POLICE BHAVAN KALABURAGI

POLICE BHAVAN KALABURAGI

15 May 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :

ಮಹಿಳಾ ಠಾಣೆ : ಶ್ರೀ ಚನ್ನಬಸಪ್ಪಾ ತಂದೆ ಕೆಂಚಪ್ಪಾ ಸಾ|| ವಿದ್ಯಾ ನಗರ ಗುಲಬರ್ಗಾ ರವರು ನನ್ನ ತಂಗಿಯಾದ ವಿಜೇತಾ 8 ನೇ ತರಗತಿ ವಿಧ್ಯಾರ್ಥಿನಿ ವಯ|| 14 ವರ್ಷ ಇವಳು ದಿನಾಂಕ: 07/05/2011 ರಂದು ಬೆಳಿಗ್ಗೆ 07-00 ಗಂಟೆಗೆ ಕಿರಾಣಿ ಅಂಗಡಿಗೆ ಹೋಗಿ ಬರುವದಾಗಿ ಹೇಳಿ ಹೊದವಳು ಇಲ್ಲಿಯವರೆಗೆ ಬಂದಿರುವದಿಲ್ಲ ಎಲ್ಲಾ ಕಡೆ ಹುಡಕಾಡಿದರೂ ಸಹ ಪತ್ತೆಯಾಗಿರವದಿಲ್ಲ , ವಿಜೇತಾ ಇವಳನ್ನು ಯಾರೋ ಅಪರಿಚಿತ ವ್ಯಕ್ತಿ ಅಪಹರಿಸಿಕೊಂಡ ಹೋಗಿರುವ ಬಗ್ಗೆ ಅನುಮಾನ ಬಂದಿದ್ದು ಕಾರಣ ಅಪಹರಣವಾದ ವಿಜೇತಾಳನ್ನು ಪತ್ತೆ ಹಚ್ಚಿ ಕೊಡಬೇಕಾಗಿ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ :

ಔಕ ಠಾಣೆ : ಶ್ರೀ ಮಲ್ಲೇಶಪ್ಪಾ ತಂದೆ ದೇವಪ್ಪಾ ಪೂಜಾರಿ ಸಾ|| ಸ್ಟೇಶನ ಮರತೂರ ತಾ|| ಚಿತ್ತಾಪೂರ ಗುಲಬರ್ಗಾ ರವರು ನನ್ನ ಮಗನಾದ ಮಹಾದೇವಪ್ಪಾ ಇತನು ದಿನಾಲು ನಮ್ಮ ಗ್ರಾಮದಿಂದ ಗುಲಬರ್ಗಾದ ಅಡತಿಗೆ ವ್ಯಾಪಾರ ಕುರಿತು ಬಂದು ಹೋಗುತ್ತಿದ್ದು ದಿನಾಂಕ: 13-05-2011 ರಂದು ಮುಂಜಾಣೆ ಮನೆಯಿಂದ ಗುಲಬರ್ಗಾ ಹೋಗುತ್ತೆನೆಂದು ಹೇಳೀ ಹೋದನು. ರಾತ್ರಿ 10 ರಿಂದ 11 ಗಂಟೆಯವರೆಗೆ ಮರಳಿ ಮನೆಗೆ ಬಂದಿರುವದಿಲ್ಲ. ನಾನು ಗಾಬರಿಯಾಗಿ ಅವನ ಮೊಭಾಯಿಲ್ ನಂ: 994511579 ನೇದ್ದಕ್ಕೆ ಪೋನ ಮಾಡಿದಾಗ ಪೋನ ಬಂದ ಸ್ವಿಚ್ಚ ಆಪ್ ಆಗಿತ್ತು .ದಿನಾಂಕ: 14-05-20111 ರಂದು ಬೆಳಿಗ್ಗೆ 04-54 ಗಂಎಗೆ ನನ್ನ ಮಗನ ಮೊಭಾಯಿಲ್ ನಂಬರದಿಂದ ಮಹಾದೇವಪ್ಪಾ ಇತನು ಮಾತನಾಡಿ ನನಗೆ ಯಾರೋ 4-5 ಜನರು ನನಗೆ ಗೊತ್ತಿಲ್ಲದ ಸ್ಥಳಕ್ಕೆ ಅಪಹರಣ ಮಾಡಿ 4-5 ಲಕ್ಷ ರೂಪಾಯಿ ಕೊಡು ಅಂತಾ ಕೇಳುತ್ತಿರುತ್ತಾರೆ ಅಂತ ಒಮ್ಮೆಲೆ ಪೋನ ಕಟ್ ಮಾಡಿರುತ್ತಾರೆ ಅಂತಾ ಇತ್ಯಾದಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಶಹಾಬಾದ ನಗರ ಠಾಣೆ : ಶ್ರೀ ಅಶೋಕ ತಂದೆ ಜ್ಯೊತಿ ಲಕ್ಷ್ಮಣ ಕಾಂಬಳೆ ವ:37 ವರ್ಷ ಜಾ:ಹಿಂದೂ ಸಾ|| ರೈಲ್ವೆ ಕಾಲೋನಿ ಪಂಪ ಹೌಸ ರೋಡ ಶಹಾಬಾದ. ತಾ: ಚಿತ್ತಾಪೂರ.
ರವರು ನಿನ್ನೆ ದಿನಾಂಕ:13/05/2011 ರಂದು11.40 ಪಿಎಮ್ ನಮ್ಮ ಮನೆಯ ಬಾಗಿಲ ಕೀಲಿ ಹಾಕಿ ಮನೆಯ ಮಾಳಗಿ ಮೇಲೆ ಹೆಂಡತಿ ಮಕ್ಕಳೊಂದಿಗೆ ಮಲಗಿಕೊಂಡಿದ್ದು ದಿನಾಂಕ:14/05/2011 ರಂದು ಬೆಳ್ಳಿಗೆ 6 ಗಂಟೆಗೆ ಎದ್ದು ಮನೆಯ ಕೀಲಿ ನೋಡಲಾಗಿ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಕಂಡು ಗಾಬರಿಯಾಗಿ ಪಕ್ಕದ ಮನೆಯವರಾದ ಸದಾಶಿವ ಮತ್ತು ಸತೀಶ ಎಲ್ಲರೂ ಕೂಡಿ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಅಲಮಾರಿಯ ಬೀಗ ಮುರಿದು ಒಳಗಿದ್ದ ಬಂಗಾರದ ಸಾಮಾನುಗಳಾದ 4 ತೊಲೆಯ ಬಂಗಾರದ ಆಬರಣಗಳು ಮತ್ತು ಬೆಳ್ಳಿಯ ಆಬರಣ ಒಂದು ಮೊಬಾಐಇಲ್ ನಗದು ಹಣ 92,000/- ಹೀಗೆ ಒಟ್ಟು 2,85,800/- ರೂಪಾಯಿ ಬೆಲೆ ಬಾಳುವ ಸಾಮಾನುಗಳು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಮದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಸ್ಟೇಶನ ಬಜಾರ ಠಾಣೆ :
ಶ್ರೀ ಮಹ್ಮದ ಇರ್ಫಾನ ತಂದೆ ಮಹಿಬೂಬ ಪಾಶಾ ವ|| 28 ವರ್ಷ, ಉ|| ವಿಧ್ಯಾರ್ಥಿ ಸಾ|| ಮನೆ ನಂ 1-106/3 ಖಾಲಿದಿ ಕಂಪೌಂಡ ಸ್ಠೆಷನ ಬಜಾರ ಗುಲಬರ್ಗಾ, ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದು ಸಲ್ಲಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ದಿನಾಂಕ 13.05.2011 ರಂದು ತಮ್ಮ ವಾಹನವಾದ ಬಿಳಿ ಬಣ್ಣದ ಟಾಟಾ ಸುಮೋ ವಾಹನ ನಂ ಕೆಎ-20 ಎಮ್- 4678, ಅ.ಕಿ. 1,50,000/- ರೂ ಅದರ ಚೇಸ್ಸಿ ನಂ 921412 ಇಂಜಿನ್ ನಂ 757253 ನೇದ್ದು ರಾತ್ರಿ 11.00 ಗಂಟೆಗೆ ತಮ್ಮ ಮನೆಯ ಮುಂದೆ ನಿಲ್ಲಿಸಿ ಮಲಗಿಕೊಂಡಿದ್ದು ಬೆಳಿಗ್ಗೆ ದಿನಾಂಕ 14.05.2011 ರಂದು 7.00 ಗಂಟೆಗೆ ಎದ್ದು ನೋಡಲಾಗಿ ನಿಲ್ಲಿಸಿದ ಟಾಟಾ ಸುಮೋ ಇರಲಿಲ್ಲಾ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ