದೆ ಎಂದು ನನ್ನ ಮಗಳು ಆಗಾಗ ಹೊರಗಡೆ ಸಿಕ್ಕಾಗ ನಮಗೆ ಈ ವಿಷಯ ತಿಳಿಸಿರುತ್ತಾಳೆ. ಹೀಗಿದ್ದು ನಮ್ಮ ಅಳಿಯ ಸಂಜುಕುಮಾರ ದಿನಾಂಕ:23/09/2016 ರಂದು ಸಾಯಂಕಾಲ ನಮ್ಮ ಮಗಳು ಬಹಿರ್ದೆಸೆಗೆ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಎಂದು ವಿಷಯ ತಿಳಿಸಿದಾಗ ನಾವು ತಾಂಡಾದಲ್ಲಿ ಮತ್ತು ನಮ್ಮ ಬೀಗರು ನೆಂಟರಲ್ಲಿ ವಿಚಾರಿಸಲಾಗಿ ನಮ್ಮ ಮಗಳು ಎಲ್ಲಿಯು ಸಿಕ್ಕಿರುವುದಿಲ್ಲ. ಈ ಬಗ್ಗೆ ದಿನಾಂಕ 24/09/2016 ರಂದು ಆಳಂದ ಪೊಲೀಸ ಠಾಣೆಯಲ್ಲಿ  ನನ್ನ ಮಗಳು ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ್ದು ಇರುತ್ತದೆ. ದಿನಾಂಕ:25/09/2016 ರಂದು ಬೆಳಿಗ್ಗೆ 8:00 ಗಂಟೆ ಸುಮಾರಿಗೆ ನಮ್ಮ ತಾಂಡಾದ ನೀಲಕಂಠ ಪವಾರ ಇತನು ನಮ್ಮ ಮನೆಗೆ ಬಂದು ತಾನು ತನ್ನ ಮೋಟರ ಸೈಕಲ ಮೇಲೆ ಆಳಂದಕ್ಕೆ ಹೋಗುವ ಕುರಿತು ತಾಂಡಾದಿಂದ ತಡೋಳ ರೋಡಿನ ಕಡೆಗೆ ಹೋಗುವಾಗ ತಡೋಳಾ ಗ್ರಾಮದ ಹತ್ತಿರದ ಸರಕಾರಿ ಗೈರಾಣ ಭೂಮಿಯಲ್ಲಿ ಇರುವ ಭಾವಿಯಲ್ಲಿ ಬಿದ್ದು ನಿಮ್ಮ ಮಗಳು ನಿಖಿತಾ ಮೃತ ಪಟ್ಟಿರುತ್ತಾಳೆ ಎಂದು ತಿಳಿಸಿದಾಗ ನಾವು ಎಲ್ಲರು  ಹೋಗಿ ನೋಡಲಾಗಿ ನನ್ನ ಮಗಳ ಶವವು ಭಾವಿಯಲ್ಲಿ ತೇಲುತ್ತಿದ್ದು. ನನ್ನ ಮಗಳಿಗೆ ಆಕೆಯ ಗಂಡ ಸಂಜಯ ತಂದೆ ಕನ್ನಿರಾಮ ಪವಾರ, ಆಕೆಯ ಮಾವ ಕನ್ನಿರಾಮ ತಂದೆ ಹರಿಶ್ಚಂದ್ರ ಪವಾರ ಹಾಗು ಆಕೆಯ ಅತ್ತೆ ಶಾಂತಾಬಾಯಿ ಗಂಡ ಖನಿರಾಮ್‌ ಪವಾರ ಇವರು ಅವಳಿಗೆ ಹೊಲ ಮನೆ ಕೆಲಸ ಬರುವುದಿಲ್ಲ ನೀನು ನಮ್ಮ ಮನಗೆ ಹೊಂದಿಕೆಯಾಗುವದಿಲ್ಲ ಎಂದು ಬೈದು ಹೊಡೆ-ಬಡೆ ಮಾಡಿ ದೈಹಿಕ ಮಾನಸಿಕ ಕಿರುಕುಳ ನೀಡಿದ್ದರಿಂದ ಅವಳು ಮಾನಸಿಕವಾಗಿ ಮನನೊಂದುಕೊಂಡು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು. ನನ್ನ ಮಗಳ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜು ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 24-09-2016 ರಂದು ಪಿಎಸ್ಐ ಆಪಜಲಪೂರ ಠಾಣೆ ರವರು ಠಾಣೆಯಲಿದ್ದಾಗ ಅಫಜಲಪೂರ ಪಟ್ಟಣದ ಅಂಬಾಬಾಯಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಿಗೇರಿ ಸಾ|| ಅಫಜಲಪೂರ 2) ಸೊಂದಪ್ಪ ತಂದೆ ಪರಮೇಶ್ವರ ಹೊಸ್ಮನಿ ಸಾ|| ಅಫಜಲಪೂರ ಇವರನ್ನು ಠಾಣೆಗೆ ಬರಮಾಡಿಕೊಂಡು. ದಾ ಠಾಣೆಯ ಸಿಬ್ಬಂದಿ ಜನರಾದ 1) ಚಂದ್ರಕಾಂತ ಸಿಹೆಸಿ-449, 2) ಹಜರತ್‍ಅಲಿ ಹೆಚ್.ಸಿ-160 3) ಶರಣು ಪಿಸಿ-881 ರವರನ್ನು ಸಂಗಡ ಕರೆದುಕೊಂಡು ಒಂದು ಖಾಸಗಿ ಟಾಟಾಸುಮೊ ವಾಹನದಲ್ಲಿ ಪಂಚರು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರೊಂದಿಗೆ ಹೋಗಿ ನೋಡಲಾಗಿ ಪಟ್ಟಣದ ಅಂಬಾಬಾಯಿ ಗುಡಿ ಮುಂದಿನ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಪಂಚರ ಸಮಕ್ಷಮ ನಾನು ಸಿಬ್ಬಂದಿಯವರೊಂದಿಗೆ ದಾಳಿ ಜೂಜಾಡುತ್ತಿದ್ದ ಎಲ್ಲಾ 05 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಆನಂದ ತಂದೆ ನಾರಾಯಣಸಿಂಗ ಸಾ|| ಅಫಜಲಪೂರ 2) ಸುನೀಲ ತಂದೆ ಗುರುದೇವ ಸಾ|| ಅಫಜಲಪೂರ 3) ಸಿದ್ದಾರಾಮ ತಂದೆ ಮಲಕಪ್ಪ ಸಾ|| ಅಫಜಲಪೂರ 4) ಶ್ರೀಶೈಲ ತಂದೆ ಅರ್ಜುನ ಸಾ|| ಅಫಜಲಪೂರ 5) ಅರ್ಜುನ ತಂದೆ ಗುರುದೇವಪ್ಪ ಮ್ಯಾಳೇಸಿ ಸಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವರ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಭಂದಪಟ್ಟಂತೆ  52 ಇಸ್ಪೆಟ ಎಲೆಗಳು ಮತ್ತು ನಗದು ರೂ 2620/- ಹಣ  ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಆಪಾದಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

24 September 2016

Kalaburagi District Reported Crimes

ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿಂಗಮ್ಮ ಗಂ ಜಗದೇವಪ್ಪ ಹಚ್ಚಡ ಸಾ: ಕುಮ್ಮನಸಿರಸಗಿ ರವರ ಮಗಳಾದ ವಿಧ್ಯಾಶ್ರೀ ವ: 20 ವರ್ಷ ಇವಳಿಗೆ ಈಗ 11 ತಿಂಗಳುಗಳ ಹಿಂದೆ ಕುಕನೂರ ಗ್ರಾಮದ ಹುಲೆಪ್ಪ ತಂ ಗೊಲ್ಲಾಳಪ್ಪ ರಾಯಗೋಳ ರವರೊಂದಿಗೆ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿ ಕೊಟ್ಟಿದ್ದು ಹುಲೆಪ್ಪನಿಗೆ 6 ಜನ ಅಣ್ಣತಮ್ಮಂದಿರಿದ್ದು, ಅವರಲ್ಲಿ ನಿಂಗಪ್ಪ ಎಂಬುವನು ತಿರಿಕೊಂಡಿರುತ್ತಾರೆ. ಅರಳಗುಂಡಗಿ ಸಿಮೆಯಲ್ಲಿ ಹುಲೆಪ್ಪನ ಪಿರ್ತಾರ್ಜಿತ ಆಸ್ತಿ ಇದ್ದು, ಅವರಿಗೆ ತಲಾ 7 ಎಕರೆ ಜಮೀನು ಬಂದಿರುತ್ತದೆ ನನ್ನ ಅಳಿಯ ಸ್ವಲ್ಪ ಎತಾರ್ಥನಿದ್ದು, ಅವನ ಹೆಸರಿಗೆ ಇದ್ದ ಆಸ್ತಿಯನ್ನು ಅವರ ತಮ್ಮಂದಿರರಾದ ಬೀಮಣ್ಣ ತಂದೆ ಗೊಲ್ಲಾಳಪ್ಪ, ಮಂಜೂನಾಥ ತಂ ಗೊಲ್ಲಾಳಪ್ಪ , ದೇವಿಂದ್ರ ತಂದೆ ಗೊಲ್ಲಾಳಪ್ಪ ಹಾಗೂ ಹುಲೆಪ್ಪನ ಅಕ್ಕ ಉಮಾಶ್ರೀ ತಂದೆ ಗೊಲ್ಲಾಳಪ್ಪ ರವರು ಹೇಗಾದರೂ ಮಾಡಿ ಆಸ್ತಿ ಹೊಡೆಯಬೇಕಂತ ಆಗಾಗ ಮನೆಯಲ್ಲಿ ಮಾತಾಡುತ್ತಿದ್ದನ್ನು ನನ್ನ ಮಗಳು ವಿಧ್ಯಾಶ್ರೀ ನನ್ನ ಮುಂದೆ ಹೇಳುತ್ತಿದ್ದಳು ಈ ವಿಷಯದ ಬಗ್ಗೆ ನನ್ನ ಮಗಳು ಅವರಿಗೆ ಎದುರು ಮಾತಾಡಿದಕ್ಕೆ ಕಿರುಕುಳ ಕೊಡುತ್ತಾ ಬಂದಿದ್ದು, ನನ್ನ ಮಗಳೂ ಆಗಾಗ ಹೆಳುತ್ತಿದ್ದಳು. ನನ್ನ ಮಗಳು ತಿಳಿದವಳಿದ್ದು, ಹುಲೆಪ್ಪನ ಹೆಸರಿಗಿದ್ದ ಹೊಲವನ್ನು ತನ್ನ ಹೆಸರಿಗೆ ಮಾಡಿಕೊಡಲು ಆಗುವದಿಲ್ಲ ಅದಕ್ಕೆ ನನ್ನ ಮಗಳಿಗೆ ಚಿತ್ರ ಹಿಂಸೆ ಕೊಟ್ಟರೆ ನಮ್ಮ ಮಾತು ಕೇಳುತ್ತಾಳೆ ಅಂತಾ ತಿಳಿದು ಅವಳಿಗೆ ದಿನಾಲು ಕಿರುಕುಳ ಕೊಡುತ್ತಿದ್ದರು. ದಿನಾಂಕ: 22-09-2016 ರಂದು 4 ಪಿ.ಎಂ ಸುಮಾರಿಗೆ ನಮ್ಮ ಸಂಬಂದಿಕನಾದ ಶರಣಪ್ಪ ಉಮ್ಮರಗಿ ರವರು ನನಗೆ ಪೋನ ಮಾಡಿ ನಿಮ್ಮ ಮಗಳು ವಿಧ್ಯಾಶ್ರೀ ತಮ್ಮ ಹೊಲದ ಬಾವಿಯಲ್ಲಿ ಬಿದ್ದು, ಮೃತಪಟ್ಟಿರುತ್ತಾಳೆ ಅಂತಾ ಹೇಳಿದರು. ನಂತರ ನಾನು ಮತ್ತು ನಮ್ಮ ಸಂಬಂದಿಕರಾದ ರಮೇಶ ಉಮಗರಗಿ , ಶಂಕಲಿಂಗ ಮೊರಟಗಿ, ಸಿದ್ದಲಿಂಗಪ್ಪ ಕೋಟೆ ರವರೆಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ನನ್ನ ಮಗಳ ಶವ ಬಾವಿ ನಿರಿನಿಂದ ಶರಣಪ್ಪ ಉಮ್ಮರಗಿ ಮತ್ತು ರಮೇಶ ಮುದಾದಮ್ಮ ರವರ ಹೊರಗೆ ತೆಗೆದು ತಂಡೆಯ ಮೇಲೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ರವರು ದಿನಾಂಕ:22/09/2016 ರಂದು ಬೇಳಿಗ್ಗೆ 10:00 ಗಂಟೆ ಸುಮಾರಿಗೆ ಎಂದಿನಂತೆ ಮನೆಯಿಂದ ಕುರಿಗಳನ್ನು ತಗೆದುಕೊಂಡು ಕೇಶವ ಕೊರಳ್ಳಿ ಸಾಹುಕಾರರವರ ಹೊಲದ ಕಡೆಗೆ ಮೇಯಿಸಲು ಹೋಗಿದ್ದು ಸದರಿ ಹೊಲವನ್ನು ನಮ್ಮ ಗ್ರಾಮದ ಗುಲಾಬಸಾಬ ಮುಲ್ಲಾರವರು ಹೊಲ ಮಾಡಿದ್ದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಅವರ ಹೊಲದ ಬಂದಾರಿ ಹತ್ತಿರ ಕುರಿ ಮೇಯಿಸುತ್ತಿರುವಾಗ ಗುಲಾಬಸಾಬ ಮುಲ್ಲಾರವರ ಮಗನಾದ ಫಕ್ರೋದ್ದಿನ್ ಮುಲ್ಲಾ ಇತನು ನನ್ನ ಹತ್ತಿರ ಬಂದು ನನಗೆ ಮಾತನಾಡಿಸುತ್ತಾ ಒಮ್ಮಲೇ ನನ್ನ ಎರಡು ಕೈಗಳು ಹಿಡಿದು ನೆಲಕ್ಕೆ ನೂಕಿಸಿಕೊಟ್ಟಾಗ ನಾನು ಯಾಕೇ ನನ್ನ ಕೈಹಿಡಿದು ನೆಲಕ್ಕೆ ಕೆಡವಿದಿ ಎಂದು ಚೀರಾಡುತ್ತಿರುವಾಗ ಬಾಯಿಗೆ ಬಟ್ಟೆ ಒತ್ತಿ ಕುತ್ತಿಗೆ ಹಿಡಿದು ಚೀರಾಡಿದರೆ ಜೀವ ಖಲಾಸ ಮಾಡುತ್ತೇನೆ ಅಂತಾ ನನಗೆ ಜಬರದಸ್ತಿಯಿಂದ ಒಂದು ಬಾರಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ನಾನು ಕೆಡಸಿರುವ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಖಲಾಸ ಮಾಡುತ್ತೇನೆ ಅಂದು ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ನಾನು ಬೇಹೋಷಾಗಿ ಬಿದ್ದಾಗ ಪಕ್ಕದ ಹೊಲದ ನಾಗಣ್ಣಾ ಪುಜಾರಿ ಆತನ ಹೆಂಡತಿ ಮಲ್ಲಮ್ಮ ಪುಜಾರಿ ಹಾಗು ರವಿ ಕಲಶೇಟ್ಟಿ ರವರು ಬಂದು ನನಗೆ ಎಬ್ಬಿಸಿ ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 September 2016

KALABURAGI DISTRICT REPORTED CRIMES

ಗಾಂಜಾ ಜಪ್ತಿ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 19.09.2016 ರಂದು ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಪೊಲೀಸ್  ಠಾಣೆ ರವರು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ಅವರಾದ ಸಿಮಾಂತರ  ಹೊಲದಲ್ಲಿ ಹತ್ತಿ ಬೆಳೆ ಇದ್ದ ಹೊಲದಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗಾಂಜಾದ ಗಿಡಗಳನ್ನು ಬೆಳೆಸಿರುತ್ತಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪೊಲೀಸ್ ಉಪಾಧೀಕ್ಷಕರು ಗ್ರಾಮೀಣ ಉಪ ವಿಭಾಗ ಕಲಬುರಗಿ ರವರಿಗೆ ದಾಳಿ ಮಾಡಲು ಪರವಾನಿಗೆ ಪಡೆದುಕೊಂಡು ಮಾನ್ಯ ತಹಶೀಲದಾರ ರವರಿಗೆ ಮಾಹಿತಿ ತಿಳಿಸಿ ಜೇವರಗಿ ಪೊಲೀಸ್ ಠಾಣೆಗೆ ಬರಮಾಡಿಕೊಂಡು ಪಂಚರಾದ 1) ಶ್ರೀ ಕಲ್ಲಪ್ಪಗೌಡ ಮಾಲಿ ಪಾಟೀಲ ಗ್ರಾಮ ಲೇಖ ಪಾಲಕರು ಕೋಳಕೂರ ಮತ್ತು 2) ಶ್ರೀ ನಾಗಣ್ಣ ವಾಲಿಕಾರ್ ಸಾ|| ಅವರಾದ್ ಇವರಿಗೆ ಬರಮಾಡಿಕೊಂಡು ಠಾಣೆಯ ಸಿಬ್ಬಂದಿರವರಾದ ಶ್ರೀ ಮಲ್ಲಿಕಾರ್ಜುನ, ಶ್ರೀ ಗುರುಬಸಪ್ಪ , ಶ್ರೀ ಮಲ್ಲಿಕಾರ್ಜುನ ಭಾಸಗಿ, ಶ್ರೀ ರಾಜಕುಮಾರ, ಶ್ರೀ ಶಿವರಾಜ ರವರೊಂದಿಗೆ ಸಿಪಿಐ ಜೇವರಗಿ ವೃತ್ತ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ  ಅಂದಾಜು 200 ಗ್ರಾಂದಷ್ಟು ಹಸಿ ಗಾಂಜಾದ ಎಲೆಗಳು ಅಂ.ಕಿ 1000/- ರೂ ಜಪ್ತಿ ಮಾಡಿ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಶಾಂತಪ್ಪ ತಂದೆ ಮಲ್ಲೇಶಪ್ಪ ತೆಗ್ಗಳ್ಳಿ ಸಾ|| ಚೆನ್ನೂರ ಈತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:

ಮಹಾಗಾಂವ ಪೊಲೀಸ್ ಠಾಣೆ: ದಿನಾಂಕ:20/09/2016 ರಂದು ಮಹಾಗಾಂವ ಕ್ರಾಸನಲ್ಲಿ 2 ಜನರು ಒಂದು ಹೋರಿಯನ್ನು ಹೊಡೆದು ಕೊಂಡು ಬಂದು ಜಾವಿದ್ ಕುರೇಶಿ ಸಾ: ಮಹಾಗಾಂವ ರವರಿಗೆ ಮಾರಾಟ ಮಾಡುವುದಿದೆ ಎಂದು ಹೇಳಿದಾಗ  ಈ ಹೋರಿಯು ಯಾರದು ಎಂದು ಕೇಳಿದಾಗ ಅದಕ್ಕೆ ಆ ಇಬ್ಬರು ಅನುಮಾನಸ್ಪದವಾಗಿ ಉತ್ತರಿಸಿದ್ದರಿಂದ ಸಂಶಯ ಬಂದು ಹೋರಿಗೆ ಸಂಬಂಧಿಸಿದ ದಾಖಲಾತಿ ವಿಚಾರಿಸಿದಾಗ ಅದಕ್ಕೆ ಅವರು ನಮಗೆ ಖರ್ಚಿಗೆ ಹಣವಿಲ್ಲದ ಸಲುವಾಗಿ ಇಂದು ದಿನಾಂಕ:20/09/2016 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾ ನಗರದಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಅವರಣದಲ್ಲಿದ್ದ ಈ ಗೂಳಿಯನ್ನು ಕಳ್ಳತನ ಮಾಡಿಕೊಂಡು ಬಂದಿರುತ್ತೇವೆ. ಅಂತಾ ತಿಳಿಸಿದ್ದು ಸರಿದಯವರ ವಿರುದ್ದ ಕ್ರಮ ಕೈಕೊಳ್ಳಿವಂತೆ ಪೊಲೀಸ್ ಠಾಣೆಗೆ ಹಾಜರುಪಡಿಸಿದ ಮೇರೆಗೆ ಆ ಇಬ್ಬರ ವಿರುದ್ದ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

19 September 2016

Kalaburagi District Reported Crimes

ಅಪಘಾತ  ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 18-9-2016 ರಂದು ಸಂಜೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ಗುಂಡಪ್ಪಾ ತಂದೆ ಗುರಣ್ಣ ಮರಗುತ್ತಿ ಇಬ್ಬರು ಕೂಡಿಕೊಂಡು  ಶಿರಗಾಪೂರ ಕ್ರಾಸವರಗೆ ನನ್ನ ಮೋಟಾರ ಸೈಕಲ್ ಮೇಲೆ ಹೋಗುವಾಗ ನಮ್ಮ ಗ್ರಾಮದ ಈರಣ್ಣಾ ತಂದೆ ಗುರುಶಾಂತ ಚೌಡಶಟ್ಟಿ ಇವರ ಹೊಲದ ಎದರುಗಡೆ ಹುಮನಾಬಾದ ರೋಡಿಗೆ ಸದರಿ ಮಾನಸಿಕ ಅಶ್ವಸ್ಥ  ಹುಚ್ಚ ಮಹಿಳೆ ವಯಸ್ಸು ಅಂದಾಜು 60-65 ವರ್ಷದವಳು ನಿಂತಿದ್ದಳು ರೋಡಿಗೆ ನಿಲ್ಲಬೇಡ ಪಕ್ಕದಲ್ಲಿ ರೋಡಿನ ಸೈಡಿಗೆ ನಿಲ್ಲು ಅಂತಾ ಹೇಳಿ ಹೋಗಿದ್ದು, ಕೆಲಸಮುಗಿಸಿಕೊಂಡು ಮರಳಿಊರಿಗೆ ಬರುತ್ತಿರುವಾಗ ಸದರಿ ಈರಣ್ಣಾ ಚೌಡಶಟ್ಟಿ ಹತ್ತಿರ ನಿಂತಿದ್ದ ಸದರಿ ಭಿಕ್ಷುಕಿ ಮಹಿಳೆಗೆ ಯಾವುದೋ ಭಾರಿ ವಾಹನವು ವೇಗವಾಗಿ ಬಂದು ನಿಸ್ಕಾಳಜಿ ತನದಿಂದ ಓಡಿಸಿಕೊಂಡು ಬಂದು ಅವಳಿಗೆ ಡಿಕ್ಕಿ ಹೊಡೆದು ಅವಳ ಮೈ ಮೇಲಿಂದ ಹಾಯಿಸಿಕೊಂಡು ಹೊಗಿದ್ದು ಅಲ್ಲದೆರೋಡಿಗೆ ಹೋಗುವ ವಾಹನಗಳು ಅವಳಮೈಮೆಲಿಂದ ಹೋಗಿದ್ದರಿಂದತಲೆಪೂರ್ತಿ ಚಚ್ಚಿ ಹೊಗಿದ್ದು ಮಾಂಸಖಂಡಗಳು ಕಾಣುತಿದ್ದು,ಎದೆಕಾಣುತಿದ್ದು  ಎಡಗಲುಸಾಬಿತಿದು ,ಬಲಗಾಲು ಪಾದ ಮಾತ್ರ ಕಾಣುತಿದೆ. ಉಳಿದೆ ಲ್ಲಾಬಾಗಗಳು ಮಾಸಖಂಡಗಳು ಹೊರಬಂದು ಪೂರ್ತಿ ಜಜ್ಜಿ ಹೋಗಿದ್ದು ಇರುತ್ತದೆ. ಈ ಘಟನೆಯು ರಾತ್ರಿ 8-30 ಪಿ.ಎಂ.ಕ್ಕೆ. ಸಂಭವಿಸಿರಬಹುದು. ಆದುದರಿಂದ ಸದರಿ ಮಾನಸಿಕ ಅಶ್ವಸ್ಥ,ಭಿಕ್ಷುಕಿ ಮಹಿಳೆ ವಯಸ್ಸು ಅಂದಾಜು 60-65 ವರ್ಷದವಳು ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ,ಇವಳು ಸೋಮನಾಧ ತಂದೆ ರೇವಣಸಿದ್ದಪ್ಪಾ ಹತ್ತಕಂಕಣ ಪೂಜಾರಿ  ಹೊಲದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಕಲಬುರಗಿ ಕಡೆಯಿಂದ ಯಾವುದೋಭಾರಿವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿ ತನದಿಂದ ನಡೆಯಿಸಿ ಕೊಂಡು ಬಂದು ಅವಳ ಮೈಮೇಲೆ ಹಾಯಿಸಿಕೊಂಡು ಹೋಗಿದ್ದು ಅವಳು ಸ್ಥಳದಲ್ಲಿ ಮೃತ ಪಟ್ಟಿದ್ದು ಅವಳ ಮೈ ಮೇಲೆ  ರೋಡಿಗೆ ಹೋಗುವ ವಾಹನಗಳು ಹೋಗಿದ್ದರಿಂದ ದೇಹವು ಪೂರ್ತಿ ಜಜ್ಜಿ ಹೋಗಿ ಮಾಂಸ ಖಂಡಗಳು ಹೋರ ಬಂದು ಮೃತಪಟ್ಟಿರುತ್ತಾಳೆ ಅಂತಾ  ಶ್ರೀ ಸೂರ್ಯಕಾಂತ ತಂದೆ ರೇವಣಸಿದ್ದಪ್ಪಾ ತೆಗನೂರ  ಸಾ;ಅವರಾಧ (ಬಿ) ತಾ;ಜಿ;ಕಲುಬರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 September 2016

Kalaburagi District Police.

ಪತ್ರಿಕಾ ಪ್ರಕಟಣೆ
          ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್‌‌-ಇನ್ಸಪೆಕ್ಟರ್‌ ವೃಂದದ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ. ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳಿಂದ ದಿನಾಂಕ;19-09-2016 ರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ವಿಧಾನ, ವಯೋಮಿತಿ, ವಿದ್ಯಾರ್ಹತೆ ಸಹಿಷ್ಣತೆ ಮತ್ತು ದೇಹದಾರ್ಡೃತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಕುರಿತು ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್‌‌ www.ksp.gov.in ನಲ್ಲಿ ನೋಡಬಹುದಾಗಿರುತ್ತದೆ.
ಈ ಕೆಳಕಂಡ ಸಬ್‌-ಇನ್ಸ್‌ಪೆಕ್ಟರ್‌‌ ವೃಂದದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿರುತ್ತದೆ.
ಕ್ರಮ
ಸಂಖ್ಯೆ
ಹುದ್ದೆ
ಹುದ್ದೆಗಳ ಸಂಖ್ಯೆ
1.        
ಸಶಸ್ತ್ರ ಮೀಸಲು ಪೊಲೀಸ್ ಸಬ್‌‌-ಇನ್ಸ್‌ಪೆಕ್ಟರ್‌ (ಸಿ.ಎ.ಆರ್‌‌/ಡಿಎಆರ್‌) (ಪುರುಷ)
90
2.        
ಪೊಲೀಸ್ ಸಬ್‌‌-ಇನ್ಸ್‌ಪೆಕ್ಟರ್‌ (ವೈರ್‌ಲೆಸ್‌‌) (ಪುರುಷ&ಮಹಿಳಾ)
28
3.        
ಪೊಲೀಸ್ ಸಬ್‌‌-ಇನ್ಸ್‌ಪೆಕ್ಟರ್‌ (ಸಿವಿಲ್‌) (ಪುರುಷ&ಮಹಿಳಾ)
398
4.        
ವಿಶೇಷ ಮೀಸಲು ಸಬ್‌‌-ಇನ್ಸ್‌ಪೆಕ್ಟರ್‌ (ಕೆ.ಎಸ್‌.ಆರ್‌.ಪಿ ) (ಪುರುಷ)
28

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ದೂರವಾಣಿ ಸಂಖ್ಯೆ: 080-22943346 ಸಂಪರ್ಕಿಸಬಹುದಾಗಿರುತ್ತದೆ.

ಸಬ್- ಇನ್ಸಪೆಕ್ಟರ ಮತ್ತು ಕಾನ್ಸಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂದಿಸಿದಂತೆ ಅಭ್ಯರ್ಥಿಗಳು ಈ ಕೆಳಕಂಡ ವಿಷಯಗಳ ಬಗ್ಗೆ ಗಮನವಹಿಸತಕ್ಕದ್ದು
1) ಅಬ್ಯರ್ಥಿಗಳು ನೇಮಕಾತಿ ಸಲುವಾಗಿ ಪ್ರಕಟಿಸಲಾದ ಅಧಿಸೂಚನೆಯನ್ನು ಓದಿಕೊಳ್ಳತಕ್ಕದ್ದು.
2) ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಅಂಶಗಳನ್ನು ಓದಿಕೊಂಡು ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡತಕ್ಕದ್ದು.
3) ಪವರ್ಗ, ಗ್ರಾಮೀಣ, ಕನ್ನಡ.ಪಿಡಿಪಿ  ಹಾಗು ಇತರೆ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಡಿಸಿರುವ ಕೊನೆಯ ದಿನಾಂಕದೊಳಗಾಗಿ ಪಡೆದುಕೊಂಡು ಅರ್ಜಿಯನ್ನು ಸಲ್ಲಿಸತಕ್ಕದ್ದು ನಿಗದಿತ ದಿನಾಂಕದ ನಂತರ ಪಡೆದ ಪ್ರಮಾಣ ಪತ್ರಗಳನ್ನು ಪರಿಗಣಿಸುಲಾಗುವದಿಲ್ಲ.
4) ಅರ್ಹತಾ ಪರೀಕ್ಷೆಯ ಅಂಕಗಳನ್ನು ಅರ್ಜಿಯಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಸರಿಯಾಗಿ ಭರ್ತಿ ಮಾಡತಕ್ಕದ್ದು ಒಂದು ವೇಳೆ ಅಂಕಗಳನ್ನು ತಪ್ಪಾಗಿ ಭರ್ತಿ ಮಾಡಿ ನಂತರ ಬದಲವಣೆಗೆ ಕೋರಿದಲ್ಲಿ ಬದಲಾವಣೆ ಮಾಡಲು ಅವಕಾಶವಿರುವದಿಲ್ಲ.
5)  ಸಹಿಷ್ಣುತೆ ಪರೀಕ್ಷೆಗೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ದೈಹಿಕವಾಗಿ ಸದೃಡರಿರಬೇಕು. ಎಲ್ಲಾ ರೀತಿಯಿಂದಲು ಪೂರ್ವ ತಯ್ಯಾರಿ ನಡಿಸಿಕೊಂಡಿರಬೇಕು. ಸಹಿಷ್ಣುತೆ ಪರೀಕ್ಷೆಯ ಸಂದರ್ಭದಲ್ಲಿ  ಸಂಬವಿಸುವ ಯಾವದೇ ರೀತಿಯ ಅನಾಹುತ/ ತೊಂದರೆಗೆಳಿಗೆ ಪೊಲೀಸ ಇಲಾಖೆ/ ನೇಮಕಾತಿ ಸಮೀತಿಯುವ ಜವಾಬ್ದಾರರಾಗಿರುವದಿಲ್ಲ.
6) ನೇಮಕಾತಿ ಪ್ರಕ್ರಿಯನ್ನು ಸಂಪೂರ್ಣವಾಗಿ ಪಾರದರ್ಶಕ , ಗಣಕಿಕೃತ , ವಸ್ತು ನಿಷ್ಟ, ಅರ್ಹತೆ , ಮತ್ತು ಮಿಸಲಾತಿಯ ಆಧಾರದ ಮೇಲೆ ನಡೆಸಲಾಗುವುದು. ಆದ್ದರಿಂದ ಅಬ್ಯರ್ಥಿಗಳು ಯಾವದೇ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಒಳಗಾಗಬಾರದು. ಈ ರೀತಿಯ ಒತ್ತಡಗಳು ಬಂದಲ್ಲಿ ಸ್ಥಳಿಯ ಪೊಲೀಸರಿಗೆ ದೂರು ನೀಡತಕ್ಕದ್ದು. ಯಾವದೇ ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ತಂದಲ್ಲಿ ಅದನ್ನು ಈ ಇಲಾಖೆಯ ಕಾರ್ಯನಿರ್ವಹಣೆಯ ಅಡಚಣೆಯೆಂದು ಪರಿಗಣಿಸಲಾಗುವುದು.
ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂದಿಸಿದಂತೆ ಹೆಚ್ಚಿನ ಮಾಹಿತಿಯ ಸಲುವಾಗಿ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡತಕ್ಕದ್ದು.
ಸಹಾಯವಾಣಿ ಸಂಖ್ಯೆ  080-22943356/22943345

13 September 2016

Kalaburagi District Reported Crimes

ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 25-05-2016 ರಿಂದ ದಿನಾಂಕ 09-09-2016 ರ ಮಧ್ಯದಲ್ಲಿ ಭಾಗವಾನ ತಾಂಡಾದ ಶ್ರೀ ನೀಲಕಂಠ ತಂದೆ ಜೇಮಲಾ ಇವರಿಗೆ ಸರ್ಕಾರಿ ಯೊಜನೆಯಡಿಯಲ್ಲಿ ಮಂಜೂರಾದ ಗಂಗಾ ಕಲ್ಯಾಣದ ಫಲಾನುಬವಿಗಳಾದ ಇವರಿಗೆ ಇವರ ಹೊಲ ಸರ್ವೆ ನಂ 48 ರಲ್ಲಿ ಕುಡಿಸಿದ ಜೆಸ್ಕಾಂ ಕಂಪನಿಯ 25 ಕೆವಿಎ ಪರಿವರ್ತಕ 49500/-ಕಿಮ್ಮತ್ತಿನಿದ್ದು  ಕಳ್ಳತನವಾಗಿದ್ದು ಇರುತ್ತದೆ. ಅಂತಾ ಶ್ರೀಮತಿ ಅವಿತಾ ಆರ್.ಕೆ ಸಹಾಯಕ ಅಭಿಯಂತರರು ಗ್ರಾಮೀಣ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ  ಲಕ್ಷ್ಮಣ ತಂದೆ ಬರಮಯ್ಯ ದಂಡಗುಲೆ ಸಾ: ಅಂಬಲಗಾ, ತಾ: ಆಳಂದ, ಇವರು ಪುನಾ ನಗರದಲ್ಲಿ ಹೆಂಡರು ಮಕ್ಕಳೊಂದಿಗೆ ಜೆಸಿಬಿ ಚಾಲಕನಾಗಿ ಕೆಲಸಮಾಡಿಕೊಂಡು ಉಪಜೀವಿಸುತ್ತಿದ್ದೇನೆ ಮಳೆಗಾಲ ಪ್ರಾರಂಭವಾದ ಕಾರಣ ಕೆಲಸ ಇಲ್ಲದೆ ಇರುವದರಿಂದ ಸುಮಾರು 1 ತಿಂಗಳ ಹಿಂದೆ ಹೆಂಡತಿ ಮತ್ತು ಮಕ್ಕಳನ್ನು ಕರೆದುಕೊಂಡು ಅಂಬಲಗಾ ಗ್ರಾಮಕ್ಕೆ ಬಂದಿರುತ್ತೇನೆ ಹೀಗಿದ್ದು ಹೊದವರ್ಷ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ನನ್ನ ಚಿಕ್ಕಪ್ಪನ ಮಗನಾದ ಯಲ್ಲಪ್ಪ ತಂದೆ ತಿಮ್ಮಯ್ಯ ದಂಡಗುಲೆ ಇವನು ನಮ್ಮೂರಿನ ಕುರುಬ ಜಾತಿಯ ಸುನೀಲ ತಂದೆ ಅಶೋಕ ಬಕ್ಕನ್ ಇವನ ಕಾಲನ್ನು ತುಳಿದಿದ್ದು ಅದಕ್ಕೆ ಸುನೀಲ್ ಈತನು ತನ್ನ ಮಾವನಾದ ಬಸವರಾಜ ತಂದೆ ಸೈಬಣ್ಣ ಸರಡಗಿ ಇಬ್ಬರು ಕೂಡಿಕೊಂಡು ಯಲ್ಲಪ್ಪನಿಗೆ ಹೊಡೆದಿದ್ದು ಆ ಜಗಳವನ್ನು ನಮ್ಮೂರಿನ ಹಿರಿಯರು ಮತ್ತು ನಮ್ಮ ಜಾತಿಯವರು ಅವರ ಜಾತಿಯವರು ಕೂಡಿ ರಾಜಿ ಪಂಚಾಯತಿ  ಮಾಡಿಸಿದ್ದು ನಾವು ಅವರ ಮೇಲೆ ಕೇಸು ಮಾಡಿರುವುದಿಲ್ಲ ಆವಾಗಿನಿಂದ ಸುನೀಲ ಬಕ್ಕನ ಬಸವರಾಜ ಸರಡಗಿ ಮತ್ತು ಅವರ ಸಂಬಂಧಿಕರಾದ ಅಶೋಕ ತಂದೆ ಶ್ರೀಪತಿ ನಾಗೂರ ಆಕಾಶ ತಂದೆ ಅಶೋಕ ಬಕ್ಕನ, ಜಗನ್ನಾಥ ತಂದೆ ಶ್ರೀಪತಿ @ ಶ್ರೀಮಂತ ನಾಗೂರ ಇವರೆಲ್ಲರು ನಾನು ಊರಿಗೆ ಬಂದಾಗ ನನ್ನೊಂದಿಗೆ ಮತ್ತು ನನ್ನ ಅಣ್ಣತಮ್ಮೊಂದಿರೊಂದಿಗೆ ದ್ವೇಷ ಸಾದಿಸುತ್ತಾ ಆಗಾಗ ನನ್ನ ಜೋತೆ ವಿನಾಕಾರಣ ಜಗಳತೆಗೆಯುತ್ತಾ ಬಂದಿದ್ದು ದಿನಾಂಕ 12/09/2016 ರಂದು ಬೆಳಿಗ್ಗೆ ಅಂಬಲಗಾದ ಬಸ್ ನಿಲ್ದಾಣದ ಹತ್ತಿರ ನಾನು ಮತ್ತು ನಮ್ಮ ಚಿಕ್ಕಪ್ಪನ ಮಗನಾದ ತಿಮ್ಮಯ್ಯ ತಂದೆ ಬರಮಯ್ಯ ದಂಡಗುತಿ(ಇಂಗಳೇಶ್ವರ) ಕೂಡಿಕೊಂಡು ನಿಂತಿರುವಾಗ ಸದರಿ ಬಸವರಾಜ ತಂದೆ ಸೈಬಣ್ಣ ಸರಡಗಿ, ಸುನೀಲ ತಂದೆ ಅಶೋಕ ಬಕ್ಕನ, ಆಕಾಶ ತಂದೆ ಅಶೋಕ ಬಕ್ಕನ, ಜಗನ್ನಾಥ ತಂದೆ ಶ್ರೀಪತಿ @ ಶ್ರೀಮಂತ ಮತ್ತು ಅಶೋಕ ತಂದೆ ಶ್ರೀಪತಿ ನಾಗೂರ ಎಲ್ಲರು ಗುಂಪುಗುಡಿ ಕೈಯಲ್ಲಿ ರಾಡು ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದವರೆ  ಏ ವಡ್ಡಜಾತಿ ಸುಳೆ ಮಕ್ಕಳೇ ನಿಮ್ಮದು ಊರಿನಲ್ಲಿ ಬಹಾಳ ಆಗಿದೆ ಹೋದವರ್ಷ ಮೊಹರಂ ದಲ್ಲಿ ಯಲ್ಲಪ್ಪ ಇವನಿಗೆ ಹೊಡೆದಾಗ ಏನ್ ಸೆಂಟ್ ಕಿತ್ಕೊಂಡಿಲ್ಲಾ ನಿಮ್ಮ ಹೆಂಡ್ರೀಗ್ ಹಡತೇವಿ ಸುಳೆ ಮಕ್ಕ್ಳಾ ಅಂತ ಅಂದವರೆ ಅದರಲ್ಲಿ ಅಶೋಕ ನಾಗೂರ ಈತನು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ತಲೆಗೆ ಹೊಡೆದನು ನನ್ನ ತಲೆಯಿಂದ ರಕ್ತ ಸುರಿಯತೊಡಗಿತು ತಿಮ್ಮಯ್ಯ ಈತನಿಗೆ ಬಸವರಾಜ ಸರಡಗಿ ಈತನು ಕಲ್ಲಿನಿಂದ ಕುತ್ತಿಗೆ ಹಿಂಬಾಗಕ್ಕೆ ಹೊಡೆದನು ಅವನು ಬೇಹೂಶ್ ಆಗಿ ಬಿದ್ದನು ಉಳಿದವರಾದ ಸುನೀಲ್ ಬಕ್ಕನ್, ಆಕಾಶ ಬಕ್ಕನ್, ಜಗನ್ನಾಥ ನಾಗೂರ ಇವರು ಸಹ ನಮ್ಮಿಬ್ಬರಿಗೆ ಈ ವಡ್ಡಸುಳೆ ಮಕ್ಕಳಿಗೆ ಬಿಡಬ್ಯಾಡ್ರಿ ಅಂತ  ಕೈಯಿಂದ ಮೈತುಂಬಾ ಹೊಡೆದರು ಅವರೆಲ್ಲರು ಕೂಡಿ ನಮ್ಮ ಅರ್ದ ಆಸ್ತಿ ಹೋದರು ಪರವಾಗಿಲ್ಲಾ ಈ ಮಕ್ಕಳಿಗೆ ಬಿಡಬ್ಯಾಡ್ರಿ ಅಂತ ಅನ್ನುತ್ತಿದ್ದರು ಈ ಜಗಳ ನೋಡಿ ಅಲ್ಲಿಯೆ ಬಸ್ ನಿಲ್ದಾಣದಲ್ಲಿದ್ದ ರಂಗನಾಥ ತಂದೆ ತಿಪ್ಪಣ್ಣ ಜಾದವ್, ಸಂಜು ತಂದೆ ಬರಮಯ್ಯ ದಂಡಗುರೆ, ಜಿತೇಂದ್ರ ತಂದೆ ಯಾದಯ್ಯ ಗುತ್ತೆದಾರ, ನಾಗಪ್ಪ ಏಳವಂತಗಿ, ಲಾಲು ತಂದೆ ಮಸ್ತಾನ ಸಾಬ ಮೀರಾ, ನಾಗಪ್ಪ ತಂದೆ ಸ್ವಯಂ ಪ್ರಕಾಶ ಪಾಟೀಲ್ ಅವರೆಲ್ಲರು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ 12.09.2016 ರಂದು ಮುಂಜಾನೆ 06.30 ಗಂಟೆಯ ಸುಮಾರಿಗೆ ನನ್ನ ಮೋಬೈಲ ಫೋನಿಗೆ ಸೇಡಂ ಶೆಟ್ಟಿ ಗ್ರಾಮದ ಭೀಮಾಶಂಕರ ಜಾಕನಳ್ಳಿ ಇತನು ಫೋನ ಮಾಡಿ ಹೇಳಿದ್ದೆನೆಂದರೆ, ಇಂದು ದಿನಾಂಕ 12.09.2016 ರಂದು ಬೆಳಿಗ್ಗೆ ನನ್ನ ಚಹಾ ಅಂಗಡಿಗೆ ನಿಮ್ಮ ತಮ್ಮನಾದ ನಾಗಪ್ಪ ಇತನು ಚಹಾ ಕುಡಿದು ರೋಡ ಪಕ್ಕದಲ್ಲಿ ಹೋಗುತ್ತಿರುವಾಗ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಸೇಡಂ ಕಡೆಯಿಂದ ಅತೀವೇಗ ಮತ್ತು ಅಲಕ್ಷತನಿಂದ ನಡೆಸಿಕೊಂಡು ಬಂದು ಸೇಡಂ ಕಲಬುರಗಿ ಮೇನ ರೋಡಿನ ಲಾರಿ ಯಾರ್ಡನಲ್ಲಿ ಬೆಳಿಗ್ಗೆ 06.15 ಗಂಟೆ ನಾಗಪ್ಪ ಇತನಿಗೆ ಅಪಘಾತ ಪಡಿಸಿ ಸ್ವಲ್ಪ ನಿಲ್ಲಿಸಿದಂತೆ ಮಾಡಿ ಕಾರಿನೊಂದಿಗೆ ಓಡಿ ಹೋದನು. ಸದರಿ ನಾಗಪ್ಪ ಇತನು ರೋಡಿನ ಮೇಲೆ ಬಿದ್ದು ಒದ್ದಾಡುತ್ತಿದ್ದನು. ಅವನಿಗೆ ನಾನು ಹೋಗಿ ನೋಡಲಾಗಿ ತಲೆಗೆ ಬುರುಡೆ ಒಡೆದು ಭಾರಿ ರಕ್ತ ಗಾಯವಾಗಿ ಮತ್ತು ಕಾಲು ಮುರಿದು ಸ್ಥಳದಲ್ಲಿಯೇ ಬಿದ್ದಿದ್ದನು. ಕಾರ ನಂ ನೋಡಲಾಗಿ ಕೆಎ-51/ಎಂ-8987 ಇತ್ತು. ಅಂತಾ ನನಗೆ ಭೀಮಾಶಂಕರ ಇತನು ತಿಳಿಸಿದ ಪ್ರಕಾರ ನಾನು ಮತ್ತು ಸಂಗಡ ನನ್ನ ಗಂಡ ನೀಲಕಂಠ ನಮ್ಮ ಸಂಭಂದಿಕರಾದ ಮಲ್ಲಪ್ಪ, ಅನುಸೂಯಾ ಎಲ್ಲರೂ ಕೂಡಿಕೊಂಡು ಲಾರಿ ಯಾರ್ಡ ಹತ್ತಿರ ಬಂದು ನೋಡಲಾಗಿ ತನ್ನ ತಮ್ಮನಾದ ನಾಗಪ್ಪ ಇತನು ರೋಡಿನ ಮೇಲೆ ಬಿದ್ದು ತಲೆ ಬುರುಡೆ ಒಡೆದು ಕಾಲುಗಳು ಮುರಿದು ಭಾರಿ ಗಾಯಗಳಾಗಿದ್ದನ್ನು ನೋಡಿ ಕೂಡಲೆ ಆತನನ್ನು ನಾವು ತಂದಿದ್ದ ಜೀಪಿನಲ್ಲಿ ನಾಗಪ್ಪ ಇತನನ್ನು ಹಾಕಿಕೊಂಡು ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ತಂದಾಗ ಆಸ್ಪತ್ರೆಯಲ್ಲಿ ಡಾಕ್ಟರರು ನೋಡಿ ನಾಗಪ್ಪನು  ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರಾಜಮ್ಮ ಗಂಡ ನೀಲಕಂಠ ಕಟ್ಟಿಮನಿ ಸಾ:ನೀಲಹಳ್ಳಿ, ತಾ:ಸೇಡಂ, ಜಿಲ್ಲಾ:ಕಲಬುರಗಿ. ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.