POLICE BHAVAN KALABURAGI

POLICE BHAVAN KALABURAGI

10 September 2017

KALABURAGI DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ :ದಿನಾಂಕ: 08.09.2017 ರಂದು ಕಮಲಾಬಾಯಿ ಇವರು ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ  ತನ್ನ ಮಗಳಾದ ಪೂಜಾಳಿಗೆ  ಸಾ:ದೇವಲಾನಾಯಕ ತಾಂಡಾ ತಾ:ಜಿ:ಕಲಬುರಗಿಯ ತಾರಾಸಿಂಗ ಚವ್ಹಾಣ ಜೆತೆ ಸುಮಾರು 8 ತಿಂಗಳ ಹಿಂದೆ ದೇವಲಾನಾಯಕ ತಾಂಡಾದ ತಾರಾಸಿಂಗ ಚವ್ಹಾಣ ಇವರೊಂದಿಗೆ ಮದುವೆಯಾಗಿದ್ದು. ನನ್ನ ಮಗಳು ಸಧ್ಯ  ಗರ್ಬಿಣಿಯಾಗಿದ್ದು . ತಾರಾಸಿಂಗನು ವಿಪರಿತ ಕುಡಿತದ ಚಟಗಾರನಾಗಿದ್ದು. ಆಗಾಗ ನನ್ನ ಮಗಳೊಂದಿಗೆ ವಿನಾಕಾರಣ ಜಗಳ ಮಾಡುತ್ತ ಬಂದಿರುತ್ತಾನೆ. ದಿನಾಂಕ:06.09.2017 ರಂದು ಮುಂಜಾನೆ ತಾರಾಸಿಂಗನು ಕೂಲಿಕೆಲಸಕ್ಕೆ ಹೋಗಿದ್ದು. ನಾನು ಮತ್ತು ಅವಳ ಅತ್ತೆ ಗೋಮಲಾಬಾಯಿ ಇವರು ಮನೆಯಲ್ಲಿದ್ದ 2 ಸಾವಿರ ರುಪಾಯಿಗಳು ಕಾಣುತ್ತಿಲ್ಲ ಎಂದು ಪೂಜಾಳಿಗೆ ವಿಚಾರಿಸಿದ್ದು. ಪೂಜಾಳಿ ಈ ಬಗ್ಗೆ ತನ್ನ ಗಂಡ ತಾರಾಸಿಂಗನು ಮನೆಗೆ ಬಂದಾಗ ನಾನು ಆತನಿಗೆ ಕುಡಿಯಲಿಕ್ಕೆ ನಿಮಗೆ ದುಡ್ಡು ಎಲ್ಲಿಂದ ಬಂದಿದೆ ಮನೆಯಲ್ಲಿ ಅತ್ತೆ 2 ಸಾವಿರ ರೂಪಾಯಿಗಳು ಕಾಣುತ್ತಿಲ್ಲ ಅಂತಾ ಹೇಳುತ್ತಿದ್ದು ನಿವೇನಾದರು ತೆಗೆದುಕೊಂಡಿದ್ದಿರಾ ಅಂತಾ ಕೇಳಿದ್ದಕ್ಕೆ. ಆನ ಪೂಜಾಳಿಗೆ ಅವಾಚ್ಚ ಶಬ್ದಗಳಿಂದ ಬಯ್ಯುತ್ತಾ ನನ್ನ ಮೇಲೆ ಅಪವಾದ ಮಾಡುತ್ತಿಯಾ ಅಂತಾ ಕಲ್ಲಿನಿಂದ, ಕೈಯಿಂದ ಹೊಡೆದಿದ್ದು. ನಂತರ ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದಾಗ ರಾತ್ರಿ ಪೂಜಾಳ  ಅತ್ತೆ ಗೋಮಲಾಬಾಯಿ ಬಂದು ನನ್ನ 2 ಸಾವಿರ ರೂಪಾಯಿಗಳು ನೀನೆ ತೆಗೆದುಕೊಂಡಿದ್ದು. ನನ್ನ ಮಗನ ಮೇಲೆ ಅಪವಾದ ಮಾಡುತ್ತಿಯಾ ಅಂತಾ ಬೈಯುತ್ತಾ ತನ್ನ ಮಗತಾರಾಸಿಂಗ ನೊಂದಿಗೆ ಸೇರಿ ಇಬ್ಬರೊ ಸೇರಿಕೊಂಡು ಅಲ್ಲೆ ಪಕ್ಕದಲ್ಲಿದ್ದ ಗ್ಯಾಸಲೇಟ ತುಂಬಿದ ಡಬ್ಬಿಯನ್ನು ತಂದು ಅದರಲ್ಲಿದ್ದ ಎಣ್ಣಿಯನ್ನು ಪೂರ್ತಿಯಾಗಿ ನನ್ನ ಮೈಮೇಲೆ ಚೆಲ್ಲಿ ಕಡ್ಡಿ ಗಿಚಿ ಮೈಗೆ ಬೆಂಕಿ ಹಚ್ಚಿದಾಗ ತ್ರಾಸ ತಾಳಲಾರದೆ ಚಿರಾಡುತ್ತಿದ್ದಾಗ ಪಕ್ಕದ ಮನೆಯ ಹತ್ತೀರ ಇದ್ದ ನನ್ನ ನೇಗೆಣಿಯರಾದ ಶುಶಿಲಾಬಾಯಿ ಹಾಗೂ ಶೇಶಿಬಾಯಿ ಚವ್ಹಾಣ ಹಾಗೂ ಬಳಿರಾಮ ಚವ್ಹಾಣ ಇವರು ಬಂದು ಬೆಂಕಿ ಆರಿಸಿ ನಂತರ ಉಪಚಾರ ಕುರಿತು ಕಲಬುರಗಿ ಸರಕಾರಿ ದವಾಖಾನೆಗೆ ತಂದು ಸೇರಿಕೆ ಮಾಡಿದ್ದು. ಚಿಕಿತ್ಸೆ ಫಲಕಾರಿಯಾಗದೆ ಪೂಜಾ ಮೃತಪಟ್ಟಿದ್ದು. ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದಾಗ ನನ್ನ ಮಗಳ ಮೈಮೇಲೆ ಗ್ಯಾಸಲೇಟ ಎಣ್ಣಿ ಸುರುವಿ ಕಡ್ಡಿ ಗಿಚಿ ಬೆಂಕಿ ಹಚ್ಚಿ ಸುಟ್ಟು ಕೋಲೆ ಮಾಡಿದ್ದು ಇರುತ್ತದೆ. ನನ್ನ ಮಗಳ ಸಾವಿನ ವಿಷಯದಲ್ಲಿ ಮುಂದಿನ ಕಾನೂನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ : ದಿನಾಂಕ 09-09-2017 ರಂದು ಡಿ.ವೈ.ಎಸ.ಪಿ ಗ್ರಾಮಾಂತರ ಉಪ ವಿಭಾಗ ಕಲಬುರಗಿ ಹಾಗೂ ಸಿ.ಪಿ.ಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಖಚಿತವಾದ ಬಾತ್ಮಿ ಮೇರೆಗೆ ದಿನಸಿ( ಕೆ )ಗ್ರಾಮದ ಹನುಮಾನ ದೆವರ ಗುಡಿಯ ಕಟ್ಟೆಯ ಮುಂದಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರವೆಂಬ ಇಸ್ಪೀಟ ಜೂಜಾಟ ಆಡುತ್ತಿದ್ದ ಆರೋಪಿತರಾದ  1 ತುಕಾರಾಮ ತಂದೆ ಶ್ಯಾಮು ರಾಠೋಡ , 2. ಏಮನಾಥ ತಂದೆ ಸೀತಾರಾಮ ರಾಠೋಡ , 3. ರೂಪ್ಲಾ ತಂದೆ ಗೋಪು ಚವ್ಹಾಣ , 4. ಸುಭಾಷ ತಂದೆ ರಾಮದಾಸ ರಾಠೋಡ ಸಾ:ಎಲ್ಲರೂ ದಿನಸಿ(ಕೆ) ತಾಂಡಾ ತಾ:ಜಿ:ಕಲಬುರಗಿ ಇವರುಗಳನ್ನು ಪಂಚರ ಸಮಕ್ಷಮ ಠಾಣೆಯ ಸಿಬ್ಬಂಧಿ ಶ್ರೀ ಬಸವರಾಜ, ಶ್ರೀ ಜಗದೀಶ , ಹಾಗೂ ಶ್ರೀ ಕಿಶನ ಜಾಧವ ಇವರ ಸಹಾಯದಿಂದ ದಸ್ತಗಿರಿ ಮಾಡಿಕೊಂಡು ಅವರಿಂದ ನಗದು ಹಣ 715 ರೂಪಾಯಿಗಳು ಹಾಗೂ 52 ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.